ಛಾಯಾಚಿತ್ರಗ್ರಹಣದಲ್ಲಿ ಸ್ವಲ್ಪ ಆಸಕ್ತಿಯಿದ್ದವರಿಗೆ ಚಿತ್ರ ತೆಗೆಯುವಾಗ ಹಿನ್ನೆಲೆಯಲ್ಲಿ ಮುನ್ನೆಲೆಗಿಂತ ಹೆಚ್ಚು ಬೆಳಕು ಇದ್ದರೆ ಆಗುವ ಸಮಸ್ಯೆಯ ಬಗ್ಗೆ ಅರಿವಿರಬಹುದು.
ಫ್ಲಿಕರ್ ನಲ್ಲಿ ಡೀಪ್ಸನ್ ಅಂತ ಒಬ್ಬರು ಇದ್ದಾರೆ. ಅವರ ನಿಜ ನಾಮ ಸಂದೀಪ್ ಅಂತ. ಅವರು ಹಿನ್ನೆಲೆಯಲ್ಲಿ bright ಮತ್ತು ಖಾಲಿ ಬಿಳಿ ಬಣ್ಣವಷ್ಟೇಇದ್ದು, ಮುನ್ನೆಲೆಯಲ್ಲಿ overexpose ಆಗದಂತೆ ಚಿತ್ರಗಳನ್ನು ತೆಗೆದುದನ್ನು ನೋಡಿದೆ. ನನಗೆ ಅವರು ಇದನ್ನು ಹೇಗೆ ಸಾಧಿಸಿದ್ದಾರೆಂದು ಕುತೂಹಲವಿತ್ತು. ನಾನು ಕೇಳಿದ್ದಕ್ಕೆ ಅವರು ಅವರ ತಂತ್ರವನ್ನು ನನಗೆ ಹೇಳಿಕೊಟ್ಟರು. ಅವರು background ನಲ್ಲಿ ಆಕಾಶವನ್ನು ಇಟ್ಟು foreground ಸಾಕಷ್ಟು expose ಆಗುವ ತನಕ ಚಿತ್ರವನ್ನು over-expose ಮಾಡುತ್ತಿದ್ದರು. ಇದು ನಿಮಗೆ ತುಂಬ ಸರಳ ಅಂತ ಅನ್ನಿಸಬಹುದು. ಆದರೆ ಅವರು ನನಗೆ ಹೇಳಿ ಕೊಡುವ ತನಕ ನನಗೆ ಇದು ಹೊಳೆಯಲೇ ಇಲ್ಲ. ನಾನು ಅಂದಿನಿಂದ ಈ ತಂತ್ರವನ್ನು ಡೀಪ್ಸನ್ ಎಫೆಕ್ಟ್ ಎಂದೇ ಕರೆಯುತ್ತೇನೆ. ಇದರ ಜನಕ ಅವರೋ, ಅಥವಾ ಅವರೂ ನನ್ನಂತೆ ಎರವಲು ಪಡೆದಿದ್ದಾರೋ ನನಗೆ ಗೊತ್ತಿಲ್ಲ.
ಇಲ್ಲಿ ಕಾಣಿಸಿದ ಚಿತ್ರ ಯಾವುದೇ modification ಗೆ ಒಳಪಟ್ಟಿಲ್ಲ.
ವಸಂತ್ ಕಜೆ ಅವರೆ, ಈ ಪಾಪೆ ನಿಜಕ್ಕೂ ನನ್ನನ್ನು ತುಂಬಾ ಸೆಳೆಯಿತು. ನಾನು ಕೂಡ ಈ ರೀತಿ ಪಾಪೆ ಹಿಡಿಯಲು ಮೊಗಚಬೇಕು. ನನ್ನಲ್ಲಿ ಕೆಲವೊಂದು ಡೌಟುಗಳು ಮನೆಮಾಡಿತ್ತು. ಪಾಪೆಗಳನ್ನು ಸೆರೆಹಿಡುಯುವಲ್ಲಿ ನಿಮ್ಮ ಹಾಗೆ ಸಿಕ್ಕಾಪಟ್ಟೆ ಎಂಥೂ ಇರುವ ನನ್ನ ಇನ್ನೊಬ್ಬ ಗೆಳೆಯನೊಡನೆ ನೀವು ತೆಗೆದ ಚಿತ್ರವನ್ನು ತೋರಿಸಿ, ಕೆಲವೊಂದು ಗೊಂದಲಗಳನ್ನು ತಿಳಿಯಾಗಿಸಿಕೊಂಡೆ.
೧. ಎಕ್ಸ್‌ಪೋಸ್ ಟರ್ಮಿನಾಲಜಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ.
೨. ಎಕ್ಸ್‌ಪೋಜರ್ ಟೈಮ್ ಅಂತ ಇದೆಯಲ್ಲಾ ಅದಕ್ಕೂ ಮೇಲಿನ ಓವರ್-ಎಕ್ಸ್‌ಪೋಜರಿಗೂ ಸಂಬಂಧವಿದೆ ಇದೆಯೇ ಎಂಬುದನ್ನು ತಿಳಿದುಕೊಂಡೆ.
ನಾನು ಊಹಿಸಿದ್ದು, ನೀವು ಕಾಮೆರಾದಿಂದ ಆಕಾಶದೆಡೆಗೆ ನೋಡುವ ಹಾಗೆ ಮಾಡಿ, ಸೂರ್ಯ ಅಡ್ಡ ಬರುವಂತೆ ವಸ್ತುವನ್ನು ಕೇಂದ್ರದಲ್ಲಿಟ್ಟು "ಓವರ್ ಎಕ್ಸ್‌ಪೋಜರ್" ಎಂಬ ಪಾರಾಮೀಟರನ್ನು ಬೇಕಿದ್ದ ಹಾಗೆ ಹೊರಳಿಸಿ ಪಾಪೆ ಹಿಡಿದಿದ್ದೀರಿ ??? ಇಲ್ಲಿ ನಾನು ಯಾವುದಾದರೂ ಮಾಹಿತಿಯನ್ನು ತಪ್ಪಾಗಿ ಗ್ರಹಿಸಿದ್ದರೆ ದಯಮಾಡಿ ತಿದ್ದಿರಿ.
ಈ ಕಾಮೆಂಟನ್ನು ಬರೆಯುವಾಗ ಕೆಳಗಿನ ಎರಡು ಬರಹಗಳನ್ನು ಓದಿದೆ. ಸ್ವಲ್ಪ ತಿಳಿಯಿತು. ಒಬ್ಬ ಗೆಳೆಯ ಮತ್ತಷ್ಟು ತಿಳಿಸಿಕೊಟ್ಟ. ಇವುಗಳ ಬಗ್ಗೆ ನೀವೂ ಕೂಡ ಏನನ್ನಾದರೂ ಹೇಳುವುದಾದರೆ ಅಗತ್ಯವಾಗಿ ಎಲ್ಲರೊಡನೆ ಹಂಚಿಕೊಳ್ಳಿರಿ.
೧. ಶಟರ್ ಸ್ಪೀಡಿನ ಬಗ್ಗೆ
೨. ಎಕ್ಸ್‌ಪೋಜರ್ ಬಗ್ಗೆ
ನಮಸ್ಕಾರ ಸುನಿಲ್,
ನಿಮಗೆ ಈ ’ಪಾಪೆ’ ಹಿಡಿಸುದುದು ನನಗೆ ಸಂತೋಷ. ನೀವು ಚಿತ್ರಗಳನ್ನು ತೆಗೆಯುವವರಾದರೆ ನಮ್ಮೆಲ್ಲರೊಡನೆ ಹಂಚಿಕೊಳ್ಳಿ
ನೀವು ಕೊಟ್ಟ ಲಿಂಕುಗಳು exposure ಮತ್ತು ಶಟರ್ ಸ್ಪೀಡ್ ನ್ನು ಚೆನ್ನಾಗಿ ವಿವರಿಸುತ್ತವೆ.
ನಾನು ಚಿತ್ರ ತೆಗೆದ ರೀತಿಯ ಬಗ್ಗೆ ನೀವು ಅಂದುಕೊಂಡದ್ದು ಬಹಳ ಮಟ್ಟಿಗೆ ಸರಿ. ಆದರೆ ಸೂರ್ಯನನ್ನು ನಾನು object ಮೂಲಕ ಮರೆ ಮಾಚಿಲ್ಲ. ಆದರೆ ಸೂರ್ಯ frame ನಲ್ಲಿ ಇಲ್ಲದಂತೆ ಜಾಗ್ರತೆ ವಹಿಸಿದ್ದೇನೆ ಅಷ್ಟೆ.
ಸಂದೀಪ್ ಬಹಳ ಒಳ್ಳೆ ಛಾಯಾಗ್ರಾಹಕ. ನನಗೆ ಛಾಯಾಗ್ರಹಣದಲ್ಲಿ ಅಸಕ್ತಿ ಹುಟ್ಟುವಂತೆ ಮಾಡಿದ್ದೇ ಅವರ ಚಿತ್ರಗಳು. ಸರಳವಾಗಿರುವ ಚಿತ್ರಗಳನ್ನು ಅಧ್ಬುತವಾಗಿ ಸೆರೆ ಹಿಡಿಯುತ್ತಾರೆ. ಅವರನ್ನ ನಾನು ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಭೇಟಿಯಾಗಿದ್ದೆ. ಆದರೆ ಸಂಭಾಶಣೆಗೆ (how to write the big ಶ?) ಸಮಯವಿರಲಿಲ್ಲ. ನಾನು ಬೆಟ್ಟದಿಂದ ಇಳಿಯುವಾಗ ಕಾಲು ಮುರಿದುಕೊಂಡಿದ್ದೆ ಹಾಗು ಇನ್ನು ಜನವಸತಿ ಪ್ರದೇಶ ತಲುಪಲು ಆ ಸ್ತಿತಿ (how to write the big ತ) ಯಲ್ಲಿ ಬಹಳ ಹಾದಿ ಕ್ರಮಿಸಬೇಕಿತ್ತು.
ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು. http://www.kaje.in/ (ಸದ್ಯಕ್ಕೆ Mozilla ಬಳಸಿ!)
ಪ್ರತಿಕ್ರಿಯೆಗಳು
ಉ: ಡೀಪ್ಸನ್ ಎಫೆಕ್ಟ್
ವಸಂತ್ ಕಜೆ ಅವರೆ, ಈ ಪಾಪೆ ನಿಜಕ್ಕೂ ನನ್ನನ್ನು ತುಂಬಾ ಸೆಳೆಯಿತು. ನಾನು ಕೂಡ ಈ ರೀತಿ ಪಾಪೆ ಹಿಡಿಯಲು ಮೊಗಚಬೇಕು. ನನ್ನಲ್ಲಿ ಕೆಲವೊಂದು ಡೌಟುಗಳು ಮನೆಮಾಡಿತ್ತು. ಪಾಪೆಗಳನ್ನು ಸೆರೆಹಿಡುಯುವಲ್ಲಿ ನಿಮ್ಮ ಹಾಗೆ ಸಿಕ್ಕಾಪಟ್ಟೆ ಎಂಥೂ ಇರುವ ನನ್ನ ಇನ್ನೊಬ್ಬ ಗೆಳೆಯನೊಡನೆ ನೀವು ತೆಗೆದ ಚಿತ್ರವನ್ನು ತೋರಿಸಿ, ಕೆಲವೊಂದು ಗೊಂದಲಗಳನ್ನು ತಿಳಿಯಾಗಿಸಿಕೊಂಡೆ.
೧. ಎಕ್ಸ್‌ಪೋಸ್ ಟರ್ಮಿನಾಲಜಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ.
೨. ಎಕ್ಸ್‌ಪೋಜರ್ ಟೈಮ್ ಅಂತ ಇದೆಯಲ್ಲಾ ಅದಕ್ಕೂ ಮೇಲಿನ ಓವರ್-ಎಕ್ಸ್‌ಪೋಜರಿಗೂ ಸಂಬಂಧವಿದೆ ಇದೆಯೇ ಎಂಬುದನ್ನು ತಿಳಿದುಕೊಂಡೆ.
ನಾನು ಊಹಿಸಿದ್ದು, ನೀವು ಕಾಮೆರಾದಿಂದ ಆಕಾಶದೆಡೆಗೆ ನೋಡುವ ಹಾಗೆ ಮಾಡಿ, ಸೂರ್ಯ ಅಡ್ಡ ಬರುವಂತೆ ವಸ್ತುವನ್ನು ಕೇಂದ್ರದಲ್ಲಿಟ್ಟು "ಓವರ್ ಎಕ್ಸ್‌ಪೋಜರ್" ಎಂಬ ಪಾರಾಮೀಟರನ್ನು ಬೇಕಿದ್ದ ಹಾಗೆ ಹೊರಳಿಸಿ ಪಾಪೆ ಹಿಡಿದಿದ್ದೀರಿ ??? ಇಲ್ಲಿ ನಾನು ಯಾವುದಾದರೂ ಮಾಹಿತಿಯನ್ನು ತಪ್ಪಾಗಿ ಗ್ರಹಿಸಿದ್ದರೆ ದಯಮಾಡಿ ತಿದ್ದಿರಿ.
ಈ ಕಾಮೆಂಟನ್ನು ಬರೆಯುವಾಗ ಕೆಳಗಿನ ಎರಡು ಬರಹಗಳನ್ನು ಓದಿದೆ. ಸ್ವಲ್ಪ ತಿಳಿಯಿತು. ಒಬ್ಬ ಗೆಳೆಯ ಮತ್ತಷ್ಟು ತಿಳಿಸಿಕೊಟ್ಟ. ಇವುಗಳ ಬಗ್ಗೆ ನೀವೂ ಕೂಡ ಏನನ್ನಾದರೂ ಹೇಳುವುದಾದರೆ ಅಗತ್ಯವಾಗಿ ಎಲ್ಲರೊಡನೆ ಹಂಚಿಕೊಳ್ಳಿರಿ.
೧. ಶಟರ್ ಸ್ಪೀಡಿನ ಬಗ್ಗೆ
೨. ಎಕ್ಸ್‌ಪೋಜರ್ ಬಗ್ಗೆ
ಉ: ಡೀಪ್ಸನ್ ಎಫೆಕ್ಟ್
ನಮಸ್ಕಾರ ಸುನಿಲ್,
ನಿಮಗೆ ಈ ’ಪಾಪೆ’ ಹಿಡಿಸುದುದು ನನಗೆ ಸಂತೋಷ. ನೀವು ಚಿತ್ರಗಳನ್ನು ತೆಗೆಯುವವರಾದರೆ ನಮ್ಮೆಲ್ಲರೊಡನೆ ಹಂಚಿಕೊಳ್ಳಿ
ನೀವು ಕೊಟ್ಟ ಲಿಂಕುಗಳು exposure ಮತ್ತು ಶಟರ್ ಸ್ಪೀಡ್ ನ್ನು ಚೆನ್ನಾಗಿ ವಿವರಿಸುತ್ತವೆ.
ನಾನು ಚಿತ್ರ ತೆಗೆದ ರೀತಿಯ ಬಗ್ಗೆ ನೀವು ಅಂದುಕೊಂಡದ್ದು ಬಹಳ ಮಟ್ಟಿಗೆ ಸರಿ. ಆದರೆ ಸೂರ್ಯನನ್ನು ನಾನು object ಮೂಲಕ ಮರೆ ಮಾಚಿಲ್ಲ. ಆದರೆ ಸೂರ್ಯ frame ನಲ್ಲಿ ಇಲ್ಲದಂತೆ ಜಾಗ್ರತೆ ವಹಿಸಿದ್ದೇನೆ ಅಷ್ಟೆ.
ನಿಮಗೆ ಡೀಪ್ಸನ್ ಅವರ ಈ ಚಿತ್ರ ಇಷ್ಟವಾಗಬಹುದು. http://flickr.com/photo_zoom.gne?id=34482976&size=m&context=set-72157594...
ನನಗೆ ಇದನ್ನು modification ಇಲ್ಲದೆ ಸಾಧಿಸುವುದು ಸಾಧ್ಯವೇ ಇಲ್ಲ ಅನಿಸಿತ್ತು ಅವರು ಚಿತ್ರ ತೆಗೆದ ರೀತಿಯನ್ನು ವಿವರಿಸುವ ವರೆಗೆ..
ಡೀಪ್ಸನ್ ಅವರ ಇತರೆ ಚಿತ್ರಗಳನ್ನು flickr.com/photos/deepsan - ಇಲ್ಲಿ ಕಾಣಬಹುದು. ಅವರಿಂದ ಕಲಿಯುವುದು ಬಹಳ ಇದೆ.
ವಂದನೆಗಳು.
ವಸಂತ್ ಕಜೆ
ಉ: ಡೀಪ್ಸನ್ ಎಫೆಕ್ಟ್
ವಸಂತರೇ,
ತುಂಬ ಇಷ್ಟವಾಯಿತು ನಿಮ್ಮ ಈ ಚಿತ್ರ.
ಇಂತಹ ಹೊಸ ಹೊಸ ಮಾಹಿತಿ ಇನ್ನೂ ಕೊಡುತ್ತಿರಿ.
ಉ: ಡೀಪ್ಸನ್ ಎಫೆಕ್ಟ್
ವಸಂತ್, ನೀವು ಹಿಡಿದಿರುವ ಅಚ್ಹುಗಳು ಚೆನ್ನಾಗಿವೆ. ತುಂಬಾ ಹಿಡಿಸಿತು.

ಷ = Sha
ಥ = tha