ನಿಜ. ಇದೊಂದು ಉಲ್ಬಣವಾಗಿರುವ ಸಮಸ್ಯೆ. ನಮ್ಮ ರಾಜಕಾರಣಿಗಳಂತೂ ಇದನ್ನು ಸುಧಾರಿಸುವಲ್ಲಿ ಸಹಾಯವಾಗರು. ಅವರು ತಮ್ಮ ತಮ್ಮ ಜೇಬು ತುಂಬಿಕೊಳ್ಳುವುದಕ್ಕೆ ಅವರವರ ಹುದ್ದೆಯಲ್ಲಿರುವುದು. ಲಾಲ್ ಬಹದೂರ್ ಶಾಸ್ತ್ರಿ ಕಾಲ ಈಗಿಲ್ಲ
ಇದಕ್ಕೆ ಪರಿಹಾರ ಇಷ್ಟೆ: ಇನ್ಫ್ರಾಸ್ಟ್ರಕ್ಚರ್ ಸುಧಾರಿಸುವುದು. ಹೆಚ್ಚು ಕೆಲಸಗಳನ್ನು ಸೃಷ್ಟಿ ಮಾಡುವುದು. ಪರಿಹಾರ 'ಇಷ್ಟೆ' ಎನಿಸಿದರೂ ಅದು ಸುಲಭವಲ್ಲ. ಆದರೂ ಹಲವಾರು ಭಾರತೀಯರು ತಮ್ಮ ಜೀವನವನ್ನೇ ತೆತ್ತು ಬಹುಮಟ್ಟಿಗೆ ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಭಾರತೀಯರು ಆ ಹಾದಿ ಹಿಡಿಯುವರು ಎಂದು ನನ್ನ ನಂಬಿಕೆ. ಹೀಗೆ ಅಂತಹ ಹಾದಿ ಹಿಡಿದವರ ಸಂಖ್ಯೆ ಹೆಚ್ಚಾದಲ್ಲಿ ಸ್ಥಿತಿ ಸ್ವಲ್ಪ ಸುಧಾರಿಸಬಹುದು.
ಇನ್ನು ಜನಸಂಖ್ಯೆ ಮತ್ತು ಕಳಪೆ ಹ್ಯೂಮನ್ ರಿಸೌರ್ಸಿಗೆ ಕಾರಣ ನೀವು ಹೇಳಿದಂತೆ ಶಿಕ್ಷಣ ವ್ಯವಸ್ಥೆ. ಇದು ಸುಧಾರಿಸಲೇಬೇಕು. ಸರಕಾರದ ಸುಧಾರಣೆಗಳು ಫಲ ಕೊಡುವ ಹೊತ್ತಿಗೆ ಈ ಶತಮಾನವೇ ಕಳೆದು ಹೋಗುತ್ತದೆ, ಬಹುಶಃ. ಇದಕ್ಕೆ ದುಡ್ಡಿದ್ದವರು ಆದಷ್ಟೂ ಸುಧಾರಣೆಯೆಡೆಗೆ ಎನ್ ಜಿ ಓ ಗಳ ಮೂಲಕ ಪ್ರಯತ್ನಿಸುವುದು ಒಳ್ಳೆಯ ದಾರಿ.
ನಮ್ಮ ಭಾರತದಲ್ಲಿ ದುಡ್ಡು ಹಿಡಿದಿಡುವುದು, ಕೂಡಿಡುವುದು (ಬ್ಲಾಕ್ ಮನಿ) ಹೇರಳವಾದ್ದರಿಂದ ಹಣದ ಹರಿವಿಗೆ ತಡೆಯುಂಟಾಗುತ್ತದಾದ್ದರಿಂದ ಒಟ್ಟು ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆಂದು ಎಕಾನಾಮಿಕ್ಸ್ ಓದುತ್ತಿರುವ ಸ್ನೇಹಿತರೊಬ್ಬರು ಹೇಳಿದ ನೆನಪು (ಅದೆಷ್ಟು ಸರಿಯಾಗಿ ಆಗ ನಾನು ಅರ್ಥೈಸಿಕೊಂಡಿದ್ದೆನೊ ನನಗೆ ತಿಳಿಯದು, ನನಗೆ ನೆನಪು ಬಂದದ್ದನ್ನ ಬರೆದಿರುವೆ). ಕೂಡಿಟ್ಟ ಹಣ ಹೊಸತರಲ್ಲಿ ಹೂಡಿ, ಹೊಸ ವ್ಯವಸ್ಥೆಗಳಲ್ಲಿ ಹೂಡಿ ಹೆಚ್ಚಾಗಿ ಕೆಲಸಗಳನ್ನು ಸೃಷ್ಟಿಸಿದರೆ ಸ್ಥಿತಿ ಎಷ್ಟೊ ಸುಧಾರಿಸಬಹುದು. ಇವು ನನ್ನ ಆಲೋಚನೆಗಳು.
ಶಾಮ್ ಕಶ್ಯಪ್ ರವರು ಇದನ್ನು ಓದಿದರೆ ಒಂದಷ್ಟು ಬರೆಯುವರು. ಅವರು ಇದೇ ಕುರಿತು ಕೆಲವು ಸಂಶೋಧನೆಗಳನ್ನು ಮಾಡುತ್ತಿದ್ದಾರೆ.
ಉಲ್ಬಣವಾಗಿರುವ ಸಮಸ್ಯೆ