ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ವ್ಯಕ್ತಿ ವಿಷಯ, ಪರಿಚಯ, ಸಾಧನೆ

ಗುರುದತ್ ಎಂಬ ದುರಂತ ನಾಯಕ

October 10, 2008 - 8:03pm — Chamaraj
Guru Dutt.jpg

ಆತ ದುರಂತ ನಾಯಕ. ಆತನ ಜೀವನದಲ್ಲಷ್ಟೇ ಅಲ್ಲ, ನಟಿಸಿದ ಹಾಗೂ ನಿರ್ಮಿಸಿದ ಚಿತ್ರಗಳುದ್ದಕ್ಕೂ ಈ ದುರಂತ ಪ್ರತಿಫಲಿಸಿದೆ. ಕನ್ನಡಿಗನಾಗಿ ಹುಟ್ಟಿ, ಬಂಗಾಳಿಯಾಗಿ ಬೆಳೆದು, ನಟ-ನಿರ್ದೇಶಕನಾಗಿ ಅಮರನಾದ ಗುರುದತ್ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ಪ್ರತಿಭೆ. ನಿದ್ದೆ ಗುಳಿಗೆ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ೪೪ ವರ್ಷಗಳು. ಹಿಂದಿ ಚಿತ್ರರಂಗ ಎಂದೂ ಮರೆಯದ ಈ ಮಹಾನ್ ಪ್ರತಿಭೆ ಇವತ್ತಿಗೂ ದಂತಕಥೆ.

ಗುರುದತ್ ಹುಟ್ಟಿದ್ದು ಕನ್ನಡಿಗನಾಗಿ. ಶಿವಶಂಕರರಾವ್ ಪಡುಕೋಣೆ ಹಾಗೂ ವಸಂತಿ ದಂಪತಿಗಳ ಮಗನಾಗಿ ೧೯೨೫ರ ಜುಲೈ ೯ ರಂದು ಬೆಂಗಳೂರಿನಲ್ಲಿ ಜನಿಸಿದಾಗ ಆತನ ತಾಯಿಗೆ ಕೇವಲ ೧೬ ವರ್ಷದ ಪ್ರಾಯ. ಗುರುದತ್‌ನ ಮೊದಲ ಹೆಸರು ವಸಂತ ಕುಮಾರ್. ಅಪ್ಪ ಶಿವಶಂಕರ್ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ನೆಲೆಸಿದ್ದವರು. ಬ್ಯಾಂಕ್ ನೌಕರಿಗೆ ಹೋಗುವ ಮೊದಲು ಇಲ್ಲಿಯೇ ಶಿಕ್ಷಕರಾಗಿದ್ದ ಶಿವಶಂಕರರಾವ್ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತಮ್ಮಂದಿರಾದ ಆತ್ಮಾರಾಮ್, ದೇವಿದಾಸ್ ಹಾಗೂ ತಂಗಿ ಲಲಿತಾ ಅವರೊಂದಿಗೆ ಕಷ್ಟಕರ ಬಾಲ್ಯ ಕಳೆದ ಗುರುದತ್, ಕ್ರಮೇಣ ಆಸಕ್ತಿ ತೋರಿದ್ದು ಸಿನಿಮಾ ಪೋಸ್ಟರ್‌ಗಳ ಚಿತ್ರಗಳನ್ನು ಬಿಡಿಸುವತ್ತ.  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • 8 ಪ್ರತಿಕ್ರಿಯೆಗಳು
  • 153 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ

October 9, 2008 - 8:10pm — shammi

"ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು", "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ", "ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ", "ಮಧುವನ ಕರೆದರೆ ತನು ಮನ ಸೆಳೆದರೆ", "ನಿಂತಲ್ಲೆ ಹಾಳಾದೆ ನಿನ್ನಿಂದಲೇ", ಎನ್ನುತ್ತಾ ೨೦೦೬ರ ವರುಷದಿಂದೀಚಿಗೆ, ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟು, ಅವರನ್ನು ತನ್ನ ಅಕ್ಷರಗಳ ಮೋಹಕ ಬಲೆಯಲ್ಲಿ ಸಿಲುಕಿಸಿದ, ನನ್ನ ಮೆಚ್ಚಿನ ಬರಹಗಾರ, ಜಯಂತಣ್ಣನ ಬಗ್ಗೆ ಒಂದು ಪರಿಚಯ ಲೇಖನ ಬರೆಯಬೇಕೆಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಬೆಂಗಳೂರಿನ ಜಯನಗರದ ರೋಟರ್‍ಯಾಕ್ಟ್ ಸಂಸ್ಥೆಯವರು ೨೦೦೮ರ ನವೆಂಬರ್ ತಿಂಗಳಲ್ಲಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಸಲುವಾಗಿ ಪ್ರಕಟಿಸುವ ನೆನಪಿನ ಹೊತ್ತಗೆಗಾಗಿ, ಲೇಖನ ಬರೆದು ಕೊಡಲು, ನನ್ನ ಸ್ನೇಹಿತ ಸೋಮ ತಿಳಿಸಿದ. ಯಾವ ವಿಷಯದ ಬಗ್ಗೆ ಬರೆಯೋಣವೆಂದು ಚರ್ಚಿಸಿದಾಗ, ಅವನು ಕನ್ನಡ ಸಾಹಿತ್ಯದಲ್ಲಿ ಜನಸಾಮಾನ್ಯರು ಅಭಿಮಾನದಿಂದ ಯಾವಾಗಲೂ ನೆನಪಿಸಿಕೊಳ್ಳುವ ಮೂರು ಕನ್ನಡ ಸಾಹಿತಿಗಳ ಬಗ್ಗೆ ಬರೆದು ಕೊಡಿ, ಎನ್ನುವಷ್ಟರಲ್ಲಿ, ಅವನ ಬಾಯಿಂದ ಮೊದಲು ಬಂದ ಹೆಸರೇ ಜಯಂತ ಕಾಯ್ಕಿಣಿಯವರದ್ದು. ಅದೇನೋ ಅಂತರಲ್ಲ "ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ", ಹಾಗೆಯೇ ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಜಯಂತಣ್ಣನವರ ಬಗ್ಗೆ ಲೇಖನರೂಪ ತಳೆಯುತ್ತಿದ್ದ ಅಕ್ಷರಗಳಿಗೆ ಹೊರ ಹೊಮ್ಮಲು ಒಂದು ಕಾರಣ ಈಗ ಸಿಕ್ಕಿತು.
           ನನಗೆ ಪುಸ್ತಕಗಳನ್ನು ಓದುವ, ಅದರಲ್ಲೂ ಕನ್ನಡ ಸಾಹಿತ್ಯ ಪ್ರಕಾರದ ಪುಸ್ತಕಗಳನ್ನು ಓದುವ ಗೀಳು ಬಹಳ ಹಳೆಯದ್ದು. ನಾನು ಚಿಕ್ಕವಳಿರುವಾಗ ದೀಪಾವಳಿ ಮತ್ತು ಯುಗಾದಿ ಹಬ್ಬದ ಸಲುವಾಗಿ ಹೊರಬರುವ ವಿಶೇಷ ಸಂಚಿಕೆಗಳಲ್ಲಿ, ತುಷಾರದಲ್ಲಿ ಪ್ರಕಟವಾಗುತ್ತಿದ್ದ ಜಯಂತಣ್ಣನ ಬರಹಗಳೆಂದರೆ ನನಗೆ ಅಚ್ಚುಮೆಚ್ಚು, ಒಂದೇ ಮಾತಿನಲ್ಲಿ ಹೇಳುವುದಾದರೆ, ನನ್ನ ಸಾಹಿತ್ಯ ಅಲ್ಪ-ಸ್ವಲ್ಪ ಕೃಷಿಗೆ ಆದರ್ಶ, ಗುರು ಅವರೇ. ಮುಂಗಾರುಮಳೆಯ ಯೋಗರಾಜ್ ಭಟ್ಟರು ಕನ್ನಡ ಸಿನೆಮಾರಂಗದಲ್ಲಿರುವ ನನ್ನ ಪತಿ ಸುಬ್ರಹ್ಮಣ್ಯ.ಎಂ.ಕೆ.ಯವರಿಗೆ ಸ್ನೇಹಿತ. ಹಾಗಾಗಿ ಅವರ ಮೂಲಕ ಜಯಂತಣ್ಣ ನನ್ನ ಪತಿಗೆ ಪರಿಚಯ. ನನಗೆ ಅವರ ಮುಖಾಮುಖಿ ಪರಿಚಯವಾಗಿದ್ದು ನನ್ನ ಪತಿಯಿಂದ. ದ್ರೋಣಾಚಾರ್ಯ ಏಕಲವ್ಯನೆದುರು ಪ್ರತ್ಯಕ್ಷವಾದಂತೆ,  ಬಾಲ್ಯದ ಆರೇಳು ತರಗತಿಯಿಂದಲೂ ಆದರ್ಶವಾಗಿ ನಾನು ಆರಾಧಿಸುತ್ತಿದ್ದ, ನನ್ನ ಸಾಹಿತ್ಯ ಗುರು, ಕಾಯ್ಕಿಣಿಯವರು, ನಮ್ಮ ಮನೆಗೆ ಬಂದಾಗ ನಾನು ನಿಜವಾಗಿಯೂ, "ಕನಸೋ ಇದು, ನನಸೋ ಇದು" ಎಂದು ಸಾವಿರಾರು ಸಲ ನನ್ನನ್ನೇ ಪ್ರಶ್ನಿಸಿಕೊಂಡಿದ್ದೇನೆ. ಜಯಂತ ಕಾಯ್ಕಿಣಿರವರು ನಮ್ಮ ಮನೆಗೆ ಬಂದ ಮೊದಲ ದಿನವೇ, ನನಗಿರುವ ಸಾಹಿತ್ಯಾಸಕ್ತಿಯನ್ನು ಕೇಳಿ ತುಂಬಾ ಪ್ರಶಂಸಿದರು, ಮುಂದೆಯೂ ಬರೆಯುತ್ತಿರಬೇಕೆಂದು ಪ್ರೋತ್ಸಾಹಿಸಿದರು. ಅಷ್ಟು ಸರಳ ಸಜ್ಜನಿಕೆ ಅವರದು. ಹಾಗಾಗಿಯೇ ನಮ್ಮ ಟೋಳಿಯವರಿಗೆಲ್ಲಾ ಅವರು ಮೆಚ್ಚಿನ ಜಯಂತಣ್ಣ. ಇವಿಷ್ಟು ಕಾರಣಗಳು ಈ ಲೇಖನ ಬರೆಯಲು.  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • 6 ಪ್ರತಿಕ್ರಿಯೆಗಳು
  • 245 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!

October 4, 2008 - 9:52am — shylaswamy
ಅಪರೂಪದ ಮಹಾನ್ ಚೇತನ

ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!
ದೃಶ್ಯ 1
[ ಬ್ಯಾಂಕ್ ಒಂದರಲ್ಲಿ ತುಂಬಾ ಜನ ಕಾಯುತ್ತಿದ್ದರು. ಅಲ್ಲಿನ ಅಕೌಂಟೆಂಟ್ ಇನ್ನೂ ಬಂದಿರಲಿಲ್ಲ ]
ವ್ಯಕ್ತಿ1:- ನನಗೆ officeಗೆ ಹೊತ್ತಾಗ್ತಾ ಇದೆ. ಏನು ಮಾಡಲಪ್ಪ?
ವ್ಯಕ್ತಿ2:- ಹೌದು ನನಗೂ ಹೊತ್ತಾಗ್ತಾ ಇದೆ.
ವ್ಯಕ್ತಿ3:- ಯಾವಾಗಲೂ ಸಮಯಕ್ಕೆ ಸರಿಯಾಗಿ ಬರುವ ಅಕೌಂಟೆಂಟ್ ಇವತ್ತು ಯಾಕೆ ಲೇಟೋ!  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • 5 ಪ್ರತಿಕ್ರಿಯೆಗಳು
  • 241 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಗಣಿತ ಸಾಗರದಲ್ಲೊಂದು ಅನರ್ಘ್ಯ ರತ್ನ

October 2, 2008 - 2:01pm — shylaswamy
ಗಣಿತ ರತ್ನ

ಗಣಿತ ಸಾಗರದಲ್ಲೊಂದು ಅನರ್ಘ್ಯ ರತ್ನ
ನಿತ್ಯ ನೂತನ ಗಣಿತದಲ್ಲಿರುವ
ಅಗಣಿತ ವಿಚಾರಗಳ ಕಡಲೊಳು
ಮುಳುಗಿ ಮುತ್ತು ರತ್ನಗಳೆತ್ತಿ ತಂದಿರಿವ
ಗಣಿತ ತಜ್ಞರೆಲ್ಲರಿಗೂ ಶಿರಬಾಗಿ ನಮಿಪೆನು.
ವಿಸ್ತಾರವಾದ ಗಣಿತ ಸಾಗರದಲ್ಲಿ ಒಂದು ಹನಿಯಷ್ಟಾದರೂ ನನ್ನಂತಹಾ ಸಾಮಾನ್ಯರಿಗೆ ತಿಳಿದಿದೆಯೋ ಇಲ್ಲವೋ ನಾನರಿಯೆ. ಆದರೂ ಆ ವಿಷಯ ಕೊಡುವ ಆನಂದ ಮಾತ್ರ ಅಮೋಘವಾದುದು..  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • 7 ಪ್ರತಿಕ್ರಿಯೆಗಳು
  • 274 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಶಂಕರ್ ನಾಗ್: ಒಂದು ನೆನಪು...

September 30, 2008 - 12:48pm — anil.ramesh

ಶಂಕರನಾಗ್ ಅವರು ನಮ್ಮನ್ನು ಅಗಲಿ ಇಂದಿಗೆ ಹದಿನೆಂಟು ವರ್ಷ.

ಶಂಕರ್ ನಾಗ್ ಎಂದರೆ ಸಾಕು ಕನ್ನಡಿಗರಲ್ಲಿ ಏನೋ ಒಂದು ರೀತಿ ಹುರುಪು ಮತ್ತು ಲವಲವಿಕೆ ಮೂಡುತ್ತದೆ. ಸಾಧನೆಯ ಉತ್ತುಂಗಕ್ಕೇರುವ ತವಕದಲ್ಲಿ ಅವಿರತವಾಗಿ ಪಾದರಸದಂತೆ ಕೆಲಸಮಾಡುತ್ತಿದ್ದ ಶಂಕರ್ ಮೇಲೆ ವಿಧಿಗೆ ಅದೇನು ಮುನಿಸೋ ಏನೋ . 1990ರ ಸೆ. 30ರಂದು ತನ್ನ ಬಳಿಗೆ ಕರೆದುಕೊಂಡು ಬಿಟ್ಟಿತು.

ಕನ್ನಡ ಚಿತ್ರರಂಗವನ್ನು ಮುಂಚೂಣಿಯಲ್ಲಿ ಸಾಗುವಂತೆ ಮಾಡಿದ ನಾಗ್ ಅವರಿಗೆ ಮುಂದೊಂದು ದೊಡ್ಡ ಆಘಾತ ಕಾದ್ದಿತ್ತು. ತಮ್ಮ ಮುಂದಿನ ಚಿತ್ರ "ಜೋಕುಮಾರ ಸ್ವಾಮಿ" ಕುರಿತು ಚರ್ಚಿಸಲು ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿಯೊಂದಿಗೆ ಅದು ಸೆಪ್ಟೆಂಬರ್ 30, 1990 ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ, ದಾವಣಗೆರೆ ಹತ್ತಿರ ಅವರು ಹೋಗುತ್ತಿದ್ದ ಕಾರು ಅಪಘಾತಕ್ಕೆ ಈಡಾಯಿತು. ಅದರಲ್ಲಿ ನಾಗ್ ಅವರನ್ನು ಬಿಟ್ಟು ಎಲ್ಲರೂ ಉಳಿದರು. ಆದರೆ, ಶಂಕರ್ ನಾಗ್.... ಅಮರರಾದರು. ಶಂಕರ್ ನಮ್ಮೊಂದಿಗಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಇಂದಿಗೂ ಕನ್ನಡ ಚಿತ್ರರಂಗಕ್ಕೆ ಕಷ್ಟವಾಗುತ್ತಿದೆ.  ಮುಂದೆ ಓದಿ »

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • 8 ಪ್ರತಿಕ್ರಿಯೆಗಳು
  • 301 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123456789…ಮುಂದಿನ ›ಕೊನೆಯ »
Syndicate content

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
  • Narayana
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 2:00pm
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator