ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › shylaswamy ರವರ ಬ್ಲಾಗ್

ಒಂದು ಸರಳ ಸುಂದರ ಕವಿತೆ

August 25, 2008 - 12:05am — shylaswamy

‘ಮಳೆಯ ಮೇಲೇಕೆ ದೂರು?’ ಎಂಬ ಸತೀಶ್ ಅವರ ಬ್ಲಾಗ್ ಓದಿ, ಪಲ್ಲವಿಯವರು ಬರೆದ ಪ್ರತಿಕ್ರಿಯೆ ಓದಿದಾಗ ನನಗೆ ನೆನಪಾದ ಈ ಕವಿತೆ ಇಲ್ಲಿ ಕಳಿಸಿದ್ದೇನೆ
ಇಕ್ಕಳ
ಚಳಿಗಾಲ ಬಂದಾಗ, ‘ಎಷ್ಟು ಚಳಿ’ ಎಂದರು,
ಬಂತಲ್ಲ ಬೇಸಿಗೆ, ‘ಕೆಟ್ಟ ಬಿಸಿಲೆಂ’ದರು;
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ;
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!
ಚಿಗುರ ಚಿನ್ನದ ನಡುವೆ ಹೂವ ಬಯಸುವರು;
ಹೂಗಳ ಕಾಲದಲಿ ಹಣ್ಣ ಹೊಗಳುವರು;
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ;
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!
ನಿಂತರೆ ಕೇಳುವರು: ನೀನೇಕೆ ನಿಂತೆ?
ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!
ಓದಿದರೆ ಹೇಳುವರು: ಮತ್ತೊಮ್ಮೆ ಬರೆಯೊ!
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೋ ಇವರದೇ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಈ ಅದ್ಭುತ ಕವಿತೆಯನ್ನು ರಚಿಸಿದವರು ಒಲುಮೆಯ ಕವಿ ಕೆ.ಎಸ್.ನರಸಿಂಹಸ್ವಾಮಿ.

  • ಮೆಚ್ಚಿದ ಕವನ
~.~
  • shylaswamy ರವರ ಬ್ಲಾಗ್
  • Login or register to post comments
  • 355 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 25, 2008 - 12:18am — pallavi.dharwad

ಉ: ಒಂದು ಸರಳ ಸುಂದರ ಕವಿತೆ

pallavi.dharwad's picture

ಥ್ಯಾಂಕ್ಸ್‌ ಆಂಟಿ. ಕವಿತೆಯ ಜೊತೆಗೆ ನನ್ನ ಬಾಲ್ಯವನ್ನು ನೆನಪಿಸಿಬಿಟ್ಟಿರಿ. ಹೈಸ್ಕೂಲ್‌ ದಿನಗಳನ್ನು ಬಾಲ್ಯ ಎಂದೇ ನಾನು ಭಾವಿಸಿದ್ದೇನೆ. ಈ ಕವಿತೆಯನ್ನು ಗೆಳತಿಯೊಬ್ಬಳ ಮನೆಯಲ್ಲಿ ಓದಿದ್ದೆ. ಹಿಂದ್ಯಾವಗಲೋ ಅದು ಅವರ ದೊಡ್ಡಣ್ಣನಿಗೆ ಪಠ್ಯವಾಗಿತ್ತಂತೆ.

ಮತ್ತೊಮ್ಮೆ ಥ್ಯಾಂಕ್ಸ್‌.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 2:49am — kalpana

ಉ: ಒಂದು ಸರಳ ಸುಂದರ ಕವಿತೆ

kalpana's picture

ವಾಹ್ ಶೈಲಾರವರೆ, ಎಂತಹ ಚೆನ್ನಾದ ಕವನ ನಮ್ಮ ಮುಂದಿಟ್ಟಿರಿ. ಕೆ.ಎಸ್.ನ ನಿಜಕ್ಕೂ ಮನಸ್ಸಿನ ಒಳನೋಟ ಅರಿತಿದ್ದ ಕವಿ.
~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 11:27am — roopablrao

ಉ: ಒಂದು ಸರಳ ಸುಂದರ ಕವಿತೆ

roopablrao's picture

ಈ ಕವನಾನ ನಾನು ಎಂಟನೆಯ ತರಗತಿಯಲ್ಲಿ ಓದಿದ್ದ ನೆನಪು
ನಮ್ಮಮಿಸ್ ತುಂಬಾ ಚೆನ್ನಾಗಿ ವಿವರಿಸಿದ್ದರು
ಇದರ ಟೈಟಲ್
"ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ " ಅನ್ನಿಸುತ್ತೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 12:33pm — ಸಂಗನಗೌಡ

ಉ: ಒಂದು ಸರಳ ಸುಂದರ ಕವಿತೆ

ಸಂಗನಗೌಡ's picture

ಹಾಗೇ ನಿಮ್ಮ ಮಕ್ಕಳಿಗೂ ಇದನ್ನು ಶಾಲೆಯಲ್ಲಿ ಕಲಿಸುತ್ತಿದ್ದರೆ, ಚೆನ್ನಾಗಿರುತ್ತಿತ್ತು ಅಂತ ನಿಮಗೇ ಅನಿಸಿದ್ದೇ ಇಲ್ಲವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 1:23pm — roopablrao

ಉ: ಒಂದು ಸರಳ ಸುಂದರ ಕವಿತೆ

roopablrao's picture

ಅನ್ನಿಸುತ್ತದೆ ಆದರೆ ನಾನು ಪಠ್ಯ ಪುಸ್ತಕ ಆಯ್ಕೆ ಮಂಡಳಿಯಲ್ಲಿ ಇಲ್ಲವೇ? Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 5:33pm — ಸಂಗನಗೌಡ

ಉ: ಒಂದು ಸರಳ ಸುಂದರ ಕವಿತೆ

ಸಂಗನಗೌಡ's picture

ರೂಪ ಅವರೇ, ಇಂಗ್ಲೀಶ್ ಮೀಡಿಯಮ್‍ನಲ್ಲಿ ಕನ್ನಡ ಹೇಗ್ ಹಾಡು ಹೇಗಿರುತ್ತೆ, ಅದಕ್ಕೆ ಕನ್ನಡ ಅನ್ನೋದು ಬರೀ ಬ್ಲಾಗಿಂಗ್-ಗಸ್ಟೇ ಸೀಮೀತ ಅಲ್ಲ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 6:22pm — roopablrao

ಉ: ಒಂದು ಸರಳ ಸುಂದರ ಕವಿತೆ

roopablrao's picture

ನೋಡುತ್ತಿರಿ ಗೌಡರೇ
ಮುಂದೊಂದು ದಿನ ನನ್ನ ಮಗಳೇ ಈ ಪ್ರಶ್ನೆಗೆ ಉತ್ತರಿಸಬಹುದು ಇದೇ ಸಂಪದದಲ್ಲಿ ಕನ್ನಡದಲ್ಲಿ, ಇಂಗ್ಲೀಶ್ಜ್ ಮೀಡಿಯಮ್‌ನಲ್ಲಿ ಓದಿಯೂ ಸಹಾ !
ಕನ್ನಡ ಕತೆ ಕವನ ಬಗ್ಗೆ ಅವಳೂ ಮಾತನಾಡುತ್ತಾಳೆ ಹಾಗೆ ಮಾಡುತ್ತೇನೆ ಇದು ನನ್ನ ಸವಾಲು ನಿಮ್ಮ ವ್ಯಂಗ್ಯಕ್ಕೆ Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 5:50pm — shreekant.mishrikoti

ಉ: ಒಂದು ಸರಳ ಸುಂದರ ಕವಿತೆ

shreekant.mishrikoti's picture

ಶಹಬ್ಬಾಶ್
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 1:44pm — shylaswamy

ಉ: ಒಂದು ಸರಳ ಸುಂದರ ಕವಿತೆ

shylaswamy's picture

ಇದರ title ‘ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ’ ಅಲ್ಲ. ಇದರ heading ‘ಇಕ್ಕಳ’ ಅಂತಾನೇ ಇರೋದು. ಇತ್ತೀಚೆಗೂ ಕೂಡ 4 ನೇ ಅಥವಾ5ನೇ ತರಗತಿ ಪುಸ್ತಕದಲ್ಲಿ ನೋಡಿದ ನೆನಪು. ಈಗ ಇದೆಯೋ ಇಲ್ಲವೋ ಗೊತ್ತಿಲ್ಲ.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 11:37pm — Deeparavishankar

ಉ: ಒಂದು ಸರಳ ಸುಂದರ ಕವಿತೆ

Deeparavishankar's picture

ಇಲ್ಲ ರೂಪಾ ಇದರ ಶೀರ್ಷಿಕೆ ‘ಇಕ್ಕಳ’ ಅ೦ತಾನೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 6:02pm — mahesha

ಉ: ಒಂದು ಸರಳ ಸುಂದರ ಕವಿತೆ

mahesha's picture

ಚನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೆ.ಎಸ್.ನ ರವರ ಓದಲೇಬೇಕಾದ ಸುಂದರ ಪದ್ಯ.
  • ನಗೆಹನಿ
  • "ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ
  • ಅರ್ಧಕ್ಕೇ ನಿಂತ ಪದ್ಯಗಳು
  • ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?
Syndicate content

ಲೇಖಕರು

shylaswamy's picture

ಪೂರ್ಣ ಹೆಸರು
shylaswamy

ಪರಿಚಯ

ನಾನು ಶಿವಮೊಗ್ಗಾದಲ್ಲಿ ವಾಸ ಮಾಡುತ್ತಿರುವ ಗೃಹಿಣಿ. ದೀರ್ಘಕಾಲ ಶಿಕ್ಷಕಿಯಾಗಿ ಈಗ ಸ್ವಯಂ ನಿವೃತ್ತಿಹೊಂದಿ ಮನೆಯಲ್ಲಿದ್ದೇನೆ. ನನ್ನ ಆಸಕ್ತಿಯ ಕ್ಷೇತ್ರಗಳೆಂದರೆ, ಸಂಗೀತ, ಸಾಹಿತ್ಯ ಮತ್ತು ನಾಟಕ. ನಾನು ಕೆಲವು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೇನೆ. ಹೆಚ್ಚಾಗಿ ಬರೆದಿರುವುದು ಮತ್ತು ನಿರ್ದೇಶಿಸಿರುವುದು ಮಕ್ಕಳ ನಾಟಕಗಳನ್ನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 21, 2008 - 3:57am
  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 340 ಅತಿಥಿಗಳು ಆನ್ಲೈನ್ ಇರುವರು.


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator