ನನ್ನೊಳಗೂ ಒಂದು ಮಾತಿದೆ
ನೂರೊಂದು ವಿಷಯಗಳನ್ನು ನಿಮ್ಮಲ್ಲಿ ಹೇಳಬೇಕೆಂದು ಬಯಸುತ್ತೇನೆ. ಸಮಯದ ಅಭಾವನೋ ನಿಮ್ಮ ಅದ್ರಷ್ಟನೋ ಸದ್ಯಕ್ಕಂತೂ ಅದೆಲ್ಲವನ್ನು ಹೇಳಲು ಸಾಧ್ಯವಾಗುತ್ತಿಲ್ಲ...
veenadsouza ರವರ ಬ್ಲಾಗ್
ಯಾಕೆ ಹೀಗೆ ನನ್ನೊಳಗೆ?
June 26, 2008 - 5:39pm — veenadsouzaನಾನು ಜೀವನದಲ್ಲಿ ಮಿಂಚಬೇಕು. ಎಲ್ಲರೂ ಗುರುತಿಸುವಂತಹ ಕಾರ್ಯ ಮಾಡಬೇಕು. ನನ್ನದೇ ಆದಂತಹ ವೆಬ್ ಸೈಟ್ ಮಾಡಬೇಕು. ಅದು ಇದು... ಹೀಗೆ ಎಲ್ಲವನ್ನೂ ನನ್ನ ಒಳ ಮನಸ್ಸಿಗೆ ಸರಿ ಎನ್ನಿಸಿದ್ದೆಲ್ಲವನ್ನೂ ಮಾಡಬೇಕು. ಪ್ರತೀ ಕ್ಷಣವನ್ನೂ ಸದುಪಯೋಗಿಸಿಕೊಳ್ಳಬೇಕು. ಸದಾ ಲವಲವಿಕೆಯಿಂದರಬೇಕು. ಇತರರನ್ನು ನಗಿಸುತ್ತಿರಬೇಕು. ಅವರೇನೆ ಅಂದರೂ ನೊಂದು ಕೊಳ್ಳಬಾರದು. ಮುಂದೆ ಓದಿ »

ಮಹಿಳೆಯರಿಗೆ ಅಧಿಕಾರ ನೀಡಬಾರದು ಎಂಬ ಪರೋಕ್ಷ ಅಲೋಚನೆ
December 28, 2007 - 6:22pm — veenadsouzaಬೆನಜೀರ್ ಬುಟ್ಟೊ ಹತ್ಯೆಯಾದದ್ದು ಬಹುಶಃ ಮುಸ್ಲಿಂ ದೇಶದಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವಂತಿಲ್ಲ, ನೀಡಬಾರದು ಎಂಬ ಉದ್ದೇಶವನ್ನು ಹೊಂದಿದೆ ಎಂದು ಕಾಣುತ್ತಿದೆ. ಒಬ್ಬ ಮಹಿಳೆಯನ್ನು ಈ ರೀತಿ ಹೀನಾಯವಾಗಿ ಅಂತ್ಯಕಾಣಿಸಿದ್ದು ನಿಜಕ್ಕೂ ಪುರುಷ ಪ್ರಧಾನ ಸಮಾಜಕ್ಕೆ ಹೇಸಿಗೆ ತರುವಂತಹ ವಿಷಯ. ಮುಂದೆ ಓದಿ »

ಬ್ಲಾಗ್ ಜೀವಿಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
December 18, 2007 - 1:35pm — veenadsouzaಎಲ್ಲಾ ಕನ್ನಡ/ಕನ್ನಡೇತರ ಬ್ಲಾಗ್ ಜೀವಿಗಳಿಗೆ, ಸ್ನೇಹಿತರಿಗೆ, ಗುರುಗಳಿಗೆ... ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಸಂಪದ ಮುಲಕ ತಿಳಿಸಲು ಖುಷಿಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಲು ನಾನಂತೂ ಮಂಗಳೂರಿಗೆ ಹೋಗುತ್ತಿದ್ದೇನೆ. .. ಮುಂದೆ ಓದಿ »

ವಾರೆವ್ಹಾ ಕ್ರಿಸ್ಮಸ್ ಬಂತು
December 5, 2007 - 4:25pm — veenadsouzaಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮಸ್ ಸಂದೇಶಗಳುಳ್ಳ ಸಂದೇಶಗಳ ರವಾನೆ, ಕ್ರಿಸ್ಮಸ್ ಸ್ನೇಹಿತರಿಗಾಗಿ ಉಡುಗೊರೆಯ ಖರೀದಿ, ನಕ್ಷತ್ರಗಳ ತಯಾರಿ ಗಡದ್ದಾಗಿಯೇ ನಡೆಯುತ್ತಿದೆ.
ಮಂಗಳೂರಿನಲ್ಲಂತೂ ಕ್ರಿಸ್ಮಸ್ ಗಾಗಿ ಕುಸ್ವಾರ್ ತಯಾರಿಸುತ್ತಾರೆ. ಕ್ರಿಸ್ಮಸ್ ತಿಂಡಿಯನ್ನು ಇಲ್ಲಿನ ಜನ ಪ್ರೀತಿಯಿಂದ ಕುಸ್ವಾರ್ ಎನ್ನುತ್ತಾರೆ. ಕ್ರಿಸ್ಮಸ್ ಕೇಕ್ ಕುಸ್ವಾರ್ ನ ಯಜಮಾನ. ಕುಸ್ವಾರ್ ನಲ್ಲಿ ಕೇಕ್ ಜೊತೆಗೆ ಕಿಡಿಯೊ, ಗುಳಿಯೊ, ಲಾಡು, ಚಕ್ಕುಲಿ, ಚಿಪ್ಸ್, ನಿವ್ರ್ಯೊ, ಚಕ್ಕುಲಿ... ಮುಂತಾದ ಇನ್ನೂ ಕೆಲವು ತಿಂಡಿಗಳಿರುತ್ತವೆ. ಮುಂದೆ ಓದಿ »

ಮಂಗಳೂರಿನಲ್ಲಿ ತುಳು
November 28, 2007 - 6:11pm — veenadsouzaಹಾಯ್,
ಕಳೆದ ಕೆಲವು ತಿಂಗಳ ಹಿಂದೆ ಹೌದು ನಮ್ದ್ ಮಂಗಳೂರು ಕನ್ನಡ ಏನ್ನೀವಗ ಎಂಬ ನನ್ನ ಬರಹಕ್ಕೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಪರಿಹಾಸ್ಯ ಮಾಡಿದ್ರೆ ಇನ್ನು ಕೆಲವರು ಸಲಹೆ ನೀಡಿದ್ರಿ. ಕೆಲವರು ಸಂತಾಪನೂ ಸೂಚಿಸಿದ್ರಿ. ಉಳಿದವರು ಓದಿ ಸುಮ್ಮಗಾದ್ರಿ. ನಿಮಗೆಲ್ಲರಿಗೂ ಅನಂತ ವಂದನೆಗಳು. ಮುಂದೆ ಓದಿ »






RSS: