ಓದಿನ ಕೋಣೆ
ಓದು ಎನ್ನುವುದು ನಮ್ಮ ಜೀವನದಲ್ಲಿ ನಿರಂತರ ಪ್ರಕ್ರಿಯೆಯಾಗಿರಬೇಕು, ದಿನಾ ನೋಡುವ
ಧಾರಾವಾಹಿಯಂತೆ. ಪುಸ್ತಕದ ಮೂಲಕ ನಾವು ಜಗತ್ತಿನ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಭೇಟಿ
ಮಾಡುತ್ತೇವೆ. ಆತನನ್ನು ಮಾತನಾಡಿಸುತ್ತೇವೆ. ಆತ ಹೇಳುವುದನ್ನು ಕೇಳುತ್ತೇವೆ. ಆತನಿಗೆ
ನಾವು ಹೇಳುವುದನ್ನು ಕೇಳು ಅನ್ನುತ್ತೇವೆ. ಆತನ ಅಭಿಪ್ರಾಯಗಳನ್ನು
ಒಪ್ಪಿಕೊಳ್ಳುತ್ತೇವೆ, ಪ್ರಶ್ನೆ ಮಾಡುತ್ತೇವೆ, ತಕರಾರು ಎತ್ತುತ್ತೇವೆ. ಆತನೊಂದಿಗೆ
ಜಗಳ ಮಾಡುತ್ತೇವೆ, ರಾಜಿಯಾಗುತ್ತೇವೆ. ಕೋಪಿಸಿಕೊಂಡು ದೂರ ಮಾಡುತ್ತೇವೆ. ಅಪ್ಪಿ
ಮುದ್ದಾಡುತ್ತೇವೆ. ಪ್ರೀತಿಯಿಂದ ಎದೆಗೊತ್ತಿಕೊಳ್ಳುತ್ತೇವೆ. ಯಾವ ಪೊಸೆಸೀವ್‌ನೆಸ್
ಇಲ್ಲದೆ ಆತನನ್ನು ಇನ್ನೊಬ್ಬರಿಗೆ ಪರಿಚಯ ಮಾಡಿಸಿಕೊಡುತ್ತೇವೆ. ಆತನಿಗೆ ಇವನನ್ನು
ಪ್ರೀತಿಸು ಎಂದು ಮುಕ್ತವಾಗಿ ಶಿಫಾರಸ್ಸು ಮಾಡುತ್ತೇವೆ. ಸಮಯ ಕಳೆದಾಗ ಯಾವ ನೋವೂ,
ಅನುಮಾನ, ಮುರಿದ ಮನಸ್ಸಿಲ್ಲದೆ ಬೇರೊಬ್ಬ ವ್ಯಕ್ತಿಯೆಡೆಗೆ ನಡೆದುಬಿಡುತ್ತೇವೆ, ಹೆಚ್ಚು
ಪ್ರಬುದ್ಧರಾಗಿ. ಪುಸ್ತಕಗಳ ಜಗತ್ತೇ ಇಂಥದ್ದು!
ಹೀಗೆ ಪುಸ್ತಕಗಳನ್ನು ಕೇವಲ
ಅಕ್ಷರ ಮೆತ್ತಿಕೊಂಡ ಕಾಗದದಗಳ ಕಟ್ಟು ಎಂದು ಭಾವಿಸದೆ ಭಾವನಾತ್ಮಕವಾಗಿ
ಹತ್ತಿರಾಗಿಸಿಕೊಂಡ ನನ್ನಂಥವರಿಗೆ ಓದಿದ್ದನ್ನು ಹಂಚಿಕೊಳ್ಳುವ, ಇನ್ನೊಬ್ಬರಿಗೆ
ಪರಿಚಯಿಸುವ ಚಪಲ. ಅದಕ್ಕಾಗಿಯೇ ಈ ಕಮ್ಯುನಿಟಿ. ಬನ್ನಿ ಆರ್ಕುಟ್ಟಿನ ಅಂಗಳದಲ್ಲಿ
ಒಂದೊಳ್ಳೆಯ ‘ಓದಿನ ಕೋಣೆ’ ಯನ್ನು ಕಟ್ಟಿಕೊಳ್ಳೋಣ.
http://www.orkut.com/Community.aspx?cmm=45718912
ಓದಿನ ಕೋಣೆಯ ಬ್ಲಾಗು: http://nannaodu.blogspot.com/

- uniquesupri ರವರ ಬ್ಲಾಗ್
- Login or register to post comments
- 238 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: