ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › sannams ರವರ ಬ್ಲಾಗ್

ಉಪ್ಪಿಯ ಹುಟ್ಟು ಹಬ್ಬಕ್ಕೊಂದು ಪ್ರೀತಿಯ ಪತ್ರ

September 20, 2005 - 11:30pm — sannams

ಉಪ್ಪಿಯ ಹುಟ್ಟು ಹಬ್ಬಕ್ಕೊಂದು ಪ್ರೀತಿಯ ಪತ್ರ

 

ಹಲೋ ಉಪ್ಪಿ!,

 

ಹೇಗಿದ್ದೀಯಾ ಗುರು ? ನಾನು ನಿನ್ನ ಅಭಿಮಾನಿ ಆದರೆ ಅಭಿಮಾನಿ ದೇವರಲ್ಲಾ, ತುಂಬಾ ದಿವಸದಿಂದ ನಿನಗೆ ಒಂದು ಪತ್ರ ಬರೆಯೋಣ ಅಂದು ಕೊಂಡಿದ್ದೆ, ಅದಕ್ಕೆ ಟೈಮು ಈಗ ಕೂಡಿ ಬಂತು ನೋಡು ಗುರು. ನಿನ್ನ "ಗೌರಮ್ಮ" ಸೂಪರ್ ಹಿಟ್ ಆಗಿದೆ ಅಂತ ಗೊತ್ತಾಯ್ತು....ತುಂಬಾ ಕಂಗ್ರಾಜುಲೆಶನ್ಸ್ !. ಏನ್ ಗುರೂ ನೀನು "ಓ೦" ಚಿತ್ರ ಮಾಡಿದ್ದೆ ತಡ ಎಲ್ಲರೂ ಅದೇ ತರಾ ಚಿತ್ರ ಮಾಡೋಕೆ ಸುರು ಹಚ್‍ಕೊಂಡು ಬಿಟ್ಟಾವ್ರೇ, ಇರೋ ಬರೋ ಹೀರೊಗಳ ಕೈಯಲ್ಲಿ ಲಾಂಗು-ಮಚ್ಚು ನೋಡಿ ನೋಡಿ ಜನಗಳಿಗೆ ಹುಚ್ಚು ಹಿಡಿಯೊದೊಂದು ಬಾಕಿ ಇದೆ ನೋಡು.

 

"ತಾಯಿಗೊಬ್ಬ ತಲೆ೯ಮಗ" ಚಿತ್ರ ಮಾಡಿದ ಕಾಶೀನಾಥ್‍ರ ಶಿಷ್ಯನಾದ ನೀನು "ತರ್ಲೆನನ್ಮಗ" ಎಂಬ ತರಲೆ ಚಿತ್ರ ಮಾಡಿ ಕನ್ನಡ ಪೋಲಿ ಶಬ್ದಕೋಶಕ್ಕೆ ಅಪಾರ ಕೂಡುಗೆ ನೀಡಿದ್ದು ಅಲ್ಲದೆ, ಸೈಡ್ ರೋಲ್ ಮಾಡ್ತಾ ಇದ್ದ ಜಗ್ಗೇಶ್‍ನನ್ನು ಲೀಡ್ ರೋಲ್‍ಗೆ ಬಡ್ತಿಮಾಡಿದರೂ ಕೂಡಾ, ಮುಂದೆ ಇದೇ ಜಗ್ಗೇಶ್ ನಿನ್ನ "ಉಪೇ೦ದ್ರ" ಚಿತ್ರಕ್ಕೆ ಸವಾಲ್ ಹಾಕಿ ಕರಾಬು ಚಿತ್ರ "ಜಿತೇ೦ದ್ರ" ಯಾಕೆ ಮಾಡ್ದಾ ಅಂತಾ ಅಥ೯ ಆಗ್ಲಿಲ್ಲಾ ಗುರು ? ನಿನ್ನ ಮತ್ತು ಅವ್ನ ನಡುವೆ ಏನ್ ಕಿರಿಕ್ಕು ಆಯ್ತು ಉಪ್ಪಿ?. ಮೊನ್ನೆ ವಿಸಿಡಿ ನಲ್ಲಿ "ಅನಂತನ ಅವಾಂತರ" ನೊಡ್ತಾ ಇದ್ದೆ ಗುರು, ಆ ಚಿತ್ರದಲ್ಲಿ ಕಾಮಣ್ಣನ ಪಾತ್ರದಲ್ಲಿ ನಿನ್ನ ನೋಡಿ ನನಗೆ ಸಖ್ಖತ್ ನಗು ಬಂತು, ಆಗ ನರಪೇತಲು ನಾರಾಯಣನ ತರಾ ಇದ್ದ ನೀನು ಈಗ ಓಳ್ಳೆ ಬಾಡಿ ಬಿಲ್ಡ್ ಮಾಡಿದ್ದೀಯಾ...ವೆರಿಗುಡ್ ಕೀಪಿಟಪ್!.

 

ನೀನು ಡೈರಕ್ಟ್ ಮಾಡಿದ ನಿನ್ನ ಎರಡನೇ ಪಿಕ್ಚರ್‍ "ಶ್" ಮಾತ್ರ ಬೊಂಬಾಟಾಗಿತ್ತು ನೋಡು ಗುರೂ, ಕನ್ನಡದಲ್ಲಿ ಆ ತರಾ ಸಸ್ಪೆನ್ಸ್ ಥ್ರಿಲ್ಲರ್ ಮತ್ತೆ ಬಂದಿಲ್ಲಾ, ನಿನ್ನ ಗುರು ಕಾಶೀನಾಥ್ ಮಾಡಿದ "ಅಪರಚಿತ" ಕೂಡಾ ಅದೇ ತರಾ ಒ೦ದು ಒಳ್ಳೆ ಸಿನಿಮಾ, ಮುಂದೆ ಟೈಮ್ ಸಿಕ್ಕರೆ ದಯವಿಟ್ಟು ಇನ್ನೊಂದು ಥ್ರಿಲ್ಲರ್ ಪಿಕ್ಚರ್ ಡೈರಕ್ಟ್ ಮಾಡು. ಒಂದೇ ಒಂದು ಅಕ್ಷರ ಇರೋ ಸಿನಿಮಾ ಟೈಟಲ್ ಇಡೋ ಐಡಿಯಾ ಎಲ್ಲಿಂದ ನಿನಗೆ ಬಂತು ಉಪ್ಪಿ?.

 

ಹ್ಯಾಟ್ರಿಕ್ ಹೀರೊ ಶಿವರಾಜ್‍ಕುಮಾರ್ ಹ್ಯಾಟ್ರಿಕ್ ಹೊಡೆದ ಮೇಲೆ ಸಾಲು ಸಾಲಾಗಿ ಸೋತ ಚಿತ್ರಗಳಿಂದ ಟ್ರ್ಯಾಕ್ ಕಳೆದು ಕೊಂಡಾಗ ರಿಯಲ್ ರ್‍ಔಡಿಸ೦ ಟ್ರಿಕ್ ಉಪಯೋಗಿಸಿ ಶಿವರಾಜ್ ಅಭಿಮಾನಿಗಳನ್ನು ಅಟ್ರ್ಯಾಕ್ಟ್ ಮಾಡಿ ಶಿವಣ್ಣನನ್ನು ಆಫ್ ಟ್ರ್ಯಾಕ್‍ನಿಂದ ಮರಳಿ ಟ್ರ್ಯಾಕ್‍ಗೆ ತಂದ ಅದ್ಭುತವಾದ ಚಿತ್ರವೇ "ಓ೦". "ಓ೦" ಬಗ್ಗೆ ಎಷ್ಟು ಹೇಳಿ ಹೊಗಳಿದರೂ ಕಡಿಮೆ ನೋಡು ದೊರ್‍ಎ, ಸೀದಾ ಸಾದಾ ಬಡ ಬ್ರಾಹ್ಮಣರ ಹುಡುಗ ರೌಡಿ ಆಗೋ ಚಿತ್ರದಲ್ಲಿ ನಿಜ ಜೀವನದ ರೌಡಿಗಳನ್ನೆ ಹಾಕಿಕೊಂಡು ಚಿತ್ರ ಮಾಡುವಂತ ಧೈಯ೯ ಮತ್ತು ಐಡಿಯಾ ನಿನಗೆ ಎಲ್ಲಿಂದ ಬ೦ತು ? ಅವತ್ತಿನಿಂದ ಕನ್ನಡ ಚಿತ್ರರಂಗಕ್ಕೆ ಹಿಡಿದ ಈ ಮಚ್ಚು ಲಾಂಗಿನ ಹುಚ್ಚು ಇನ್ನು ಬಿಟ್ಟಿಲ್ಲಾ ನೋಡು. ಹೀರೊನ ಕೈಯಲ್ಲಿ ಫಳ ಫಳಾಂತ ಮಿಂಚಿದರೆ ಮಚ್ಚು! ಬಾಕ್ಸ್ ಆಫೀಸಿನಲ್ಲಿ ಆವಾಗಲೇ ಗಳಿಕೆ ಹೆಚ್ಚು !! ಇದಕ್ಕೆಲ್ಲಾ ನಿನ್ನ "ಓ೦" ತಾನೇ ಹಚ್ಚಿದ್ದು ಕಿಚ್ಚು!!!. ರೌಡಿಸಂ ಚಿತ್ರಗಳಿಗೆ "ಓ೦" ನಿಂದ ಓಂಕಾರ ಹಾಡಿದ ನೀನು "ಓಂಕಾರ" ದಂತ ಡಬ್ಬಾ ಚಿತ್ರ ಮಾತ್ರ ಮಾಡಬಾರದಿತ್ತು ನೋಡು ಶಿವಾ!. ಈ ತರಾ ಹೇಳ್ತಿನಿ ಅ೦ತಾ ಬೇಜಾರು ಮಾಡ್ಕೋ ಬ್ಯಾಡಾ, ನೀನೇ ಹೇಳುವ ಹಾಗೆ ನನಗೆ ಮನಸ್ಸು ಮತ್ತು ಬಾಯಿ ನಡುವೆ ಫಿಲ್ಟರ್ ಇಲ್ಲದೆ ಹೇಳ್ತಾ ಇದ್ದೀನಿ.

 

ಆಮೇಲೆ ಬಂದ ನಿನ್ನ ಎರ್‍ಅಡು ಚಿತ್ರಗಳ ಬಗ್ಗೆ ಮಾತನಾಡುವುದೇ ಬೇಡ ಎನಿಸಿದರೂ, ನಿನ್ನ ಅಭಿಮಾನಿಯಾಗಿ ಅವುಗಳ ಬಗ್ಗೆ ಹೇಳುವುದು ನನ್ನ ಕತ೯ವ್ಯ ಎಂಬುದು ನನ್ನ ಅನಿಸಿಕೆ. ನಾನು ಮಾತಾಡ್ತಾ ಇರ್‍ಓದು "ಅಪರ್‍ಏಷನ್ ಅಂತ" ಮತ್ತು "ಸ್ವಸ್ತಿಕ್" ಚಿತ್ರಗಳ ಬಗ್ಗೆ, ಆಗ ಅಲ್ಪ ಸಲ್ಪ ಬೇಡಿಕೆಯಲ್ಲಿದ್ದ ರಾಘವೇಂದ್ರ ರಾಜ್‍ಕುಮಾರ್‍ "ಸ್ವಸ್ತಿಕ್" ನಿಂದ ಸಂಪೂಣ೯ವಾಗಿ ಮೂಲೆಗುಂಪು ಮಾಡಿದ್ದರಲ್ಲಿ ನಿನ್ನ ಪಾಲು ಸಹ ಇದೆ ಎಂಬುದು ನೆನಪಿರಲಿ, ಅಷ್ಟು ಬುದ್ಧಿವಂತನಾದ ನೀನು ಇಂತಹ ಕೆಟ್ಟ ಚಿತ್ರಗಳಿಗೆ ಏಕೆ ಕೈ ಹಾಕಿದೆ ಅಂತ ನನಗೆ ಅಥ೯ ಆಗಲಿಲ್ಲ ಉಪ್ಪಿದಾದಾ. ಇವೆರಡು ಚಿತ್ರಗಳು ನೆಲಕಚ್ಚಿದ್ದೆ ತಡಾ ನೋಡು ಗಾಂಧಿನಗರದಲ್ಲಿ ನಿನ್ನ ಬೇಡಿಕೆ ಕೂಡಾ ಪಾತಾಳ ಸೇರಿತು, ಆಗ ಛಲಬಿಡದ ತ್ರಿವಿಕ್ರಮನಂತೆ ನೀನೇ ಹೀರೊ ಆಗಿ ಡೈರಕ್ಟ್ ಮಾಡಿದ "ಎ" ಮಾತ್ರ ನಿನ್ನ ಜೀವನದ ಮೈಲಿಗಲ್ಲು ಅಂದ್ರೆ ತಪ್ಪಾಗಲಾರದು. ಕೆಲವರ ಪ್ರಕಾರ ಈ ಚಿತ್ರಕಥೆ ನಿನ್ನ ಜೀವನದ ನಿಜ ಪ್ರೇಮ(ಳ)ಕಥೆ ಅಂತಾ ಸುದ್ದಿ ಅದು ನಿಜಾನಾ ಗುರು?, "ಎ" ಚಿತ್ರದ ಕ್ಲೈಮ್ಯಾಕ್ಸ್ ಸೂಪರ್ ಆಗಿದೆ ನೋಡಪ್ಪ, ಕನ್ನಡ ಚಿತ್ರರಂಗಕ್ಕೆ ಒಬ್ಬ ಸ್ಟಾರ್‍‍ ಮತ್ತು ಒಬ್ಬ ಹಿಟ್ ಮ್ಯೂಸಿಕ್ ಡೈರಕ್ಟರ್ (ಗುರುಕಿರಣ್) ಸಿಕ್ಕಿದ್ದು ಈ ಚಿತ್ರದಿಂದ. "ಬುದ್ದಿವಂತರಿಗೆ ಮಾತ್ರ" ಎಂಬ ಶೀಷಿ೯ಕೆಯೊಂದಿಗೆ ಬಂದ ಈ ಚಿತ್ರ ಚಿತ್ರರಂಗದಲ್ಲಿ ಕೋಲಾಹಲ ಮಾಡಿದ್ದು ಈಗ ಇತಿಹಾಸ.

 

ಇದಾದ ಮೇಲೆ ಬಂದ ಬಹುನಿರೀಕ್ಷಿತ ಚಿತ್ರ "ಉಪೇಂದ್ರ", ಎಲ್ಲರೂ ನಿನ್ನನ್ನು ಕೇಳಿದರು ಚಿತ್ರಕ್ಕೆ ನಿನ್ನ ಹೆಸರನ್ನೇ ಏಕೆ ಇಟ್ಟು ಕೊಂಡೆ? ಅದಕ್ಕೆ ನಿನ್ನ ಉತ್ತರ "ಚಿತ್ರದ ಟೈಟಲ್‌ನಲ್ಲಿ ಇರೋದು ನನ್ನ ಹೆಸರಲ್ಲಾ, ಚಿತ್ರದಲ್ಲಿರುವ ಹಿರೋ ಮತ್ತು ಹೀರೊಯಿನ್‍ಗಳ ಹೆಸರಿನ ಮೊದಲಕ್ಷರಗಳ ಜೋಡಣೆ"(ಉ-ಉಪ್ಪಿ, ಪೇ-ಪ್ರೇಮಾ, ದ್ರ->ದ-ದಾಮಿನಿ,ರ-ರ್‍ಅವೀನಾ), ಬುದ್ಧಿವಂತ ಕಣಯ್ಯಾ ನೀನು. ಈ ಚಿತ್ರದಲ್ಲಿ ನಿನ್ನ ವೇಷಭೂಷಣ ನೋಡಿ ಗಾಂಧಿನಗರ ನಿನಗೆ "ಹುಚ್ಚ" ಎಂಬ ಪಟ್ಟ ಕಟ್ಟಿತು, ಆ ಚಿತ್ರದಲ್ಲಿ ನಿನ್ನ ಶೇವಿಂಗ್ ಮಾಡಿದ ಸ್ಟೈಲ್ ಮಾತ್ರ "ಬ್ಯಾಕ್‍ಸ್ಟ್ರೀಟ್ ಬಾಯ್ಸ್" ಎಂಬ ಪಾಪ್ ಬ್ಯಾಂಡಿನ ಗಾಯಕ "ಎ. ಜೆ. ಮೆಕ್ಲಿನ್" ನಿಂದ ಕಾಫಿ ಹೊಡೆದದ್ದು ತಾನೆ?. "ಉಪೇಂದ್ರ" ಚಿತ್ರದಲ್ಲಿ ಹೆಂಗಸರನ್ನು ಬೈಯುವ ಮತ್ತು ಗೋಳುಹೊಯ್ದು ಕೂಳ್ಳುವ ಸೀನ್‍ಗಳನ್ನು ಬಿಟ್ಟು ಉಳಿದಂತೆ ಚಿತ್ರ ಚೆನ್ನಾಗಿ ಇತ್ತು, ಹೆಸರಿಗೆ ತಕ್ಕಂತೆ ಚಿತ್ರ ಉಪೇಂದ್ರಮಯವಾಗಿದ್ದುದಕ್ಕೆ ಸೂಪರ್ ಹಿಟ್ ಆಯಿತು.

 

ಇದಾದ ಮೇಲೆ ನೀನು ಕೈ ಹಾಕಿ ಸುಟ್ಟುಕೊಂಡ ದೊಡ್ಡ ಪ್ರಮಾಣದ ಚಿತ್ರ "ಎಚ್‍ಟು‍ಒ". ನನಗೆ ಗೊತ್ತು ಗುರು, ಇದು ನಿನ್ನ ಕನಸಿನ ಚಿತ್ರ, ತುಂಬಾ ಶ್ರ್‍ಅಮ ಮತ್ತು ಟೈಮ್ ಖಚು೯ ಮಾಡಿ ಈ ಚಿತ್ರ ಮಾಡಿದ್ದಕ್ಕೆ ನೀನು ಹಲವಾರು ವಿವಾದಗಳಿಗೆ ಗುರಿಯಾಗ ಬೇಕಾಯ್ತು. ಹೋಗಲಿ ಬಿಡು ಉಪ್ಪಿ ಈ ಚಿತ್ರದಿಂದ ಒಂದಾದರೂ ಒಳ್ಳೆ ಕಾಯ೯ ಆಯ್ತಲ್ಲಾ, ಈ ಚಿತ್ರದಿಂದ ತಾನೇ ನಿನಗೆ ನಿನ್ನ ಬಾಳ ಸಂಗಾತಿ ಪ್ರಿಯಾಂಕಳ ಜೊತೆ ಪ್ರೇಮಾಂಕುರವಾಗಿದ್ದು ?. "ಉಪೇಂದ್ರ" ಚಿತ್ರದಿಂದ ನಿನ್ನ ಮೇಲೆ ಕೋಪ ಮಾಡಿಕೊಂಡಿದ್ದ ಹೆಂಗಸರು "ಎಚ್‍ಟು‍ಒ" ಚಿತ್ರದಲ್ಲಿ ಇರೋ ನೀನು ಬರೆದಿರೋ ಸೂಪರ್ ಹಿಟ್ ಹಾಡು "ಹೂವೇ..ಹೂವೇ..." ಕೇಳಿದ ತಕ್ಷಣ ಅವರೆಲ್ಲರ ಕೋಪ ಕರಗಿ ಹೋಗಿದ್ದು ನಿಜವೇ?. ಈ ವಿವಾದಗಳಿ೦ದ ಅಷ್ಟೋಂದು ಬೇಜಾರಾದ ನೀನು ಚಿತ್ರ ನಿದೇ೯ ಶನ ಮಾಡೋದನ್ನೆ ನಿಲ್ಲಿಸಬೇಕಾಯ್ತು ಎಂಬುದು ಎಷ್ಟರ ಮಟ್ಟಿಗೆ ನಿಜ ?.

 

ಇದಾದ ಮೇಲೆ ನೀನು ನಟಿಸಿದ ಸಿಕ್ಕಾಪಟ್ಟೆ ರೀಮೇಕ್ ಚಿತ್ರಗಳಲ್ಲಿ "ಪ್ರೀತ್ಸೆ" ಮತ್ತು "ಕುಟುಂಬ" ಬಿಟ್ರೇ ಬೇರ್‍ಆವ ಚಿತ್ರಗಳು ಹೇಳೋಕೆ ಹೆಸರಿಲ್ಲದಂತೆ ತೋಪು ಹೊಡೆದು ಹೋದವಲ್ಲಾ ಶಿವಾ, ಹೋಗಲಿ ಬಿಡು ಚೆನ್ನಾಗಿ ದುಡ್ಡಾದರು ಮಾಡ್ಕೊಂಡಿ ತಾನೆ?, ಆಮೇಲೆ ನೀನು ಮಾಡಿದ ನಿನ್ನ ಡೈಲಾಗ್ ಬರಿತ "ರಕ್ತ ಕಣೀರು" ಹಿಟ್ ಆಗಿದ್ದರಲ್ಲಿ ಆಶ್ಚಯ೯ವೇನಿಲ್ಲ, ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ ಅದೇನೆಂದರೆ ನಿನ್ನ ನಿಜವಾದ ಕಲೆ ಇರೋದು ನಿನ್ನ ನೀದೆ೯ಶನ ಮತ್ತು ಸಿನಿಮಾ ಸಾಹಿತ್ಯದಲ್ಲಿ. ಇತ್ತೀಚೆಗೆ ಬಂದ "ಓಂಕಾರ", "ನ್ಯೂಸ್", "ಆಟೋ ಶಂಕರ್" ಚಿತ್ರಗಳಲ್ಲಿ ನಿನ್ನ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದೀಯಾ ಎಂಬುದನ್ನು ಓದಿದೆ, ಸಂತೋಷ.

 

ಒಂದಲ್ಲ ಒಂದು ದಿನ ಮತ್ತೆ ನೀನು ನಿದೇ೯ಶನದತ್ತ ಮರಳಿ ಕನ್ನಡ ಚಿತ್ರರಂಗವನ್ನು ಪ್ರಜ್ವಲಗೂಳಿಸುವೆ ಎಂದು ಎದುರು ನೋಡುತ್ತಿರುವ ನಿನ್ನ ಅಭಿಮಾನಿಗಳನ್ನು ನಿರಾಸೆಗೊಳಿಸಬೇಡ. ನಿನ್ನ ವಯ್ಯಕ್ತಿಕ ಜೀವನದ ಬಗ್ಗೆ ಕೆಟ್ಟದಾಗಿ ಬರೆದ ಪತ್ರಿಕೆಗಳ ಬಗ್ಗೆ ಮಾಡಿಕೊಳ್ಳಬೇಡ ಗುರು ನೀನು ಟೆನ್ಶೆನ್! ಈ ವಾರಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಪ್ರಿಂಟಾಗುವ ಪತ್ರಿಕೆಗಳಿಗೆ ನೀನೇ ಅಲ್ವಾ ರ್‍ಏಷನ್!!. ಹೇಗಿದ್ದಾನೆ ನಮ್ಮ ಜೂನಿಯರ್ ಉಪ್ಪಿ ! ಅವನಿಗೆ ತಿಳಿಸು ನನ್ನ ಪ್ರೀತಿಯ ಪಪ್ಪಿ !!, ಕೊನೆಯದಾಗಿ ನಿನಗೆ ಹೃದಯಪೂವ೯ಕವಾದ ಹುಟ್ಟುಹಬ್ಬದ ಶುಭಾಶಯಗಳು, ನೂರಾರು ವಷ೯ ಸುಖವಾಗಿ ಬಾಳು. ಯಾವಾಗಲಾದರು ನ್ಯೂಯಾಕ್೯ಗೆ ಬಂದರೆ ದಯವಿಟ್ಟು ನಮ್ಮ ಮನೆಗೆ ಒಮ್ಮೆ ಭೇಟಿಕೂಡು.

 

ಅಕ್ಕರೆಗಳೊಂದಿಗೆ ನಿನ್ನ ಅಭಿಮಾನಿ

 

 

 

 

 

~.~
  • sannams ರವರ ಬ್ಲಾಗ್
  • Login or register to post comments
  • 601 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಣೆ ಯಾಕೋ ನಾಕಾಣೆ
  • ಝೆನ್ ಕಥೆ ೩೫: ನಾನು ಯಾರೋ!
  • ಬೈಟೊ ಕಾಫಿ !!! - ೧
  • ಝೆನ್ ಕಥೆ ೩೩: ಸಾವಧಾನ!
  • ಝೆನ ಕಥೆ ೩೬: ಛತ್ರ
Syndicate content

ಲೇಖಕರು

sannams's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 21, 2008 - 3:57am
  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 291 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator