ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › vedumaani ರವರ ಬ್ಲಾಗ್

ಕಟ್ಟ ಕೊನೆಗೆ...

July 4, 2007 - 10:30pm — vedumaani

     ಒಂಟಿಯಾಗಿ ಕುಳಿತು ಶೂನ್ಯವನ್ನೇ ದಿಟ್ಟಿಸುತ್ತಾ.. ದಿಟ್ಟಿಸುತ್ತಾ.. ಥಟ್ಟನೆ ಎಲ್ಲವೂ ನಿಂತಂತಾಗಿ, ಸುತ್ತೆಲ್ಲವೂ ಘನೀರ್ಭವಿಸಿ, ಸ್ಥೂಲದಿಂದ ಸೂಕ್ಷ್ಮದತ್ತ ತಳ್ಳಿದಂತಾಗಿ..

ಅಸಂಖ್ಯ ಶಕ್ತಿಗಳು.. ವಿವಿಧಾಕಾರದ, ಬಣ್ಣ ಬಣ್ಣದ ಶಕ್ತಿಗಳು, ನಾಲಗೆ ಚಾಚಿ ಒಂದನ್ನೊಂದು ನೆಕ್ಕುತ್ತಾ, ಕುಗ್ಗುತ್ತಾ, ಹಿಗ್ಗುತ್ತಾ, ಬಣ್ಣ ಬದಲಿಸುತ್ತಾ, ಒಂದರೊಳಗೊಂದು ಸೇರುತ್ತಾ ಬೇರ್ಪಡುತ್ತಾ, ದೈತ್ಯಾಕಾರವನ್ನು ಹೊಂದಿ ಮತ್ತೆ ಒಡೆದು ಅಣುಗಾತ್ರಗಳಾಗಿ..

ಮತ್ತೂ ಸೂಕ್ಷ್ಮದತ್ತ ಪಯಣಿಸಿ...  ಆಲೋಚನೆಗಳು.. ನಗುವ, ಅಳುವ, ಕೊಲ್ಲುವ, ಕೂಡುವ, ಸ್ವಾರ್ಥದ, ದರ್ಪದ, ಮೋಹದ, ಕಿಚ್ಚಂತೆ ಸುಡುವ, ಬಯಸುವ.. ಸಮುದ್ರದ ಅಲೆಗಳಂತೆ ಮೇಲೇರುತ್ತ ಏರುತ್ತ ಮತ್ತೆ ಕೆಳಗಿಳಿದು ಒಂದಾಗಿ ಮುನ್ನುಗ್ಗಿ ಮತ್ತೆ ಸಾವಿರವಾಗುತ್ತ ಅದೆಲ್ಲಿಂದಲೋ ಹಾರಿ ಬಂದು ನನ್ನ ಸುತ್ತುವರಿದು ಮತ್ತೆಲ್ಲೋ ಮಾಯವಾಗುವ ಯೋಚನೆಗಳು.. ನನ್ನ ಅಸ್ಥಿತ್ವವೂ ಬರೇ ಒಂದು ಯೋಚನೆ ಮಾತ್ರವೇ ಎಂದೆನಿಸಿ.. ಇಲ್ಲ ನನ್ನ ಬೇರುಗಳು ಇನ್ನೂ ಸೂಕ್ಷ್ಮಕ್ಕಿಳಿದಿವೆ ಎಂಬುದರ ಅರಿವಾಗಿ..

ಇನ್ನೂ ಸೂಕ್ಷ್ಮಕ್ಕಿಳಿದಂತೆ ಎಲ್ಲೆಲ್ಲೂ ದ್ವಂದ್ವಗಳೇ ಕಂಡು.. ನಿಜ-ಸುಳ್ಳು, ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು, ಚಂದವಿರುವುದು-ಅಸಹ್ಯವಾದದ್ದು... ಅಸಂಖ್ಯ ದ್ವಂದ್ವಗಳು ಒಂದನ್ನೊಂದು ಅಪ್ಪಿಕೊಂಡು ಮಿಲನದ ಸರ್ಪಗಳಂತೆ ಒಂದಕ್ಕೊಂದು ಸುರುಳಿ ಸುತ್ತುತ್ತಾ, ಒಂದರಿನ್ನೊಂದು ಹುಟ್ಟುತ್ತಾ ಸಾಯುತ್ತಾ, ಒಂದಿಲ್ಲದೆ ಇನ್ನೊಂದಿರಲು ಸಾಧ್ಯವೇ ಇಲ್ಲವೇನೋ ಎಂಬಂತೆ ತೋರಿ ಇನ್ನೊಂದು ಕ್ಷಣದಲ್ಲಿ ಎಲ್ಲವೂ ಮಾಯವಾಗಿ ಇರುವ ದ್ವಂದ್ವಗಳೆಲ್ಲಾ ಒಟ್ಟಾಗಿ, ಬರೇ ನಾನು ಮತ್ತು ಬೇರೆಯದು ಎಂಬ ದ್ವಂದ್ವವೊಂದೇ ಉಳಿದು...

ಫಕ್ಕನೆ ಇನ್ನೂ ಮುಂದುವರಿದು, ಅತಿ ಸೂಕ್ಷ್ಮಕ್ಕಿಳಿದು.. ಅತೀವ ಆನಂದ! ಎಲ್ಲಕ್ಕಿಂತಲೂ ಹಗುರವಾಗಿ, ತೇಲುವ ಆನಂದ.. ಸುತ್ತಲಿಂದಲೂ ಆವರಿಸಿಕೊಂಡು ಬರುವ ವಿವರಿಸಲಾರದ ಆನಂದ! ಈವರೆಗೆ ಹಾದು ಬಂದುದೆಲ್ಲವೂ ಸ್ಥೂಲವೆನಿಸಿ, ಇಲ್ಲೇ ಇದ್ದು ಬಿಡುವವೆನಿಸಿ, ಇದ್ದರೆ ಮೋಹವುಂಟಾಗಬಹುದೆನಿಸಿ, ಈ ಸೂಕ್ಷ್ಮ ಸ್ಥಿತಿಗಿಂತಲೂ ಆಚೆಗೆ ಏನಿರಬಹುದೆಂದು ಮುನ್ನುಗ್ಗಿ..

ಅರೆರೆ...  ಅಗಾಧ!   ಅನಂತ!!   ಅಖಂಡ!!!   ಅದೆಂತಹದೋ ಎಲ್ಲೆಲ್ಲೂ! ಅದೊಂದೇ...!! ನಾನೇ ಅದಾಗಿ... ಅದೇ ನಾನಾಗಿ... ನಾನೇ ಎಲ್ಲೆಲ್ಲೂ... ಎಲ್ಲದರೊಳಗೂ ನಾನೇ... ಎಲ್ಲದೂ ನನ್ನೊಳಗೇ... ಕಣ ಕಣದಲ್ಲೂ... ನಾನೇ !! ನನಗಿಂತ ಆಚೆಯಿಲ್ಲ, ನನಗಿಂತ ಈಚೆಯಿಲ್ಲ, ನನಗಿಂತ ಮುಂಚಿಲ್ಲ, ಅನಂತರವಿಲ್ಲ... ಆಕಾರಗಳೆಲ್ಲವೂ ನನ್ನೊಳಗಿದ್ದು ನನ್ನದೇ ಯಾವ ಆಕಾರವಿಲ್ಲದೆ, ಎಲ್ಲವನ್ನೂ ಬಲ್ಲವನಾಗಿ, ನನ್ನ ಇರುವಿಕೆಯ ಅರಿವು ಮಾತ್ರವಿದ್ದು... ನಾನಾರೆಂದು ತಿಳಿದು...

ಇನ್ನೆಂದೂ ಬೇರೇನೂ ಬೇಡವೆನಿಸುವ ಸ್ಠಿತಿ......

~.~
  • vedumaani ರವರ ಬ್ಲಾಗ್
  • Login or register to post comments
  • 232 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನಾಥನಿಗೊಬ್ಬ ನಾಥ!
  • ಬಣ್ಣದ ಪ್ರೀತಿ
  • ಸ್ಪೂರ್ತಿ
  • ಹೆಂಗಸರು ಮೇಕಪ್ ಮಾಡ್ಕೊಳ್ಳೋದು ಯಾಕೆ?
  • ’ಸಂಪದ ಕನ್ನಡ ತಾಣ" ಕ್ಕೆ ಪಾದಾರ್ಪಣೆ. ಅರ್ಥಾತ್ ಮೊದಲ ಹೆಜ್ಜೆ !
Syndicate content

ಲೇಖಕರು

vedumaani's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜಿಪುಣ ನನ್ನ ಗಂಡ
  • ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
  • ಓದಿದ್ದು ಕೇಳಿದ್ದು ನೋಡಿದ್ದು 42 ಮಾನಸಿಕ ಸ್ಥಿತಿ ಪರೀಕ್ಷಿಸಿ ಮಿಂಚಂಚೆ ಕಳುಹಿಸುವ ಗೂಗಲ್
  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 81 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator