ಅಕ್ಷರೋದಿ ಸೂತ್ರ
ಗೆಳೆಯರೇ, ನಾನು ಇನ್ಸಕ್ರಿಪ್ಟ್ ಕಲಿಸುವ ಒಂದು ಪ್ಲಗಿನ್ನನ್ನು ಬರೆಯುತ್ತಾ (ಇಂಪು) ಇದ್ದೀನಿ. ಅದನ್ನು ಬಳಸಿ ನೀವುಗಳು ಇನ್ಸಕ್ರಿಪ್ಟ ಕಲಿಯಬಹುದು. ಇದರ ಮೊದಲ ಆವೃತ್ತಿ ನಿಮಗೆ ಆದಷ್ಟು ಬೇಗ ಸಿಗುವಂತೆ ಮಾಡುತ್ತೇನೆ. ಆ ನಿಟ್ಟಿನಲ್ಲಿ ಒಂದು ಸಣ್ಣ ನೆರವು ಬೇಕಾಗಿದೆ. ಈ ಪ್ಲಗಿನ್ ಬೆಳೆಸುವಲ್ಲಿ ನೀವುಗಳೂ ಸಕ್ರಿಯರಾಗಬೇಕು ಎಂಬ ಆಶಯದೊಂದಿಗೆ ಈ ನೆರವು ಕೋರುತ್ತಿದ್ದೇನೆ.
೧. ಈಗ ನೋಡಿ, ಒಬ್ಬ ಯೂಸರ್ ಇಂಪನ್ನು ಓಡಿಸ್ತಾ ಇದ್ದಾನೆ ಅಂತಿಟ್ಟುಕೊಳ್ಳಿ.
೨. ಇಂಪು ಒಂದು ಅಕ್ಷರವನ್ನು ಟೈಪಲು ಯೂಸರಿಗೆ ಕೇಳಿತ್ತೆ.
೩. ಯೂಸರ್ ಸರಿಯಾದ ಅಕ್ಷರವನ್ನು ಟೈಪುವ ತನಕ ಮುಂದೆ ಹೋಗುವುದಿಲ್ಲ.
೪. ಒಂದು ವೇಳೆ ಯೂಸರ್ ಸರಿಯಾದ ಅಕ್ಷರ ಟೈಪಿದರೆ, ಮುಂದಿನ ಅಕ್ಷರವನ್ನು ಇಂಪು ತೋರಿಸಬೇಕು.
ಈ ಮುಂದಿನ ಅಕ್ಷರವನ್ನು ಆರಿಸುವ ಸೂತ್ರಕ್ಕೆ (Random Alphabet Prediction) ಅಕ್ಷರೋದಿ ಅಂತ ಹೆಸರಿಟ್ಟಿದ್ದೇನೆ. ಈ ಟೈಪಿಂಗ್ ಟ್ಯೂಟರುಗಳ alphabet prediction ಬಗ್ಗೆ ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಇದ್ದರೆ ಒಳ್ಳೆಯ ಪಾಯಿಂಟರ್ ನೀಡಿ ಸಹಕರಿಸಿ.

- Sunil Jayaprakash ರವರ ಬ್ಲಾಗ್
- Login or register to post comments
- 797 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಅಕ್ಷರೋದಿ ಸೂತ್ರ
ಮುಂದಿನ ಅಕ್ಷರ ಪ್ರೆಡಿಕ್ಟ್ ಮಾಡುವ ಕೆಲಸವನ್ನ ಡ್ಯಾಶರ್ ಅನ್ನೋ ತಂತ್ರಾಂಶ ಆಗಲೇ ಸುಮಾರು ಮಟ್ಟಿಗೆ ಮಾಡುತ್ತದೆ. Wheels re-invent ಮಾಡುವ ಬದಲು ಇದರಲ್ಲಿರುವ ಮಾಡ್ಯೂಲುಗಳನ್ನೇ ಬಳಸಿ ಈ ಕೆಲಸಕ್ಕೆ ಒಗ್ಗುವಂತೆ ಉತ್ತಮಪಡಿಸಬಹುದು.
ಡ್ಯಾಶರ್ ಬಗ್ಗೆ ನಾನು ೨೦೦೫ ರಲ್ಲಿ ಇಲ್ಲೇ ಸಂಪದದಲ್ಲೇ ಬರೆದಿದ್ದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಕ್ಷರೋದಿ ಸೂತ್ರ
ಹರಿ, dasher 4.6.0 ನಾ ಗಟ್ಸಿಗೆ ಹಾಕ್ಕೊಂಡು ಚೆಕ್ ಮಾಡ್ತಾ ಇದ್ದೆ. ಕನ್ನದ ತಗೊಂಡ್ರೆ /select ಮಾಡಿದ್ರೆ segfault! source ತಗೊಂಡು ನೋಡ್ತಾ ಇದೀನಿ ....
primary analysis ಮಿಂಚಂಚೆಯ ಮುಖಾಂತರ ಕಳ್ಸಿದೀನಿ ...
--_ರಾಘವ_
http://raghavan.vinay.googlepages.com
ಉ: ಅಕ್ಷರೋದಿ ಸೂತ್ರ
ಕೈಕೆಸರಾಗುವಷ್ಟು ಬೇರೆ ಕೆಲಸವಿರುವುದರಿಂದ, ಈ "ಇಂಪು" ಸದ್ಯಕ್ಕೆ ನಿಂತಿದೆ. ಯಾರಿಗಾದರೂ ಈಗ ಆಗಿರುವಷ್ಟು ಕೋಡ್ ಬೇಕಿದ್ದರೆ ಮಿಂಚಿ
- ಐ ಮೀನ್, ಮಿನ್ನಂಚೆ ಕಳ್ಸಿ.