ಲಲಿತ ಪ್ರಬಂಧ, ಹಾಸ್ಯ
ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
October 7, 2008 - 12:40pm — Achala Sethu"ಅಮ್ಮ ಆರ್ ವಿ ದೇರ್ ಯೆಟ್?"
ಹರಟೆ ಆಟ ನೋಟ ಎಲ್ಲ ಮುಗಿಸಿದರೂ ಮುಗಿಯದ ವಿಮಾನಯಾತ್ರೆಯಿಂದ ಆದಿಗೆ ಬೇಸರ ಬಂದಿತ್ತು.
"ಇನ್ನೊನ್ನವರ್ ಕಣೋ ಆದಿ ನೀನು ಪzಲ್ ಬುಕ್ ಫಿನಿಶ್ ಮಾಡೋದ್ರಲ್ಲಿ ಅಟ್ಲಾಂಟದಲ್ಲಿರ್ತೀವಿ"
"ಓ..ಇನ್ನು ಒನ್ ಅವರ್ರಾ..ಸೋ ಬೋರಿಂಗ್"
ಆದಿಯ ಕುಯ್ಯೊಮರ್ರೊ ಕೇಳಿ ಹಿಂದಿನ ಸೀಟಲ್ಲಿ ಕುಳಿತಿದ್ದ ಗೌರಜ್ಜಿ ಎರಡು ಸೀಟುಗಳ ಸಂದಿಯಲ್ಲಿ ಮೂಗು ತೂರಿಸಿ
"ಹುಚ್ಚ ಮುರುವ ಹುರಳೀ ಬಿತ್ದ ಹೊತ್ತಿಗ್ ಮೂರ್ಸಲ ಕಿತ್ ಕಿತ್ ನೋಡ್ದ ಅನ್ನೊ ಹಾಗೆ ಘಳಿಗ್ ಘಳಿಗೆಗೂ ಊರು ಬಂತಾ ಬಂತಾ ಅಂದ್ರೆ ಬಂದ್ಬುಡತ್ತೇನೋ? ಸಮಾಧಾನವಾಗಿ ಕೂತ್ಕೊಬೇಕಪ್ಪ. ಲೇ ಅನು ನಿನಗಿರೊ ವ್ಯವಧಾನ ನಿನ್ನ ಮಗನಿಗೆ ಬರಲಿಲ್ಲ ಬಿಡು. ಎಲ್ಲಾ ಪ್ರಶಾಂತಂದೇ ಪಡಿಯಚ್ಚು" ಎಂದರು.
"ಕಿರೀಕು ಕಣೆ ನಿಮ್ಮಜ್ಜಿ. ಚಾನ್ಸ್ ಸಿಕ್ತು ಅಂದ್ರೆ ಸಾಕು ನಂಗೇ ಬತ್ತಿ ಇಡಕ್ಕೆ ನೋಡ್ತಿರತ್ತೆ. ಮಾಲಿ ಮದ್ವೇಗ್ಬೇರೆ ಕರ್ಕೊಂಡು ಹೋಗ್ತಾ ಇದೀವಿ. ಏನೇನೋ ಮಾತಾಡಿ ಆಭಾಸ ಮಾಡ್ದೇ ಇರೋ ಹಾಗೆ ನೀನೆ ಸ್ವಲ್ಪ ಕಂಟ್ರೊಲ್ ಮಾಡ್ಬೇಕು.ಬಾಲ ಅಂಕಲ್ ಬೇರೆ ಒಂಥರಾ" ಪ್ರಶಾಂತ ಪಿಸುಗುಟ್ಟಿದ.
ಗೌರಜ್ಜಿಯ ಬಾಯಿಗೆ ಬೀಗ ಹಾಕುವಂತಹ ಯಾವುದೇ ಪೊಳ್ಳು ಪ್ರಾಮಿಸ್ ಮಾಡಲು ಹೆದರಿ "ಸೋಚನಾ ಕ್ಯಾ ಜೋಭಿ ಹೋಗ ದೇಖಾ ಜಾಯೇಗ" ಹಾಡೊಂದನ್ನು ಗುನುಗಿ ಅವನ ಕೈ ಅಮುಕಿದೆ. ಯಾಕೋ ತಣ್ಣಗೆ ಕೊರೆಯುತ್ತಿತ್ತು.ಆಜ್ಜಿ ಆಡೋ ಗಾದೆಗಳನ್ನೋ ಅಥವಾ ತೆಗೆದ ತಗಾದೆಗಳನ್ನು ನೆನೆಸ್ಕೊತಾ ಇದ್ನೋ ಏನೊ! ಮಗಳು ಆದ್ಯ ಮಾತ್ರ ಬೆಚ್ಚಗೆ ಅವನೆದೆಗೊರಗಿ ನಿದ್ದೆ ಹೋಗಿದ್ದಳು. ಮುಂದೆ ಓದಿ »

ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
October 6, 2008 - 3:14pm — Aravind M.Sನಾನೊಮ್ಮೆ ಮದುರೈಯ ನಮ್ಮೊಂದು ಕಂಪನಿಗೆ ಹೋದಾಗ ಅಲ್ಲೊಬ್ಬ ಹಿರಿಯ ಅಧಿಕಾರಿಗಳು ಬಲು ಒಲವಿನಿಂದ ತಾವಿದ್ದ ಹಾಸನದ ದಿನಗಳನ್ನು ನೆನೆಸಿಕೊಂಡರು. ಆಹಾ ಎಂಥಾ ಸವಿನೆನಪುಗಳು ಅವು, ಆ ದೇಶದ ನೆನಪುಗಳು ಎಂದು. ಆ ಗದ್ದೆ ಬಯಲು ಸೀಮೆಯ ಕಾಳು ಕಡ್ಡಿ ಪೈರು ಪಚ್ಚೆ ಕಾಯಿ ಪಲ್ಲೆಗಳನ್ನು, ಜನರನ್ನು. ಮುಂದೆ ಓದಿ »

ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
October 6, 2008 - 3:07pm — siddharamಮನೆಯಲ್ಲಿ ಒಂದೇ ತರಹದ ಆದುಗೆ ಊಟ ಮಾಡಿ ಬೇಸರವಾದಾಗ ರುಚಿ ಹೆಚ್ಚಿಸಲು ಪುರುಷರು ತಮ್ಮ ಪತ್ನಿಗೆ(ಮದುವೆಯಾಗಿದ್ದರೆ) ಇದನ್ನು ತೋರಿಸದೇ ಹೊಸ ರುಚಿಗಳನ್ನು ಮಾಡಿ ನೋಡಬಹುದು.
ಪೇಪರ್ ದೋಸೆ
ಬೇಕಾಗುವ ಸಾಮಾನು : ೪-೫ ಹಳೆಯ ದಿನಪತ್ರಿಕೆಗಳು, ೧ ಪಾವು ಉದ್ದಿನಬೇಳೆ. ೧ ಚಿಟಿಕೆ ಅಡುಗೆ ಸೋಡಾ, ರುಚಿಗೆ ತಕ್ಕಷ್ಟೇ ಉಪ್ಪು. ಮುಂದೆ ಓದಿ »

ವಿಶೇಷ ಸಂದರ್ಶನ ಲಾರ್ಡ್ ವಿನಾಯಕನೊಂದಿಗ
September 15, 2008 - 7:25pm — nagenagaariಗಣೇಶ ಚತುರ್ಥಿಯ ಮುನ್ನಾ ದಿನ ಲಾರ್ಡ್ ವಿನಾಯಕ ಖುದ್ದಾಗಿ ಎಲ್ಲಾ ಪತ್ರಿಕಾ ಕಛೇರಿಗಳಿಗೆ ಕಳುಹಿಸಿದ ಇ-ಮೇಲನ್ನು ನಗೆ ನಗಾರಿ ಡಾಟ್ ಕಾಮ್ ಮಾತ್ರವೇ ಪ್ರಕಟಿಸುವ ಬದ್ಧತೆಯನ್ನು ತೋರಿತು. ಆ ಸಂದರ್ಭದಲ್ಲಿ ಸಾಧ್ಯವಾದರೆ ಲಾರ್ಡ್ ಗಣೇಶನ ಸಂದರ್ಶನವೊಂದನ್ನೂ ಮಾಡಿಕೊಂಡು ಬರುವ ಇರಾದೆಯನ್ನು ನಗೆ ಸಾಮ್ರಾಟರು ಹೊಂದಿದ್ದರು. ಮುಂದೆ ಓದಿ »





RSS: