ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ಸಂಗನಗೌಡ (May 18 2008 - 12:48pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Prabhu Murthy (May 18 2008 - 10:48pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: hamsanandi (May 19 2008 - 12:52am)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 4:23pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ಸಂಗನಗೌಡ (May 20 2008 - 10:55pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: muralihr (May 18 2008 - 2:26pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Sunil Jayaprakash (May 19 2008 - 10:06am)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ವೈಭವ (May 18 2008 - 8:06pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 4:27pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Prabhu Murthy (May 18 2008 - 10:48pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ವೈಭವ (May 18 2008 - 12:05am)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 5:23am)

RSS:
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
"...ತೆನೆಯಿಂ ಕಾಲ್ಗೆಱಗುವ ಕೞವೆಗಳವೆಲ್ಲಿಯುಂ ಸೊಗಯಿಸುಗುಂ"
ಇದರ ಅರ್ತ ಹೀಗಿರಬಹುದೆ:-?
ಎಲ್ಲೆಲ್ಲಿಯೂ ಬತ್ತದ ಪಯಿರುಗಳು(ಕೞಮೆ) ತಮ್ಮ ತುದಿಗಳಿಂದ/ತೆನೆಗಳಿಂದ(ಇದರ ಮೂಲಕ) ಕಾಲ್ಗೆ ಎರಗುತ್ತಿದ್ದವು.
ಇದು ಸೊಗಸಾದುದು"
ವೈಭವ್, ಕಾವ್ಯವನ್ನು ಅರ್ಥೈಸುವ ಶಿಸ್ತಿನಲ್ಲಿ, ಪದವಿಭಾಗ ಮತ್ತು ಜೋಡಣೆ ಮುಖ್ಯವಲ್ಲವೆ? ವಾಕ್ಯದಲ್ಲಿ ಪದಗಳು ನಿರ್ದಿಷ್ಟ ಜಾಗದಲ್ಲಿದ್ದುಕೊಂಡು ಅರ್ಥಕೊಡುತ್ತವೆ. ಅವುಗಳನ್ನು ಸ್ವತಂತ್ರವಾಗಿ (ಅಂದರೆ ಅವುಗಳ ಜೋಡಣೆಯ ಚೌಕಟ್ಟಿನಿಂದ ಹೊರತಂದು) ಅರ್ಥೈಸುವುದೆ ಹೇಗೆ?
"ಅವು ಎಲ್ಲಿಯುಂ ಸೊಗಯಿಸುಗುಂ"- ಅವು ಎಂದರೆ ಯಾವುವು? -ಕೞವೆಗಳು. ಎಂಥ ಕೞವೆಗಳು? -ಕಾಲ್ಗೆಱಗುವ ಕೞವೆಗಳು. ಇಲ್ಲಿ ತೆನೆಯಿಂ ಕಾಲ್ಗೆಱಗುವ ಎನ್ನುವ ಪದಗಳು ಕೞವೆ ಎಂಬ ಪದಕ್ಕೆ ವಿಶೇಷಣವಾಗಿವೆ. "ಅವೆಲ್ಲಿಯುಂ ಸೊಗಯಿಸುಗುಂ" ಎಂಬುದಕ್ಕೆ ನೀವು ಹೇಳುವಂತ ಅರ್ಥೈಸಿದರೆ ಆಗ " ತೆನೆಯಿಂ ಕಾಲ್ಗೆಱಗುವ ಕೞವೆಗಳ್... ಎಂದು ಶುರುವಾಗುವ ವಾಕ್ಯ ಅಪೂರ್ಣವಾಗೇ ಉಳಿದುಕೊಳ್ಳುತ್ತದೆ.
ಎರಡನೆಯದಾಗಿ, ನಾನು "ಸಂಸ್ಕೃತ ಕವಿಗಳು ಮಾಡಿದ ತಪ್ಪನ್ನೇ ಕನ್ನಡ ಕವಿಗಳೂ ಮಾಡಿರುವುದನ್ನು ಇಲ್ಲಿ ಗಮನಿಸಬೇಕು." ಎಂದಾಗ ಸಾಂದರ್ಭಿಕವಾಗಿ ಹೇಳಿದ್ದು, ಮತ್ತು ಪಂಪನನ್ನು ಕುರಿತಾಗಿ ಮಾತ್ರ ಹೇಳಿದ್ದು. "ಕನ್ನಡಕವಿಗಳು" ಎಂಬಲ್ಲಿ ನಾನು ಬಳಸಿರುವುದು ಗೌರವ ಬಹುವಚನ ಅಷ್ಟೆ.
ಆದರೂ ಇದರಿಂದ ನನಗೆ ಒಂದು ಉಪಯೋಗವಂತೂ ಆಯಿತು. ನಾನು ಕೇಳಿಲ್ಲದ ಶ್ರೀವಿಜಯನ ಪದ್ಯವೊಂದನ್ನು ನೀವು ಅರ್ಥೈಸಿದ್ದೇ ಅಲ್ಲದೆ ಕನ್ನಡಕವಿಯೊಬ್ಬನು ಸರಸಿಜವನ್ನು (ಹರಿವ ನೀರಿನಲ್ಲಲ್ಲದೆ) ತಿಳಿಗೊಳದಲ್ಲೇ ಅರಳಿಸಿದ್ದು ತಿಳಿದು ಸಂತೋಷವಾಯಿತು.
ನಿಮಗೂ ಧನ್ಯವಾದಗಳು.
"ಏರಿದವನು ಚಿಕ್ಕವನಿರಬೇಕು"