sushil ರವರ ಬ್ಲಾಗ್
ಹಾಸ್ಯ-ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಸಿನಿಮಾ ಹಾಗು ರಾಜ್ ಸಿನಿಮಾ ಹಾಲಿವುಡ್ನಲ್ಲಿ..
June 28, 2008 - 2:48am — sushil****************************************************
ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು
****************************************************
Bend it like beckham____________ಬಸಪ್ಪನ ಗತೆ ಬಗ್ಗಿಸು
What Lies Beneath?____________ಬಡ್ಯಾಗ್ ಏನ್ ಐತಿ?
Saving Private Ryan____________ಹವಾಲ್ದಾರ್ ರಾಮ್ಯಾನ ಉಳಸ್ರಿ
Honey I shrunk the kids!________ಏ ಇಕಿನ,ನಾ ಹುಡುಗನ್ನ ಈಟ ಮಾಡೀನಿ
Body heat ___________________ಮೈಯಾಗಿನ್ ಬಿಶಿ
V for vendetta________________ವ ಅಂದ್ರ ವಂಡತನ ಮುಂದೆ ಓದಿ »

ಆ ಚಿಕ್ಕ ಹುಡುಗಿ..
June 24, 2008 - 1:42pm — sushilಚಿಕ್ಕಂದಿನಲ್ಲಿ ಒಮ್ಮೆ ಅಮ್ಮ ಹಬ್ಬಕ್ಕೆ ತರ ಹೇಳಿದ ಎಣ್ಣೆ,ತರಕಾರಿ ತರಲು ಅಂಗಡಿಯೊಂದಕ್ಕೆ ಹೋಗಿದ್ದೆ. ಖರೀದಿಸುತ್ತಿರುವಾಗ ಒಬ್ಬ ಹುಡುಗಿ ಕಂಕುಳಲ್ಲಿ ಹಸುಳೆಯೊಂದನ್ನು ಹಿಡಿದುಕೊಂಡು ಬಂದಳು. ಬಡವರೆಂದು ನೋಡಿದೊಡನೆ ತಿಳಿಯುತ್ತಿತ್ತು.
ಬಂದವಳೇ "ಅರ್ಧ ಕಾಲು ಕೆಜಿ ಕಡ್ಲೆಹಿಟ್ಟು ಕೊಡಿ" ಎಂದಳು.
ಅಂಗಡಿಯಾತನಿಗೆ ಅರ್ಥವಾಗಲಿಲ್ಲ. ಮುಂದೆ ಓದಿ »

ಐಟಿ ಬಾಳು
June 16, 2008 - 4:31pm — sushilಕಳೆಯುವೆ ನಾನು ಎಲ್ಲ ದಿನಗಳ
ಹಗಲೂ ರಾತ್ರಿ ದುಡಿಯುತಲಿ
ಉಳಿಸಿದ ನಿದ್ದೆಯ ಮಾಡಿ ಮುಗಿಸುವೆ
ಒಮ್ಮೆಲೆ ವಾರಾಂತ್ಯದಲಿ
ತಿಂಡಿಯೊ ಊಟವೊ ಯಾವುದು ತಿಳಿಯದು
ಮುಳುಗಿಹೆ ನಾ ಪ್ರಾಜೆಕ್ಟಿನಲಿ
ನನ್ನವರೆಲ್ಲರ ಗಮನವೆ ಇಲ್ಲ
ಪ್ರಾಜೆಕ್ಟೇ ತುಂಬಿದೆ ತಲೆಯಲ್ಲಿ
ಕ್ಲೈಂಟ್ ಮಹಾಶಯನ ಒಲುಮೆಗೆ
ನಾಟಕ ರಂಗವೆ ಸಜ್ಜಾಗಿದೆ ಇಲ್ಲಿ
ಕೃತಕ ನಗೆಯನು ಕೃತಕ ಜೀವನವನ್ನು ಮುಂದೆ ಓದಿ »

ಮುಂದುವರಿವ ಗುಣ(ಪ್ರೇರಕ ಪ್ರಸಂಗಗಳು)
June 14, 2008 - 3:28am — sushilದಿನದಂತೆ ಅಂದೂ ಆ ಬಾಲಕನು ಶಾಲೆಗೆ ಹೊರಡಲು ಸಿದ್ಧನಾದ.ಪಾಟಿ ಚೀಲ ಹೆಗಲಿಗೇರಿಸಿ ಹೊರಟ.
ನಾಲ್ಕು ಹೆಜ್ಜೆ ನಡೆದು ಒಮ್ಮೆಲೇ ನಿಂತ.ಹೊರಳಿ ಬಂದು 'ಅಪ್ಪಾ,ನಾನು ಶಾಲೆಗೆ ಹೋಗುವದಿಲ್ಲ' ಎಂದ.
'ಯಾಕೆ ಮಗು! ನೀನು ಜಾಣ ಬಾಲಕ.ಶಾಲೆಗೇಕೆ ಒಲ್ಲೆ?' ತಂದೆಯು ಗಾಬರಿಯಾಗಿ ಕೇಳಿದ.
ಶಾಲೆಯಲ್ಲಿ ಬಾಲಕರೆಲ್ಲ ನನಗೆ 'ಹಳ್ಳಿ ಗುಗ್ಗು' ಎಂದು ಗೇಲಿ ಮಾಡುತ್ತಾರೆ. ಮುಂದೆ ಓದಿ »

- Login or register to post comments
- 181 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಹೀಗೊಂದು ಸಂಜೆ...
June 7, 2008 - 6:09pm — sushilಹೀಗೊಂದು ಸಂಜೆ ಬಿಡುವಾಗಿದ್ದೆ
ಯಾರೂ ಜೊತೆಯಿರದೆ ಹೊರನಡೆದಿದ್ದೆ
ಎಲೆಗಳ ಮೇಲೆ ಹೊನ್ನಿನ ಲೇಪನ
ಬಿಡಿಸುತಲಿತ್ತು ಸೂರ್ಯನ ಕಿರಣ
ನಸುಬಿಸಿ ಶಾಖವ ರವಿ ಸೂಸಿದ್ದ
ದಿನವಿಡೀ ದಣಿದು ತಾ ಮುಳುಗುತಲಿದ್ದ
ಸುಂದರ ಸಂಜೆಗೆ ಕೋಗಿಲೆಯುಲಿಯಿತು
ಮನಸಲಿ ನೆಮ್ಮದಿ ತಾ ಬಂದಿಳಿಯಿತು
ಉಳಿದಿಹ ಕೊಂಚ ದುಗುಡವೆಲ್ಲವ
ತಂಗಾಳಿಯು ತಾ ಕದ್ದೊಯ್ದಿತ್ತು.


RSS: