ಉ: ನೆನಪುಗಳು, ನೆನಪಿನಂಗಳದ ಹೊರಗೆ
- ಉ: ನೆನಪುಗಳು, ನೆನಪಿನಂಗಳದ ಹೊರಗೆ By: pallavi.dharwad (Jun 1 2008 - 11:56am)
- ಉ: ನೆನಪುಗಳು, ನೆನಪಿನಂಗಳದ ಹೊರಗೆ By: ರಾಮಕುಮಾರ್ (May 27 2008 - 8:32pm)
- ಉ: ನೆನಪುಗಳು, ನೆನಪಿನಂಗಳದ ಹೊರಗೆ By: uniquesupri (May 23 2008 - 11:47am)
- ಉ: ನೆನಪುಗಳು, ನೆನಪಿನಂಗಳದ ಹೊರಗೆ By: hpn (May 23 2008 - 3:37pm)
- ಉ: ನೆನಪುಗಳು, ನೆನಪಿನಂಗಳದ ಹೊರಗೆ By: madhava_hs (May 23 2008 - 11:25am)
- ಉ: ನೆನಪುಗಳು, ನೆನಪಿನಂಗಳದ ಹೊರಗೆ By: hpn (May 23 2008 - 3:33pm)
- ಉ: ನೆನಪುಗಳು, ನೆನಪಿನಂಗಳದ ಹೊರಗೆ By: hamsanandi (May 23 2008 - 7:05am)
- ಉ: ನೆನಪುಗಳು, ನೆನಪಿನಂಗಳದ ಹೊರಗೆ By: hpn (May 23 2008 - 3:33pm)

RSS:
ಉ: ನೆನಪುಗಳು, ನೆನಪಿನಂಗಳದ ಹೊರಗೆ
ಮತ್ತೊಂದು ನೆನಪಿನ ಎಳೆಯಿಂದ ಕಟ್ಟಿಬಿಟ್ಟಿದ್ದೀರಲ್ಲ ಹರಿ!
Our sweetest songs are those, which tell our saddest songs ಎಂಬ ಕವಿಮಾತಿದೆ. ಬಹುಶಃ ಪಿ.ಬಿ. ಷೆಲ್ಲಿ ಬರೆದಿರಬೇಕು. ಎಷ್ಟು ನಿಜ ಅಲ್ವಾ?
ನಾವೆಲ್ಲ ಚಿಕ್ಕವರಿದ್ದಾಗ, ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಅವ್ವ, ಅಪ್ಪನ ಕಟ್ಟಳೆ ಇಲ್ಲದೇ ಸ್ವತಂತ್ರವಾಗಿ ಇರಬೇಕು ಎಂದು ಹಾತೊರೆಯುತ್ತೇವೆ. ದೊಡ್ಡವರಾಗಿ, ಹಾಸ್ಟೆಲ್‌ನಲ್ಲಿ ಬದುಕುವ ದಿನಗಳು ಬಂದಾಗ ಏಕೋ ಮನೆ, ಅವ್ವ, ಅಪ್ಪ ನೆನಪಾಗತೊಡಗುತ್ತಾರೆ. ಮುಂದೆ ನೌಕರಿಗೆ ಸೇರಿ ಗಾಣಕ್ಕೆ ಸಿಲುಕಿಕೊಂಡಾಗ ಬಾಲ್ಯ ನೆನಪಾಗತೊಡಗುತ್ತದೆ.
ಏಕೆ ಹೀಗೆ?
ಭೂತಕಾಲದಲ್ಲೇ ಬದುಕುವುದು ನಮ್ಮ ವರ್ತಮಾನವಾ? ಇದರಿಂದಲೇ ನಮ್ಮ ಕನಸಿನ ಭವಿಷ್ಯತ್ತು ಹುಟ್ಟುತ್ತದಾ?
ಆದರೂ, ಹಳೆಯ ಕೌದಿಯಲ್ಲಿ, ಬಾಲ್ಯದ ಪುಟ್ಟ ಲಂಗದ ಬಟ್ಟೆ ಹುಡುಕುವಂತೆ ಮನಸ್ಸು ಆಳದ ನೆನಪುಗಳಿಗೇ ಜಾರುತ್ತದೆ.
ಎಲ್ಲ ನೆನಪಿಸಿದ್ದಕ್ಕೆ ಥ್ಯಾಂಕ್ಸ್.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...