ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಮನುಷ್ಯ ದೇವರ ಸೃಷ್ಟಿ ಅಲ್ಲ
ಜೇನ್ ಪಾಲ್ ಸಾರ್ತ್ರ್ ಫ್ರಾನ್ಸಿನಲ್ಲಿ ಹುಟ್ಟಿದ್ದು . ಅವನೊಬ್ಬ ತತ್ವಜ್ಞಾನಿ , ವಿಚಾರವಾದಿ , ಕಾದಂಬರಿಕಾರ , ನಾಟಕಕಾರ , ಸಾಹಿತ್ಯ ವಿಮರ್ಶಕ, ಜೀವನ ಚರಿತ್ರಕಾರ , ಪ್ರಬಂಧಕಾರ , ಪತ್ರಕರ್ತ , ಮಾರ್ಕ್ಸವಾದಿ , ಪ್ರಮುಖ ರಾಜಕಾರಣಿ , ಮತ್ತು ಫ್ರೆಂಚ್ ಅಸ್ತಿತ್ವವಾದದ ಜನಕ.
ಅವನು ಪ್ರತಿಪಾದಿಸಿದ ಅಸ್ತಿತ್ವವಾದದ ತಿರುಳು ಹೀಗಿದೆ-
ಮನುಷ್ಯ ದೇವರ ಸೃಷ್ಟಿ ಅಲ್ಲ; ಮನುಷ್ಯ ಮೊದಲೇ ಏನೋ ಆಗಿ ಹುಟ್ಟಿರುವದಿಲ್ಲ .ಮೊದಲು ಬರೇ ಇರುತ್ತಾನೆ ನಂತರ ತನ್ನ ಸ್ವತಂತ್ರ ನಿಶ್ಚಯ ಮತ್ತು ಆಯ್ಕೆ ಗಳ ಮೂಲಕ ಏನೋ ಆಗುತ್ತಾನೆ. ಯಾವ ವ್ಯಕ್ತಿಗೂ ಪೂರ್ವ ನಿಶ್ಚಿತ ಗುಣದೋಷಗಳಿಲ್ಲ. ಅವುಗಳಿಗೆ ಪರಿಸರ ಕಾರಣವೆಂಬ ವಾದದಲ್ಲೂ ಹುರುಳಿಲ್ಲ. ನಿಜವೆಂದರೆ ಅದಕ್ಕೆಲ್ಲಾ ಆ ಮನುಷ್ಯನೇ ಸ್ವತ: ಹೊಣೆಗಾರ. ತಾನು ಏನಾಗಬೇಕೆಂದು ನಿಶ್ಚಯಿಸುವ ಹೊಣೆ ಸಂಪೂರ್‍ಣ ಅವನಿಗೇ ಸೇರಿದ್ದು. ನಿಶ್ಚಯಗಳಿಗೆ , ಆಯ್ಕೆಗೆ ಬೇಕಾದ ಸ್ವಾತಂತ್ರ್ಯ ಕೂಡ ಅವನೊಳಗೇ ಇದೆ. .

- shreekant.mishrikoti ರವರ ಬ್ಲಾಗ್
- Login or register to post comments
- 751 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಬರೇ!
ಮನುಷ್ಯ ಬರೇ ಇರುತ್ತಾನೆ = ಹೀಗಂದ್ರೆ ಏನರ್ಥ ಸಾರ್.
ದೇವರನ್ನು ಸೃಷ್ಟಿಸಿದವೆನೇ ಮಾನವ. ಮಾನವನನ್ನು ಸೃಷ್ಟಿಸಿದವ ದೇವನಲ್ಲ. ಏಕೆಂದರೆ ದೇವ ಯಾರು ಎನ್ನುವುದೇ ತಿಳಿದಿಲ್ಲ. ಹಾಗೆ ತಿಳಿದವರು (ಮೋಸಸ್, ಏಸು, ಪೈಗಂಬರ್, ಶಂಕರ, ರಾಮಕೃಷ್ಣ, ವಿವೇಕಾನಂದ ಇತ್ಯಾದಿ) ಅದು ಏನೆಂದು ತಿಳಿಸಲಿಲ್ಲ. ಅದು ಅನುಭವ ವೇದ್ಯ ಮಾತ್ರವಂತೆ.
ಮಾನವನಿಗೆ ಮೊದಲು ಏನು? = ಎನ್ನುವುದರ ಬಗ್ಗೆ ಇಸ್ಮಾಯಿಲರ ಒಂದು ಬರವಣಿಗೆ ನೋಡಿದ್ದೀರಲ್ಲ. ಬಹಳ ಚೆನ್ನಾಗಿದೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ದೇವರು
ಮಾನವನು ದೇವರ ಸೃಷ್ಟಿಯೆಂಬುದು ಒಂದು ನಂಬಿಕೆಯೆ ಹೊರತು, ಸಾಬೀತು ಮಾಡಬಹುದಾದ ಸಂಗತಿಯಲ್ಲ.
ನಿಜವಾಗಿ ನೋಡಿದರೆ ವಿವಿಧ ರೂಪದ ದೇವಾನುದೇವತೆಗಳು, ಅವರ ಲೀಲಾವಿಶೇಷಗಳು, ಹೆಚ್ಚಾಗಿ ಕಪೋಲಕಲ್ಪಿತವೆ ಹೊರತು, ಯಾವುದನ್ನು ಧಡೀಕರಿಸಲು ಬರುವುದಿಲ್ಲ.
ಇನ್ನು ಮಿಕ್ಕ ಜಾಣರು "ದೇವರು ಅಗೋಚರ, ಅವರ್ಣನೀಯ, ನಿರಾಕಾರಿ" ಹೀಗೆಂದು ಒಂದು ಗೊಂದಲವನ್ನು ಸೃಷ್ಟಿಸಿದ್ದಾರೆ.
ಮನುಷ್ಯ ಬರೇ ಇರುತ್ತಾನೆ = ಏನರ್ಥ
ಮನುಷ್ಯ ಬರೇ ಇರುತ್ತಾನೆ ಎಂಬುದು ಬಹುಶ: 'just exists' ಎಂಬುವುದರ ಅಷ್ಟು ಸರಿಯಲ್ಲದ ಅನುವಾದ ಇರಬಹುದು . ಅದಕ್ಕೇ ಅದನ್ನು existentialism - ಅಸ್ತಿತ್ವವಾದ ಅಂದಿರಬಹುದು . ಈ exist ಪದವನ್ನು ಉಳಿಸಿಕೊಳ್ಳಲು ಈ ರೀತಿ ಅನುವಾದ ಮಾಡಿರಬಹುದು . ( ಇದು ಕೀನ್ ಎಂಬ ನಾಟಕದ ಅನುವಾದ ಪುಸ್ತಕದಿಂದ ಆಯ್ದ ಸಾಲುಗಳು - ಚಿಂತನಯೋಗ್ಯ ಎನಿಸಿದ್ದರಿಂದ ಮತ್ತು existentialism ಬಗ್ಗೆ ಕೊಂಚವಾದರೂ ಇತರರಿಗೆ ತಿಳಿಯಲಿ ಸಂಪದಕ್ಕೆ ಕಳಿಸಿದ್ದೆ.)