ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › venkatesh ರವರ ಬ್ಲಾಗ್

ಎಂಕ್ಟೇಸಪ್ಪನ್ ಕ (ಕಂ)ತೆ ಪುರಾಣ !

"ಒಸ್ ಬ್ಲಾಗ್ " ನಗೆ ಅದೊ ಇದೊ ಅಂತ ಏನಾದ್ರು ಬರ್ಯವ ಅಂದ್ರೆ, ತಲ್ಯಾಗೇನೂ ಒಳ್ಯಂಗೇ ಇಲ್ವಲಪ್ಪ. ಆಗ್ಲಿ ಬಿಡಿ. ಆ ಸಿವಂಗೆ ನನ್ ಮ್ಯಾಗ್ ಇಸ್ವಾಸ ಬರೊತಂಕ ಬರ್ಯಕ್ಕ ಬಿಟ್ಟಾನ. ಮರ್ವಾದೆ ಪ್ರಸ್ನೆ ಅಲ್ಲ್ವ್ರಾ. ಎಂಗಾರಾಗ್ಲಿ. ಎನಾದ್ರು ಗೀಚೊ ಉಚ್ಚು. ಅಂಗೇ ಮನಸ್ನಾಗ್ ಐತೆ. ನೊಡವ. ಜನ ಏನಂತಾರೆ ಅಂತವ ! ಜುಲೈ ೪ ನೆ ತಾರೀಕ್ ಆದ್ಮ್ಯಾಗೆ, ನಾನ್ ಇಲ್ಲಿಲ್ಲ. ಪರ್ದೇಸ್ದಲ್ಲಿ ಅಂದ್ರೆ ಅಮ್ರ್ಕದಲ್ಲಿವ್ನಿ. ಒಂದೆಲ್ಡ್ ತಿಂಗ್ಳಾದ್ ಮ್ಯಾಗೆ ಬರೋದು. ಅಂಗೆ ಗೀಚೋ ಅಳೇ ಉಚ್ಚು ಐತಲ್ಲ ! " ಅಮ್ರಿಕದಾಗ, (ಕಿವ್ಯಾಗ್) ಕೇಳಿದ್ದು, (ಕಣ್ಣಾಗ್) ಕಂಡಿದ್ದು "! ಅಂತ ತಲಿಗ್ ತೋಚಿದ್ನ ಬರ್ದಿವ್ನಿ. ಓದಂಗಿದ್ರೆ ಓದ್ರಪೋ. ನಾನ್ತಾನೇ ಏನೇಳ್ಲಿ ? ! ಮುನಿಸ್ಕಂಡು ಕಲ್ ಏಟ್ ಮಾತ್ರ ಆಕ್ಬ್ಯೇಡ್ರಪ್ಪೊ ! ನಿಮ್ದರ್ಮ

" ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,

December 25, 2007 - 7:04pm — venkatesh

ಕನ್ನಡ ಪುಸ್ತಕಪ್ರಾಧಿಕಾರದವರು ತಮ್ಮ ಮಳಿಗೆಯೊಂದನ್ನು ಮುಂಬೈ ನ ಮೈಸೂರ್ ಅಸೋಸಿಯೇಷನ್, ಮುಂಬೈ ನ ಪ್ರವೇಶದ್ವಾರದ ಬಳಿಯಲ್ಲಿಯೇ ಸ್ಥಾಪಿಸಿದ್ದಾರೆ. ಇಲ್ಲಿ ಉಸ್ತಕ ಪ್ರಾಧಿಕಾರದ ಪುಸ್ತಕಗಳಲ್ಲಾ ಉಪಲಭ್ದವಿದೆ. ಆದರೆ, ಕಲಾಂ ಮೇಷ್ಟ್ರು ಪುಸ್ತಕದ ಬೆಲೆಯನ್ನು ಅತಿ ಕಡಿಮೆ ( ಕೇವಲ ೬೦. ರೂಪಾಯಿ) ಇಟ್ಟಿದ್ದರಿಂದ ಪ್ರಕಟವಾದ ೧,೦೦೦ ಪ್ರತಿಗಳೆಲ್ಲ ಬಿಸಿರೊಟ್ಟಿಯಂತೆ ಖರ್ಚಾಗಿಹೋಗಿವೆ. ಬಹುಶಃ ಎರಡನೆಯ ಆವೃತ್ತಿಯಲ್ಲಿ ದೊರೆಯಬಹುದು. ಪ್ರಯತ್ನಿಸಿ.

" ಮನಸ್ಸುಗಳ ಏಕತೆ "

ಕಲಾಂ ಮೇಷ್ಟ್ರು-ಲೇಖಕರು :ಪ್ರೊ. ಎಚ್. ಆರ್. ರಾಮಕೃಷ್ಣರಾವ್,

ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೫೬೦ ೦೦೨.
ಪ್ರಥಮ ಮುದ್ರಣ : ೨೦೦೬. ಪುಟ-೧೨೯.

ಯೋಚಿಸುವ, ಚಿಂತಿಸುವ, ಕನಸು ಬಿತ್ತುವ
ರಾಷ್ಟ್ರಪತಿ ಸಿಕ್ಕಿದ್ದು ಈ ನಾಡಿನ ಭಾಗ್ಯ...

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜೀವನ ಸಾಧನೆಯನ್ನು ಕುರಿತ ಈ ಕೃತಿಗೆ " ಕಲಾಂ ಮೇಷ್ಟ್ರು " -ಎಂದು ಹೆಸರಿಟ್ಟಿರುವುದು ಅರ್ಥಪೂರ್ಣವಾಗಿದೆ. ಜಗತ್ತಿನ ಮೊದಲ ವಿಜ್ಞಾನಿ, ಮಗುವೇ ಎಂಬುದು ಕಲಾಂ ಸರ್ ಅವರ ನಂಬಿಕೆ. ಅದಕ್ಕೆ ಅವರು ಕೊಡುವ ಕಾರಣ, ' ವಿಜ್ಞಾನ ಹುಟ್ಟಿದ್ದು ಮತ್ತು ಈಗೂ ಜೀವಂತವಾಗಿರುವುದು ಪ್ರಶ್ನೆಗಳಿಂದ. ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು. ಕೊನೆಯಿಲ್ಲದಷ್ಟು ಪ್ರಶ್ನೆ ಕೇಳುವವರು ಮಕ್ಕಳೇ, " ಸದಾ ಹಸನ್ಮುಖಿಯಾಗಿ ಮಕ್ಕಳ ನಡುವೆ ಬೆರೆಯುತ್ತಾ, ತಮ್ಮ ವಿಜ್ಞಾನದ ವಿಚಾರ ಹಾಗೂ ಅನುಭವ ಜ್ಞಾನವನ್ನು ಹಂಚಿಕೊಳ್ಳುವ, ಮಾನ್ಯ ರಾಷ್ಟ್ರಪತಿಯವರು ಮಕ್ಕಳಿಗೆ ಮಾತ್ರ, ಪ್ರೀತಿಯ ಕಲಾಂ ಸರ್, ಆಗಿಯೇ ಆಪ್ತರು. "

"ರಾಮೇಶ್ವರಂನ ಸಾಮಾನ್ಯಕುಟುಂಬದಲ್ಲಿ ಹುಟ್ಟಿ, ಸತತ ಪರಿಶ್ರಮ ಹಾಗೂ ಪ್ರತಿಭೆಯಿಂದ ಮೇಲೆಬಂದವರು ಡಾ. ಕಲಾಂ. ಇವರ ಕೌಟುಂಬಿಕ ಹಿನ್ನೆಲೆ, ಬಾಲ್ಯ, ವಿದ್ಯಾಭ್ಯಾಸ, ಪುಸ್ತಕ ಪ್ರೀತಿ, ಅಧ್ಯಯನ, ಅಧ್ಯಾಪನ, ಅನ್ವೇಷಣೆ, ಸಂಶೋಧನೆ, ಸಾಧನೆ, ಸಿದ್ಧಿ, -ಹೀಗೆ ಪ್ರತಿಯೊಂದು ವಿಚಾರ್‍ಅಗಳನ್ನೂ ಮಕ್ಕಳ ಮನನಂಬುವಂತೆ ಚಿತ್ರಿಸಿದ್ದಾರೆ, ಡಾ. ರಾಮಕೃಷ್ಣ ಅವರು. ವಿಜ್ಞಾನಕ್ಕೆ ಸಂಬಂಧಿಸಿದ ವಿವರಗಳನ್ನು ಕೊಡುವಾಗಲೂ , ಸಾಮಾನ್ಯರಿಗೂ ಸುಲಭ ಗ್ರಾಹ್ಯವಾಗುವಂತೆ ನಿರೂಪಿಸಿದ್ದಾರೆ. ತಳ ಮೂಲದ ಸಾಮಾನ್ಯ ಬಾಲಕನೊಬ್ಬ, ರಾಷ್ಟ್ರದ ಅತ್ಯುನ್ನತ ಅಧಿಕಾರಕ್ಕೆ ಏರಿದ ಬಗೆಯನ್ನು ನಿರೂಪಿಸುವ ವಿಧಾನ, ಮಕ್ಕಳಲ್ಲಿ ಸ್ಪೂರ್ತಿ ಹಾಗೂ ಸಂಕಲ್ಪಗಳನ್ನು ಬಿತ್ತುವಂತಿದೆ. ಮಾನ್ಯ ರಾಷ್ಟ್ರಪತಿಗಳ ಬದುಕಿನ ಕ್ರಿಯಾಧರ್ಮವನ್ನೂ, ಮುನ್ನೋಟವನ್ನೂ, ಜೊತೆಗೆ ಅವರ ಸಂತ ಭಾವದ ಮಾನವೀಯ ಮಿಡಿತಗಳನ್ನೂ, ಕೆಲವು ಯೋಜನೆಗಳ ವಿವರಗಳನ್ನೂ ಔಚಿತ್ಯವರಿತು, ನಿರೂಪಿಸಿದ್ದಾರೆ. ಇದು ವ್ಯಕ್ತಿ ಚಿತ್ರಣ ಮಾತ್ರವಾಗದೆ, ಅಭಿರುಚಿ- ಆಸಕ್ತಿ- ಅನುಭವಜ್ಞಾನ, ಹಾಗೂ, ಉನ್ನತಭಾವದ ಮಾನವಪ್ರೀತಿ ಮೊದಲಾದ ಪರಿಪೂರ್ಣಾವತಾರಿ ವ್ಯಕ್ತಿತ್ವದ ದರ್ಶನವೂ ಆಗಿರುವುದು, ಈ ಬರಹದ ವಿಶೇಷವಾಗಿದೆ. ಡಾ. ಎಚ್. ಅರ್. ರಾಮಕೃಷ್ಣರಾವ್ ಅವರು ಈ ಕೃತಿ ರಚನೆಗೆ ತೋರಿಸಿದ ಶ್ರಮ, ಹಾಗೂ ಪ್ರೀತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಗೌರವದಿಂದ, ಸ್ಮರಿಸುತ್ತದೆ. "

-ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಅಧ್ಯಕ್ಷರು,
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಡಾ. ಕಲಾಂ ರವರು ಸಂದರ್ಶಿಸಿದ, ಕ್ರೈಸ್ತ ಆಶ್ರಮದ ಪರಿಸರ, ಹಾಗೂ ತಮ್ಮ ಚಿಂತನೆ :

" ನನ್ನ ಮನಸ್ಸಿನಲ್ಲಿ ಅಳಿಯದೆ ಉಳಿದಿರುವುದು, ನಾನು ಸಂದರ್ಶಿಸಿದ ಕ್ರೈಸ್ತ ಆಶ್ರಮದಲ್ಲಿನ ಅನುಭವ. ಗುಡ್ಡದ ಮೇಲಿನ ಪ್ರಶಾಂತ ವಾತಾವರಣದಲ್ಲಿರುವ ಈ ಆಶ್ರಮದಲ್ಲಿ, ೧೬,೦೦೦ ಗ್ರಂಥಗಳಿವೆ. ಗ್ರಂಥಭಂಡಾರದಲ್ಲಿ, ೧೯ ನೆಯ ಶತಮಾನದ ೧೩೪ ಹಸ್ತಪ್ರತಿಗಳಿವೆ. ಬಲ್ಗೇರಿಯಾದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಬದುಕಿನಲ್ಲಿ ಈ ಪವಿತ್ರ ಆಶ್ರಮ ಪ್ರಧಾನ ಪಾತ್ರವಹಿಸಿದೆ. ೧೯ ನೇ ಶತಮಾನದ ಮೊದಲ ಭಾಗದಲ್ಲಿ ಈ ಆಶ್ರಮ ನೆಲಸಮವಾಗಿತ್ತು. ಇದನ್ನು ಮತ್ತೆ ಹಿಂದಿದ್ದಂತೆಯೇ ನಿರ್ಮಿಸಲಾಗಿದೆ. ೮೦ ರಿಂದ ೯೦ ವರ್ಷ ವಯಸ್ಸಿನ ಜ್ಞಾನ ವೃದ್ಧರಾದ ಕ್ರೈಸ್ತ ಪಾದ್ರಿಗಳನ್ನು ನೋಡಿ, ನನಗೂ ಪ್ರಾರ್ಥನೆ ಸಲ್ಲಿಸುವ ಮನಸ್ಸಾಯಿತು. ಅಲ್ಲಿದ್ದ ಹಿರಿಯ ಪಾದ್ರಿಗಳನ್ನು ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿ ಅವರ ಪ್ರಾರ್ಥನೆಯನ್ನು ಓದುವಂತೆ, ಕೇಳಿಕೊಂಡೆ. ಆಶ್ರಮದಲ್ಲಿದ್ದವರೆಲ್ಲರೂ, ಪ್ರಾರ್ಥನೆಯನ್ನು ಪಠಿಸಿದರು.

ಸಂತ ಫ್ರಾನ್ಸಿಸ್ ಅವರ ಪ್ರಾರ್ಥನಾ ಶ್ಲೋಕ :

ದೇವರೇ, ನಿನ್ನ ಶಾಂತಿದೂತನನ್ನಾಗಿ ನನ್ನನ್ನು ಮಾಡು

ದ್ವೇಷವಿರುವೆಡೆ ಪ್ರೀತಿ-ಬಿತ್ತುವವನಾಗಲಿ ನಾನು ;

ಕೆಡುಕಿದ್ದಲ್ಲಿ, ಕ್ಷಮೆ,

ಅಪನಂಬಿಕೆ ಇದ್ದಲ್ಲಿ, ನಂಬಿಕೆ,

ಹತಾಶೆ ಇದ್ದಲ್ಲಿ, ಭರವಸೆ,

ಕತ್ತಲೆ ಇದ್ದಲ್ಲಿ, ಬೆಳಕು ;

ದುಖಃ ಇದ್ದಲ್ಲಿ, ಹರ್ಷ ; ಮೂಡಲಿ.

ಯಾಕೆಂದರೆ ಕೊಟ್ಟು ನಾವು ಪಡೆಯುತ್ತೇವೆ ;

ಕ್ಷಮಿಸುವುದರಿಂದಾಗಿ ನಾವು ಕ್ಷಮಾರ್ಹರಾಗುತ್ತೇವೆ,

ಮರಣದಲ್ಲಿ ನಾವು ಅಮರತ್ವದ ಮರುಹುಟ್ಟು ಪಡೆಯುತ್ತೇವೆ.

" ನಾವು ಈವರೆಗೆ ಪಠಿಸಿದ ಸ್ವರ್ಗೀಯವಾದ ಪ್ರೇಮ ಸಂದೇಶ ವಿಶ್ವ ಶಾಂತಿಗೆ ಶ್ರಮಿಸುವ ಶಕ್ತಿ ನಿಮಗೆ ನೀಡಲಿ " ಎಂದು ಅವರು ಆಶೀರ್ವದಿಸಿದರು.

ಮಕ್ಕಳೇ, ದ್ರಷ್ಟಾರರ ಸುಂದರ ಮನಸ್ಸುಗಳು ಸುಂದರ ರಾಷ್ಟ್ರಗಳನ್ನು ನಿರ್ಮಿಸಿರುವುದನ್ನು, ನದಿಗಳ ಸಂಗಮ ರಾಷ್ಟ್ರ್ಗಗಳ ನಡುವೆ ಐಕ್ಯತೆಯನ್ನು , ಸಾಂಸ್ಕೃತಿಕ ಪರಂಪರೆಗಳು ಭೂಖಂಡಗಳ ನಡುವಿನ ಎಲ್ಲೆಗಳನ್ನು ಮೀರಿ ಮನಸ್ಸುಗಳಲ್ಲಿ ಏಕತೆ ಮೂಡಿಸುವುದನ್ನು ಕಂಡಿದ್ದೇನೆ. ಈ ಅನುಭವವನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ. ವಿಶ್ವಮಾನವನ ಸಂದೇಶವನ್ನು ನೀವು ಕೂಡ ಎಲ್ಲೆಡೆ ಬಿತ್ತರಿಸಿ. ನಿಮಗೆ ಶುಭವಾಗಲಿ.

***** ***** ****

  • ಕನ್ನಡ ಪ್ರಾಧಿಕಾರದ ಪುಸ್ತಕ.
~.~
  • venkatesh ರವರ ಬ್ಲಾಗ್
  • Login or register to post comments
  • 437 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
  • ಕಲಾಂ --ಸಲಾಂ
  • ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ
  • 'ಕಲಾಂ ಮೇಸ್ಟ್ರು ' ಪುಸ್ತಕದಿಂದ ಆಯ್ದ ಕೆಲವು, ಪುಟಗಳು !
  • 'ಕನ್ನಡ ಪುಸ್ತಕ ಮಾರಾಟ ಮಳಿಗೆ' ಉದ್ಘಾಟನಾ ಸಮಾರಂಭ- ಮುಂಬೈನಲ್ಲಿ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • manoharnv
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:37am
  • gurubaliga
    ಉ: ಅವರು ಯಾರಿರಬಹುದು?
    October 11, 2008 - 11:29am
  • gurubaliga
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:25am
  • Deeparavishankar
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 11, 2008 - 11:13am
  • Deeparavishankar
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 11:07am
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 112 ಅತಿಥಿಗಳು ಆನ್ಲೈನ್ ಇರುವರು.


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator