ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನ್ನಡ ನುಡಿಗೆ ಮುಂದಿನ ದಿಕ್ಕು

May 14, 2007 - 2:50pm — shreekant.mishrikoti

ಕನ್ನಡಭಾಷೆಯ ಮೇಲಿನ ಸಂಸ್ಕೃತ ಹೊರೆಯನ್ನು ಕಳಚಿಕೊಳ್ಳುವ ವಿಚಾರ ಸಂಪದದ ಒಳಗೂ , ಹೊರಗೂ ನಡೆಯುತ್ತಿದೆ.

ಶ್ರೀ ಕೆ.ವಿ.ನಾರಾಯಣರು ತಮ್ಮ 'ಪದಗತಿ'ಅಂಕಣದಲ್ಲಿ ಹೀಗೆ ಬರೆದಿದ್ದಾರೆ .  

 
Quote:
ಒಂದೊಮ್ಮೆ ನಾವು ಹಿಡಿದು ಹೋಗುತ್ತಿರುವ ದಾರಿ ತಪ್ಪಾಗಿದ್ದರೆ ಹಿಂದೆ ಹೋಗಿ ಸರಿದಾರಿಯನ್ನು ಹಿಡಿಯಬೇಕಲ್ಲವೇ? ಕನ್ನಡ ಪದಗಳನ್ನೇ ಬಳಸುವುದೆಂದರೆ ಎಲ್ಲ ಸಂಸ್ಕೃತ ಪದಗಳನ್ನು ಹೊರಗಿಡುವುದೆಂದಲ್ಲ. ಕನ್ನಡ ಪದಗಳನ್ನು ಹೆಚ್ಚಾಗಿ ಬಳಸುವುದು; ಸಂಸ್ಕೃತ ಪದಗಳನ್ನು ಬಳಸಿದರೂ ಅವು ಕನ್ನಡದ ನುಡಿಜಾಡಿಗೆ ಹೊಂದಿಕೊಳ್ಳುವಂತೆ ಮಾಡಿ ಆಮೇಲೆ ಬಳಸುವುದು ನಮ್ಮ ಮುಂದಿನ ದಾರಿಯಾಗಬೇಕು.ಹೀಗೆ ಸಂಸ್ಕೃತ ಪದಗಳ ಸವಾರಿಯಿಂದ ತಪ್ಪಿಸಿಕೊಳ್ಳುವುದರಿಂದ ಮತ್ತೊಂದು ಗೊಂದಲದಿಂದ ಪಾರಾಗಬಹುದು. ಅದೆಂದರೆ ಈಗಿರುವ ಮಾತಿನ ಕನ್ನಡ ಮತ್ತು ಬರಹದ ಕನ್ನಡ ಬೇರೆಬೇರೆಯಾಗಿರುವುದನ್ನು ತಪ್ಪಿಸಬಹುದು. ಎರಡು ಒಂದೇ ಆಗದಿದ್ದರೂ ಅವುಗಳ ನಡುವೆ ಅಷ್ಟೊಂದು ದೊಡ್ಡ ತೆರಪು ಇಲ್ಲದಂತೆ ಮಾಡಬಹುದು. ಈಗ ಇವೆರಡು ಒಂದಕ್ಕೊಂದು ಬೆನ್ನು ಮಾಡಿ ನಡೆದಿವೆ. ಮಾತಾಡುವ ಕನ್ನಡಿಗರು ಕನ್ನಡ ಬರಹವನ್ನು ಓದಲು ಹಿಂಜರಿಯುತ್ತಿರುವುದು ಇದರಿಂದಾಗಿಯೇ ಇರಬೇಕು. ಹೆಚ್ಚು ಜನ ಕನ್ನಡವನ್ನು ಓದ ಬೇಕೆಂದರೆ ಅವರು ಮಾತಾಡುವ ಕನ್ನಡ ಮತ್ತು ಓದುತ್ತಿರುವ ಕನ್ನಡಗಳು ಬೇರೆಬೇರೆ ಎನ್ನಿಸಬಾರದಲ್ಲವೇ? ಕನ್ನಡವನ್ನು ಉಳಿಸಬೇಕೆಂದು ಪಣತೊಡುತ್ತಿರುವ ನಾವೆಲ್ಲ ಈ ದಿಕ್ಕಿನಲ್ಲಿ ಕೆಲಸ ಮಾಡಬೇಕಲ್ಲವೆ? [\quote]

ಸಂಪದದಲ್ಲಿ ನಡೆಯುತ್ತಿರುವ ಚರ್ಚೆಗೆ ಇಲ್ಲಿ ಒಂದು ದಿಕ್ಕು ಕಾಣುತ್ತಿರುವಂತಿದೆ.

ನನಗೆ ಬಂದ ವಿಚಾರ ಹೀಗಿದೆ.
ನಾವು ಅಚ್ಚ ಕನ್ನಡದ ಶಬ್ದಗಳಿಗಾಗಿ ನಮ್ಮ ಜನ ಆಡುವ ಮಾತುಗಳನ್ನು ಗಮನಿಸಬೇಕು . ಅಲ್ಲಿ ಅನೇಕ ಅಪ್ಪಟ ಕನ್ನಡದ ಮಾತುಗಳು ಸಿಗುತ್ತವೆ. ಅವುಗಳನ್ನು ಬಳಸಲಾರಂಭಿಸಬೇಕು . ಕನ್ನಡದಲ್ಲಿ ಇರುವ ೪೦ ಬಗೆಗಳು ನಮ್ಮ ನೆರವಿಗೆ ಬಂದೇ ಬರುವದು .

ಸಂಪದದಲ್ಲಿ ಈ ಬಗೆಗಳನ್ನು ಆಡುವ ಗಮನಿಸುವ ಜನರಿಲ್ಲವೇ ? ಅವರೆಲ್ಲ ದಿನಕ್ಕೆ ಒಂದಿಷ್ಟು ಮಾತುಗಳನ್ನು ಏಕೆ ಬರೆಯಬಾರದು ?
ಸಂಸ್ಕೃತವಲ್ಲದ ಶಬ್ದಗಳನ್ನು ಅಲ್ಲಿಂದ
ನಮ್ಮ ಬರೆಯುವ ನುಡಿಗೆ ಏಕೆ ಸೇರಿಸಬಾರದು ?

ಬೆರಳೆಣಿಕೆಯಷ್ಟಾದರೂ ಸರಿ , ಪ್ರಾದೇಶಿಕ ಭಾಷೆಯ ಕತೆ/ಕಾದಂಬರಿಗಳು ಇವೆ . ಅಲ್ಲಿಯೂ ನಾವು ನೋಡಬಹುದಲ್ಲ ?

ನೀವೇನಂತೀರಿ ?

ಉದಾಹರಣೆಗೆ ,

for the time being / ಸದ್ಯಕ್ಕೆ / ತಾತ್ಫುರ್ತಿಕ ಎಂಬುದಕ್ಕೆ 'ಅನಕಾತ' ಒಂದು ಪದ ಧಾರವಾಡ ಕನ್ನಡದಲ್ಲಿದೆ .

ಉದಾ. ಅನಕಾತ ಈ ಸಾಮಾನು ನಿನ್ನ ಹತ್ರನೇ ಇರಲಿ .

ಬೇರೆ ಏನಾದರೂ ಈ ಅರ್ಥದ ಶಬ್ದ ಇದ್ದರೆ ತಿಳಿಸಿ.

ಹೀಗೆಲ್ಲ ನಾವು ಏಕೆ ಮುಂದುವರೆಯಬಾರದು?

  • ಕನ್ನಡ / ಭಾಷೆ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 784 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 14, 2007 - 3:11pm — mahesha

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mahesha's picture

ನಿಮ್ಮದು ಒಪ್ಪವಾದ ಮಾತು!

ಚನ್ನಾಗಿದೆ!

ನಿಮ್ಮದೇ ಆದ ಒಂದು ಹಳೆಯ ಮಾತು ನೆಪ್ಪಾಯ್ತು "ಕನ್ನಡದ ಜಾಯಮಾನಕ್ಕೆ ಹೊಂದಬೇಕು" Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 7:58pm — Khavi

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

Khavi's picture

ನಾಡಿಗರು ಇದಕ್ಕೊಂದು "ಆಡುಮಾತಿನಲ್ಲಿ ಅಚ್ಚಗನ್ನಡ" ಅಂತ ಬೇರೆಯದೆ ಆದ ಜಾಗವನ್ನು ಸಂಪದದಲ್ಲಿ ಕೊಟ್ಟರೆ ಒಳ್ಳೇದು ಅನಿಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 3:44pm — kannadakanda

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

kannadakanda's picture

ಈ ಹೊತ್ತಿಗೆ ಎನ್ನುವುದನ್ನೇ ಬೞಸಬಹುದಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 3:19pm — mahesha

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mahesha's picture

ಏಟು ಕಿತ = ಏಸ್ಟು ಸರತಿ. ಕಿತ = ಸರತಿ, ಸಾರಿ
ಕಣ್ಗತ್ತಲು ಬಾ = ಮೂರ್ಛೆಹೋಗು, ಪ್ರಜ್ಞೆ ತಪ್ಪು
ಪಾಡು = ಸ್ಥಿತಿ
ಗುಡಿ = ದೇವಸ್ಥಾನ
ಪಾಟಿ = ಪ್ರಮಾಣ
ಮದ್ದು = ಔಷಧ
ತಾವ = ಸ್ಧಳ, ಜಾಗ
ಬಿರ್ರ‍ನೆ = ಬೇಗ
ಮತ್ತಗೆ = ಮೃದು
ಮಲ್ಲಗೆ = ನಿಧಾನ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 3:32pm — ವೈಭವ

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

ವೈಭವ's picture

ಮಿಶ್ರಿಕೋಟಿಗಳೆ,
ನೀವು ಇಲ್ಲಿ ಇದರ ಬಗ್ಗೆ ಹಾಕಿದ್ದಕ್ಕೆ ಸವಿಯೊದಗು..

ನಾನು ನಮ್ಮ ಹಳ್ಳಿಗೆ ಹೋದಾಗಲೆಲ್ಲ ಅಲ್ಲಿನ ಮಾತುಗಳುನ್ನು ತಿಳಿದು ಟಿಪ್ಪಣಿ ಬರೆಯುವೆ...ಹಳ್ಳಿಲಿ ಮಾತಾಡೋದು ೯೯% ಕನ್ನಡ ಇರುತ್ತೆ.. ೦.೫% ಇಂಗ್ಲೀಸು ( ಅದು ಇತ್ತೀಚೆಗೆ)
೦.೫% ಸಕ್ಕದ... ನನ್ನ ಅನಿಸಿಕೆ.

ಉದಾ
ಅಡ್ಡಬಿದ್ದೆ - ನಮಸ್ಕಾರ
ಹಟ್ಟಿ - ಮನೆ
ದಿಗಿಲು - ಭಯ
ಕೆಚ್ಚೆದೆ, ಗುಂಡಿಗೆ - ಧೈರ್ಯ
ಒಸಿ( ವಸಿ) - ಸ್ವಲ್ಪ
ಒಟ್ಲು, ಒಟ್ಟಿಲ್ - ರಾಶಿ
ತಾವಿಗೆ (ತಾಕೆ) - ಜಾಗಕ್ಕೆ ( ನಾನು ದೊಡ್ಡಿತಾಕೆ ಓಗ್ಬುಟ್ಟು ಬರ್ತೀನಿ)
....
ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 3:55pm — mahesha

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mahesha's picture

ಗುಪ್ಪೆ / ಕುಪ್ಪೆ / ಗೂಡೆ = ರಾಶಿ,
ಇಲು = ಮನೆ
ಬಂಡಾಟ= ಮೋಸ, ವಂಚನೆ
ಹಿಪ್ಪೆ = ಸಾರವಿಲ್ಲದ, ಕಸ, ತ್ಯಾಜ್ಯ,
ಗಬ್ಬು = ದುರ್ಗಂಧ
ಸೀಟು = ಒರೆಸು, ಶುಚಿಗೊಳಿಸು
ಹಸಿಹಿಟ್ಟು = paste
ನವೆ/ಗಂದೆ = allergy Smiling "ಅವಂಗೆ ತಾಳೆಯೆಣ್ಣೆ ತಿಂದ್ರೆ ನವೆ ಆಯ್ತದೆ."
ಲೊಳಲೊಟ್ಟೆ = crap
ಲೋಳೆ = juice, paste
ತೊಳೆ ( ಹಲಸಿನ ) = part?, ಚೂರು
ಎಸಳು = petal
ಮಂದಲಿಗೆ = matress, bed
ಬೋಸಿ = ಗಟ್ಟಿಯಾದ ಗುಂಡಗಿನ vessel.
ಕೊಸರು = extra
ಕೊಸರಾಡು = show irritatation
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 11:02am — ಸಂಗನಗೌಡ

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

ಸಂಗನಗೌಡ's picture

’ಮನೆ’ ಕನ್ನಡಾನೇ. ಅದಕ್ಕೆ ’ಹಟ್ಟಿ’ ,’ಇಲು’ ಮುಂತಾದ ಸಾಟಿ ಒರೆಗಳಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 12:39pm — mahesha

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mahesha's picture

ಸಂಗನ

ಮನೆ = ಸಂಸಾರ
ಇಲು/ಇಲ್ಲು = ಗೃಹ
ಹಟ್ಟಿ = ಬಡಗರ ಗುಂಪು ಇದುವ ಒಂದು ಇಲ್ಲು; ದನದ ಹಟ್ಟಿ;, ಒಟ್ಟಿನಲ್ಲಿ ಒಂದು ಗುಂಪು ನೆಲೆಸುವ ನೆಲೆ.

ಆದ್ರೆ ಕನ್ನಡದಲ್ಲಿ ಮನೆ ಅನ್ನೋದು home ಅಂತ ನಾವು ಬಳಸ್ತೀವಿ. ಮನೆ ಅಂದ್ರೆ home, ಇಲ್ಲು ಅಂದ್ರೆ house ಅಂತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2007 - 11:50am — mananthprabhu

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mananthprabhu's picture

ತುಳುವಿನಲ್ಲಿ ಮನೆಗೆ "ಇಲ್ಲ್" ಎ೦ದು ಹೇಳುತ್ತಾರೆ.

"ಯಾನ್ ಇಲ್ಲಗ್ ಪೋಪೆ" ಅ೦ದರೆ "ನಾನು ಮನೆಗೆ ಹೋಗುತ್ತೇನೆ" ಎ೦ದು.

ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2007 - 11:59am — mahesha

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mahesha's picture

ಅನಂತ..

ಬರೀ ತುಳು ಅಲ್ಲ, ಎಲ್ಲ ದ್ರಾವಿಡ ನುಡಿಗಳಲ್ಲೂ ಇಲ್ಲು ಇದೆ.

ಹಿತ್ತಿಲು = ಹಿಂತೆ + ಇಲು => ಹಿಂತಿಲು => ಹಿತ್ತಿಲು ( ಪಾವೆಂ ಪದಾರ್ಥ ಚಿಂತಾಮಣಿ )
ಮುಂದಿಲು ( ತುಳು ಬಳಕೆ ಅಲ್ವಾ? )

ತಮಿಳಲ್ಲಿ "ಆರಯ್ಯು ಇಲ್ಲಂ" ಅಂದ್ರೆ "research centre"
ತೆಲುಗಲ್ಲೂ ಇಲ್ಲು ಇದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 12:02pm — shreekant.mishrikoti

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

shreekant.mishrikoti's picture

ಅನಕಾತ ಶಬ್ದಕ್ಕೆ ಸಂಬಂಧಿಸಿ(ರಬಹುದಾ)ದ ಇತರ ಶಬ್ದಗಳು

ಅನಕ ,( ಈಗನಕ - ಈಗಂತೂ )
ಅನ್ನಕ್ಕ ( ಉದಾ : ಮಾಡದನ್ನಕ್ಕ - ಮಾಡದೆ ಇರುವವರೆಗೆ )
ತನಕ ( ಆವರೆಗೆ ಉದಾ : ಗುರುವಿನ ಗುಲಾಮನಾಗುವ ತನಕ )
ಆತನಕ , ಈತನಕ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 12:42pm — mahesha

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mahesha's picture

ಸಾರ್‍..

'ಅನ್ನಕ್ಕ'ದಾಗ ಮರಾಟಿಯ "ನಕ್ಕೋ/ನಕ್ಕಾ"ದ ನೆರಳೇನಾದರು ಇದ್ಯಾ ಅಂತ ಐಬ ಹತ್ತೈತಿ ನನ್ ತಲಿಯೊಳಗಾ!!

ದಾರವಾಡದ ಕಡೇ ಮರಾಟಿ ಒರೆಗಳನ್ನು ಕಲೆಸಿಕೊಂಡು ಮಾತಾಡ್ತಾರ. ಅಲ್ವಾ!!
.
..

ಇದರ ಬಗ್ಗೆ ಬರೇರಿ.

ಮಾಡ್ತಾರ = ಮಾಡುತ್ತಾರೆ / ಮಾಡ್ತವ್ರೆ
ಮಾಡ್ಯಾರ = ಮಾಡಿದ್ದಾರೆ / ಮಾಡವ್ರೆ

ಗವನ: ಮಾಡ್ತಾರ/ ಮಾಡ್ತವ್ರೆ ಬಲು ಹತ್ತಿರ ಐತೆ.

ಈ 'ಐತೆ/ಐತಿ', 'ಅದೆ/ಅದಾ', ಇವೂ ಕೂಡ ತೆಂಕಲು/ಬಡಕಲು ಎರಡೆಡೆಯೂ ಹೆಚ್ಚು ಬಳಕೆಯಲ್ಲಿದೆ ಅಲ್ವಾ!
===============================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 12:47pm — ವೈಭವ

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

ವೈಭವ's picture

"'ಅನ್ನಕ್ಕ'ದಾಗ ಮರಾಟಿಯ "ನಕ್ಕೋ/ನಕ್ಕಾ"ದ ನೆರಳೇನಾದರು ಇದ್ಯಾ ಅಂತ ಐಬ ಹತ್ತೈತಿ ನನ್ ತಲಿಯೊಳಗಾ!!..."

ಇಲ್ಲ... ಈ 'ಅನ್ನಕ್ಕ' ಶರಣರ ವಚನಗಳಲ್ಲಿ(೧೨ ನೇ ಶತಮಾನ) ತುಂಬಾ ಐತಿ...

ಮರಾಟಿಯ ನೆರಳು ೧೬,೧೭ ನೇ ಶತಮಾನದೀಚೆಗೆ ಬಿದ್ದಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 1:51pm — mahesha

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mahesha's picture

ಅವುದವುದು !

http://en.wikipedia.org/wiki/Marathi ಅಲ್ಲಿ ಅವರು ಮರಾಟಿಯ ನೆರಳೇ ಕನ್ನಡದ ಮೇಲೆ ಜಾಸ್ತಿ, ಕನ್ನಡದ ಸೊಂಕಿಲ್ಲದೇ ಮರಾಟಿ ಐತೆ ಅನ್ನೋ ಹಂಗೆ ಬರೆದುಕೊಂಡವ್ರೆ!!

ಆದರೆ ಜ್ನಾನೇಶ್ವರನ ಕಾಲವೂ ೧೨ನೇ ಶತಮಾನವೇ!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 1:09pm — shreekant.mishrikoti

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

shreekant.mishrikoti's picture

೧. ಅನ್ನಕ್ಕ - ಇದನ್ನು ವಚನ ಸಾಹಿತ್ಯದಲ್ಲಿ ನೋಡಬಹುದು .

ಅನ್ನಕ್ಕ , ನಕೋ ಗಳನ್ನು ಹೋಲಿಸಲಾಗದು .

ನಾವು ಯಾವಾಗ ಹೋಲಿಸಬೇಕೆಂದರೆ , ಅಕ್ಷರಗಳು ಒಂದೇ ರೀತಿಯಿರುದಷ್ಟೇ ಅಲ್ಲ , ಅರ್ಥಗಳು ಹತ್ತಿರವಾಗಿರಬೇಕು . ಬರೀ ಕೆಲ ಅಕ್ಷರಗಳನ್ನು ಹೋಲಿಸಿ ತಲೆ ಕೆಡಿಸಿಕೊಳ್ಳಲಾಗದು . ತಲೆ ಕೆಡಿಸಲಾಗದು Smiling.

೨. ಮರಾಠಿಯ ನಕೊ , ನಕ್ಕೋ ದಲ್ಲಿ ಕನ್ನಡ 'ಕೋ' ದ ಪ್ರಭಾವ ಇದೆ. ನ ಕೋ - ತೆಗೆದುಕೊಳ್ಳಬೇಡ -ತೆಗೆದುಕೊಳ್ಳುವದು ಬೇಡ ಎಂದರ್ಥ .
ಇದು 'ಕನ್ನಡ ಜ್ಞಾನೇಶ್ವರಿ' ಎಂಬ - ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ, ಕನ್ನಡ ಪುಸ್ತಕದಲ್ಲಿದೆ. ಇತ್ತೀಚೆಗೆ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಈ ಬಗ್ಗೆ ಬಂದಿತ್ತು . ರಂ.ಶಾ.ಲೋಕಾಪುರ ಅವರು ಜ್ಞಾನೇಶ್ವರಿ ಅಧ್ಯಯನ ಮಾಡಿ ಅದರಲ್ಲಿರುವ ಕನ್ನಡ ಶಬ್ದಗಳನ್ನು ಹುಡುಕಿ ಕೊಟ್ಟಿದ್ದಾರೆ.

೩. ಪುರುಸೊತ್ತು ಆದಾಗ ಧಾರವಾಡ ಕನ್ನಡದ ಕ್ರಿಯಾಪದ ಮತ್ತಿತರ ಪದಗಳ ರೂಪಗಳನ್ನು ತಿಳಿಸಿಕೊಡಬೇಕು ಎಂಬ ಆಸೆ ಇದೆ.
ನೋಡೋಣ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 1:44pm — mahesha

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mahesha's picture

ಬೋ ಚಂದಾಗಿ ಹೇಳೀರಿ, ನನ್ನಿ!

ಅಲಾ! 'ನಕ್ಕೊ'ದಾಗೇ ಕನ್ನಡ ಐತಾ! WOW. 'ಕನ್ನಡ ಜ್ನಾನೇಶ್ವರಿ' ಓದಿಕೋಬೇಕು.

ದಾರವಾಡದ ಕನ್ನಡದ ಬಗ್ಗೆ ಬರೇರಿ. ನಂಗೆ ತಿಳಿಯಕ್ಕೆ ಶಾನೆ ಬಯಕೆ ಐತೆ!

ನನ್ನಿ!!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 11:10am — ಸಂಗನಗೌಡ

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

ಸಂಗನಗೌಡ's picture

’ನಕ್ಕೊ’ ದಲ್ಲಿ ಕನ್ನಡದ ನೆರಳು ನಿಚ್ಚಳ. ಕೊಟ್ಟುಕೊ, ಬಿಟ್ಟುಕೊ, ಬ್ಯಾಡಪ್ಪೊ, ವಲ್ಲೆಪೊ, ಇಂತ ಬಳಕೆ ಆಡು ಮಾತಿನಲ್ಲಿ ಇದೆ. ಅದೇ ನೆರಳು ಹಿಂದಿಯ ’ನಾ’,’ನಹಿ’ ಒರೆಗಳಿಗೆ ಸೇರಿ, ’ನಕ್ಕೊ’ ಆಗಿದ್ದೀತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 15, 2007 - 12:44pm — mahesha

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

mahesha's picture

ತನಕhttp://dsal.uchicago.edu/cgi-bin/philologic/getobject.pl?c.1:1:559.burrow
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 10:08am — Sunil Jayaprakash

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

Sunil Jayaprakash's picture

ಹೀಗೆಲ್ಲ ನಾವು ಏಕೆ ಮುಂದುವರೆಯಬಾರದು?

ನಿಮ್ಮ ಆಶಯಕ್ಕೆ ನಾನೂ ಕೈಜೋಡಿಸುವೆ ಮಿಶ್ರಿಕೋಟಿಗಳೇ. ನಮ್ಮ ಕನ್ನಡನಾಡಿನಲ್ಲಿ ಆಗಬೇಕಿರುವುದು ಬಹುಮುಖ್ಯವಾಗಿ ಇದೇ ಅಲ್ಲವೇ. ಬೇರೆ ಬೇರೆ ಪ್ರದೇಶದ ನುಡಿಗಟ್ಟುಗಳು, ಗಟ್ಟಿಯಾದ ಅರ್ಥವಿರುವ ಪದಗಳು ಎಲ್ಲಕಡೆ ಬಳಕೆಗೆ ಬಂದು ಎಲ್ಲರಿಗೂ ಕನ್ನಡದ ಗಟ್ಟಿತನ ತಿಳಿಯುವಂತಾಗಬೇಕು. ನಾವು ನೀವು ಹೀಗೆಯೇ ನಮ್ಮ ನಮ್ಮ ಕೈಲಾದಷ್ಟು ಮೈಸೂರು, ಮಂಗಳೂರು, ಮಂಡ್ಯ, ಹಾಸನ, ಬಡಗ, ತುಳು, ಕೊಡವ,.., ಹೀಗೆಮುಂತಾದ ಪ್ರಾದೇಶಿಕೆ ಬಳಕೆಗಳ ಹನಿಗಳನ್ನು ಕನ್ನಡ ನುಡಿಗೆ ಸೇರಿಸಿ, ಕನ್ನಡವನ್ನು ಜೇನಿನ ಹೊಳಯಾಗಿಸೋಣ. ನನ್ನಿ.

for the time being / ಸದ್ಯಕ್ಕೆ / ತಾತ್ಫುರ್ತಿಕ ಎಂಬುದಕ್ಕೆ 'ಅನಕಾತ' ಒಂದು ಪದ ಧಾರವಾಡ ಕನ್ನಡದಲ್ಲಿದೆ, ಉದಾ. ಅನಕಾತ ಈ, ಸಾಮಾನು ನಿನ್ನ ಹತ್ರನೇ ಇರಲಿ. ಬೇರೆ ಏನಾದರೂ ಈ ಅರ್ಥದ ಶಬ್ದ ಇದ್ದರೆ ತಿಳಿಸಿ.

ಶ್ರೀಕಾಂತ ಮಿಶ್ರಿಕೋಟಿಗಳೇ, ಕಳೆದ ವಾರ ವಚನಗಳ ಬಗ್ಗೆ ನಾಲ್ಕು ಪುಸ್ತಕಗಳನ್ನು (ಹೇಮರೆಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ, ಅಲ್ಲಮ, ಬಸವಣ್ಣ - ಗದಗದಲ್ಲಿರುವ ಒಂದು ಪ್ರಕಾಶನ ಅನ್ನಸುತ್ತೆ) ಕೊಂಡುಕೊಂಡೆ. ಇವೆಲ್ಲವುಗಳಲ್ಲಿ ನನ್ನ ಹುಡುಕಾಟ ಇದ್ದದ್ದು, ಪದಪ್ರಯೋಗಗಳ ಬಗ್ಗೆ. ಅಚ್ಚರಿಯೆನ್ನುವಂತೆ, ನೀವು ಹೇಳಿದ್ದ, ಅನಕಾತ ಎಂಬ ರೀತಿಯ ಪ್ರಯೋಗಗಳು ಅಕ್ಕಮಹಾದೇವಿಯ ವಚನಗಳಲ್ಲಿ ಕಂಡು ಬಂತು.

ಮಾಡುವನ್ನಕ್ಕ, ಭಜಿಸುವನ್ನಕ್ಕ, ಅನಕವಾಡಿ, ಹೀಗೆ, ಅನ್ನಕ್ಕ, ಅನಕ ಎಂಬ ಪದಬಳಕೆಯನ್ನು ಕಂಡೆ. ಇದು ಒಂದು ರೀತಿ, ಅಲ್ಲಿಯ (ಅಥವಾ ಇನ್ನು ಸರಿಯಾಗಿ ಹೇಳಬೇಕೆಂದರೆ ಉಲ್ಲಿಯ) ತನಕ = ಅನಕ, until then, until that time, always ಹೀಗೆ ಬಳಕೆಯಾಗಿತ್ತು.

ಈ ಅನಕದಂತೆಯೆ, ಇನಕ, ಎನಕ(ಪ್ರಶ್ನಾರ್ಥಕವಾಗಿ), ಉನಕ (ಉದು ಭಾವದಲ್ಲಿ) ಎಂಬ ಪದಗಳನ್ನೂ ವ್ಯಾಕರಣ ಸೂತ್ರಗಳಿಗೆ ಜೋತು ಬೀಳದೆ, ಕನ್ನಡ-ಸಸ್ಯಗಳಿಗೆ ಯಾವುದೇ ಕೀಟಬಾಧೆ ತಟ್ಟದಂತೆ ಪದಗಳನ್ನು ಬಳಸಬಹುದು ಎಂಬುದನ್ನು ಅಕ್ಕನ ವಚನಗಳನ್ನು ಓದುವಾಗ ತಿಳಿದುಕೊಂಡೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 2:13pm — muralihr

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

muralihr's picture

ತಕ್ಷಣ (ಈಗ) ಯಾವುದು ತಲೆಗೆ(ಮನಸ್ಸಿಗೆ) ಬರ್ತಿಲ್ಲಾ.
ಬ೦ದಾಗ ನೋಡೊಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 2:14pm — muralihr

ಉ: ಕನ್ನಡ ನುಡಿಗೆ ಮುಂದಿನ ದಿಕ್ಕು

muralihr's picture

ತಕ್ಷಣ (ಈಗ) ಯಾವುದು ತಲೆಗೆ(ಮನಸ್ಸಿಗೆ) ಬರ್ತಿಲ್ಲಾ.
ಬ೦ದಾಗ ನೋಡೋಣ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ: ನಮಗಿರುವ ಆಯ್ಕೆಗಳು
  • ಧಾರವಾಡ ಕನ್ನಡ- ಹೊಸ ಸರಣಿ
  • ಬೇರೆ ಭಾಷೆಯ ಪದಗಳ ಬಳಕೆ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಮಂಗಳೂರು ಕನ್ನಡ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜಿಪುಣ ನನ್ನ ಗಂಡ
  • ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
  • ಓದಿದ್ದು ಕೇಳಿದ್ದು ನೋಡಿದ್ದು 42 ಮಾನಸಿಕ ಸ್ಥಿತಿ ಪರೀಕ್ಷಿಸಿ ಮಿಂಚಂಚೆ ಕಳುಹಿಸುವ ಗೂಗಲ್
  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 78 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator