ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › siddharam ರವರ ಬ್ಲಾಗ್

buddha-siddha.blogspot.com

i blog gazalgala tana. nanu bareda gazalgalu idarallive.

ನನ್ನ ಆಟೋಗ್ರಾಫ್

September 15, 2008 - 8:46pm — siddharam

ಬಾಲ್ಯ
ನನ್ನೊಂದಿಗೆ ಅಂಬೆಗಾಲಿಕ್ಕುತ ಬಂದ ಬಾಲ್ಯ, ಮುತ್ತಿಕ್ಕಿತು, ಲಾಲಿ ಹಾಡಿತು, ಮಡಿಲಲ್ಲಿ ಮಲಗಿಸಿಕೊಂಡು ಕತೆ ಹೇಳಿ ತಟ್ಟಿತು. ಕಣ್ಣಲ್ಲಿ ಕಣ್ಣಿಟ್ಟು ಸೂರ್ಯ, ಚಂದ್ರ, ಚಿಕ್ಕೆಗಳನೆಲ್ಲ ತೋರಿತು. ಅದರ ಕಣ್ಣಲ್ಲಿ ತುಂಟ ಹೊಳಪು, ಬೆರಗು, ಬಿಸುಪು, ನೂರಾರು ಬಣ್ಣಗಳು, ಕಾರಂಜಿ, ಮಾಯಾಲೋಕ. ಅದಿನ್ನೂ ಅಂಬೆಗಾಲಿಡುತ್ತಿರುವಾಗಲೇ ನಾನು ನಡಿಗೆ ಕಲಿತೆ. ಬಾಲ್ಯ ಅಳತೊಡಗಿತು. ಅನಿವಾರ್ಯ. ನನ್ನ ಪಯಣ ಇನ್ನೂ ಇತ್ತು. ಬಾಲ್ಯಕ್ಕೆ ಮುತ್ತಿಕ್ಕಿ ಮುಂದುವರಿದೆ................ ಮುಂದೆ ತಾರುಣ್ಯ ನನಗಾಗಿ ಕಾಯುತ್ತಿತ್ತು.

ತಾರುಣ್ಯ
ತಾರುಣ್ಯದ ಸನಿಹ ಹೋಗುವುದರಲ್ಲೇ ಎಲ್ಲ ಬದಲಾಗತೊಡಗಿತು. ಹುಚ್ಚು ಹಸಿರು, ರಭಸ, ವೇಗ, ಎಂದೂ ಕಾಣದ ನಡಿಗೆಯ ವೇಗ, ಉಲ್ಲಸ, ಉತ್ಸಾಹ. ತಾರುಣ್ಯದ ಗೆಳೆತನವೇ ಅಂತಹದು. ಅದರ ಕಣ್ಣುಗಳೋ ಮಿಂಚು, ಸಿಡಿಲು, ಕೋಟಿ ಪ್ರಕಾಶ ಒಟ್ಟಿಗೇ ಸೇರಿ ರೂಪುಗೊಂಡಂತಹುದು. ಕೈಗೆ ಕೈ ಬೆಸೆದು, ಹೆಜ್ಜೆಗೆ ಹೆಜ್ಜೆ ಸೇರಿಸಿ ಹೊರಟೆವು. ದಾರಿಯಲ್ಲೆಲ್ಲ ಹೂ, ಹಸಿರು, ಮಕಮಲ್ಲು. ತಾರುಣ್ಯದ ಕೈಯೆಷ್ಟು ಬೆಚ್ಚಗೆ, ಮೃದು. ಎಷ್ಟೊ ಸಲ ಬಿಗಿಯಾಗಿ ಅಪ್ಪಿಕೊಂಡೆ. ನನ್ನೊಳಗೇ ಒಂದಾಗಿರೆಂದು ವಿನಂತಿಸಿಕೊಂಡೆ. ಕಣ್ಣೀರು ಹಾಕಿದೆ. ತಾರುಣ್ಯ ಒಪ್ಪಲಿಲ್ಲ. ’ನಿನ್ನ ಗಮ್ಯ ತೋರುವುದೊಂದೇ ನನ್ನ ಕೆಲಸ’ ಎಂದ ತಾರುಣ್ಯದ ನಡಿಗೆ ನಿಧಾನವಾಗತೊಡಗಿತು. ನಾನೆಷ್ಟೇ ಪ್ರಯತ್ನಿಸಿದರೂ ತಾರುಣ್ಯದೊಂದಿಗೆ ಹೆಜ್ಜೆಯಿಡಲಾಗಲಿಲ್ಲ. ಅದರ ಕೈಯಿಂದ ಬಿಡಿಸಿಕೊಂಡು ಎಷ್ಟೋ ಮುಂದೆ ಬಂದಿದ್ದೆ. ತಿರುಗಿ ನೋಡಿದೆ. ತಾರುಣ್ಯ ಕೈ ಬೀಸಿ ವಿದಾಯ ಹೇಳುತ್ತಿತ್ತು. ನಿಟ್ಟಿಸಿರು ಬಿಡುತ್ತ ಒಲ್ಲದ ಹೆಜ್ಜೆಯೊಂದಿಗೆ ಮುಂದುವರೆದೆ. ಕಾಲುಗಳಿಗೆ ಧೃಡ ನಿರ್ಧಾರವಿತ್ತು. ಹೊತ್ತ ದೇಹವನ್ನು ಎತ್ತ ಒಯ್ಯಬೇಕೆಂಬ ಗುರಿ ಇತ್ತು. ನನಗೆ?....................

ವೃಧ್ಧ್ಯಾಪ್ಯ
ನಿಧಾನವಾಗಿ ವೃದ್ಧ್ಯಾಪ್ಯದ ಜೊತೆಗೂಡಿದೆ. ಸುಕ್ಕುಸುಕ್ಕಾದ ಅಂಕುಡೊಂಕಾದ ಹಾದಿ. ಅಲ್ಲಲ್ಲಿ ವಿಶ್ರಾಂತಿ. ನನ್ನ ಭುಜದ ಮೇಲೆ ವೃದ್ಧಾಪ್ಯದ ಕೈ. ನನಗೋ ನನ್ನದೇ ಆಯಾಸ. ವೃದ್ಧಾಪ್ಯದ ಕೈ ಬೇರೆ! ಅದನ್ನು ತಿಳಿದೋ ಏನೋ ವೃದ್ಧ್ಯಾಪ್ಯ ನನಗೊಂದು ಊರುಗೋಲು ಕೊಟ್ಟಿತು. ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಮಂದ ಪ್ರಕಾಶ. ನೀರು ತುಂಬಿದ ಕಣ್ಣುಗಳಲ್ಲಿ ಏನೋ ಶಾಂತತೆ. ನಿಶ್ಚಲ ಸ್ಥಿತಿ. ಗೊಂದಲಗೊಳ್ಳದ ಕಣ್ಣ ಬೊಂಬೆಗಳಲ್ಲಿ ಅನಂತತೆಯ ಸಾಕಾರ. ಭಯವಾಗಿ ಮುಖ ಬೇರೆಡೆ ತಿರುವಿದೆ. ಮಾತಿಲ್ಲ ಕತೆಯಿಲ್ಲದ ನೀರಸ, ಮೌನದ ದಾರಿಯಲ್ಲಿ ಎಡವಿ ಬೀಳುವ ವೃದ್ಧಾಪ್ಯದ ಕೈಹಿಡಿದು ನಡೆದೆ. ನಿಮಿಶ ನಿಮಿಶವೂ ಸುದೀರ್ಘವೆನ್ನಿಸುವ ಪಯಣ. ಎಲ್ಲೋ ಒಂದೆಡೆ ನಿಂತು ವೃದ್ಧಾಪ್ಯ ಕೊನೆಯ ಮಾತು ಹೇಳಿತು. ’ಅದೇ ನೀನು ತಲುಪಬೇಕಾಗಿರುವ ಗಮ್ಯ’ ಎಂದು. ನಾನು ನೋಡಿದೆ. ಕಣ್ಣು ಕುಕ್ಕುವ ಬೆಳಕಿನ ದಾರಿ, ಮಿಂಚಿನ ಬಳ್ಳಿಯಂತಿರುವ ದಾರಿಯ ತುದಿ ಎಲ್ಲೂ ಕಾಣಲಿಲ್ಲ. ಕಣ್ಣು ದಣಿಯುವ ತನಕ ನೋಡಿದೆ. ಕೊನೆಯೆಂಬುದೇ ಅದಕ್ಕಿಲ್ಲ. ತಿರುಗಿ ನೋಡಿದೆ. ಬಾಲ್ಯ, ತಾರುಣ್ಯ, ವೃದ್ಧಾಪ್ಯ ಯಾವವೂ ಕಾಣಲಿಲ್ಲ. ಬೆಳಕಿನ ದಾರಿಗೆ ತಲುಪಿಸಿದ ಅವುಗಳಿಗೆ ಮನದಲ್ಲೇ ನಮಿಸಿ ಹೆಜ್ಜೆ ಹಾಕಿದೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ.

  • ಸ್ವಾರಸ್ಯ
~.~
  • siddharam ರವರ ಬ್ಲಾಗ್
  • Login or register to post comments
  • 282 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 16, 2008 - 8:04am — savithasr

ಉ: ನನ್ನ ಆಟೋಗ್ರಾಫ್

savithasr's picture

ಚೆನ್ನಾಗಿದೆ.. ನೀವು ಜೀವನದ ಯಾವ ಹಂತದಲ್ಲಿ ಈ ಲೇಖನವನ್ನ ಬರೆದದ್ದು?
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2008 - 4:09pm — ajitmb

ಉ: ನನ್ನ ಆಟೋಗ್ರಾಫ್

ajitmb's picture

ನಿಮ್ಮ ಜೀವನದ ದಾರಿಗೆ ನನ್ನ ನಮನ.
ತು೦ಬಾ ಸೊಗಸಾಗಿದೆ, ನನಗೂ ಕೂಡಾ ಅದೇ ಪ್ರಶ್ನೇ... ನೀವು ನಿಮ್ಮ ಜಿವನದ ಯಾವ ಹ೦ತದಲ್ಲಿ ಇದನ್ನು ಬರೆದಿರಿ????

---- ಅಜಿತ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2008 - 6:37pm — Sunil Jayaprakash

ಉ: ನನ್ನ ಆಟೋಗ್ರಾಫ್

Sunil Jayaprakash's picture

ಭರ್ತೃಹರಿ !!!!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2008 - 8:11pm — siddharam

ಉ: ನನ್ನ ಆಟೋಗ್ರಾಫ್

siddharam's picture

ಪ್ರತಿಕ್ರಿಯೆಗಳಿಗೆ ಧನ್ಯ್ವವಾದಗಳು. ನನಗೆ ಇನ್ನೂ ವಯಸ್ಸಾಗಿಲ್ಲ. ಜೀವನದಲ್ಲಿ ಕಂಡುಂಡ ಅನುಭವಗಳನ್ನೇ ಈ ರೀತಿಯಾಗಿ ಕಲ್ಪಿಸಿ ಬರೆದಿರುವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 17, 2008 - 7:40am — savithasr

ಉ: ನನ್ನ ಆಟೋಗ್ರಾಫ್

savithasr's picture

ಸಿದ್ಧರಾಮರೇ,
ಕಣ್ಣು ಕುಕ್ಕುವ ಬೆಳಕಿನ ದಾರಿ, ಮಿಂಚಿನ ಬಳ್ಳಿಯಂತಿರುವ ದಾರಿಯ ತುದಿ ಯಾವಾಗ ನೋಡಿದ್ರಿ? Smiling
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 17, 2008 - 8:00pm — siddharam

ಉ: ನನ್ನ ಆಟೋಗ್ರಾಫ್

siddharam's picture

ಮಿಂಚಿನ ಬಳ್ಳಿಯ ದಾರಿ, ಬೆಳಕಿನ ದಾರಿ ನಾನು ನೋಡಿಲ್ಲವಾದರೂ, ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ ಎಂಬಂತೆ, ಓದಿದ್ದು, ಕೇಳಿದ್ದು ಮೂಲಕ, ಇದನ್ನು ಬರೆದೆ ಅಷ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾನು ಮತ್ತು ದುಂಬಿ
  • ಸ೦ದಾಯ
  • ಕೆಲವು ದ್ವಿಪದಿಗಳು
  • ದ ರೋಡ್ ನಾಟ್ ಟೇಕನ್ - ಅನುವಾದ
  • ಮರಳಿ ಗೂಡಿಗೆ ಬಂತು ಮರಿ ಹಕ್ಕಿ
Syndicate content

ಲೇಖಕರು

siddharam's picture

ಪೂರ್ಣ ಹೆಸರು
ಸಿದ್ಧರಾಮ ಹಿರೇಮಠ

ಪರಿಚಯ

ಹವ್ಯಾಸಿ ಛಾಯಾಗ್ರಾಹಕ, ಕವಿತೆಗಳನ್ನು ಬರೆಯುವೆ, ಹಾಡುವುದರಲ್ಲಿ, ಹಾಡು ಕೇಳುವುದರಲ್ಲಿ ಆಸಕ್ತಿ, ನಾನು ಅಂದರೆ ಏನು? ಎಂಬ ಹುಡುಕಾಟದಲ್ಲಿರುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 227 ಅತಿಥಿಗಳು ಆನ್ಲೈನ್ ಇರುವರು.


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator