ಪ್ರಚಲಿತ
ಅವರು "ಮಹಾತ್ಮ"
October 1, 2008 - 10:34pm — Balaraj DKಓದುತ್ತಾ ಹೋದಂತೆ ಅಬ್ಬಾ... "ನನ್ನ ಸತ್ಯಾನ್ವೇಷಣೆ" ಪುಸ್ತಕ ಓದಿ ನನಗಾದ ಅನುಭವ ಇದು. ನಿಜಕ್ಕೂ ಅಸಮಾನ್ಯ ವ್ಯಕ್ತಿ ಅವರು. ವ್ಯಕ್ತಿಯೊಬ್ಬ ಬೆಳೆದ ಬಗೆಯನ್ನು ತಿಳಿಯಬೇಕೆಂದರೆ ಗಾಂಧೀಜಿಯವರ ಆತ್ಮಕತೆ ಓದಬೇಕು.
ಗಾಂಧೀಜಿಯವರು ಬಾಲ್ಯದಿಂದಲೂ ಅವರ ಕಡೆಯ ದಿನದವರೆಗೆ ಅನೇಕ ಏಕವ್ಯಕ್ತಿ ಕೆಲವೊಮ್ಮೆ ಸಾಂಘಿಕ ಪ್ರಯತ್ನಗಳನ್ನು ಮಾಡುತ್ತಲೇ ಬದುಕಿದವರು. ಶಾಕಾಹಾರಿಗಳಾಗಿ, ಪರಮ ದೈವಭಕ್ತರಾಗಿ, ಸಸ್ಯಹಾರಿ, ಆಯುರ್ವೇದ ಚಿಕಿತ್ಸೆ ಬಳಸುತ್ತಾ, ವಿದೇಶಗಳಲ್ಲೂ ತಮ್ಮ ಶ್ರಮ ಸಂಕಲ್ಪವನ್ನು ಓರೆಗೆ ಹಚ್ಚಿದವರು. ತಮ್ಮ ಮಗ "ಮಣಿಪಾಲ"ನ ಮೇಲೆ ನೀರಿನ ಪ್ರಯೋಗ ಹಾಗೂ ಸ್ವತಃ ತಾವೇ ಮಣ್ಣಿನ ಚಿಕಿತ್ಸೆಗೆ ಒಳಗಾಗಿದ್ದರು. ಹೀಗೆ ಅನೇಕ ವಿಚಾರಗಳನ್ನು ಪ್ರಯೋಗಾತ್ಮಕವಾಗಿ ಅನುಭವಿಸಿದ್ದರಿಂದಲೇ ಅವರ ಘನತೆ ಮತ್ತು ಮೌಲ್ಯಗಳು ಹೆಚ್ಚಿದ್ದನ್ನು ಕಾಣಬಹುದು.
ಹಡಗಿನ ನಾವಿಕನ ಮಾತಿಗೆ ಮರುಳಾಗಿ ವೇಶ್ಯಾಗೃಹದ ಬಳಿ ತೆರಳಿ ಬಳಿಕ ಧಿಕ್ಕರಿಸಿದ್ದು. ತಾಯಿಗೆ ಕೊಟ್ಟಿದ್ದ ವಚನವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು, ಪತ್ನಿ ಕಸ್ತೂರಿ ಬಾರವರ ಬಳಿ ಬ್ರಹ್ಮಚರ್ಯ ಪಾಲಿಸಿದ್ದು, ಟ್ರಾನ್ಸವಾಲ್ ಮತ್ತು ಜೋಹಾನ್ಸ್ಬರ್ಗ್‌ನಲ್ಲಿ ಭಾರತದ ಕೂಲಿ ಅಳುಗಳ ಪರವಾಗಿ ಹೋರಾಡಿ ಜಯಶೀಲರಾಗಿದ್ದು. ಇಂತಹ ಅನೇಕ ಹೋರಾಟದಿಂದ ಗಾಂಧೀಜಿಯವರು ಇತರರಿಗೆ ಮಾದರಿಯಾಗುತ್ತಾರೆ. ಮುಂದೆ ಓದಿ »

ಸ್ವಾತಂತ್ರ್ಯ ಮತ್ತು ಸ್ವರಾಜ್ಯ
October 5, 2008 - 6:10pm — D.S.NAGABHUSHANAಸ್ವಾತಂತ್ರ್ಯ ಮತ್ತು ಸ್ವರಾಜ್ಯ ಮುಂದೆ ಓದಿ »

- Login or register to post comments
- 64 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ವೈವಾಹಿಕ ಸೇವೆ: ಅಂತರ್ಜಾಲದಿಂದ ಮೊಬೈಲಿನತ್ತ
October 2, 2008 - 7:28pm — ASHOKKUMAR
ಮದುವೆಯೆನ್ನುವುದು ಸುಲಭದ ಕೆಲಸವಲ್ಲ. ಗಂಡು ಮತ್ತು ಹೆಣ್ಣು ಪರಸ್ಪರ ಒಪ್ಪಿದರಷ್ಟೇ ಸಾಲದು. ಮನೆಯವರಿಗೂ ಒಪ್ಪಿಗೆಯಾಗಬೇಕು. ಹೀಗಾಗಬೇಕಿದ್ದರೆ, ಜಾತಿ,ಕುಲ,ಕುಟುಂಬ ಇವೆಲ್ಲವುಗಳ ಬಗ್ಗೆ ಪರಸ್ಪರ ಒಪ್ಪಿಗೆಯಾಗಬೇಕು. ಒಂದು ಮದುವೆಯಾಗಲು ನೂರಾರು ಸಂಬಂಧಗಳನ್ನು ನೋಡಬೇಕಾಗುತ್ತದೆ. ವರ್ಷಗಟ್ಟಲೆ ಸಮಯ ಹಿಡಿದೀತು.ಜಾತಕವೂ ಕೂಡಿ ಬರಬೇಕು ಎಂದಿದ್ದರೆ ಈ ಮದುವೆ ಏರ್ಪಡಲು ಇನ್ನೊಂದು ಪದರ ಸಂಕೀರ್ಣತೆ ಸೇರುತ್ತದೆ.
ಹಿಂದೆಲ್ಲ ವೈವಾಹಿಕ ಸಂಬಂಧಗಳನ್ನು ಕುಟುಂಬದವರ ಸಲಹೆಯನ್ನು,ಬ್ರೋಕರುಗಳ ಸೂಚನೆಯನ್ನು ಅನುಸರಿಸಿ ಏರ್ಪಡಿಸುತ್ತಿದ್ದರು. ನಂತರದ ದಿನಗಳಲ್ಲಿ ದೇವಾಲಯ ,ಮಠಗಳು ವೈವಾಹಿಕ ಸಂಬಂಧಗಳನ್ನು ಏರ್ಪಡಿಸುವ ಸೇವೆಯನ್ನು ಒದಗಿಸುತ್ತಿದ್ದುವು. ಆಗೆಲ್ಲ ಅಂತಹ ಸೇವಾ ಕೇಂದ್ರಗಳಲ್ಲಿ ಕನ್ಯಾಮಣಿಗಳ ವಿವರಗಳನ್ನು ಮತ್ತು ಒಂದು ಚಿತ್ರವನ್ನು ರಿಜಿಸ್ಟರುಗಳಲ್ಲಿ ಇಟ್ಟಿರುತ್ತಿದ್ದರು. ಮದುವೆ ಸಂಬಂಧ ಹುಡುಕುವ ಯುವಕರು ಅಥವ ಅವರ ಮನೆಯವರು ಈ ವಿವರಗಳನ್ನು ನೋಡಿ,ತಮಗೆ ಒಪ್ಪಿಗೆಯಾದರೆ, ಹುಡುಗಿಯ ವಿಳಾಸಕ್ಕೆ ಪತ್ರ ಬರೆದು, ತಾವು ಹುಡುಗಿಯನ್ನು ನೋಡಲು ಬರುವುದಾಗಿ ಹೇಳಿ ಹೋಗಬೇಕಾಗುತ್ತಿತ್ತು.
ಮುಂದೆ ಓದಿ »

- Login or register to post comments
- 106 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಧೂಮಪಾನ ನಿಷೇಧ ಎದುರಿಸಲು ಇ-ಸಿಗರೇಟು!
October 1, 2008 - 9:29am — ASHOKKUMARನಾಳೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿಗೆ ಬರಲಿದೆ. ಧೂಮಪಾನ ಮಾಡಬೇಕೆಂದರೆ, ಯಾವುದಾದರೂ ತೆರೆದ ಜನರಹಿತ ಪ್ರದೇಶವನ್ನು ಹುಡುಕಿಕೊಂಡು ಹೋಗಬೇಕು. ಈ ತೆರನ ನಿಷೇಧದ ನಡುವೆ ಧೂಮಪಾನ ವ್ಯಸನಿಗಳು ಬದುಕುವುದು ಹೇಗೆ? ಇ-ಸಿಗರೇಟ್ ಇದೆ!
ಏನಿದು ಇ-ಸಿಗರೇಟು? ಮುಂದೆ ಓದಿ »


RSS: