ನೀರವತೆ!
ಇದೇನು ಕಕ್ಕುಲತೆಯೋ ಕಾಣೆ!
ಇರೆಂದೊಡನಿರದೆ...
ಬಿಡದೆ ತಿರು ತಿರುಗಿ ಬಂದು
ಮನಸಿನುಲ್ಲಾಸಗಳ
ಹುಚ್ಚೆದ್ದು ಕುಣಿಸಿ
ರಮಿಸಿ ವಿರಮಿಸಿ
ಶಾಂತವೆನುತಿರುವಾಗ
ಮತ್ತದೇ ನೀರವತೆ!
ಮನದ ದುಗುಡವನೆಲ್ಲ
ಕಿತ್ತೊಗೆದು
ಅಣಿಯಾದಂತೆಲ್ಲ...
ತಿರುತಿರುಗಿ ಕಾಡುವಾ
ನೀರವತೆ!
-ಸವಿತ

- savithasr ರವರ ಬ್ಲಾಗ್
- Login or register to post comments
- 349 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನೀರವತೆ!
nice....
but i did not understand what was "kakkulate" (my ignorance). however, I liked the bhava of this poem.
keep writing
jayadeva prasad
ಉ: ನೀರವತೆ!
ಧನ್ಯವಾದಗಳು ಪ್ರಸಾದ್,
ಕಕ್ಕುಲತೆ ಅಂದ್ರೆ ಹಂಬಲ.
-ಸವಿತ
ಉ: ನೀರವತೆ!
ok thanks
ಉ: ನೀರವತೆ!
ಕನ್ನಡದಲ್ಲಿ ಬರೀರಿ. ಇಲ್ಲವಾದರೆ ಕಾಮೆಂಟ್ ನಿರ್ದಾಕ್ಷಿಣ್ಯವಾಗಿ ಮಾಯವಾಗುತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನೀರವತೆ!
I would love to. But i dont know how to do it. I am lost
ಉ: ನೀರವತೆ!
ಇಲ್ಲಿ ನೋಡಿ: http://sampada.net/fonthelp
ಉ: ನೀರವತೆ!
http://dsal.uchicago.edu/cgi-bin/philologic/search3advanced?dbname=burro...
1075 Ka. kakulā̆te, kakalāte, kakuḷate, kakkalāte, kakkulate, kakkulite love, compassion, desire, esp. vain desire. Te. kakkū˘ṟiti greediness, avarice, miserliness.
ಕಕ್ಕುಲತೆ ಅಂದ್ರೆ ಪ್ರೀತಿ, ಕುರುಡು ಪ್ರೀತಿ ಅನ್ಕೋ ಬಹುದು.
ಸವಿತ
ಕವಿತೆ ಚೆನ್ನಾಗಿದೆ. ಬರೀತಾ ಇರಿ
ಸವಿತೃ
ಉ: ನೀರವತೆ!
ಧನ್ಯವಾದಗಳು ಸವಿತೃ..
ಇಲ್ಲಿ ಕಕ್ಕುಲತೆ ಅಂದ್ರೆ ಹಂಬಲ ಅಂತಾನೆ ಓದಿದರೆ ಚೆಂದ...
ಯಾಕಂದ್ರೆ ಈ ಕವನ ಪ್ರೀತಿಯ ಬಗ್ಗೆಯಲ್ಲ....ಬರೆದದ್ದು ಮೌನದ ಬಗ್ಗೆ..
-ಸವಿತ
ಉ: ನೀರವತೆ!
ಚೆನ್ನಾಗಿದೆ ಹಾಡು, ಬರೆಯುತ್ತಿರಿ. :-)
ನೀರವತೆ ಆಗಾಗ ಬೇಕಾಗುತ್ತದೆ, ಅದು ಒಂಟಿತನ ಅನ್ನಿಸಿಕೊಳ್ಳದಿದ್ದರೆ.
ನೀವು ಬಳಸಿದ ’ಕುಕ್ಕುಲತೆ’ ಪದ ಚೆನ್ನಾಗಿದೆ.
ಉ: ನೀರವತೆ!
ಧನ್ಯವಾದಗಳು ಸಂಗನರೇ..
-ಸವಿತ
ಉ: ನೀರವತೆ!
ವಾಸ್ತವವಾಗಿ ಇದು ಕಕುಲತೆ (ಕಕ್ಕುಲತೆ ಅಲ್ಲ) ಅಥವಾ ಕಕ್ಕುಲಾತೆ. ಇದೊಂದು ಅಚ್ಚಗನ್ನಡದ ಪದ. love, compassion, vain desire ಎಂದೇ ಅರ್ಥವಿದೆ.
ಪ್ರೀತಿಯಿಂದ
ಸಿ ಮರಿಜೋಸೆಫ್