ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › uniquesupri ರವರ ಬ್ಲಾಗ್

ಮೆಚ್ಚಿನ ಧಾರಾವಾಹಿಗೊಂದು ನಲ್ಮೆಯ ವಿದಾಯ

April 25, 2008 - 12:51am — uniquesupri

ಈ ಲೇಖನ ಮೊದಲು ಇಲ್ಲಿ ಪ್ರಕಟವಾಗಿತ್ತು. 

.......................... 

ಈ ಟಿವಿಯಲ್ಲಿ ರಾತ್ರಿ ಎಂಟೂ ವರೆಗೆ ‘ಮಂಥನ’ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ‘ಇದು ಇನ್ನೊಂದು ಮುಕ್ತ’ ಅಂತ ಹೆಸರು ಪಡೆದ ಈ ಧಾರಾವಾಹಿ ಇತ್ತೀಚೆಗೆ ಮುಕ್ತಾಯ ಕಂಡಿತು. ಧಾರಾವಾಹಿಗಳು ಎಂದರೆ ಸಾವಿಲ್ಲದ, ಕೊನೆಯಿಲ್ಲದ ಚಿರಂಜೀವಿಗಳು ಎಂದೇ ಜನರು ಭಾವಿಸಿರುವ ಇತ್ತೀಚಿನ ದಿನಗಳಲ್ಲಿ ಒಂದು ಧಾರಾವಾಹಿ ಮುಕ್ತಾಯವಾಯ್ತಂತೆ ಎಂದು ಕೇಳಿದರೇನೇ ಆಶ್ಚರ್ಯವಾಗುತ್ತದೆ!

ಈ ‘ಮಂಥನ’ದ ಬಗೆಗೊಂದು ಪುಟ್ಟ ಟಿಪ್ಪಣಿ, ಒಂದೊಳ್ಳೆ ಧಾರಾವಾಹಿಯ ನೆನಪಿಗಾಗಿ… ‘ಮಂಥನ’ದಪಾತ್ರಗಳ ಸಂಭಾಷಣೆ ಮೊದಲ ವೀಕ್ಷಣೆಯಲ್ಲೇ ನಮ್ಮ ಗಮನವನ್ನು ಸೆಳೆದುಬಿಡುತ್ತದೆ. ತುಂಬಾ ನಾಟಕೀಯ ಎನ್ನಿಸುವಂತಹ ಸಂಭಾಷಣೆಗಳು, ಗ್ರಾಂಥಿಕ ಭಾಷೆ ಎಲ್ಲವೂ ಹೊಸ ಪ್ರಯೋಗದಂತೆ ಮನಸ್ಸನ್ನು ಸೆಳೆಯುತ್ತವೆ. ಆದರೆ ಇಡೀ ಧಾರಾವಾಹಿಯನ್ನು ಆ ಹೊಸತನವೇ ಆಕ್ರಮಿಸಿಕೊಂಡು ಹೊಸಕಿ ಹಾಕಿಬಿಡುತ್ತದೆ. ಸೃಜನಶೀಲತೆ, ಬುದ್ಧಿವಂತಿಕೆ, ವೈಚಾರಿಕತೆಯನ್ನು ಮೆರೆಸುವ ಸಡಗರದಲ್ಲಿ ಸಹಜತೆ ನರಳುತ್ತದೆ. ಕಾವ್ಯಾತ್ಮಕವಾದ ಅಭಿವ್ಯಕ್ತಿ ಕಾಣೆಯಾಗುತ್ತದೆ, ಕಲಾಕೃತಿಯಾಗುವ ಬದಲು ಅದೊಂದು ಹತ್ತು ಬಟ್ಟೆ ಸೇರಿಸಿ ಹೊಲಿದ ಕೌದಿಯಾಗಿಬಿಡುತ್ತದೆ. ಚಿಕ್ಕ ಮಕ್ಕಳ ಬಾಯಲ್ಲಿ ದೊಡ್ಡವರೂ ಅರ್ಥಮಾಡಿಕೊಳ್ಳಲಾಗದಂತಹ ಮಾತುಗಳನ್ನು ತುರುಕುವುದು ಇದಕ್ಕೆ ಸಾಕ್ಷಿ. ಮೊದಲೇ ತಯಾರಿಸಿಟ್ಟುಕೊಂಡ ವಾದವನ್ನು, ವಿಚಾರವನ್ನು ಎರಡು ಪಾತ್ರಗಳು ಮಂಡಿಸುವಂತೆ ಸಂಭಾಷಣೆಯಿರುತ್ತದೆ. ಪಾತ್ರಗಳ ಸಂಸ್ಕಾರ, ವಯೋಮಾನ, ಮನೋಧರ್ಮಕ್ಕನುಗುಣವಾಗಿ ಸಂಭಾಷಣೆಯಿದ್ದರೆ ಕಲಾಕೃತಿ ಗೆಲ್ಲುತ್ತದೆ ಇಲ್ಲವಾದರೆ ಸಂಭಾಷಣೆ ಬರೆಯುವವ ಮಾತ್ರ ಗೆಲ್ಲುತ್ತಾನೆ.

ಹಾಗೆ ನೋಡಿದರೆ, ಈಗ ಕನ್ನಡದ ಚಾನಲ್ಲುಗಳಲ್ಲಿ ಹರಿಯುತ್ತಿರುವ ‘ಧಾರಾವಾಹಿ’ಗಳಿಗೆ ಹೋಲಿಸಿದರೆ ‘ಮಂಥನ’ ಸಾವಿರ ಪಾಲು ಶ್ರೇಷ್ಠ. ಮನುಷ್ಯ ಸಂಬಂಧಗಳನ್ನು ಹೆಜ್ಜೆ ಹೆಜ್ಜೆಗೂ ಪ್ರಶ್ನಿಸುವ, ಅಗ್ನಿ ಪರೀಕ್ಷೆಗೊಡ್ಡುವ, ಸಂಶಯದಿಂದ ಕಾಣುವ, ಸೀಳಿ ನೋಡಿ ವಿಶ್ಲೇಷಿಸುವ ಪ್ರಯತ್ನ ಹೊಸತನದಿಂದ ಕೂಡಿದೆ. ಮದುವೆ, ಮಕ್ಕಳ ಮೇಲಿನ ಪ್ರೀತಿ, ನಿರೀಕ್ಷೆ, ಕುಟುಂಬ ವ್ಯವಸ್ಥೆ, ಸಂಬಂಧಗಳ ಸ್ವರೂಪವನ್ನು ಎಳೆ ಎಳೆಯಾಗಿ ಕಾಣುವ ಪ್ರಯತ್ನ ಮನಸ್ಸಿಗೆ ಮುಟ್ಟುತ್ತದೆ. ವ್ಯವಹಾರ, ಪ್ರಾಮಾಣಿಕತೆ- ಸುತ್ತಲಿನ ಭ್ರಷ್ಟ ಪರಿಸರದಲ್ಲಿ ಅದು ಪ್ರಾಮಾಣಿಕನಲ್ಲಿ ಹುಟ್ಟಿಸುವ ಅಹಂಕಾರ, ಹಣದ ಗುಣ, ಸರಕಾರಿ ಅಧಿಕಾರಿ, ಕಾರ್ಖಾನೆಯ ಶ್ರೀಮಂತರು, ತೆರಿಗೆ ಸಂಸ್ಕೃತಿ -ಹೀಗೆ ಅನೇಕ ಸಾಮಾಜಿಕ ಮುಖಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಸ್ತುತ್ಯಾರ್ಹ.

ಗಮನಿಸಬೇಕಾದ ಮತ್ತೊಂದು ಸೂಕ್ಷ್ಮ ಸಂಗತಿಯೆಂದರೆ, ‘ಮಂಥನ’ದ ಪ್ರತಿ ಪಾತ್ರದ ಆಲೋಚನೆಯಲ್ಲೂ ಹೊಸತನವನ್ನು ಒತ್ತಾಯದಿಂದ ತೂರಿಸುವ ಪ್ರಯತ್ನ ಉಂಟುಮಾಡುವ ಕಿರಿಕಿರಿ. ಎಲ್ಲಾ ಪಾತ್ರಗಳಿಗೂ ಮಾನವೀಯ ಸಂಬಂಧಗಳ ಬಗ್ಗೆ ಸಮಾಜ ಸೃಷ್ಟಿಸಿರುವ ‘ಮಾದರಿ’(stereotype)ಗಳನ್ನು ಧಿಕ್ಕರಿಸುವ, ಅವುಗಳ ಹಂಗನ್ನು ಮೀರುವ ಉನ್ಮಾದವಿದೆ, ಹೊಸ ಆಯಾಮಗಳಿಗೆ ಕೈಚಾಚುವ ಹಸಿವಿದೆ. ಇದು ಮೆಚ್ಚುಗೆಗೆ ಅರ್ಹವಾದ ವಿಚಾರವೇ ಆದರೆ ಈ ಭಾವ ಎಲ್ಲಾ ಪಾತ್ರಗಳನ್ನೂ ಆವರಿಸುವುದರಿಂದ ಕಥಾನಕದ ಒಟ್ಟು ಅಂದಕ್ಕೆ ತೊಂದರೆಯಾಗುತ್ತದೆ. ಸಮಾಜದಲ್ಲಿ ಸಂಬಂಧಗಳು ಪುನರ್ ಮೌಲ್ಯಮಾಪನ ಗೊಳ್ಳುತ್ತಾ ಹೋಗುತ್ತಲೇ ಇರುತ್ತವೆ. ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತ್ತಲೇ ಹೋಗುತ್ತಿರುತ್ತವೆ. ಹತ್ತಾರು ವರ್ಷಗಳ ನಂತರ ಈ ಧಾರಾವಾಹಿಯನ್ನು ನೋಡುವವನಿಗೆ ಇವೆಲ್ಲಾ ಹೊಸ ಚಿಂತನೆಗಳು ಅನ್ನಿಸದಷ್ಟು ಸಹಜವಾಗಿಬಿಟ್ಟಿರುತ್ತವೆ, ಇಲ್ಲವೆ ಅಪ್ರಸ್ತುತವಾಗಿಬಿಟ್ಟಿರುತ್ತವೆ. ಸತಿ ಪದ್ಧತಿ, ಬಾಲ್ಯವಿವಾಹಗಳ ಪ್ರಶ್ನೆ ನಮ್ಮಲ್ಲಿ ಅಪ್ರಸ್ತುತವಾಗಿರುವಂತೆ. ಈ ಬಗೆಯ ಸಂಬಂಧಗಳ ವಿಶ್ಲೇಷಣೆ ಸಲ್ಲದು ಅಂತಲ್ಲ, ಆ ಅಂಶದ ನೆರಳು ಎಲ್ಲಾ ಪಾತ್ರಗಳ ಮೇಲೂ ಬೀಳುವುದು ಸರಿಯಲ್ಲ.

ಇಷ್ಟೆಲ್ಲಾ ವಿಚಾರಗಳನ್ನು- ಅವುಗಳಲ್ಲಿ ನೆಗೆಟೀವ್ ಅಭಿಪ್ರಾಯಗಳೂ ಸೇರಿದ್ದರೂ- ಹುಟ್ಟುಹಾಕುವ ಕೆಲಸವನ್ನು ಒಂದು ಕನ್ನಡ ಧಾರಾವಾಹಿ ಮಾಡಿದೆಯೆಂದರೆ ಅದು ಆ ಧಾರಾವಾಹಿಯ ಯಶಸ್ಸೆಂದೇ ಕರೆಯಬೇಕು.ಇದು ‘ಮಂಥನ’ಕ್ಕೊಂದು ಆತ್ಮೀಯ ವಿದಾಯ…

  • ಅಭಿಪ್ರಾಯ
  • ಧಾರಾವಾಹಿ
~.~
  • uniquesupri ರವರ ಬ್ಲಾಗ್
  • Login or register to post comments
  • 256 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಕ್ತ ಆಶಯದ ಸೋಲು ೧ - ಕೊಳ್ಳುಬಾಕ ಸಂಸ್ಕೃತಿಯ ಕುರಿತಾದದ್ದು
  • ಮತ್ತೆ ’ಅಂತ’
  • ನಿಜವಾಗಿಯೂ ಆದೆನೆ ನಾನಿಂದು ಮುಕ್ತ ಮುಕ್ತ ಮುಕ್ತಾ.ಆಆಆ....
  • ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.
  • 'ಮುಕ್ತ' ಧಾರಾವಾಹಿ ಮತ್ತು ಚರ್ಚೆ
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

I am a simple life loving person with a sensitive heart.

ನಾನು ಇಂಜಿನಿಯರಿಂಗ್ ಓದುತ್ತಿದ್ದೇನೆ. ನಾನು ಹಾಗೂ ನನ್ನ ಗೆಳೆಯರು ಸೇರಿ ಒಂದು ಸಣ್ಣ ಪತ್ರಿಕೆಯೊಂದನ್ನು ಪ್ರತಿ ತಿಂಗಳು ಹೊರಡಿಸುತ್ತಿದ್ದೇವೆ. ಅದರ ಬ್ಲಾಗು ಇಲ್ಲಿದೆ:http://kalaravapatrike.wordpress.com/
ನನ್ನ ಬ್ಲಾಗು:
http://uniquesupri.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 120 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator