ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › thewiseant ರವರ ಬ್ಲಾಗ್

ನನ್ನ ಮೆಚ್ಚಿನ ಪುಸ್ತಕ

March 26, 2007 - 7:29pm — thewiseant

ನಾನು ಓದಿದ ಹಲವಾರು ಪುಸ್ತಕಗಳ ಪೈಕಿ ನನ್ನ ಮೇಲೆ ಸತ್ಪರಿಣಾಮ ಬೀರಿದ್ದು ಶ್ರೀ ಪರಮಹಂಸ ಯೋಗಾನಂದರ "ಯೋಗಿಯ ಆತ್ಮಕತೆ". Autobiography of a Yogi ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ 60 ವರ್ಷಗಳ ನಂತರವೂ ವಿಶ್ವದಾದ್ಯಂತ ಪ್ರಸಿದ್ದವಾಗಿದೆ. ಬಹುತೇಕ ಎಲ್ಲಾ ಭಾರತೀಯ ಹಾಗು ವಿಷ್ವದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ. ಪರಮಹಂಸ ಯೋಗಾನಂದರು ಒಬ್ಬ ಪ್ರಸಿದ್ದ ಯೋಗಿ. ಇದೊಂದು ಯೋಗಿಗಳ ಬಗ್ಗೆ ಒಬ್ಬ ಯೋಗಿಯೇ ಬರೆದ ಅಪರೂಪದ ಕೃತಿ. ತಾವು ಕಂಡು ಅನುಭವಿಸಿದ ಘಟನೆಗಳನ್ನು ಪ್ರಾಮಾಣಿಕವಾಗಿ ತಿಳಿ ಹಾಸ್ಯದೊಂದಿಗೆ ಹೇಳುತ್ತಾ ಓದುಗರನ್ನು ಯೋಗ ಮತ್ತು ಆಧ್ಯಾತ್ಮದ ವಿಷಯಗಳಿಗೆ ಪರಿಚಯಿಸುತ್ತಾರೆ.

ಎರಡು ದೇಹಗಳ ಸಂತ, ಗಾಳಿಯಲ್ಲಿ ತೇಲಾಡುವ ಸಂತ, ಪರಮಸುಖಿಯಾದ ಉಪಾಸಕ, ಗಂಧ ಬಾಬ, ಹುಲಿ ಸ್ವಾಮಿ, ನಿಧ್ರಿಸದ ಸಂತ, ನಿರಾಹಾರ ಯೋಗಿನಿ, ಆನಂದಮಯೀ ಮಾ ಮುಂತಾದವರೊಡನೆ ನಡೆದ ತಮ್ಮ ಭೇಟಿಯನ್ನು ವಿವರವಾಗಿ ತಿಳಿಸುತ್ತಾರೆ. ಕವಿ ರವೀಂದ್ರನಾಥ ಟ್ಯಾಗೋರ್, ಮಹಾತ್ಮಾ ಗಾಂಧಿ, ಜಗಧೀಶ್ ಚಂದ್ರ ಬೋಸ್ ರೊಂದಿಗಿನ ಭೇಟಿಯ ವಿವರಗಳು ಮಹತ್ವಪೂರ್ಣ. ಪವಾಡಗಳ ನಿಯಮಗಳು, ಭಾರತದ ಪ್ರಾಚೀನ ದೈವ ಸಾಕ್ಷಾತ್ಕಾರ ವಿಜ್ಞಾನವೆನಿಸಿದ ಕ್ರಿಯಾ ಯೋಗ, ಸಾವಿನಾಚೆಗಿನ ಬದುಕನ್ನು ಗತಿಸಿ ಸುಮಾರು ನಾಲ್ಕು ತಿಂಗಳ ಬಳಿಕ ಪುನರುಜ್ಜೀವನಗೊಂಡ ತಮ್ಮ ಪೂಜ್ಯ ಗುರು ಶ್ರೀ ಯುಕ್ತೇಶ್ವರರಿಂದ ದೊರಕಿದ ಅಪೂರ್ವವಾದ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಸಾವಿಲ್ಲದ ಚಿರಯವ್ವನದ ಗುರು ಶ್ರೀ ಮಹಾವತಾರ ಬಾಬಾಜಿಯವರ ಇರುವಿಕೆ ಮೊತ್ತಮೊದಲ ಬಾರಿಗೆ ಸಾರ್ವಜನಿಕರಿಗೆ ಈ ಪುಸ್ತಕದಿಂದ ತಿಳಿಯುವಂತಾಯಿತು. ಇವರ ಇಚ್ಛೆಯಂತೆ ಆಧ್ಯಾತ್ಮ ಪಿಪಾಸೆಯಿಂದ ಕೂಡಿದ ಪಾಶ್ಚಿಮಾತ್ಯರಿಗೆ ಯೋಗ ವಿದ್ಯೆಯನ್ನು ದಯಪಾಲಿಸಲು 1920 ರಲ್ಲಿ ಅಮೇರಿಕಕ್ಕೆ ಹೋಗಿ ಅಭೂತಪೂರ್ವ ಯಶಸ್ಸುಗಳಿಸಿದ ವಿವರವಿದೆ. 1935-36ರ ತಮ್ಮ ಭಾರತದ ಭೇಟಿಯ ವಿವರಗಳು ತುಂಬಾ ಸ್ಸ್ವಾರಸ್ಯಕರ. ತಮ್ಮ ಮಹಾಸಮಾಧಿಯಾಗುವ ಮೊದಲು 1946ರಲ್ಲಿ ಪ್ರಕಟಗೊಂಡ ಈ ಪುಸ್ತಕಕ್ಕೆ ನಂತರದ ಬೆಳವಣಿಗೆಗಳನ್ನು ಹೇಳುತ್ತಾ ಓದುಗರ ಅನೇಕ ಪ್ರಶ್ನೆಗಳಿಗೆ ಉತ್ತರವಾಗಿ ಯೋಗ ಮತ್ತು ಆಧ್ಯಾತ್ಮದ ಬಗ್ಗೆ ಇನ್ನಷ್ಟು ವಿವರಗಳನ್ನು ಒಂದು ಹೆಚ್ಚುವರಿ ಅಧ್ಯಾಯದಲ್ಲಿ ನೀಡಿದ್ದಾರೆ.
ಸುಲಲಿತವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ ಧರ್ಮ ದೇಶ ಕಾಲಗಳನ್ನು ಮೀರಿ ಜನಪ್ರಿಯವಾಗಿರುವುದರ ಕಾರಣ ಇದು ಸತ್ಯವೂ ಶಿವವೂ ಸುಂದರವೂ ಆಗಿದೆ. ಎಲ್ಲರ ಮನೆ ಮನಗಳಲ್ಲೂ ಈ ಪುಸ್ತಕ ಬೆಳಗಲಿ ಎಂಬುದೇ ನನ್ನ ಆಶಯ.

ಎನ್. ಅಂಜನ್ ಕುಮಾರ್
thewiseant@yahoo.co.in

~.~
  • thewiseant ರವರ ಬ್ಲಾಗ್
  • Login or register to post comments
  • 1094 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 27, 2007 - 12:01pm — Shyam Kishore

ದನಿಗೂಡು: ನನ್ನ ಮೆಚ್ಚಿನ ಪುಸ್ತಕ

Shyam Kishore's picture

ಹೌದು, ಈ ಪುಸ್ತಕ ಬಹಳ ಸೊಗಸಾಗಿದೆ. ಯೋಗಾನಂದರವರು ತಮ್ಮ ಗುರುಗಳನ್ನು ಶಂಕಿಸಿ, ಬೇರೆ ಗುರುಗಳನ್ನು ಹುಡುಕಲು ತೊಡಗಿದಾಗ ನಡೆವ ಘಟನೆಗಳೂ ಈ ಪುಸ್ತಕದ ಮುಖ್ಯ ಅಂಶಗಳಲ್ಲೊಂದು ಅಲ್ಲವೇ? ಹಾಗೇ ನೀವು ಸ್ವಾಮಿ ರಾಮ ಅವರ "ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" ಓದಿದ್ದೀರಾ? ಓದಿಲ್ಲವಾದಲ್ಲಿ ಅದನ್ನೂ ಒಮ್ಮೆ ಓದಿ. ಬಹಳ ಸುಂದರವಾದ ಪುಸ್ತಕ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 27, 2007 - 8:18pm — thewiseant

Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ

thewiseant's picture

ಪ್ರಿಯ ಶ್ಯಾಮ್ ಕಿಶೋರ್,

ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ಸ್ವಾಮಿ ರಾಮರ "Living with the Himalayan masters" ಪುಸ್ತಕ ನನ್ನ ಬಳಿ ಇದೆ. ಸುಂದರವಾದ ಪುಸ್ತಕ. ಅದರಲ್ಲಿರುವ ವಿಷಯಗಳು ತುಂಬಾ ಆಸಕ್ತಿಪೂರ್ಣ. ಉದಾಹರಣೆಗೆ ಕಾಶ್ಮೀರದಲ್ಲಿ ಯೇಸು ವಾಸವಿದ್ದ ಮಂದಿರ, ಉಷಾ ಭಾಷೆಯ ಅಸ್ತಿತ್ವ ಮುಂತಾದುವು.

ಯೋಗಿಯ ಆತ್ಮ ಕಥೆ ಯಾವ ಭಾಷೆಯಲ್ಲಿ ಓದಿದ್ದೀರಿ?. ನನಗೆ ಇದರ ಕನ್ನಡ ಭಾಷಾಂತರದ ಬಗ್ಗೆ ಅಷ್ಟು ಸಮಾಧಾನವಿಲ್ಲ. ಮೊಲದ autobiography of a yogi ತುಂಬಾ ಸೊಗಸಾಗಿದೆ.ಓದಿಲ್ಲವಾದರೆ ಒಮ್ಮೆ ಓದಿ. ಕನ್ನಡಕ್ಕೆ ಭಾಷಾಂತರಿಸಿದವರನ್ನು ಒಮ್ಮೆ ಭೇಟಿ ಮಾಡಿದ್ದೆ. ಅವರು ಹೇಳಿದ ಪ್ರಕಾರ ಇದರ ಭಾಷಾಂತರ ಒಂದು ತಂಡದಿಂದ ಮಾಡಲಾಗಿತ್ತು. ಭಾಷಾಂತರದ ಕೆಲಸ ಎಷ್ಟು ಕಷ್ಟವೆಂಬುದು ನನ್ನ ಸ್ವಂತ ಅನುಭವದಿಂದ ನನಗೆ ತಿಳಿದಿದೆ.

ನನ್ನೊಡನೆ ವ್ಯವಹರಿಸಲು ನಿಮಗೆ ಸ್ವಾಗತ.
ನಿಮ್ಮ ವಿಶ್ವಾಸಿ,
ಅಂಜನ್
thewiseant@yahoo.co.in
(yahoo messenger ನಲ್ಲೂ ಲಭ್ಯ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 28, 2007 - 11:17am — Shyam Kishore

ಉ: Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ

Shyam Kishore's picture

ನಾನು "ಯೋಗಿಯ ಆತ್ಮಕಥೆ"ಯ ಕನ್ನಡ ಅನುವಾದ ಮಾತ್ರ ಓದಿದ್ದೀನಿ. ಸಾಧ್ಯವಾದಾಗ ಇಂಗ್ಲಿಷ್ ಮೂಲ ಓದಬೇಕು. ಆದರೆ "ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ"ಯನ್ನು ಇಂಗ್ಲಿಷ್ - ಕನ್ನಡ ಎರಡರಲ್ಲೂ ಓದಿದ್ದೆ. ಕನ್ನಡ ಅನುವಾದ ಚೆನ್ನಾಗಿದೆ ಅನ್ನಿಸಿತು.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 24, 2007 - 7:53pm — venkatesh

ಉ: ನನ್ನ ಮೆಚ್ಚಿನ ಪುಸ್ತಕ

venkatesh's picture

dear kumar,

I will really do it. thanks.
venkatesh

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯೋಗಿಯ ಆತ್ಮ ಕಥೆ
  • ಭಾರತದ ಜ್ಞಾನಾವತಾರ
  • 'ಕನ್ನಡ ಪುಸ್ತಕ ಮಾರಾಟ ಮಳಿಗೆ' ಉದ್ಘಾಟನಾ ಸಮಾರಂಭ- ಮುಂಬೈನಲ್ಲಿ !
  • ನಾ ಮೆಚ್ಚಿದ ಪುಸ್ತಕ: "ಶ್ರೀ ಕರ್ನಾಟಕ ಭಕ್ತ ವಿಜಯ"
  • ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ
Syndicate content

ಲೇಖಕರು

thewiseant's picture

ಪೂರ್ಣ ಹೆಸರು
ಎನ್. ಅಂಜನ್ ಕುಮಾರ್

ಪರಿಚಯ

ಯೋಗ, ಆಧ್ಯಾತ್ಮ , ಗಾಂಧೀವಾದ, ಓದು, ಬರವಣಿಗೆ, ಮಕ್ಕಳ ಸಾಹಿತ್ಯ , ಇಂಟರ್‍ನೆಟ್ ಮುಂತಾದುವು ನನ್ನ ಆಸಕ್ತಿಯ ವಿಷಯಗಳು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
  • manjunath s reddy
    ಉ: ಜೀವ ಕಾಯುವುದೇತಕೆ?
    September 8, 2008 - 1:41am
  • manjunath s reddy
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 1:31am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 8, 2008 - 1:29am
  • nekkar_guru
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 8, 2008 - 1:07am
  • mayakar
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 12:16am
  • raghava
    ಉ: ಮೊದಲ ಚಿತ್ರ
    September 8, 2008 - 12:13am
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator