ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
"... ಸ್ಥಳಾಂತರ.... ಅಂದ್ರೆ ಏನೇ ?"
ಒಂದು ದಿನ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವಿನ ಒಂದು ಬೀದಿಯಲ್ಲಿ ಹೋಗ್ತಾ ಇದ್ದೆ . ಎದುರಿನಿಂದ ಇಬ್ಬರು ಹುಡುಗಿಯರು ಬಂದರು . ಅಕ್ಕ-ತಂಗಿ ಇದ್ದಿರಬೇಕು. ಅಲ್ಲಿನ ಅಂಗಡಿ ಮುಂದೆ ನಿಂತರು . ಅದರ ಶಟರ್ ಹಾಕಿತ್ತು. ಅಲ್ಲಿ ಒಂದು ಹಾಳೆಯ ಮೇಲೆ " ಈ ಅಂಗಡಿಯನ್ನು ಮುಂದಿನ ಬೀದಿಗೆ ಸ್ಥಳಾಂತರ ಮಾಡಲಾಗಿದೆ" ಅಂತ ದೊಡ್ಡದಾಗಿ ಬರೆದಿತ್ತು. ಅದನ್ನು ನೋಡುತ್ತಾ ಅನುಮಾನಿಸುತ್ತ "... ಸ್ಥಳಾಂತರ.... ಅಂದ್ರೆ ಏನೇ " ಎಂದು ದೊಡ್ಡವಳು ಚಿಕ್ಕವಳಿಗೆ ಗೊಣಗಿದಳು. ಆ ಕ್ಷಣ ನಾನು " ಶಿಫ್ಟ್ ಆಗಿದೆ ಅಂತ ..." ಅಂತ ಹೇಳ್ದೆ .
ಅವಳು ಕೃತಜ್ಞತೆಯ ನೋಟ ಬೀರಿದಳು. ನಾನು ಮುಂದೆ ಸಾಗಿದೆ.

- shreekant.mishrikoti ರವರ ಬ್ಲಾಗ್
- Login or register to post comments
- 262 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: "... ಸ್ಥಳಾಂತರ.... ಅಂದ್ರೆ ಏನೇ ?"
ಸಿಂಪಲ್ ಕನ್ನಡ
*ಅಶೋಕ್
ಉ: "... ಸ್ಥಳಾಂತರ.... ಅಂದ್ರೆ ಏನೇ ?"
pure ಕನ್ನಡ ಕೂಡ ಅನ್ನಬಹುದು !!!
ಉ: "... ಸ್ಥಳಾಂತರ.... ಅಂದ್ರೆ ಏನೇ ?"
>>Oh my god!! ಏನಪ್ಪಾ english words ಇಲ್ಲಾ೦ದ್ರೆ, ಕನ್ನಡ understand ಮಾಡ್ಕೊಳ್ಳೋದೇ very difficult ಆಗ್ಬಿಟ್ಟಿದೆ now a days..
>> ಸಿಂಪಲ್ ಕನ್ನಡ
>> pure ಕನ್ನಡ ಕೂಡ ಅನ್ನಬಹುದು !!!
ಉಶ್ಶಪ್ಪಾ .. ನಕ್ಕೂ ನಕ್ಕೂ ಸುಸ್ತಾಯ್ತು ...
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: "... ಸ್ಥಳಾಂತರ.... ಅಂದ್ರೆ ಏನೇ ?"
ನಾವ್ ಜಾಗ ಬದಲಿಸಿದ್ದರೆ ಎಂದು ಹೇಳ್ತಿದ್ವು.!
ಉ: "... ಸ್ಥಳಾಂತರ.... ಅಂದ್ರೆ ಏನೇ ?"
ಸುಕು - ಮಿಶ್ರಿಕೋಟಿ, ಪರವಾಗಿಲ್ಲ ನಿಮ್ಮದು ೫೦% ಕನ್ನಡ + ೫೦% ಬೇರೆನುಡಿ. ೧೦೦% ಉರ್ದು, ೧೦೦% ಸಂಸ್ಕೃತಕ್ಕಿಂತ ಪರವಾಗಿಲ್ಲ
ಉ: "... ಸ್ಥಳಾಂತರ.... ಅಂದ್ರೆ ಏನೇ ?"
Oh my god!! ಏನಪ್ಪಾ english words ಇಲ್ಲಾ೦ದ್ರೆ, ಕನ್ನಡ understand ಮಾಡ್ಕೊಳ್ಳೋದೇ very difficult ಆಗ್ಬಿಟ್ಟಿದೆ now a days.. : )
ಉ: "... ಸ್ಥಳಾಂತರ.... ಅಂದ್ರೆ ಏನೇ ?"
ಹ್ಹ , ಹ್ಹ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"