IT - ಸಿಂಪ್ಟಮ್ಸ
ನೀವು ಈ IT ಇಂಡಸ್ಟ್ರಿ ನಲ್ಲಿ ತುಂಬ ದಿನಗಳಿಂದ ಇದ್ರೆ ... ಈ ಕೆಳಗಿನವು ನಿಮ್ಮ ಸಿಂಪ್ಟಮ್ಸ ಆಗಿರ್ತವೆ.
1. ನಿಮ್ಮ ಮನರಂಜನೆಯ ಮುಖ್ಯ ಮೂಲ , ಮುಖ ಪರಿಚಯವೂ ಮರೆತು ಹೋಗಿರುವಅಂತ?! ವ್ಯಕ್ತಿಗಳ forwards.. (ಮತ್ತು ಇಲ್ಲಿನವರಿಗೆ ಸಂಪದದ ಚರ್ಚೆ/ ಬ್ಲಾಗುಗಳು
)
2. ನೀವು ನೀರಿಗಿಂತ ಹೆಚ್ಚಾಗಿ ಕಾಫಿ ಅತ್ವ ಟೀ ಕುಡಿಯುತ್ತೀರಿ.
3. ನಿಮ್ಮ ಮನೆ ಕಂಪ್ಯೂಟರ್ ಅನ್ನು Ctrl+Alt+Del (ಆಫೀಸ್ ಕಂಪ್ಯೂಟರ್ಗಳನ್ನು ಲಾಕ್ ಮಾಡುವಂತೆ ! ) ಒತ್ತಿ ಆಫ್ ಮಾಡಲು ಯತ್ನಿಸುತ್ತೀರಿ.
4. ಮನೇಲಿ ಮೊಬೈಲ್ ರಿಂಗ್ ಆದ್ರೆ ಫೋನ್ ರಿಸೀವ್ ಮಾಡಕ್ಕೆ ಮನೆಯಿಂದ ಹೊರಗೆ ಹೋಗ್ತೀರಿ!
5. ಮನೆ ಲ್ಯಾಂಡ್ ಲೈನ್ ನಿಂದ ಫೋನ್ ಮಾಡಬೇಕಾದಾಗ ಕೆಲವೊಮ್ಮೆ 0 (ಸೊನ್ನೆ) ಒತ್ತಿ ಹೊರಗಿನ ಫೋನ್ ನಂಬರ್ ಒತ್ತುತ್ತೀರಿ!
6. ನೀವು ನಿಜವಾದ ಕಾರ್ಡ್ ಗಳಲ್ಲಿ Solitaire ಆಡದೆ ವರ್ಷಗಳೇ ಆಯ್ತು!
7. ನಿಮ್ಮ ಹಿಂದಿನ ಆಕರ್ಷಣೆ ( crush ) HR ಟೀಮ್ ನ ಒಬ್ಳು ಹುಡುಗಿ ಆಗಿದ್ಲು. ನಿಮ್ಮ ಈಗಿನ ಆಕರ್ಷಣೆ ಕೂಡ HR ಟೀಮಿನ ಹೊಸ ಹುಡುಗಿ. ಅಷ್ಟೆ ಅಲ್ಲ ನಿಮ್ಮ ಮುಂದಿನ ಆಕರ್ಷಣೆ ಗಳೂ HR ಟೀಮಿನ ನ ಹುಡುಗಿಯರೇ ಆಗಿರುತ್ತಾರೆ.
8. ನೀವು ನಿಮ್ಮ ಇಡೀ ದಿನವನ್ನು ಅವ್ರು ಇವ್ರು ಕಳಿಸಿರುವ ಮೇಲ್ ಫಾರ್ವರ್ಡುಗಳನ್ನ ಓದೋದ್ರಲ್ಲಿ, ಸಿಗರೇಟ್ ಸೇದೊದ್ರಲ್ಲಿ, ಕಾಫಿ /ಟೀ ಕುಡಿಯೋದ್ರಲ್ಲಿ, TT ಆಡೋದ್ರಲ್ಲಿ ( ಅತ್ವ ಸಂಪದದಲ್ಲಿ
) ಕಲೀತಿರಿ.
9. ನಿಮ್ಮ ‘important meeting’ ಗಳಲ್ಲಿ , ಸಾಮಾನ್ಯವಾಗಿ ಎರಡು ಅತ್ವ ಮೂರು ಜನ ( ನಿಮ್ಮನ್ನೂ ಸೇರಿಸಿಕೊಂಡು ) ಇರ್ತಾರೆ.
10. ನಿಮ್ಮ PL ಅನ್ನು ಎಕ್ಷಾಂ ಸೆಂಟರಿನಲ್ಲಿ ನೋಡೋಕ್ಕೊಸ್ಕೊರವೇನೋ
ಎನ್ನುವಂತೆ, ನೀವು ತುಂಬ ‘ಸೀಕ್ರೆಟ್’ ಆಗಿ CAT ಪರೀಕ್ಷೆಗೆ ತಯಾರಿ ನಡೆಸುತ್ತ ಇರುತ್ತೀರಿ.!.
11. ನಿಮ್ಮ ಜಿಮೇಲ್ ಇಂದ ಮೇಲ್ ಯಾಕೆ ಹೋಗಿಲ್ಲ ಅಂತ Ctrl+Enter ಒತ್ತುತ್ತಾನೆ ಇರ್ತೀರಿ!
13. ನಿಮ್ಮ ಪಕ್ಕದಲ್ಲೇ ಕೂತುಕೊಂಡು ಕೆಲಸ ಮಾಡೋ ಸ್ನೇಹಿತನಿಗೆ / ಸ್ನೇಹಿತೆಗೆ (ಊಟಕ್ಕೋ / ಕಾಫಿಗೋ ಕರಿಯಕ್ಕೆ ) ಮೇಲ್ ಕಳುಸ್ತೀರಿ!
14. ಇದನ್ನು ಓದುತ್ತ ಓದುತ್ತ ಯಾರಿಗಾದರೂ ಫಾರ್ವರ್ಡ್ ಮಾಡಬೇಕು ಅಂತನೋ ಅತ್ವ ಒಂದು ಕಾಮೆಂಟು ಬರೀಬೇಕು ಅಂತಾನೋ ಅನ್ನಿಸ್ತ ಇದೆ.
15. ನೀವು ಅದೆಷ್ಟು ಬ್ಯುಸಿ ಅಂದ್ರೆ ಹನ್ನೆರಡನೇ ಪಾಯಿಂಟು ಬಿಟ್ಟು ಹೋಗಿರೋದು ಗುರ್ತುಸೋಕೂ ಟೈಮಿಲ್ಲ.
16. ಇದರ ಬಗ್ಗೆ ನಿಮೆಗೀನೆ ಗ್ಯಾರಂಟೀ ಇಲ್ಲ. ಅದಕ್ಕೆ scroll back ಮಾಡಿ ನೋಡ್ತೀರಿ!.
17. ೧೭.ಈಗ ನೀವು ಮುಗುಳ್ನಗ್ತಾ ಇದೀರಿ! ![]()
ನೀವು ೧೫ ರಿಂದ ೧೭ ರವರೆಗಿನ ಸ್ಟೆಪ್ಸ್ ಮಾಡಿರೋದನ್ತೋಓ ನಿಜ .. ಏನಂತೀರಿ! ![]()

- savithru ರವರ ಬ್ಲಾಗ್
- Login or register to post comments
- 389 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: IT - ಸಿಂಪ್ಟಮ್ಸ
ಅಷ್ಟೇ ಅಲ್ಲ ಮನೇಲ್ಲಿ ಯಾವುದಾದರು ವಸ್ತು ಎಲ್ಲಿಟ್ಟಿದ್ದೆ ಅನ್ನೋದು ಮರೆತುಹೋದಾಗ ಕಂಪ್ಯೂಟರ್ನಲ್ಲಿದ್ದ ಹಾಗೇ ಮನೆ ಮೂಲೆಲ್ಲೊಂದೂ CTRL+F ಅನ್ನೋದೊಂದು ಇದ್ದರೆ ಎಷ್ಟು ಚೆಂದ ಅಂತ ಅನ್ನಿಸುತ್ತೆ...ಇದೂ ಒಂದು IT - ಸಿಂಪ್ಟಮ್ಮೆ!!
-ಸವಿತ
ಉ: IT - ಸಿಂಪ್ಟಮ್ಸ
ಸವಿತ...
ಪ್ರತಿಕ್ರಿಯೆಗೆ ನನ್ನೀ!
ನಾನು ಯಾರನ್ನಾದರೂ / ಏನನ್ನಾದರೂ ಹುಡ್ಕೋದು ಇದ್ರೆ ಗೂಗಲ್ ನಲ್ಲೆ ಹುಡ್ಕೋದು!
ಅಷ್ಟೆ ಅಲ್ಲ ctrl+z ಅನ್ನೋ ಫೆಸಿಲಿಟಿ ಸಹ ನಿಜ ಜಗತ್ತಿನಲ್ಲಿ ಇರಬೇಕು.
ಒಮ್ಮೆ ನನಗಾದ ಅನುಭವ. ನನ್ನ ಕಂಪ್ಯೂಟರ್ನಲ್ಲಿ ctrl+z (un do) ಮಾಡಿ ರೂಡಿ.
ನನ್ನ ಚಿಪ್ ಫಾಬ್ರಿಕೆಟ್ ಆಗಿ ಬಂದಿದೆ. ಅದನ್ನು ಟೆಸ್ಟ್ ಮಾಡ್ತಾ ಇದ್ದೆ. ಹಲವು ವೈರು ಕನ್ನೆಕ್ಷನ್ನುಗಳು! ಗೊತ್ತಿಲ್ಲದೆ ಎರಡು ವೈರುಗಳನ್ನ ಕಿತ್ತಾಕಿ .. ಆಮೇಲೆ ctrl+z ಮಾಡಕ್ಕೆ ಮೌಸು ಹುಡುಕ್ತ ಇದ್ದೆ!
ಸವಿತೃ
ಉ: IT - ಸಿಂಪ್ಟಮ್ಸ
ಮೌಸಾ?! ಸಾರಿ .. ಕೀ ಬೋರ್ಡ್
ಸವಿತೃ
ಉ: IT - ಸಿಂಪ್ಟಮ್ಸ
ಇದಂತೂ...ಸಿಂಪ್ಟಮ++
ಉ: IT - ಸಿಂಪ್ಟಮ್ಸ
ಹೌದಲ್ವ, ಒಂದಷ್ಟು ಕ್ಷಣ ಹಾಗನಿಸೋದುಂಟು!
ಮನೇಲಿ ಮುದ್ದೆ ಮಾಡಿ ಬಿಸುಟಿರುವ ಪೇಪರ್ ಕಂಡರೆ Shift + Delete ನೆನಪಾಗುವಂತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: IT - ಸಿಂಪ್ಟಮ್ಸ
ಹಾಂ, ಹಾಗೆ ನೋಡಿ, ನನಗೆ ಮಾಡಿದ್ದೇ ಮಾಡಕ್ಕೆ ಇಷ್ಟ ಇಲ್ಲ, CTRL + C, CTRL + V ಇರಲೇಬೇಕು. ಮ್ಯಾಕ್ರೋ ಕೂಡ ಇರಬೇಕು.
ಉ: IT - ಸಿಂಪ್ಟಮ್ಸ
ಊಟ , ಸ್ನಾನ, ನಿದ್ದೆ ಇತ್ಯಾದಿ... ದಿನಾಲೂ ಇದ್ದದ್ದೇ... ದಿನ ಮಾಡಕ್ಕೆ ಬೇಜಾರು ಅಲ್ವ...
ಇವೆಲ್ಲವನ್ನೂ ಸೇರಿಸಿ ಮಾಡುವಂತೆ ಅದಕ್ಕೊಂದು macro ಬರೀರಿ!
ಸವಿತೃ
ಉ: IT - ಸಿಂಪ್ಟಮ್ಸ
> 2. ನೀವು ನೀರಿಗಿಂತ ಹೆಚ್ಚಾಗಿ ಕಾಫಿ ಅತ್ವ ಟೀ ಕುಡಿಯುತ್ತೀರಿ.
ಹಿಂಗಾ ನಂಗೆ ನೀರು ಕುಡಿಸೋದು !!!
ಉ: IT - ಸಿಂಪ್ಟಮ್ಸ
ನಂದೂ ಅದೇ ಕಥೆ... ನೀರಿಗಿಂತ ಟೀ / ಕಾಫಿ ನೇ ಜಾಸ್ತಿ!
ಸವಿತೃ
ಉ: IT - ಸಿಂಪ್ಟಮ್ಸ
kadege heliddu sari
chennagittu
ಉ: IT - ಸಿಂಪ್ಟಮ್ಸ
ನನ್ನಿ
ಇದರಲ್ಲಿ ಯಾವ್ದಾನಾದ್ರೂ ಬಳಸಿ ಟೈಪಿಸಿ CTRL + C, CTRL + V ಮಾಡಿ
http://www.google.com/transliterate/indic/Kannada
http://googlekannada.com/
http://quillpad.com/kannada/
ಸವಿತೃ
ಉ: IT - ಸಿಂಪ್ಟಮ್ಸ
ಹಾಗೇ ಏನೋ ಬೇಜಾರಾದಾಗ ಲೈಫನ್ನೂ reboot ಮಾಡಲಿಕ್ಕೆ ಯೋಚಿಸುತ್ತೀರಿ
ಉ: IT - ಸಿಂಪ್ಟಮ್ಸ
ಸಕತ್ತಾಗಿದೆ! ನನ್ನ ಸ್ನೇಹಿತರಿಗೆಲ್ಲಾ forward ಮಾಡಿದೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: IT - ಸಿಂಪ್ಟಮ್ಸ
ಸವಿತೃ,
ನಾನೂ ೧೫ ರಿಂದ ೧೭ ರವರೆಗಿನ ಸ್ಟೆಪ್ಸ್ ಮಾಡಿರುವೆ.
೧೭ ನೇ ಸ್ಟೆಪ್ ಸ್ವಲ್ಪ ಜಾಸ್ತೀನೇ ಆಯಿತು.
ಐ ಟೀ ಇಂಡಸ್ಟ್ರೀಯಲ್ಲಿ ಇಲ್ಲದಿದ್ದರೂ ...
ಈ ಸಿಂಪ್ಟಮ್ಸ್‌ಗಳೆಲ್ಲಾ ಕಾಲಕ್ರಮೇಣ ಗುಣವಾಗುತ್ತದಾ?
ಔಷಧಿ ಬೇಕಾಗಬಹುದಾ?
-ಗಣೇಶ.
ಉ: IT - ಸಿಂಪ್ಟಮ್ಸ
ನಾನು ತುಂಬಾ ಸಲ್ ಮನೆಗೆ ತಡವಾಗಿ ಹೊದಾಗ, door bell ಬಳಸೊದರ್ ಬದಲಾಗಿ, access card ಇಂದ್ ಒಪೆನ್ ಮಾಡೊಕೆ TRY ಮಾಡತಾ ಇರ್ತಿನಿ.
--
ಪ್ರಶಾಂತ್ ಸಿ
ಉ: IT - ಸಿಂಪ್ಟಮ್ಸ
ಯಾವುದಾದರು ಆಗಬೇಕಾದ ಕೆಲಸವಿದ್ದರೆ, ಅದಕ್ಕೊಂದು ಪ್ರೋಗ್ರಾಮ್ ಬರೆಯೋ ಹಾಗಿದ್ದಿದ್ದರೆ ಎಸ್ಟು ಚೆನ್ನಾಗಿರೋದು ಅಂತ ಅನಿಸುತ್ತದೆ, ಕೆಲವೊಮ್ಮೆ.
ಉ: IT - ಸಿಂಪ್ಟಮ್ಸ
೧೪ ರಿಂದ ೧೭ ಗ್ರೇಟ್ !
೧) ಮಕ್ಕಳು ಒಂದು ಇರಬೇಕೋ , ಎರಡಿರಬೇಕೋ ಅಂತ ಚರ್ಚೆ ನಡೆದಾಗ , ಎರಡಿರಬೇಕು , ಯಾಕಂದ್ರೆ ಎರಡನೇದ್ದು ಬ್ಯಾಕಪ್ ಅಂತ ಹೇಳಿ ಬೈಸ್ಕೊಂಡಿದ್ದ ನನ್ನ ಗೆಳೆಯ !
೨) ಟೆಟ್ರಿಸ್ ಆಟ ಆಡೀ ಆಡೀ , ಕ್ಯಾಂಟೀನ್ ನಲ್ಲಿ ಜೋಡಿಸಿ ಇಟ್ಟ ಲೋಟ ನೋಡಿ , ಇಲ್ಲಿ ಯಾವ ಪೀಸ್ ಸರಿ ಹೋಗತ್ತೆ ಅನ್ನೋ ವಿಚಾರ ಬರೋದು !
೩) ಲಿಫ್ಟ್ ನಲ್ಲಿ ಒಂದು ವಿಂಡೋಸ್ ತರಹದ ಸ್ಕ್ರೋಲ್ ಬಾರ್ , ಯಾಕಿರಬಾರ್ದು ಅನ್ನೋ ವಿಚಾರ ಒಂದ್ಸಲ ಬಂದಿತ್ತು !
೪) ಕಂಪ್ಯೂಟರ್ ಗೇಮ್ ಗಳನ್ನು ಆಡೀ ಆಡೀ ಕನಸಿನಲ್ಲೆಲ್ಲ ಅವೇ ಬರೋವು !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"