ಎಲ್ಲೇ ಹೋಗು ಹಿಂಬಾಲಿಸುವೆ...................,
ಎಲ್ಲೇ ಹೋಗು ಹಿಂಬಾಲಿಸುವೆ...................,
ಕತ್ತಲೆ ಇರಲಿ, ಬೆಳಕೆ ಇರಲಿ,
ಮಳೆ ಇರಲಿ, ಬಿಸಿಲೆ ಇರಲಿ,
ನಿನ್ನನು ಬಿಡದೆ ನಾ ಇರುವೆ, ನಿನ್ನೆ ನಾ ಹಿಂಬಾಲಿಸುವೆ,
ನಿ ನಿಂತರೆ ನಿಲ್ಲುವೆ, ನಡೆದರೆ ನಡೆವೆ,
ನೀ ಮಲಗಿದರೂ ಪಕ್ಕದಲ್ಲೇ ಇರುವೆ,
ನಿನಗೆ ನಿದ್ದೆ ಬರಲೂಬಹುದು.
ನಾ ಮಾತ್ರ ಸದಾ ಎಚ್ಚರ ವಾಗಿರುವೆ.
ನೀ ಯಾರಿಗಾದರೂ ಪ್ರೀತಿಸು, ಎಲ್ಲಿಗಾದರೂ ಹೋಗು
ನಿನ್ನ ಜೊತೆ ಯಲ್ಲೇ ಬರುವೆ
ನೀ ಬದುಕಿದರೆ ಬದುಕುವೆ, ಸತ್ತರೆ ಜೊತೆ ಬರುವೆ.
ನನ್ನ ಏಕೆ ಹೆದರುವೆ ವೋ ಗೆಳತಿ,
ನಾನೇ ನಿನ್ನ ನೆರಳಾಗಿರುವೆ.
ಶಶಿ ಬಿರ್ಗೆ

- Shashikanth. Birge ರವರ ಬ್ಲಾಗ್
- Login or register to post comments
- 99 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: