ಲೀಲಾವತಿ
ಲೀಲಾವತಿ
ಭಾಸ್ಕರಾಚಾರ್ಯರು ಕನ್ನಡದ ಗಣಿತ ತಜ್ಞರು ಇವರ ’ಲೀಲಾವತಿ ಗ್ರಂಥ’ ಇವರ ಮೇಧಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಗಣಿತದ ಜೊತೆಗೆ ಸಾಹಿತ್ಯದ ಬೆಸುಗೆ ಇವರ ವೈಶಿಷ್ಟ್ಯ.
“ಲೀಲಾವತಿಯನ್ನೋದಿದರೆ ಸುಂದರವಾದ ಒಂದು ರತ್ನಾಭರಣದ ನೆನಪಾಗುತ್ತದೆ. ಆಭರಣದ ಚಿನ್ನದ ಗೂಡುಗಳಲ್ಲಿ ಹೊಳೆಯುವ ರತ್ನಗಳಂತೆ ಲೀಲಾವತಿಯ ಸಾಹಿತ್ಯದ ಗೂಡುಗಳಲ್ಲಿ ಗಣಿತದ ರತ್ನಗಳು ಪ್ರಕಾಶಿಸುತ್ತವೆ.” ಹೀಗೆ ಸೀತಾರಾಮ ಶಸ್ತ್ರಿ ಎಂಬ ಗಣಿತಜ್ಞರು ಹೇಳಿದ್ದಾರೆ. ಎಂತಹಾ ಚಿನ್ನದ ಮಾತುಗಳು.
ನಾನು ಆ ಚಿನ್ನದ ಗೂಡಿನಿಂದ ಒಂದು ರತ್ನವನ್ನು ಇಲ್ಲಿ ತೋರಿಸುತ್ತೇನೆ.
ಶ್ಲೋಕ ಹೀಗಿದೆ,
“ಬಾಲೆ ಮರಾಲಕುಲ ಮೂಲದಲಾನಿ ಸಪ್ತ ತೀರೇ
ವಿಲಾಸಭರ ಮಂಥರಗಾನ್ಯ ಪಶ್ಯಂ
ಕುರ್ವನ್ ಚ ಕೇಲಿ ಕಲಹಂ ಸಯುಗ್ಮಂ
ಶೇಷಂ ಜಲೇ ವದ ಮರಾಲಕುಲ ಪ್ರಮಾಣಂ”
ಇದರರ್ಥ ಹೀಗಿದೆ,
“ಎಲೈ ಬಾಲೆಯೇ ಒಂದು ಗುಂಪಿನಲ್ಲಿರುವ ಹಂಸಗಳ ಸಂಖ್ಯೆಯ ವರ್ಗಮೂಲದ ಎರಡನೇ ಏಳರಷ್ಟು ಒಂದು ಕೆರೆಯ ತೀರದಲ್ಲಿ ವಿಹರಿಸುತ್ತಿವೆ. ಉಳಿದ ಎರಡು ಹಂಸಗಳು ನೀರಿನಲ್ಲಿ ಪ್ರೇಮ ಕಲಹ ಮಾಡುತ್ತಿವೆ. ಹಾಗಾದರೆ ಹಂಸಗಳ ಒಟ್ಟು ಸಂಖ್ಯೆ ಎಷ್ಟು?”
ಗೆಳೆಯರೆ, ಈ ಸಮಸ್ಯೆಯ ಪರಿಹಾರ ನಾನು ಸೂಚಿಸಲೋ ಅಥವಾ ಯಾರಾದರೂ ಸೂಚಿಸುವಿರೋ?

- shylaswamy ರವರ ಬ್ಲಾಗ್
- Login or register to post comments
- 481 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಲೀಲಾವತಿ
ತು೦ಬಾ ಚನ್ನಾಗಿದೆ!! ದಯಮಾಡಿ ಇನ್ನಷ್ಟು ಶ್ಲೋಕಗಳನ್ನು ಬರೆದು ತಿಳಿಸಿ.
ಉ: ಲೀಲಾವತಿ
ಇಗೊಳ್ಳಿ ಮತ್ತೊಂದು
ಅಲಿಕುಲದಲಮೂಲಂ ಮಾಲತೀಂ ಯಾತಮಷ್ಟೌ
ನಿಖಿಲನವಮಭಾಗಶ್ಚಾಲಿನೀ ಭೃಂಗಮೇಕಮ್|
ನಿಶಿ ಪರಿಮಲಲುಬ್ಧಂ ಪದ್ಮಮಧ್ಯೇ ನಿರುದ್ಧಂ
ಪ್ರತಿರಣತಿ ರಣನ್ತಂ ಬ್ರೂಹಿ ಕಾಂತೇsಲಿಸಂಖ್ಯಾಮ್||
"ಪ್ರಿಯತಮೆ, ಒಂದು ದುಂಬಿಗಳ ಹಿಂಡಿನ ಅರ್ಧದ ವರ್ಗಮೂಲದಷ್ಟು ದುಂಬಿಗಳು ಜಾಜಿ ಹೂವಿನ ಕಡೆಗೆ ಹೋದವು. ಅದೇ ಗುಂಪಿನ ಎಂಟರಷ್ಟು ಕೂಡ ಹಾಗೆಯೇ ಸಾಗಿದವು. ಪರಿಮಳದ ಆಸೆಯಿಂದ ಹೋಗಿ ರಾತ್ರಿಯಲ್ಲಿ ತಾವರೆಯಲ್ಲಿ ಬಂಧಿಯಾದ ಒಂದು ಗಂಡುದುಂಬಿಯ ಝೇಂಕಾರಕ್ಕೆ ಮರುಳಾಗಿ ಹೆಣ್ಣುದುಂಬಿಯೊಂದು ಹೊರಗಡೆ ಪ್ರತಿಧ್ವನಿಸುತ್ತಿತ್ತು. ಹಾಗಾದರೆ ದುಂಬಿಗಳ ಒಟ್ಟು ಸಂಖ್ಯೆ ಎಷ್ಟು?
"ಏರಿದವನು ಚಿಕ್ಕವನಿರಬೇಕು"
ಉ: ಲೀಲಾವತಿ
ಅರೆ! ತು೦ಬಾ ಚೆನ್ನಾಗಿದೆ!
ಧನ್ಯವಾದಗಳು ರಮೇಶ್!
ಉ: ಲೀಲಾವತಿ
ಹಂಸಗಳ ಸಂಖ್ಯೆ 16.
ರಮೇಶರ ಲೆಕ್ಕದಲ್ಲೇ ತಪ್ಪಿದೆ
. ಅದು
"ಯಾತಮಷ್ಟೌ ನಿಖಿಲನವಮಭಾಗ" ಅಂದರೆ, ೯/೮ ಆಗಬೇಕಲ್ಲವೇ? "ಅದೇ ಗುಂಪಿನ ಎಂಟರಷ್ಟು " ಅಂತಿದೆ?
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಲೀಲಾವತಿ
ಕ್ಷಮಿಸೆ , ೮/೯ ಆಗಬೇಕಿತ್ತು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಲೀಲಾವತಿ
ಹಂಸಗಳ ಸಂಖ್ಯೆ : ೧೬
ಹೀಗೆ ಸಮಸ್ಯೆಗಳನ್ನು ನೀಡುತ್ತಿರಿ