ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › tvsrinivas41 ರವರ ಬ್ಲಾಗ್

ಮುಂಬೈ ಕನ್ನಡಿಗನ ದಿನಚರಿ

August 5, 2005 - 6:50pm — tvsrinivas41

ಕಳೆದ ಮಂಗಳವಾರ ಮತ್ತು ಭಾನುವಾರದ ಮಳೆಯ ಆರ್ಭಟದಿಂದ ತತ್ತರಿಸಿದ್ದ ಜನರ ದೈನಂದಿನ ಕೆಲಸ ಕಾರ್ಯಗಳು ಇಂದಿಗೆ ಸಾಮಾನ್ಯ ಸ್ಥಿತಿಗೆ ಬಂದಿತು. ಅದು ಹೇಗೆ ಇಂದೇ ಸಾಮಾನ್ಯ ಸ್ಥಿತಿಗೆ ಬಂದಿತು ಅಂತ ಹೇಳ್ತೀರಿ ಅಂತ ನೀವು ಕೇಳಬಹುದು. ಇಂದು ಲೋಕಲ್ ಟ್ರೈನಿನಲ್ಲಿ ತುಂಬಾ ಜನಸಂದಣಿ ಇತ್ತು. ಮತ್ತು ನನ್ನ ಸ್ನೇಹಿತನೊಬ್ಬನ ಜೇಬಿಗೆ ಕತ್ತರಿ ಬಿದ್ದಿತ್ತು.
ಪ್ರತಿದಿನ ಟ್ರೈನ್ ಹತ್ತುವಾಗ, ಹತ್ತಿದ ಮೇಲೆ, ಇಳಿಯುವಾಗ ತುಂಬಾ ಕಷ್ಟ ಕೋಟಲೆಗಳನ್ನು ಅನುಭವಿಸುತ್ತೀವಿ. ನನಗೇನೋ ಅದು ಆಭ್ಯಾಸವಾಗಿ ಹೋಗಿದೆ. ಆದರೆ ಹೊಸಬರಿಗೆ ಇಲ್ಲಿಯವರೆವಿಗೆ ಇದ್ದ ಧೈರ್ಯವೆಲ್ಲಾ ಕಳೆದು ತಮ್ಮ ತಮ್ಮ ಊರುಗಳಿಗೆ ಮರಳೋಣ ಅಥವಾ ಕೆಲಸವೇ ಬಿಟ್ಟುಬಿಡೋಣ ಅಥವಾ ಆತ್ಮಹತ್ಯೆ (!) ಮಾಡಿಕೊಳ್ಳೋಣ ಎನ್ನುವಷ್ಟು ಬೇಸರವಾಗುತ್ತದೆ. ಅದೇ ಕೆಲವರಿಗೆ ಹಾಗೇನೂ ಅನ್ನಿಸುವುದಿಲ್ಲ. ಅವರು ವಿ.ಐ.ಪಿ. ಏನೋ ಅನ್ನುವಂತೆ ಅವರಿಗೆ ಕುಳಿತುಕೊಳ್ಳಲು ಸ್ಥಾನ ಸಿಕ್ಕುವುದು, ಒಳಗೆ ಹೋಗಲು ಅನುವಾಗುವುದು. ಅದು ಹೇಗೆ ಎನ್ನುವುದು ನನಗೆ ಚಿದಂಬರ ರಹಸ್ಯದಂತಾಗಿತ್ತು. ಇಂದು ಅದನ್ನು ಹತ್ತಿರದಿಂದ ಅನುಭವಿಸಿದೆ. ಅವರು ಅನುಸರಿಸುವ 3 ಅತ್ಯಂತ ಮುಖ್ಯ ಅಂಶವನ್ನು ಅನುಸರಿಸುವರು. ಒಂದು - ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿರುವರು. ಆದೂ ಜಿಗುಟು ಜಿಗುಟಾಗಿರುವ ಹರಳೆಣ್ಣೆ. ಅವರು ಹತ್ತಿರ ಬಂದರೇ ಎಲ್ಲರೂ ದೂರ ಸರಿಯುವರು.

ಎರಡು - ಮಳೆಗಾಗಿ ಛತ್ರಿ ಇಟ್ಟುಕೊಂಡಿರುವರು. ಅದು ಒದ್ದೆಯಾಗಿದ್ದಾಗ ಅದನ್ನು ಕೊಡವುದಿಲ್ಲ. ಆ ಕೆಲಸವನ್ನು ಗಾಡಿ ಹತ್ತಿದ ಮೇಲೆಯೇ ಮಾಡುವರು. ಅವರ ಛತ್ರಿಯಿಂದ ಸ್ನಾನ ಮಾಡಿಸಿಕೊಳ್ಳಲಿಚ್ಛಿಸಿದ ಜನ ಅವರಿಗೆ ಜಾಗ ಬಿಡುವರು. ಮಳೆಗಾಲ ಇಲ್ಲದಿದ್ದಾಗಲೂ ಛತ್ರಿ ಹಿಡಿದಿರುವರು. ಆಗೆಲ್ಲಿಂದ ಬರುವುದು ನೀರು ಅಂತ ಕೇಳ್ತೀರಾ? ಸಾರ್ವಜನಿಕ ನಲ್ಲಿ ಇದೆಯಲ್ಲ.

ಮೂರು - ಯಾವಾಗಲೂ ಹುರಿಗಡಲೆ ಅಥವಾ ಕಡಲೆಕಾಯಿ ಬೀಜ ತಿನ್ನುವರು. ಒಳಗೆ ಬಂದ ತಕ್ಷಣ ಅವರಿಂದ ಢರ್ ಭುರ್ ಝೇಂಕಾರ.

ನೀವೇ ಹೇಳಿ ಅವರುಗಳು ನಿಜಕ್ಕೂ ಬುದ್ಧಿವಂತರಲ್ಲವೇ? ಇನ್ನು ಮೇಲೆ ನಾನೂ ಅವರನ್ನು ಅನುಸರಿಸಲು ಪ್ರಯತ್ನಿಸುವೆ.

~.~
  • tvsrinivas41 ರವರ ಬ್ಲಾಗ್
  • Login or register to post comments
  • 959 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 6, 2005 - 5:01pm — hpn

ಶಬ್ಧದ ಉಪಯೋಗ

hpn's picture

"ಜನಗಳು" ಎಂದು ಬರೆಯೋದಕ್ಕಿಂತ "ಜನರು" ಎಂದು ಬರೆದರೆ ಚೆನ್ನಾಗಿರುತ್ತದೆ, ಅಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 6, 2005 - 5:20pm — hpn

ಒಳ್ಳೆಯ ಪ್ಲಾನ್ ಅಲ್ವೆ? ;)

hpn's picture

ಅವರುಗಳು ಅನುಸರಿಸಿರುವುದು ಒಳ್ಳೆಯ ಐಡಿಯಾಗಳೆ, ಆದರೆ ನೀವೂ ಕಡಲೇಕಾಯಿ ತಿಂದು ಡರ್ ಪುರ್ ಎಂದುಕೊಂಡು ಹೋಗಲು ಸಾಧ್ಯವೆ? Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 6, 2005 - 6:00pm — tvsrinivas41

ಸರಿ

tvsrinivas41's picture

ಮೊದಲಿಗೆ ಪದ "ಜನಗಳು" ತಿದ್ದಿರುವೆ. ಇದು ಎರಡನೇ ಬಾರಿ . ಹಳೆಯ ಅಭ್ಯಾಸಗಳು ಅಷ್ಟು ಸುಲಭವಾಗಿ ಸಾಯುವುದಿಲ್ಲವಂತೆ.

ಹೌದು ನಾವು ಅವರಂತೆ ಇರೋದಿಕ್ಕಾಗೋದಿಲ್ಲ. ತಲೆಗೆ ಹಾಗೆ ಎಣ್ಣೆ ಹಚ್ಚಿಕೊಳ್ಳಲೂ ಆಗುವುದಿಲ್ಲ, ಛತ್ರಿಯಲ್ಲಿಯ ನೀರನ್ನು ಎಲ್ಲರ ಮೇಲೆ ಕೊಡವಲಾಗುವುದಿಲ್ಲ. ಸಾರ್ವಜಿನಿಕವಾಗಿ ಅಪಾನವಾಯುವಂತೂ ಬಿಡಲಾಗುವುದಿಲ್ಲ, ನಿಂತುಕೊಂಡಂತೂ ಹೋಗುವ ಶಕ್ತಿ ಇದೆ.

ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂದಿನ ಡೈರಿಯಿಂದ
  • ಹೃದಯವಂತಿಕೆ
  • ರೆವೆರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ರ ಬಗ್ಗೆ ಒಂದೆರಡು ಮಾತುಗಳು
  • 7.22 ಲೋಕಲ್
  • ಏಕೆ ಹೀಗಾಗುವುದು?
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • manoharnv
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:37am
  • gurubaliga
    ಉ: ಅವರು ಯಾರಿರಬಹುದು?
    October 11, 2008 - 11:29am
  • gurubaliga
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:25am
  • Deeparavishankar
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 11, 2008 - 11:13am
  • Deeparavishankar
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 11:07am
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 113 ಅತಿಥಿಗಳು ಆನ್ಲೈನ್ ಇರುವರು.


ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator