ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ. ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ. ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ