ಬದುಕಿನ ಸಮತೋಲನ
ಭತ್ತದ ಗದ್ದೆಯಲ್ಲಿ ಒಳ್ಳೆಯ ನೀರಿನ pattern ಗಳ ಚಿತ್ರ ತೆಗೆಯುತ್ತಿದ್ದಾಗ ಈ balance ಮಾಡುತ್ತಿದ್ದ ಮಹಾಶಯ ಸಿಕ್ಕಿಬಿದ್ದ!

- Vasanth Kaje ರವರ ಬ್ಲಾಗ್
- Login or register to post comments
- 338 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಭತ್ತದ ಗದ್ದೆಯಲ್ಲಿ ಒಳ್ಳೆಯ ನೀರಿನ pattern ಗಳ ಚಿತ್ರ ತೆಗೆಯುತ್ತಿದ್ದಾಗ ಈ balance ಮಾಡುತ್ತಿದ್ದ ಮಹಾಶಯ ಸಿಕ್ಕಿಬಿದ್ದ!







ಪ್ರತಿಕ್ರಿಯೆಗಳು
ಉ: ಬದುಕಿನ ಸಮತೋಲನ
ವಾಹ್, ಎಂಥ ಸುಂದರವಾದ ನೋಟ.
ಉ: ಬದುಕಿನ ಸಮತೋಲನ
ವಸಂತ್,
ಸುಂದರ ಚಿತ್ರ.
ವಾಟರ್ ಪೋರ್ಟಲ್‌ನಲ್ಲಿ ಪ್ರಕಟವಾದ ಕಿರು ಜಲಪಾತ(ಸಿಲ್ಕೀ ಎಫೆಕ್ಟ್) ಚಿತ್ರ ಸಹ ಬಹಳ ಸುಂದರವಾಗಿದೆ.
೨ ವಾರ ಮೊದಲು ಶಿರಾಡಿ ಘಾಟಿಗಾಗಿ ಬರುವಾಗ ಈ ಕಿರು ಜಲಪಾತಗಳಿಂದಾಗಿ ಹಾಳಾದ ರಸ್ತೆಗಳ ಬಗ್ಗೆ ಶಪಿಸುತ್ತಾ ಬಂದೆ. ಬಿಡದೇ ಸುರಿಯುತ್ತಿದ್ದ ಮಳೆ,ಡಾಮರಿಲ್ಲದೇ ಜಲ್ಲಿಕಲ್ಲುಗಳ ಮೇಲೆ ವಾಹನ ಚಲಾಯಿಸುವಾಗ 'ಇಶ್ಶೀ ರಾಡಿ ಘಾಟಿ'ಯ ಸೌಂದರ್ಯ ಗಮನಿಸುವ ಮನಸ್ಸಾಗಲಿಲ್ಲ.
ನೀವು ಗ್ರೇಟ್.
-ಗಣೇಶ.
ಉ: ಬದುಕಿನ ಸಮತೋಲನ
ಬಹಳ ಡಿಫರೆಂಟ್ ಆದ shot. ತುಂಬ ಚೆನ್ನಾಗಿ ಬಂದಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಬದುಕಿನ ಸಮತೋಲನ
ವಸಂತ್,
ಸಕ್ಕತಾಗಿದೆ...
ನಿಮ್ಮ SLR ಕ್ಯಾಮೆರಾ ಯಾವ make?
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಬದುಕಿನ ಸಮತೋಲನ
ಚೆನ್ನಾಗಿದೆ..ಬೆ೦ಗಳೂರಿನ working womenಗಳನ್ನ ನೋಡಿದ ಹಾಗಾಯಿತು..
ಉ: ಬದುಕಿನ ಸಮತೋಲನ
ಸು೦ದರವಾದ Photography. ಮನಸ್ಸಿಗೆ ಮುದ ನೀಡಿತು. ಅದು ಸರಿ..‘ಒಳ್ಳೆಯ ನೀರಿನ pattern ಗಳ ಚಿತ್ರ’ ಎಲ್ಲಿ? ಅದನ್ನು ಯಾವಾಗ ಹಾಕುತ್ತೀರಿ?
- ಶೈಲಾ ಸ್ವಾಮಿ
ಉ: ಬದುಕಿನ ಸಮತೋಲನ
ಥೇಟ್ ನಮ್ಮ ಬುದ್ಧಿಜೀವಿಗಳ ಥರಾ ಇದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಬದುಕಿನ ಸಮತೋಲನ
ಇನ್ನೂ ಯಾಕೋ ಬುದ್ಧಿಜೀವಿಗಳ ಮೇಲೆ ಕೋಪ ಇಳಿದಿಲ್ಲ ಅ೦ತ ಕಾಣ್ಸುತ್ತೆ, ಇವ್ರ್ಗೆ!!
ಉ: ಬದುಕಿನ ಸಮತೋಲನ
ಯಾರವ್ರು ’ಇವ್ರೇ’ ಅನ್ನೋ ಬುದ್ಧಿಜೀವಿಗಳು?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಬದುಕಿನ ಸಮತೋಲನ
ಇಲ್ಲಿ ನೋಡ್ರಿ ’ಇವ್ರೇ’ ಅಲ್ಲ,
ಉ: ಬದುಕಿನ ಸಮತೋಲನ
ಅಯ್ಯೋ, ತಪ್ಪು ಮಾಡಿದೆನಲ್ಲಪ್ಪಾ !
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಬದುಕಿನ ಸಮತೋಲನ
ಬುದ್ದಿಜೀವಿಗಳ "ಬ್ಯಾ೦ಡ್ವಿಡ್ತೇ" ಬೇರೆ ನನ್ನ "ಬ್ಯಾ೦ಡ್ವಿಡ್ತೇ" ಬೇರೆ!! ಇರಲಿ. ಅ೦ದ ಹಾಗೆ ಬ್ಯಾ೦ಡ್ವಿಡ್ಟ್ತಿ(bandwidth)ಗೆ ಕನ್ನಡದಲ್ಲಿ ಏನ್ ಹೇಳ್ತಾರೆ?
ಉ: ಬದುಕಿನ ಸಮತೋಲನ
ಪಟ್ಟಿಯಗಲ !
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಬದುಕಿನ ಸಮತೋಲನ
ಕೀಟವೆಂದು ದಾಟಿ ಓಡಿ ಹೋಗಬೇಡವೋ
ಫೋಟೊವೆಂದು ಬೆಳಕ ಬೀರಿ ನಿದ್ದೆಗೆಡಿಸಬೇಡವೋ
ಊರ ಹೊರಗೆ ಗದ್ದೆ ಬದಿಯ ಹುಲ್ಲ ರೇಖು ಹಿಡಿದು
ಧ್ಯಾನ ನಿರತ ನನ್ನ ಜಾಡು ಹಿಡಿದು
ಸಂಪದಕ್ಕೆ ಚಿತ್ರ ಕಳುಹಿ ಕೆಡಿಸಿಬಿಟ್ಟೆ ನನ್ನ ತಪವ
ಇನ್ನು ಲಗ್ಗೆ ಹಾಕುವರೆಲ್ಲ ನನ್ನ ಮನೆಗೆ ಹಿಡಿ ನನ್ನ ಶಾಪವ.
ಪ್ರಿಯ ವಸಂತ್,
ತುಂಬಾ ಚೆನ್ನಾಗಿದೆ ನೀವು ತೆಗೆದಿರುವ ಫೋಟೋ. ಮೇಲಿನ ಕವನ ಕೇವಲ ಮನಸ್ಸಿನ ಅನಿಸಿಕೆಯನ್ನು ಹೊರಹಾಕಲಿಕ್ಕಾಗಿ ಬರೆದದ್ದೇ ಹೊರತು ತಮ್ಮನ್ನು ನಿರುತ್ಸಾಹಗೊಳಿಸಲಲ್ಲ. ಮುಂದುವರೆಸಿ ನಿಮ್ಮ ಚಿತ್ರಾನ್ವೇಷಣಾ ಕಾರ್ಯಕ್ರಮವನ್ನು. ಸಂಪದೋದುಗರಿಗೆ ಲಾಭವಾಗಲಿ.
ಎ.ವಿ. ನಾಗರಾಜು
ಉ: ಬದುಕಿನ ಸಮತೋಲನ
ವಂದನೆಗಳು ಎಲ್ಲರಿಗೂ.
ನನ್ನ SLR Nikon D70 (28-80mm default lens). ಈಗ ಇದು ತಯಾರಿಕೆಯಲ್ಲಿಲ್ಲ. ಬಹುಶ: ಡಿ80 ಅಥವಾ ಡಿ40ಎಕ್ಸ್ ಹೆಚ್ಚು ಚಾಲ್ತಿಯಲ್ಲಿದೆ.
ಗಣೇಶ ಅವರೇ, ವಾಸ್ತವವಾಗಿ ಅಲ್ಲಿಯ ರಸ್ತೆಗಳು ಟ್ರಕ್ಕುಗಳಿಂದಾಗಿ ಹಾಳಾಗಿವೆ. ಜಲಪಾತಗಳು ಪಾಪ ಮೇಲಿನಿಂದ ಹಾರಿ ರಸ್ತೆಯ ಕೆಳಗೆ ಕಷ್ಟ ಪಟ್ಟು ತೆವಳಿ ಹೊಸದಾಗಿ ಮಾಡಿದ ಡ್ಯಾಮ್ ಸೇರಿ 'ಅಯ್ಯೋ ಎಷ್ಟು ಹೊತ್ತಿಗೆ ಗೇಟ್ ಓಪನ್ ಮಾಡುತ್ತಾರಪ್ಪ, ನಿಮಗೆ ಬರುವಾಗ ಮಳೆ ಸಿಕ್ಕಿತ್ತ?' ಎಂದು ಮಾತಾಡಿಕೊಳ್ಳುತ್ತವೆ.
ವಸಂತ್ ಕಜೆ.