ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › srikanth ರವರ ಬ್ಲಾಗ್

ನನ್ನ ನ್ಯೂ ಇಯರ್ ರೆಸಲ್ಲೂಷನ್ ಗಳು

January 14, 2006 - 10:24pm — srikanth

ವರ್ಷಾರಂಭದಲ್ಲಿ ಹೊಸ ವರ್ಷದ ರೆಸೊಲ್ಯೂಷನ್ ಗಳನ್ನು ನಿರ್ಧರಿಸೋದು, ಅದರ ಬಗ್ಗೆ ವಿನೋದಪೂರ್ಣವಾಗಿ ಬರೆಯೋದು ಈಗ ಸಾಮಾನ್ಯ ವಿಷಯವಾಗಿರುವಾಗ, ನಾನು ಬರೆಯೋದ್ರಲ್ಲೇನು
ಹೊಸ ವಿಷಯವಿಲ್ಲ. ಆದರೆ ಈ ಅಭ್ಯಾಸ ನನಗೆ ಹೊಸದು. ಬೆಂಗಳೂರಿಗೆ ಬಂದು ಒಂದುವರೆ ವರ್ಷವಾಗಿರುವಾಗ,ಕೊಂಚವಾದರೂ ಮೆಟ್ರೊ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕೆಂದು ನಿರ್ಧರಿಸಿ ರೆಸಲ್ಯೂಷನ್ ಗಳ ಬಗ್ಗೆ ಯೋಚಿಸತೊಡಗಿದೆ
ಕಳೆದೆರಡು ಹುಟ್ಟುಹಬ್ಬಗಳಲ್ಲಿ ಇಂತಹ ನಿರ್ಣಯಗಳ ಬಗ್ಗೆ ಯೋಚಿಸಿದ್ದನಾದರೂ, ಗಂಭೀರ ಆಲೋಚನೆಯಲ್ಲಿ ತೊಡಗಿರಲಿಲ್ಲ,ಇನ್ನು ಕಾರ್ಯಗತಗೊಳಿಸುವುದು ದೂರದ ಮಾತು.
ಮೊದಲ ಬಾರಿಗೆ ಹೊಸ ವರ್ಷದ ನಿರ್ಣಯಗಳ ಬಗ್ಗೆ ಗಂಭೀರ ಆಲೋಚನೆಯಲ್ಲಿ ತೊಡಗಿದಾಗ , ಭಾರತೀಯ ಪಂಚಾಂಗದ ಪ್ರಕಾರ ಇದು ಹೊಸವರ್ಷವೇ ಅಲ್ಲದಿರುವಾಗ,ಇಂತಹ
ಯೋಚನೆಗಳನ್ನು ಮುಂದಿನ ಯುಗಾದಿಯವರೆಗೆ ಮುಂದೂಡಬಹುದೆಂದು, ಹುಟ್ಟಿದಾಗಿನಿಂದ ನನ್ನಲ್ಲಿ ನೆಲೆಸಿರುವ ಸೋಮಾರಿತನ "ಸೋಮಾರಿ ಶ್ರೀಕಾಂತ" ನ ದೃಷ್ಟಿಕೋನದಿಂದ ಹೇಳಿತು.
ಭಾರತೀಯ ಪಂಚಾಂಗವನ್ನು ಸಮಯ/ಕಾಲದ ಅಳತೆಗೋಲಾಗಿ ತೆಗೆದುಕೊಂಡರೆ, ಚಾಂದ್ರಮಾನ ಯುಗಾದಿಯು ಹೊಸವರ್ಷವೋ ಅಥವ ಸೌರಮಾನ ಯುಗಾದಿಯೋ ?
ಎಂದೆಲ್ಲಾ ನಿರ್ಣಯ ಮಾಡಬೇಕಾಗಬಹುದು,ಹಾಗಾಗಿ ಇಂದಿಗಿಂತ ಹೆಚ್ಚಾಗಿ ಬುದ್ಧಿಗೆ ಕೆಲಸಕೊಡಬೇಕಾಗುತ್ತದೆ ಎಂದು ಯೋಚಿಸಿ,ಜನವರಿಯಲ್ಲೇ ನಿರ್ಣಯಗಳ ಬಗ್ಗೆ ಯೋಚಿಸುವುದು ಒಳಿತೆನ್ನಿಸಿತು.ಸೋಮಾರಿ ಶ್ರೀಕಾಂತನೂ ಈ ನನ್ನ "ಬುದ್ಧಿಮತ್ತೆ"ಗೆ ತಲೆದೂಗಿದನು.ಯೋಚಿಸಲು ಪ್ರಾರಂಭಿಸಿದಾಗ ಏನೂ ಹೊಳೆಯದಿದ್ದಾಗ ಸ್ವಲ್ಪ ತಳಮಳವಾಯಿತು. ಆದರೆ ಸ್ವಲ್ಪ ಸಮಯದಲ್ಲೇ ವಾಂತಿಯಷ್ಟೇ ಸರಾಗವಾಗಿ ಹಾಗು ಒಟ್ಟಿಗೆ ಹಲವು ಅಭ್ಯರ್ಥಿ ನಿರ್ಣಯಗಳು ನೆನಪಾದವು.
ಆದ್ರೆ ಹೊಸವರ್ಷ ಪ್ರಾರಂಭವಾಗಿ ಮೊದಲ ತಿಂಗಳ ಕೊನೆ ಹತ್ತಿರವಿರುವಾಗ ಈಗ ಹೊಸವರ್ಷದ ನಿರ್ಣಯಗಳ ಬಗ್ಗೆ ಯೋಚಿಸೋದು ಸಮಂಜಸವಲ್ಲವೆಂದು ಎರಡನೇ ಬಾರಿ ಆಲಸಿ ಶ್ರಿಕಾಂತ ಬುದ್ಧಿವಾದ
ಹೇಳಿದನು. ಆದರೆ ಸಮಯಪರಿಪಾಲನೆಯಲ್ಲಿ ಭಾರತೀಯರ ಇತಿಹಾಸ ಹಾಗು track recordಗಳನ್ನು ಪ್ರತಿವಾದವಾಗಿ ಮಂಡಿಸಿ, ಇನ್ನೂ ಕಾಲ ಮಿಂಚಿಲ್ಲವೆಂದು ಆಗ್ರಹಪೂರ್ವಕವಾಗಿ ಒಪ್ಪಿಸಿದೆ.
ನಿರ್ಣಯಗಳನ್ನು ಪಟ್ಟಿ ಮಾಡಲು ಪ್ರಾರಂಭಿಸಿದಾಗ ಅದನ್ನು ವಿವಿಧ ಆಯಾಮಗಳಲ್ಲಿ ವಿಂಗಡಿಸಬೇಕೆನ್ನಿಸಿತು. ತಂತ್ರಾಂಶ ಅಭಿಯಂತನಾಗಿ, ಓದುಗ ಕಮ್ ಬರಹಗಾರನಾಗಿ, ಹಾಗು ಬರಿಯ ಶ್ರೀಕಾಂತನಾಗಿ ನಿರ್ಣಯಗಳನ್ನು ವಿಂಗಡಿಸಿ,
ಪ್ರತಿಯೊಂದರಲ್ಲಿ ನಿರ್ಣಯಗಳನ್ನು ಪಟ್ಟಿ ಮಾಡಿ, ಶೋಧಿಸಿ, ಸಣ್ಣ ಪಟ್ಟಿಯನ್ನು ಮಾಡಲು ನಿರ್ಧರಿಸಿದೆ.

ಯಾವುದಾದರೂ certification ಒಂದನ್ನು ಪೂರ್ಣಗೊಳಿಸಬೇಕು ,IPv6 ತಂತ್ರಜ್ಞಾನವನ್ನು ಚೆನ್ನಾಗಿ ಓದಬೇಕು ಎಂದೆಲ್ಲ
ಸುಲಭವಾಗಿ ಕೆಲವು ವಿಷಯಗಳು ಹೊಳೆದವು.ಆದರೆ ಕೆಲಸದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಸೀಮಿತ ಮಾತ್ರ,ಸಂಬಳ ಕೊಡುವ ಧಣಿಗಳೇ ನಾನು ಮಾಡಬೇಕಾದ ಕೆಲಸಗಳನ್ನು ನಿರ್ಧರಿಸುವಾಗ
ಅದ್ದಕ್ಕೆ ವ್ಯತಿರಿಕ್ತ ನಿರ್ಣಯಗಳು ಬರಿಯ ನಿರ್ಣಯಗಳಾಗಿಯೇ ನಿಂತುಬಿಡುತ್ತವೆ. ಆದರೆ ಒಂದಂತೂ ಸತ್ಯ , ಈ ವೃತ್ತಿಯಲ್ಲಿ ಎಂದೂ ನಿಂತನೀರು ಆಗೊಕ್ಕಾಗಲ್ಲ ಹೊಸ ವಿಚಾರಗಳನ್ನು ಹಾಗು ತಂತ್ರಾಂಶಗಳನ್ನು ತಿಳಿದುಕೊಳ್ಳುತ್ತಿರಬೇಕು.
ಆದ್ದರಿಂದ ಮೇಲಿನ ನಿರ್ಣಯಗಳನ್ನು ಹೊಸ ವರ್ಷದ ರೆಸೊಲ್ಯೂಷನ್ ಪಟ್ಟಿಯಲ್ಲಿ ಇಲ್ಲದಿದ್ದರೂ ಇದ್ದಂತೆ. ರೆಸೊಲ್ಯೂಷನ್ ಗಳನ್ನು ಮಾಡದಿದ್ದರೂ ಮಾಡಿದಂತೆ. ಕೆಲಸ ಮಾಡುವವರೆಗೆ ಇವುಗಳು ತಪ್ಪಿದ್ದಲ್ಲ.

ಇನ್ನು ಓದು-ಬರವಣಿಗೆಗೆ ಬಂದರೆ ಕೆಲವು ಕಠಿಣ ನಿರ್ಧಾರಗಳನ್ನೇ ಕೈಗೊಳ್ಳಬೇಕಾಗಿದೆ. ಮುಖ್ಯವಾದುದೆಂದರೆ "ಸಂಪದದ ಓದುಗರ ಬಗ್ಗೆ ಸ್ವಲ್ಪ ಕರುಣೆತೊರಬೇಕು", ಮೊದಲನೆಯ ಸಾಲನ್ನು ಓದುತ್ತಿದ್ದಂತೆ, browserನನ್ನು
ಮುಚ್ಚಿಬಿಡಬೇಕೆಂದೆನಿಸುವಂತಹ ಲೇಖನಗಳನ್ನು ,ಕತೆಗಳನ್ನು ಬರೆಯೋದನ್ನು ಕಡಿಮೆ ಮಾಡಬೇಕು.ಇಲ್ಲದಿದ್ದರೆ ಮೂರಂಕಿಯಿಂದ ಎರಡಂಕಿಗೆ ಇಳಿದಿರುವ ನನ್ನ ಕತೆಗಳ ಓದುಗರ ಸಂಖ್ಯೆ ಒಂದಂಕಿಗೆ ಇಳಿದೀತು.
ಓದುಗನಾಗಿ," ಒಂದು ಪುಸ್ತಕವನ್ನು ಓದಿ ಮುಗಿಸಿದ ನಂತರವೇ ಮತ್ತೊಂದನ್ನು ಪುಸ್ತಕವನ್ನು ನೋಡಬೇಕು". ಇವೆರಡೂ ನಿರ್ಣಯಗಳ ಶಕ್ಯತೆ ಬಗ್ಗೆ ನನ್ನಲ್ಲಿ ಹೆಚ್ಚು ನಂಬಿಕೆಯಿಲ್ಲ. ಆದರೂ ಪ್ರಯತ್ನವನ್ನು ಮಾಡಲೇಬೇಕು.
ಒಂದಂತೂ ಪ್ರಯತ್ನಪೂರ್ವಕವಾಗಿ ಮಾಡಲೇಬೇಕಾಗಿದೆ. ಕನ್ನಡದಲ್ಲಿ ಆಂಗ್ಲ ಭಾಷೆಯ ಪದಗಳಿಗೆ ಸಮಾನಾರ್ಥಕ ಪದ ಹುಡುಕಲು "kannadakasturi.com" ತಾಣಕ್ಕೆ ಭೇಟಿಮಾಡುವುದನ್ನು ಆದಷ್ಟೂ ಕಡಿಮೆಮಾಡಬೇಕು.ತೂಕವಾದ
ಕನ್ನಡ ಪದಗಳ ಸರಳವಾಗಿ ಪ್ರಯೋಗಮಾಡುವುದನ್ನು ಮೈಗೂಡಿಸಿಕೊಳ್ಳಬೇಕು.

ಬರಿಯ ಶ್ರೀಕಾಂತನಾಗಿ ಯೋಚಿಸಿದಾಗ, "ಮನೆಯ ೬ ಅಡಿ ಕೋಲು" ಎಂಬ ಬಿರುದನ್ನು ತ್ಯಜಿಸಬೇಕೆಂದು ನಿರ್ಧರಿಸಿದ್ದೇನೆ.ದೇವೆಗೌಡ ಸರಿಯೋ ನಾರಾಯಣಮೂರ್ತಿ ಸರಿಯೋ ಎಂದು ಚರ್ಚೆಮಾಡುವವರಿಂದ ಸ್ವಲ್ಪ ದೂರಕಾಯ್ದುಕೊಳ್ಳಬೇಕೆಂದಿದ್ದೇನೆ.
ಅಂತಹ ಚರ್ಚೆಗಳಲ್ಲಿ politically correct ಗಿ ಹರಟೆಹೊಡೆಯಲು ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಚಾಮುಂಡಿ ಎಕ್ಸ್ ಪ್ರೆಸ್ ನಲ್ಲೇ ಪರ-ವಿರುದ್ಧ ವಾದಮಾಡಲು ಸಾಕಷ್ಟು contemplative idlers
ಈಗಾಗಲೇ ಇದ್ದರೆ.ಇನೊಬ್ಬ ಸೇರಿ ಅಲ್ಲಿಯೂ ಸ್ಪರ್ಧೆ ಪ್ರಾರಂಭವಾಗಬಾರದು.

"ಆಬ್ಬಬ್ಬ ! ಸಾಕ್ಮಾಡೋ ,ನಿರ್ಣಯಗಳ ಅಜೀರ್ಣವಾಗಿಹೋದೀತು " ಎಂದು ನನ್ನೊಳಗಿನ ಸೋಮಾರಿ ಶ್ರೀಕಾಂತ ಎಚ್ಚರಿಸಿದ.
ಮೇಲ್ನೋಟಕ್ಕೆ ಇಷ್ಟೊಂದು ನಿರ್ಣಯಗಳೆನ್ನಿಸಿದರೂ, ಇವೆಲ್ಲವನ್ನೂ ಒಂದು ನಿರ್ಣಯದಲ್ಲಿ ಅಡಕಮಾಡಬಹುದುದೆಂದೂ, ಅದೇನೆಂದರೆ "ಈ ವರ್ಷ ಸೋಮಾರಿ ಶ್ರೀಕಾಂತನನ್ನು ಪಳಗಿಸಬೇಕೆಂದಿದ್ದೇನೆ" ಎಂದಾಗ
ಸೋಮಾರಿ ಶ್ರೀಕಾಂತ "ನೋಡೋಣ" ಎಂದು ಜೋರಾಗಿ ನಕ್ಕ.

~.~
  • srikanth ರವರ ಬ್ಲಾಗ್
  • Login or register to post comments
  • 692 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 14, 2006 - 11:40pm — Sunil Jayaprakash

ಉಃ: ನನ್ನ ನ್ಯೂ ಇಯರ್ ರೆಸಲ್ಲೂಷನ್ ಗಳು

Sunil Jayaprakash's picture

srikanth wrote:
ಆದರೆ ಕೆಲಸದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಸ್ವತಂತ್ರ್ಯ ಸೀಮಿತ ಮಾತ್ರ,ಸಂಬಳ ಕೊಡುವ ಧಣಿಗಳೇ ನಾನು ಮಾಡಬೇಕಾದ ಕೆಲಸಗಳನ್ನು ನಿರ್ಧರಿಸುವಾಗ
ಅದ್ದಕ್ಕೆ ವ್ಯತಿರಿಕ್ತ ನಿರ್ಣಯಗಳು ಬರಿಯ ನಿರ್ಣಯಗಳಾಗಿಯೇ ನಿಂತುಬಿಡುತ್ತವೆ. ಆದರೆ ಒಂದಂತೂ ಸತ್ಯ , ಈ ವೃತ್ತಿಯಲ್ಲಿ ಎಂದೂ ನಿಂತನೀರು ಆಗೊಕ್ಕಾಗಲ್ಲ ಹೊಸ ವಿಚಾರಗಳನ್ನು ಹಾಗು ತಂತ್ರಾಂಶಗಳನ್ನು ತಿಳಿದುಕೊಳ್ಳುತ್ತಿರಬೇಕು.

ಎನಾದರೂ ಮಾಡು ಮೊದಲು ಡೆಡ್ಲೈನ್ಮೀಟ್ಮಾಡು ಎಂಬ ಅಶರೀರವಾಣಿ ಕೇಳಿಸಿತೆ. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 15, 2006 - 3:10am — shreeharsha4u

ಈ ದಿನವೇ ಶುಭದಿನ

shreeharsha4u's picture

ನನಗೇನೋ ಈ ನ್ಯೂ ಈಯರ್ ರೆಸಲ್ಯೂಷನ್‌ಗಳ ಮೇಲೆ ನಂಬಿಕೆಯೇ ಇಲ್ಲ ಕಣ್ರಿ. ಪ್ರತೀ ಹೊಸವರ್ಷದ ದಿನವೂ ಅವೇ ಅವೇ ರೆಸಲ್ಯೂಷನ್‌ಗಳನ್ನ ಮಾಡೋ ಎಷ್ಟೋ ಜನರನ್ನ ನಾನು ನೋಡಿದ್ದೇನೆ. ಹಾಗಾಗಿ ಯಾವುದಾದರೂ ಹೊಸ ಕೆಲಸ ಶುರುಮಾಡಲು ಪುರಂದರದಾಸರು ಹೇಳಿದಂತೆ "ಇಂದಿನ ದಿನವೇ ಶುಭದಿನವು, ಇಂದಿನ ಕಾಲ ಶುಭಕಾಲ" ಎಂಬಂತೆ ಅಂದುಕೊಂಡ ತಕ್ಷಣವೇ ಶುರುವಾಗಿಸುವುದು ಒಳ್ಳೆಯದು ಅನ್ನಿಸುತ್ತೆ. ಈ ಬದಲಾಗುವುದರ ಬಗ್ಗೆ ಯೋಚಿಸುವಾಗ ಗಾಂಧೀಜಿಯವರು ಹೇಳಿದ ಒಂದು ಮಾತು ನೆನಪಿಗೆ ಬರುತ್ತದೆ. ನ್ಯೂ ಈಯರ್ ರೆಸೊಲ್ಯೂಷನ್‌ಗೂ ಇದಕ್ಕೂ ಯಾವುದೇ ಸಂಬಂದ ಇಲ್ಲದಿದ್ದರೂ ಹೀಗೆಯೇ ನೆನಪಿಗೆ ಬಂದದ್ದರಿಂದ ಉಲ್ಲೇಖಿಸುತ್ತಿದ್ದೇನೆ "You must be the change you wish to see in the world"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 15, 2006 - 4:48pm — hpn

ರೆಸಲ್ಯೂಶನ್ನುಗಳು

hpn's picture

ನಿಜ. ಆದರೂ ಪ್ರತಿ ಕೆಲಸವೂ ಆಗ್ಗಿಂದಾಗ್ಯೇ ಪ್ರಾರಂಭಿಸಿ ಮುಗಿಸುವಂತದ್ದಾಗಿರುವುದಿಲ್ಲ... ಸಮಯ ಕೈಗೂಡಬೇಕು, ಕೆಲವಕ್ಕೆ; ಕೆಲವಕ್ಕೆ ಬೇರೆ ಹಲವು ಕೆಲಸಗಳ ತಳಹದಿ ಬೇಕಾಗುತ್ತದೆ, ಪ್ರಾರಂಭಿಸುವುದಕ್ಕೆ. ಹೀಗೆ ಹೀಗೆ ಮಾಡಬೇಕು ಎಂದು ಆಲೋಚಿಸುವಾಗ ಬರೀ ಈಗಲೇ ಮಾಡಬೇಕಾದ ಕೆಲಸಗಳನ್ನಷ್ಟೇ ಆಲೋಚಿಸಲಾಗುವುದಿಲ್ಲ. ಎಲ್ಲವನ್ನೂ ಆಲೋಚಿಸುತ್ತೇವಲ್ಲವೆ? ಉದಾಹರಣೆಗೆ: "ಬಿ ಜಿ ಎಲ್ ಸ್ವಾಮಿಯವರ ಎಲ್ಲ ಕೃತಿಗಳನ್ನೋದಬೇಕು" ಎಂದುಕೊಂಡು ರೆಸಲ್ಯೂಶನ್ ಮಾಡಿಕೊಂಡರೆಂದು ಇಟ್ಕೊಳ್ಳಿ, ತಕ್ಷಣ ಕುಳಿತು ಎಲ್ಲ ಪುಸ್ತಕಗಳನ್ನು ಓದಿ ಮುಗಿಸಲಿಕ್ಕಾಗತ್ಯೆ? Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 15, 2006 - 1:39am — hpn

Re: ನನ್ನ ನ್ಯೂ ಇಯರ್ ರೆಸಲ್ಲೂಷನ್ ಗಳು

hpn's picture

srikanth wrote:
ಬೆಂಗಳೂರಿಗೆ ಬಂದು ಒಂದುವರೆ ವರ್ಷವಾಗಿರುವಾಗ,ಕೊಂಚವಾದರೂ ಮೆಟ್ರೊ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕೆಂದು ನಿರ್ಧರಿಸಿ ರೆಸಲ್ಯೂಷನ್ ಗಳ ಬಗ್ಗೆ ಯೋಚಿಸತೊಡಗಿದೆ

ಮೆಟ್ರೋ ಸಂಸ್ಕೃತಿಯೋ ಅಲ್ವೊ, ಹೊಸ ವರ್ಷದ ರೆಸೊಲ್ಯೂಶನ್ನುಗಳು ಬರೆದಲ್ಲೇ ಖತಮ್ ಆಗಿಹೋಗತ್ವೆ. ನಾವು ಅದನ್ನ ಬರೆದುಕೊಳ್ಳುವುದಕ್ಕಿಂತ ಮನಸ್ಸಿನಲ್ಲೇ ಇಟ್ಟುಕೊಂಡು ಶಿರಸಾವಹಿಸಿ ಪಾಲಿಸಲು ಪ್ರಯತ್ನಿಸೋದೆ betterಉ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 16, 2006 - 6:33pm — srikanth

ಉ: ಮೆಟ್ರೊ ಸಂಸ್ಕೃತಿ

srikanth's picture

ಹೊಸ ವರ್ಷದ ನಿರ್ಣಯಗಳನ್ನು ನಿರ್ಧರಿಸೋದು ಮೆಟ್ರೋ ಸಂಸ್ಕೃತಿಯೆಂದು ಹೇಳಿರುವೆ ಹೊರತು ಅದನ್ನು ಪಾಲಿಸೋದು ಮೆಟ್ರೋ ಸಂಸ್ಕೃತಿ ಎಂದು ಹೇಳಿಲ್ವಲ್ಲ Smiling

ಶ್ರೀಕಾಂತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 16, 2006 - 10:42pm — hpn

ಮೆಟ್ರೊ ಸಂಸ್ಕೃತಿ

hpn's picture

ನೀವು ಹಾಗೆ ಹೇಳಿದ್ದೀರಿ ಅಂತ ನಾನ್ ಬರ್ದಿಲ್ಲಪ್ಪ Smiling ಮತ್ತೊಮ್ಮೆ ಓದಿ ನೋಡಿ.

ಅದು ಯಾವ ಸಂಸ್ಕೃತಿಯಾದರೂ ಆಗಿರಲಿ, ಆಗಿಲ್ಲದಿರಲಿ, ರೆಸಲ್ಯೂಶನ್ ಬರೆದುಕೊಂಡದ್ದು ಬರೆದಲ್ಲೇ ಉಳಿಯತ್ತೆ ಅಂತ ಮಾತ್ರ ಹೇಳಿದ್ದು Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿನ ಒತ್ತಕ್ಷರಗಳು
  • ಭಾನುವಾರದ ಹಬ್ಬ
  • ಎಲ್ಲರಿಗೂ ನಮಸ್ಕಾರ
  • ದುನಿಯಾ ವಿಜಯ್ ಗೆ ಯಾಕೆ ಹೀಗೆ- ರಘೋತ್ತಮ್ ಕೊಪ್ಪರ
  • ಸಂಪದ :ಸಮುದಾಯಕ್ಕೆ ವರ
Syndicate content

ಲೇಖಕರು

srikanth's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸಹಕಾರ ಬೇಕಾಗಿದೆ.
  • ಡೈರಿಯ ಕೆಲವು ಹಾಳೆಗಳು - ಭಾಗ ೧೦
  • ಯಾಹೂ! ಕ್ರಿಕೆಟ್
  • ಓದಿದ್ದು ಕೇಳಿದ್ದು ನೋಡಿದ್ದು-48 ಭಾರತ:ಹುಚ್ಚರೇ ಹೆಚ್ಚು!
  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 7:31pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 7:30pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 7:26pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 7:15pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 7:09pm
  • anil.ramesh
    ಉ: ಸಹಕಾರ ಬೇಕಾಗಿದೆ.
    October 13, 2008 - 7:09pm
  • girish.rajanal
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 13, 2008 - 6:17pm
  • srivathsajoshi
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 6:05pm
  • makrumanju
    ಉ: "ನಾನು-ನೀನು
    October 13, 2008 - 5:46pm
  • makrumanju
    ಉ: ಕನಸು ಕದ್ದ ಹುಡುಗಿ...
    October 13, 2008 - 5:45pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 529 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator