ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)
ನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ?
ಆದರೆ , ಹೋದರೆ , ಬಂದರೆ , ಮುಂದೆ , ಹಿಂದೆ , ನಡುವೆ , ಕೆಳಗೆ ಇವು ’ಅ’ ಸ್ವರದಿಂದ ಕೊನೆಯಾಗುವವು . ... ಆದರ , ಹೋದರ , ಬಂದರ , ಕೆಳಗ , ನಡುವ ಇತ್ಯಾದಿ ... ಇಲ್ಲಿನ ’ಅ’ ಕಾರ ’ಆ’ ಅಲ್ಲ ಎಂದು ನೆನಪಿಡಿ .... ( ನೋಡಿ "ನಾವು ’ಅ’ ಅನ್ನು ’ಅ’ ಅಂತೀವಿ! " (ಧಾರವಾಡ ಕನ್ನಡ - ೧ ( http://www.sampada.net/blog/shreekant_mishrikoti/06/10/2007/5865 ))
ಸರಿಯಾದ ಉಚ್ಚಾರಕ್ಕೆ ಬೇಕಾದರೆ ಯಾರಾದರೂ ಧಾರವಾಡಿಗರನ್ನು / ಉತ್ತರ ಕರ್ನಾಟಕದವರನ್ನು ಕೇಳಿ ನೋಡಿ .
---------------------------------------------
ನಿನ್ನೆ ಹೇಳಿದ ಶಬ್ದಗಳಿಗೆ ಇನ್ನೊಂದೆರಡು ಕುತೂಹಲಕರ ಉದಾಹರಣೆಗಳು ದೋಸೆ -> ದ್ವಾಸಿ , ವೇಳೆ -> ವ್ಯಾಳ್ಯಾ , ಬೇಸಿಗೆ -> ಬ್ಯಾಸಿಗಿ
---------------------------------------------
ಈಗ ಧಾರವಾಡದಾಗ , ಮಳೆಗಾಲದಾಗ , ವೈಶಾಖದಾಗ , ಟಾಕೀಸಿನ್ಯಾಗ ಇವು ಧಾರವಾಡದಲ್ಲಿ , ಮಳೆಗಾಲದಲ್ಲಿ ಇತ್ಯಾದಿಗಳ ಇಲ್ಲಿಯ ರೂಪಗಳು .
---------------------------------------------
ಈ ಉದಾಹರಣೆಗಳನ್ನು ಈ ತಿಂಗಳ ( ನವಂಬರ್ ೨೦೦೭ ) ಕಸ್ತೂರಯೊಳಗಿನ ಒಂದು ಕತೆಯಿಂದ ತಗೊಂಡೇನಿ ... ಬೇಕಾದರ ನೀವೂ ಓದಲಿಕ್ಕೆ ಪ್ರಯತ್ನ ಮಾಡ್ರಿ as an exercise !
---------------------------------------------
ಈಗ ನಿಮಗೊಂದು ಪ್ರಶ್ನಿ ... joint family ಗೆ ಕನ್ನಡದಾಗ ಏನಂತಾರ? ಹೇಳ್ರಿ , ನೋಡೋಣ?

- shreekant.mishrikoti ರವರ ಬ್ಲಾಗ್
- Login or register to post comments
- 372 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)
"ಒಕ್ಕುಟುಂಬ" ಅಂತ ಹೇಳಬಹುದು ಅಲ್ವೇನ್ರಿ
??
ಉ: ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)
ಅಯ್ಯೋ, ಬಿವತ್ಸ, ಹೇಳಬಹುದು, ಅಲ್ಲ, ನಮ್ಮ ಮನೆಕಡೆ ಹಾಗೇ ಹೇಳ್ತಾ ಇರೋದು
ಆದರೆ "ಈಗೀಗ ಅಲ್ಲಲ್ಲಿ" ಜಾಯಿಂಟ್ ಫ್ಯಾಮಿಲಿ ಬಂದಿರೋದು ಸುಳ್ಳಲ್ಲ 
ಉ: ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)
ಕೂಡುಕುಟುಂಬ ಅಂತ ಒಂದು ಶಬ್ದ ಬಳಕೆಯಲ್ಲಿದೆ ..
ಏಕತ್ರ ಘರಾಣೆ ಅಂತಲೂ ಒಂದಿದೆ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)
ಸಾಮಾನ್ಯವಾಗಿ ಎಲ್ಲಾ ದಕ್ಷಿಣ ಕರ್ಣಾಟಕದಲ್ಲಿ ’ಎ’ಯಿಂದ ಕೊನೆಯಾಗುವ ಶಬ್ದಗಳನ್ನು ಉತ್ತರ ಕರ್ಣಾಟಕದವರು ’ಇ’ ಮಾಡಿ ಉಚ್ಚರಿಸುತ್ತಾರೆ. ಆದರೆ ಅರ್ಥವ್ಯತ್ಯಾಸ ಇದ್ದಾಗ ಎರಡೂ ರೂಪಗಳನ್ನು ಹಾಗೆಯೇ ಬೞಸುತ್ತಾರೆ. ಗಾದಿ=ಹಾಸಿಗೆ, ಗಾದೆ=ಗಾದೆಮಾತು, ಬಂಡಿ=ಚಕ್ಕಡಿ, ಬಂಡೆ=ಕಲ್ಲು, ಮಂದೆ=ಕುಱಿಗುಂಪು, ಮಂದಿ=ಜನರು (ಜನರ ಗುಂಪು)
ಹೆಚ್ಚಿನ ಪದಗಳಲ್ಲಿ ಕೊನೆಯ ’ಎ’ ಕಾರ ’ಇ’ಕಾರವಾಗುತ್ತದೆ. ಕೆಲವು ಪದಗಳು ದಕ್ಷಿಣ ಉತ್ತರ ಕರ್ಣಾಟಕವೆರಡೂ ಕಡೆಗೂ ಇಕಾರವಾಗಿದೆ ಉದಾಹರಣೆಗೆ ತಂಗೆ=ತಂಗಿ, ಬೆಂಕೆ=ಬೆಂಕಿ. ಹೞಗನ್ನಡದಲ್ಲಿ ತಂಗೆ ಮತ್ತು ಬೆಂಕೆ ರೂಪಗಳು. ಒಟ್ಟಿನಲ್ಲಿ ಹೇೞಬೇಕೆಂದರೆ ’ಎ’ಕಾರ ಶಿಷ್ಟರೂಪ,ಗ್ರಾಂಥಿಕರೂಪ ಅಥವಾ ಅಧಿಕೃತ ರೂಪ. ’ಇ’ಕಾರಾಂತ ಆಡುಭಾಷೆಯಲ್ಲಿರುವ ರೂಪ.