ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › tvsrinivas41 ರವರ ಬ್ಲಾಗ್

ಬರಹ ಕ್ರಾಂತಿ!

August 17, 2005 - 10:25pm — tvsrinivas41

ನಾನು ಕೆಲಸ ಮಾಡುವ ನನ್ನ ಬ್ಯಾಂಕಿನ ವಿಭಾಗದಲ್ಲಿ ಸಿಸ್ಟಂ ಅಡ್ಮಿನಿಸ್ಟ್ರೇಟರ್ ತುಂಬಾ ಶಿಸ್ತಿನ ಮನುಷ್ಯ. ನಮ್ಮಲ್ಲಿರುವುದು ಲ್ಯಾನ್ ಸಿಸ್ಟಂ. ಸುಮಾರು ೬೫ ಪಿಸಿ ಗಳಿದ್ದು ಎಲ್ಲವೂ ಸ್ತ್ಯಾಂಡ್ ಅಲೋನ್ ಮತ್ತು ನೋಡ್ ಗಳಾಗಿಯೂ ಕೆಲಸ ಮಾಡುವವು.

ನಮ್ಮ ಮೇಲಧಿಕಾರಿಗಳು ಅವನಿಗೆ ತಿಳಿಸಿದಂತೆ ಯಾವ ಪಿಸಿ ಗಳಲ್ಲೂ ಆಟಗಳಿರುವಂತಿಲ್ಲ. ಕೆಲಸದ ವಿಷಯ ಬಿಟ್ಟು ಬೇರೆ ಏನನ್ನೂ ಮಾಡದಂತೆ ಮಾಡಿಹರು. ಇಂಗ್ಲೀಷ್ ಮತ್ತು ಹಿಂದಿಯ ತಂತ್ರಾಂಶಗಳನ್ನು ಮಾತ್ರವೇ ಏರಿಸಿರುವುದು. ನಾನು ಬಹಳ ದಿನಗಳಿಂದ ಬರಹ ವನ್ನು ಏರಿಸಲು ಕೇಳಿಕೊಳ್ಳುತ್ತಿದ್ದೆ. ಆದರೇಕೋ ಅವರುಗಳು ನನ್ನ ಕರೆಗೆ ಮಾನ್ಯತೆಯನ್ನೇ ಕೊಟ್ಟಿರಲಿಲ್ಲ. ನಮ್ಮಲ್ಲಿರುವ ಸರ್ವರ್ ನಲ್ಲಿನ ಓಎಸ್ ಲಿನಕ್ಸ್ ಮತ್ತು ಪಿಸಿ ಗಳಲ್ಲಿ ವಿಂಡೋಸ್ ಎಕ್ಸ್ ಪಿ. ಸರ್ವರ್ ನಲ್ಲಿ ಹಿಂದಿಗಾಗಿ ಆಕೃತಿ ಎಂಬ ತಂತ್ರಾಂಶವನ್ನು ಏರಿಸಿದ್ದಾರೆ.

ಕನ್ನಡದಲ್ಲಿ ಕೆಲಸ ಮಾಡಲು ಏನಾದರು ಮಾಡಲೇಬೇಕೆಂದು ಪ್ರಯತ್ನ ಪಡುತ್ತಲೇ ಇದ್ದೆ. ಈ ಬಗ್ಗೆ ನಮ್ಮ ನಾಡಿಗರನ್ನೂ ಕೇಳಿದ್ದೆ. ಅವರು ಲಿನಕ್ಸ್ ನಲ್ಲಿ ಲೋಡಿಸಲು ಕೆಲವು ಮಾಹಿತಿಯನ್ನೂ ಕೊಟ್ಟಿದ್ದರು. ಅದನ್ನು ಸಿಸ್ಟಂ ಅಡ್ಮಿನಿಸ್ಟ್ರೇಟರ್ ಗೆ ತಿಳಿಸಿದ್ದೆ. ಆದರೂ ಅವನು ಅದರ ಬಗ್ಗೆ ಅಷ್ಟಾಗಿ ಮನ ತೊರಿರಲಿಲ್ಲ. ನಿನ್ನೆಯ ದಿನ ಆಕೃತಿಯಲ್ಲಿ ಏನೋ ತೊಂದರೆ ಬಂದಿತ್ತು. ವಿಷಯ ತಿಳಿದ ನಾನು ಅವನಿಗೆ ತಿಳಿಸಿದೆ, ಆಗ ನಾನು ನಮ್ಮ ಮೇಲಧಿಕಾರಿಗೆಳಿಗೆ 'ನೋಡಿ, ಈಗ ಯಾರೂ ಹಿಂದಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಬೇಕಿದ್ದರೆ ನಮ್ಮ ಬರಹವನ್ನು ಎಲ್ಲ ಪಿಸಿಗಳಲ್ಲೂ ಲೋಡಿಸಲಿ' ಎಂದೆ. ಹಾಗೇ ಆಗಲಿ ಎಂದು ಅವರು ಸಿಸ್ಟಂ ಅಡ್ಮಿನಿಸ್ಟ್ರೇಟರ್ ಗೆ ಎಲ್ಲ ಪಿಸಿಗಳಲ್ಲೂ ಬರಹವನ್ನು ಲೋಡಿಸಿವಂತೆ ತಿಳಿಸಿದರು. ಹಿಂದೆಯೇ ನಾನು ಎಲ್ಲರ ಬಳಿಯಲ್ಲೂ ಹೋಗಿ, 'ನೋಡಿ, ನಿಮಗೆ ನಿಮ್ಮ ವೈಯಕ್ರಿಕ ಕೆಲಸ ಮಾಡಲು ನಿಮ್ಮ ಭಾಷೆಗಳಾದ ಮರಾಠಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಬೇಕಾಗಿದೆ. ಅದಕ್ಕೆ ಬರಹವನ್ನು ಉಪಯೋಗಿಸಬಹುದು' ಎಂದು, ಅವರಿಗೆ ಬೇಕಾದ ಹಾಗೆ ಸರಿಪಡಿಸಿಕೊಟ್ಟೆ. ಇಂದು ಎಲ್ಲರೂ ಅವರವರುಗಳ ಬಂಧು ಮಿತ್ರರುಗಳಿಗೆ ಅವರವರ ಭಾಷೆಗಳಲ್ಲಿ ಪತ್ರಗಳನ್ನು ಟೈಪಿಸಿ ವಿ-ಅಂಚೆಯ ಮೂಲಕ ಕಳುಹಿಸಿದರು. ಎಲ್ಲರಿಗಿಂತ ಅನುಕೂಲವಾದದ್ದು ನನಗೆ. ಇನ್ನು ನಿರಂತರವಾಗಿ ಬ್ಯಾಂಕಿನಲ್ಲಿ ಕನ್ನಡದಲ್ಲಿ ನಾನು ನನ್ನ ವೈಯಕ್ತಿಕ ಕೆಲಸ ಮಾಡಿಕೊಳ್ಳಬಹುದು (ಹೆಚ್ಚಿನ ಸಮಯದಲ್ಲಿ ಅದನ್ನೇ ಮಾಡೋದು, ಎಷ್ಟಾದರೂ ಸರಕಾರೀ ಸ್ವಾಮ್ಯದ ಬ್ಯಾಂಕಲ್ಲವೇ).

ಬರಹ ಕ್ರಾಂತಿಯನ್ನು ಮಾಡಿದ ಸಂತೋಷ ನನಗಾಗಿದೆ.

~.~
  • tvsrinivas41 ರವರ ಬ್ಲಾಗ್
  • Login or register to post comments
  • 1161 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 18, 2005 - 12:12am — pavanaja

ವಿಂಡೋಸ್ ಎಕ್ಸ್ ಪಿ ಯಲ್ಲಿ ಕನ್ನಡ

pavanaja's picture

ನಿಮ್ಮ ಕಚೇರಿಯಲ್ಲಿ ವಿಂಡೋಸ್ ಎಕ್ಸ್ ಪಿ ಇದೆಯಾದಲ್ಲಿ ಕನ್ನಡವನ್ನು ಬಳಸಲು ನಿಮಗೆ ಬೇರೆ ಯಾವುದೇ ತಂತ್ರಾಂಶದ ಅಗತ್ಯವಿಲ್ಲ. ದಯವಿಟ್ಟು ಈ ಲೇಖನ ಓದಿ - http://www.bhashaindia.com/Patrons/Kannada/kannadaonwindows.aspx

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2005 - 12:17am — hpn

Re:ವಿಂಡೋಸ್ ಎಕ್ಸ್ ಪಿ ಯಲ್ಲಿ ಕನ್ನಡ

hpn's picture

ವಿಕಿಪೀಡಿಯ ಸಹಾಯ ಪುಟದಲ್ಲಿ ಇದರ ಕುರಿತು ಸಮಗ್ರ ಮಾಹಿತಿ ಇದೆ.

- ಹೆಚ್ ಪಿ

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2005 - 9:17am — tvsrinivas41

ಧನ್ಯವಾದಗಳು

tvsrinivas41's picture

ಧನ್ಯವಾದಗಳು ಸರ್,

ಈ ಕೊಂಡಿಯ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಸಂಪದಕ್ಕೆ ಬಂದ ತರುವಾಯವೇ ನಾಡಿಗರು ತಿಳಿಸಿದ ಬಗ್ಗೆ ಕೂಡ ಗೊತ್ತಾಗಿದ್ದು. ನನ್ನ ಮೂಲಕ ಸ್ನೇಹಿತರನೇಕರು ನಿಮ್ಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇನ್ನೂ ಎಷ್ಟೋ ತಿಳಿಯದ ವಿಷಯಗಳು ನಮ್ಮಲ್ಲಿ ಇರಬಹುದು. ಅವಕಾಶ ಬಂದಾಗ ನಿಮ್ಮಿಂದ ತಿಳಿದುಕೊಳ್ಳುವೆ, ಇತರರಿಗೂ ತಿಳಿಸುವೆ.

ಕನ್ನಡದ ಮೂಲಕ ಶ್ರೀ ಗಂಧದ ಪರಿಮಳ ಅನ್ಯಭಾಷೀಯರಿಗೂ ಬೀರೋಣ.

ಮತ್ತೆ ಸಿಗೋಣ

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2005 - 12:27am — hpn

ಲಿನಕ್ಸಿನಲ್ಲಿ ಕನ್ನಡ

hpn's picture

ಇನ್ ಸ್ಕ್ರಿಪ್ಟ್ ಬರುವವರಿಗೆ ಲಿನಕ್ಸಿನಲ್ಲಿ ಮತ್ತೇನೂ ಇನ್ಸ್ಟಾಲ್ ಮಾಡದೆಯೆ ಕನ್ನಡ ಸಪೋರ್ಟ್ ಸಿಗುತ್ತದೆ. ಬರಹ ಅಥವಾ ಐಟ್ರಾನ್ಸ್ ಬೇಕು ಎನ್ನುವವರಿಗೆ ಮಾತ್ರ ಒಂದಷ್ಟು ಹೆಚ್ಚಿನ ಕೆಲಸ. ಒಟ್ಟಾರೆ ನಾನು ಬಳಸುತ್ತಿರುವ ಅನುಭವದಿಂದ ಇಷ್ಟು ಮಾತ್ರ ಹೇಳಬಲ್ಲೆ... ಈಗ ಬರುವ ಪ್ರತಿಯೊಂದು ಲಿನಕ್ಸ್ ಡಿಸ್ಟ್ರಿಬ್ಯೂಶನ್ನಿನಲ್ಲಿಯೂ ಕನ್ನಡ ಸಪೋರ್ಟ್ ಲಭ್ಯವಿದೆ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
  • ಸಿಸ್ಟಂ ಅಡ್ಮಿನಿಸ್ಟ್ರೇಟರ್ ಅಪ್ರಿಶಿಯೇಶನ್ ಡೇ - ಜುಲೈ ೨೫
  • ಲಿನಕ್ಸಾಯಣ - ೧೪ - ಜಿಪಾರ್ಟೆಡ್ - ಪಾರ್ಟೀಷನ್ ಮಾಡಿ ನೋಡು
  • ನಾಯಿಮರಿ ಲಿನಕ್ಸ್ ಅಥವಾ ಮುದ್ದುಕುನ್ನಿ ಲಿನಕ್ಸ್
  • ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 119 ಅತಿಥಿಗಳು ಆನ್ಲೈನ್ ಇರುವರು.


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator