ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › venkatesh ರವರ ಬ್ಲಾಗ್

ಎಂಕ್ಟೇಸಪ್ಪನ್ ಕ (ಕಂ)ತೆ ಪುರಾಣ !

"ಒಸ್ ಬ್ಲಾಗ್ " ನಗೆ ಅದೊ ಇದೊ ಅಂತ ಏನಾದ್ರು ಬರ್ಯವ ಅಂದ್ರೆ, ತಲ್ಯಾಗೇನೂ ಒಳ್ಯಂಗೇ ಇಲ್ವಲಪ್ಪ. ಆಗ್ಲಿ ಬಿಡಿ. ಆ ಸಿವಂಗೆ ನನ್ ಮ್ಯಾಗ್ ಇಸ್ವಾಸ ಬರೊತಂಕ ಬರ್ಯಕ್ಕ ಬಿಟ್ಟಾನ. ಮರ್ವಾದೆ ಪ್ರಸ್ನೆ ಅಲ್ಲ್ವ್ರಾ. ಎಂಗಾರಾಗ್ಲಿ. ಎನಾದ್ರು ಗೀಚೊ ಉಚ್ಚು. ಅಂಗೇ ಮನಸ್ನಾಗ್ ಐತೆ. ನೊಡವ. ಜನ ಏನಂತಾರೆ ಅಂತವ ! ಜುಲೈ ೪ ನೆ ತಾರೀಕ್ ಆದ್ಮ್ಯಾಗೆ, ನಾನ್ ಇಲ್ಲಿಲ್ಲ. ಪರ್ದೇಸ್ದಲ್ಲಿ ಅಂದ್ರೆ ಅಮ್ರ್ಕದಲ್ಲಿವ್ನಿ. ಒಂದೆಲ್ಡ್ ತಿಂಗ್ಳಾದ್ ಮ್ಯಾಗೆ ಬರೋದು. ಅಂಗೆ ಗೀಚೋ ಅಳೇ ಉಚ್ಚು ಐತಲ್ಲ ! " ಅಮ್ರಿಕದಾಗ, (ಕಿವ್ಯಾಗ್) ಕೇಳಿದ್ದು, (ಕಣ್ಣಾಗ್) ಕಂಡಿದ್ದು "! ಅಂತ ತಲಿಗ್ ತೋಚಿದ್ನ ಬರ್ದಿವ್ನಿ. ಓದಂಗಿದ್ರೆ ಓದ್ರಪೋ. ನಾನ್ತಾನೇ ಏನೇಳ್ಲಿ ? ! ಮುನಿಸ್ಕಂಡು ಕಲ್ ಏಟ್ ಮಾತ್ರ ಆಕ್ಬ್ಯೇಡ್ರಪ್ಪೊ ! ನಿಮ್ದರ್ಮ

ಉಗಾದಿ ಬಂದೋತು. ಆಮ್ಯಾಕೆ ಬರಿ ಅಬ್ಬಗಳ್ ಸಾಲು. ಆದ್ರೆ ಮುಕ್ಯವಾಗ್ ನೊಡ್ದ್ರೆ, ನಮ್ ಸರ್ಕಾರನೇ ಇಲ್ದೆ, ಎಲ್ಲ ಅತಂತ್ರದೈತಲಪ್ಪಾ !

April 11, 2008 - 5:33am — venkatesh

ಉಗಾದಿ ಬಂದ್ಮ್ಯಾಕೆ. ವರ್ಸ ಸುರುಆತ್ ನೋಡ್ರಿ. ಆ ಅಬ್ಬ ಈ ಅಬ್ಬ ಅಂತ ಅಬ್ಬಗಳ್ ಸಾಲೆ ಬರ್ತೈತ್ರಿ. ಈ ಬಿಸಿಲ್ನಾಗೆ ಏನಬ್ಬ ಮಾಡಕ್ಕು ಮುಜ್ಗರು ಅಲ್ಲ್ವ್ರ. ನೀರಿನ್ ಪ್ರಾಬ್ಲಮ್ ಬ್ಯಾರೆ ಐತ್ರಿ. ನಮ್ಗೆ ನೀರಿಲ್ಲ. ಆ ಒಗ್ಗೇನ್ ಕಲ್ನಾಗೆ ಏನೊ ಕಟ್ಟತ್ವರಂತೆ. ಪೂರ್ತಿ ಕಟ್ಟ್ ಮುಗ್ಸಿದ್ ಮ್ಯಾಗೆ ನಮ್ಮವರ್ ಎದ್ದು. ಕೂಗಾಡದು. ತಾವೆ ಅಂತಾದೆ ಕಟ್ಟೆ ಕಟ್ಕಳಾದಪ್ಪ. ಇದ್ನೆಲ್ಲ ಏಳಾಕಾತದ. ಎಲ್ರು, ಕನ್ನಡ್ ದೊರ್ನ, ದನಕ್ಕ ಒದ್ದಂಗ್ ಒದ್ಯೊರೆ. ಇಕಡೆ, ತಮಿಳ್ನೊರು, ಆ ಕಡೆ ಆಂದ್ರದೊರು, ಮತ್ತೆ, ಮರಾಠಿಜನ ಅಂಗೇ ಜಗ್ಳ ಕಾಯ್ಕಂಡು ಕೂತ್ಕಂಡವ್ರೆ. ಕನ್ನಡ್ ದೊರ್ಗೆ ಇಂತ ಪರಿಪಾಟ್ಲು ಯಾಕಂತೆ ?

ಅದೆ, ನಮ್ತಾವ, ಒಳ್ಳೆ ರಾಜ್ಕೀಯ ಮಾಡವ್ರು, ಇಲ್ದೆ ಓದದ್ದೆ ಇದಕ್ಕೆ ಕಾರ್ಣ ಇರ್ಬೈದಾ ?

ಎಂತಾ ಗತಿ ಬಂತೊತಪ್ಪ ನಮ್, ಕರ್ ನಾಟ್ಕಕ್ಕೆ !

ಇನ್ ಎಲೆಕ್ಸನ್ ಬ್ಯಾರೆ. ಯಾರ್ ಬತ್ತಾರೊ. ಏನಾತದೊ. ಆ ದ್ಯಾವ್ರೆ ಬಲ್ಲ. ಸುಲಬ್ವಾಗ್ ಬಗೆಅರ್ಯಂಗ್ ಕಾಣಕ್ಕಿಲ್ಲ ಕಣಪ್ಪೊ.

ಸಿವ್ನೆ. ನಮ್ ಜನಕ್ ಒಳ್ಳೆ ಬುದ್ದಿ ಕೊಡಪ್ಪ.

~.~
  • venkatesh ರವರ ಬ್ಲಾಗ್
  • Login or register to post comments
  • 397 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 14, 2008 - 11:13pm — rameshbalaganchi

ಉ: ಉಗಾದಿ ಬಂದೋತು. ಆಮ್ಯಾಕೆ ಬರಿ ಅಬ್ಬಗಳ್ ಸಾಲು. ಆದ್ರೆ ಮುಕ್ಯವಾಗ್ ನೊಡ್ದ್ರೆ, ನಮ್ ಸರ್ಕಾರನೇ ಇಲ್ದೆ, ಎಲ್ಲ ಅತಂತ್ರದೈತಲಪ್ಪಾ !

rameshbalaganchi's picture

ಯಂಗ್ಟೇಸಪ್ಪೋರೆ, ನಿಮ್ದೊಳ್ಳೆ ನಗ್ಸಾರ ಆಯ್ತು. ನೀರು-ನಿಡಿ ಇಸ್ಯ ಏಳಿದ್ರಿ, ವೈನ. ಅಬ್ಬ ಅರಿದಿನ್ಗುಳ ಇಸ್ಯ ಎತ್ತಿದ್ರಿ, ಪಾಡು. ಅದ್ರ ನಡುವಿನಾಗೆ ಸರ್ಕಾರಾನೆ ಇಲ್ಲಾಂತ ಕೊರಗ್ತೀರಲ್ಲಪ್ಪ ಸಿವನೆ? ಯಾವ ಎಮ್ಮೆಲ್ಲೆ ಎಮ್ಮೆಲ್ಸಿಗಳ ಕಾಟಿಲ್ದೆ ಮೆಡ್ಡೆ ಅನ್ನ ಗೊಡ್ಡುಸಾರು ತಿನ್ಕೊಂಡು ಒಂದೊಪ್ಪತ್ತು ಬ್ಯಾಸ್ಗೆನಾಗೂ ನಿದ್ದೆ ಮಾಡನ ಅಂದ್ರೆ ಅದುಕ್ಕೂ ಕಲ್ಲಾಕೋ ಪಿಲ್ಯಾನು ಮಾಡ್ತೀರಲ್ಲಾ ದೇವ್ರೂ!! ಏನಗೈತೆ ಈಗ? ಸರ್ಕಾರ್ದ್ ಬೊಕ್ಸಕ್ಕೆ ಏಟೋ ದುಡ್ಡು ಉಳ್ದೈತೆ. ಪೇಪ್ರುಗ್ಳು ವಸಿ ಓದಂಗವೆ. ಮಂತ್ರಿಗುಳು ಚೀನಾ ಅಮೆರಿಕಾ ಅಂಬ್ತ ಉಸಿರೆತ್ತಂಗಿಲ್ಲ. ಇನ್ನು ಗೂಟದ ಕಾರು, ಟೆಲಿಫೋನ್‌ ಬಿಲ್ಲು , ಪರ್ದೇಸದ ಸುತ್ತಾಟ ,ಮಣ್ಣು ಮಸಣ ಅಂಬ್ತ್ತಸರ್ಕಾರ್ದ್ ಜೋಬಿಗೆ ಕೈ ಮಡಗಂಗಿಲ್ಲ. ಎಲ್ಲ ಪಾಡಾಗೈತಿ. ಅರ್ಸನ ಅಂಕೆ ಇಲ್ಲ. ದೆಯ್ಯದ್ದ್ ಕಾಟ ಇಲ್ಲ. ಬ್ಯಾಡದ್ದು ಬಯಸ್ತೀರಲ್ಲಪ್ಪ, ಏನೇಳನ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2008 - 5:33am — venkatesh

ಉ: ಉಗಾದಿ ಬಂದೋತು. ಆಮ್ಯಾಕೆ ಬರಿ ಅಬ್ಬಗಳ್ ಸಾಲು. ಆದ್ರೆ ಮುಕ್ಯವಾಗ್ ನೊಡ್ದ್ರೆ, ನಮ್ ಸರ್ಕಾರನೇ ಇಲ್ದೆ, ಎಲ್ಲ ಅತಂತ್ರದೈತಲಪ್ಪಾ !

venkatesh's picture

ಯೆ, ರಮೇಸಣ್ಣ,

ನೀವೇಳೊದನ್ನ ಇಲ್ಲ ಅನ್ನಕಾತದ. ಸರಿಯಾಗ್ ಏಳ್ದ್ರಿ. ಅದೇನೊ ಅಂತಾರಲ್ಲ. ನೆಂಟ್ರು ಬರ್ದೆ ಓದ್ರೆ, ಒಳ್ಳೇದೇ ಆತು, ದವ್ಸ ದಾನ್ಯ ಇನ್ನೊಂದೊಪ್ಪತ್ಗೆ ಉಳೀತು, ಅನ್ನೊ ಯಾಪಾರ್ ದೊರ್ ನೀವು. ಅಲ್ಲ ಸಾ. ಊರ್ಗೊಬ್ಬೆ ಗೊಣ್ಣೇ ನಾಯ್ಕ ಅಂತ ತಾವು ಕೇಳಿಲ್ವ ದ್ಯಾವೃ ? ಬಂದೊರ್ ಬಂದಂಗೆ, ಓದೋರ್ ಓದಂಗೆ. ಇದ್ ಸರ್ಯಾದೀತ. ಒಂದೆಲ್ಡ್ ತಿಂಗ್ಳು ಸರಿ ಅಂತನ್ಸ ಬೈದು. ದಿಟ ನುಡಿತಿನಿ, ರಮೇಸಣ್ಣ. ಉ..... ಜಾಸ್ತಿ ದಿನ ಇಂಗೆ ನಡ್ಯಕ್ಕಿಲ್ಲ ಮಾರಾಯ. ಯಾವಾಗ್ಲು ದೂರದ್ ನೆನಸ್ಕಳ್ಳಿ. ಇವತ್ ಇಟ್ಟೊ ಅಂಬ್ಲಿನೊ ಉಂಡ್ ಮಲಕ್ಕಂಡ್ಬಿ ಆತಪ. ಅಂತ ಸಮಾದಾನ ಸರಿಓದೀತೇನಪ. ನೀನೊಳ್ಳೆ. ನನ್ಗೇನ್ ಸರಿ ಕಾಣ್ಲಿಲ್ಲ. ಬಿಡಪ. ಆ ಬೂತ್ನಂತ ಅರ್ಮನೆ ಕಟ್ಸಿ , ಇದಕ್ಕಾ ಸತ್ತು ಸ್ವರ್ಗದಲ್ ಅವ್ರೆ, ನಮ್ ಕೆಂಗಲ್ ಗೌಡ್ರು. ಅವ್ರೇನ್ ಅನ್ಕಂಡಾರು. ತೆಗಿ ಮಾರಾಯ, ನೀನೊಳ್ಳೆ. ಅವ್ರ ಅತ್ಮಕ್ಕೆ ಸಾಂತಿ ಗೀಂತಿ ಬ್ಯಾಡ್ವೇನು ? ನೀನೆ ಒಸಿ ಅಂಗೆ ಇಚಾರ ಮಾಡ್ಕಂಡು ಆಮ್ಯಾಕೆ ಒಂದಿಟು ಬಾಯ್ಬಿಡು ಮಾರಾಯ. ಜ್ಬಾಕೆ ಇಂಗೆ ಏಳಿಯ. ಸಿದ್ರಾಮಣ್ನೊರು. ತುಂಬಾ ಕೋಪಿಷ್ಟ್ರು. ಕಣಪೋ. ಉಸಾರು.

ಜ್ಬಾಕೆ, ಮಗ. ಇಂಗೆ ಬಾಯ್ಗೀಯ್ ಬುಟ್ ಬಿಡ್ ಬ್ಯಾಡ. ತಿಳೀತೇನಪ. ಬತ್ತಿನಿ ಕಣಪೋ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2008 - 7:41am — rameshbalaganchi

ಉ: ಉಗಾದಿ ಬಂದೋತು. ಆಮ್ಯಾಕೆ ಬರಿ ಅಬ್ಬಗಳ್ ಸಾಲು. ಆದ್ರೆ ಮುಕ್ಯವಾಗ್ ನೊಡ್ದ್ರೆ, ನಮ್ ಸರ್ಕಾರನೇ ಇಲ್ದೆ, ಎಲ್ಲ ಅತಂತ್ರದೈತಲಪ್ಪಾ !

rameshbalaganchi's picture

ಅಡ್ಬಿದ್ದೆ ಯಂಗ್ಟೇಸಣ್ಣ,
ಪರಾಯ್ದಾಗೆ ನಿಮ್ಗಿಂತ ವಸಿ ಚಿಕ್ಕೋನಿರ್ಬೈದು ಆದ್ರೆ ಏನೇಳ್ಳಿ ಎಲ್ಲ ಎಲೆಕ್ಸನ್ನಗೂ ಇವೇ ಗೂಬೆಗುಳು, ದರವೇಸಿಗುಳೂ, ಹೇಲು ಹಿಸುಗ್ರು ಕೋಟಿ ಕೋಟಿ ಚೆಲ್ಲಿ ಬತ್ತವಲ್ಲ!! ಅದ್ಕೆ ಮನ್ಸು ತಡಿನಾರ್ದೆ ಅಂಗೇಳ್ದೆ. ಸಿಮಗ್ಗ ಊರ್ನಗೆ ಇಂದಿನ ರಾಜಾಮಾರಾಜ್ರುಗುಳೆಲ್ಲ ಸೇರಿ ನರ್ಮನ್ಸಂಗೆ ಸಿಕ್ಚಂಗೆ, ಬಿಕ್ಸುಕ್ರು ಮಲಿಕ್ಕಳಕ್ಕಾಗ್ಚಂಗೆ ಎಲ್ಲ ಜಾಗ ಕೊಂಡ್ಬುಟ್ಟವ್ರೆ ಅಂತ ಎಲ್ಲ ಮಾತಾಡ್ಕಂತಾರಪ್ಪ!! ಇವತ್ತಿನ ಇಜಯ ಕರ್ನಾಟಕ್ದಾಗೆ ಓದು, ಈ ಬೀಜೇಪಿಗುಳು ಟೆಕೇಟಿಗೆ ಎಳ್ಡರಿಂದ ಐದು ಕೋಟಿ ಅಣ ಚಿಲ್ಲಿ ಮಡ್ಗವ್ರಂತೆ!! ಸಿವನೆ ಹೆಂತ ಕಾಲ ಬಂತಪ್ಪ!! ನೀನೇನರ ಎಲಿಕ್ಸನ್ ಡೂಟಿ ಮಾಡಿದೀಯ? ನಮ್ಗೊಳ್ಳೆ ಬೇದಿ ಅತ್ದೋನು ಡಬ್ಬಕ್ ನೀರ್ ಆಕ್ಕಳಕ್ಕೆ ಪುರ್ಸೊತ್ತಿಲ್ದಂಗೆ ಬೈಲ್ನಾಗೇ ಮಲಿಕ್ಕಂಡಂಗೆ, ಅಕ್ಕಳಪ್ಪ ಇನ್ನ ಮೊನ್ಮೊನ್ನೆ ಓಗಿ ಯಲೆಕ್ಸನ್ ಕೆಲ್ಸ ಮುಗ್ಸಿ ಉಸ್ಸಪ್ಪ ಅಂತ ಬಂದಿವ್ನಿ ಮತ್ತೆ ಡಬ್ಬ ಇಡಿಯೋ ಕಾಲ ಬಂತಲ್ಲಪ್ಪ ದೇವ್ರೂ.
ಒಳ್ಳೆ ಪಾಡಾಗಿ ಮುಕ ತಿವೀತಿ ಬುಡಪ್ಪ ನೀನು. ನೆಂಟ್ರು ಅಂದೆ- ನೆಂಟ್ರು ಲಕ್ಸಣ ಐತಾ ಇವಕ್ಕೆ? ಮೂರು ಮೂರು ದಿನಕ್ಕೆ ಮನೆಗೆ ಬಂದು ವಕ್ಕರ್ಸಿ ಮನೆ ಮಕ್ಕಳ್ಗೆ ಉಣ್ಣಕ್ಕಿಲ್ದಂಗೆ ಉಂಡು ತೇಗಿ ರಂಗೋಲೆ ಬುಟ್ಟವ್ರಲ್ಲಪ್ಪ!! ನೀನೇನರ ಏಳು, ಯಾರು ಏನರ ಅನ್ಕಳ್ಳಿ ಮನ್ಸ್ನಗೆ ದುಕ್ಕ ಮಡಿಕ್ಕಂಡು ಯಲ್ಲ ಪಾಡಾಗೈತೆ. ಸರೊಯ್ತದೆ ಅನ್ಕಳಕ್ಕಾಗಕ್ಕಿಲ್ಲ ಕಣಣ್ಣ!! ನಿಂಗೆ ನನ್ಮಾತು ಇಡಿಸ್ದಿದ್ರೆ ಒಂದೆಳ್ಡು ಸೊಲ್ಲು ಬೋದ್ಬುಡು. ದೂರ್ದಾಗಿವ್ನಿ ಕೇಳಕ್ಕಿಲ್ಲ

ಬತ್ತೀನ್ಕಣಣ್ಣ, ವೊತ್ತಾತು. ತಾನ ಮಾಡಿ ಕೇಮೆ ಮಾಡಕ್ಕೋಗ್ಬೇಕು. ಬರ್ಲಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2008 - 12:40pm — venkatesh

ಉ: ಉಗಾದಿ ಬಂದೋತು. ಆಮ್ಯಾಕೆ ಬರಿ ಅಬ್ಬಗಳ್ ಸಾಲು. ಆದ್ರೆ ಮುಕ್ಯವಾಗ್ ನೊಡ್ದ್ರೆ, ನಮ್ ಸರ್ಕಾರನೇ ಇಲ್ದೆ, ಎಲ್ಲ ಅತಂತ್ರದೈತಲಪ್ಪಾ !

venkatesh's picture

ನೀನೇಳೋ ಮಾತ್ನಾಗೆ ಒಳ್ಳೆ ಉರ್ಳೈತಪ್ಪ. ನಾಲೆಲ್ಲಿ ಏಳ್ದೆ ಸರಿಯಿಲ್ಲ ಅಂತವ. ಏನೊ ಮುದಿ ಮನ್ಸ, ಇಂಗಂದ ಅಂತ ಬ್ಯಾಸ್ರ ಮಾಡ್ಕಬ್ಯಾಡ ಕಣಪ್ಪೊ. ಎಲ್ಲ ಸರಿಓತದೆ. ಸಿವ ಸುಮ್ಬಿರೊನಲ್ಲ. ಇವರ್ಗೆಲ್ಲಾ ಬುದ್ದಿ ಕಲ್ಸತಾನೆ. ಒಸಿ ದರ್ಯ ಮಡ್ಕ .
ಆಗ್ಲಿ ತಣ್ಗೆ ಬದ್ಕು ಅಣ್ಣಯ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಳ್ಳೆ ರಾಜ್ಕೀಯ ಆಯ್ತಲ್ಲಪ್ಪೋ, ಒಬ್ರ ಕಾಲ್ನ್ ಇನ್ನೊಬ್ರು ಇಡ್ದು ಎಳ್ಯೋದೇನಾ, ರಾಜ್ಕೀಯ- ಅಂದ್ರೆ ?
  • enjoy ಮಾಡಿ?!?
  • ಎಲೆಕ್ಸನ್ ಅಂದ್ರೆ ಏನ್ ಉಡ್ಗಾಟನಾ ; ನೋಡಿ ಏಟ್ ಜನ ಪೊಲಿಸ್ ಸಿಬ್ಬಂದಿ ಐತೆ, ಏನ್ ಬಿಗಿ ವಾತಾವರ್ಣ, ಅಲ್ವಾ ಮತ್ತೆ !
  • ಸಂವಾದ : ದೊಗ್ನಾಳ್ ಮುನ್ಯಪ್ಪಾರ್ ತಾವ. ವಿಶೇಷವರದಿ.
  • ದ್ಯಾವೇ ಗೌಡ್ರ್ ಜತೆ, ಸಂದರ್ಸ್ನ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
  • makrumanju
    ಉ: ಮರಳಿ ಬರಲಿ ಬಾಲ್ಯ
    October 12, 2008 - 10:42am
  • ಪ್ರವೀಣ್
    ಉ: ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'
    October 12, 2008 - 9:54am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 115 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator