ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
ನಾನು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರಿಂದಲೋ ಏನೂ ಮೊದಲಿನಿಂದಲೂ ನನಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಒಂದು ರೀತಿಯ ಕುತೂಹಲ . ನಮ್ಮ ತಾಯಿ ಅವರ ಅಜ್ಜಿ ಮನೆಯ ಬಗ್ಗೆ ಹೇಳುವಾಗಲೆಲ್ಲಾ ಏನೂ ಸಂಶಯ ಹೀಗೂ ಬದುಕಬಹುದೇ ಎಂದು ? ಅಥವ ಇದು ಕಲ್ಪನೆಯೋ ಎಂದು
ಆಗೆಲ್ಲಾ ಒಂದು ಕುಟುಂಬವೆಂದರೆ ಕನಿಷ್ಟ ಇಪ್ಪತ್ತೈದು ಜನರಿರುತಿದ್ದರು ಅದೂ ಒಂದೇ ಮನೆಯಲ್ಲಿ. ಅಲ್ಲಿ ಅಜ್ಜ ಅಜ್ಜಿ, ಅಮ್ಮ ಅಪ್ಪ, ಚಿಕ್ಕಮ್ಮ ಚಿಕ್ಕಪ್ಪ ದೊಡ್ಡಪ್ಪ ದೊಡ್ಡಮ್ಮ ಅವರ ಮಕ್ಕಳು, ಇದ್ದರೆ ಅವರ ಮಕ್ಕಳು ಹೀಗೆ . ಊಟದ ಹೊತ್ತಿಗೆ ಎಲ್ಲರೂ ಸಾಲಾಗಿ ಕೂರುತ್ತಿದ್ದರು. ಹೀಗೆ ಅಮ್ಮ ಅವರ ಬಾಲ್ಯದ ನೆನೆಪನ್ನು ಹರಡುತಿದ್ದರೆ ಅ ಸಮಯ ಎಷ್ಟು ಸುಂದರ ಅನ್ನಿಸುತ್ತದೆ.
ಆದರೆ ಈಗಿನ ಕೆಲವು ಅವಿಭಕ್ತ ಕುಟುಂಭಗಳು ನನ್ನ ಕಣ್ಣಾ ಮುಂದೆಯೇ ಕಿತ್ತಾಡಿ ಆಸ್ತಿಗಾಗಿ ಹೊಡೆದಾಡಿ , ಬಡಿದಾಡೊ, ಓರಗಿತ್ತಿಯರ ಕಿತ್ತಾಟಗಳ ನೋಡಿ ಹೊಂದಾಣಿಕೆ ನಿಜವಾಗಲೂ ಸಾಧ್ಯವೇ? ಎಂಬ ಅನುಮಾನ ದಟ್ಟವಾಗತೊಡಗಿವೆ.
ನಾನು ಸೇರಿದ ಕುಟುಂಬವೂ ನಾಲಕ್ಕು ಅಣ್ಣ ತಮ್ಮಂದಿರ ಅನ್ಯೋನ್ಯತೆಯನ್ನು ಹೊಂದಿದಾಗಿತ್ತು ಮೊದಲು . ನಾನು ಕಾಲೇಜಿಗೆ ಹೋಗುವಾಗಲೆಲ್ಲಾ ಅವರ ಅನ್ಯೋನ್ಯತೆಯ ನೋಡಿ ಬಹಳ ಸಂತೋಷಿಸುತ್ತಿದ್ದೆ . ನಂತರದ ದಿನಗಳಲ್ಲಿ ಅವರಲ್ಲಿ ಇಬ್ಬರಿಗೆ ಮದುವೆಯಾಯಿತು ಅವರ ಹೆಂಡತಿಯರೊಳಗೆ ವೈಮನಸ್ಸು ಮೂಡಿತು . ಅಣ್ಣ ತಮ್ಮಂದಿರ ಭಾಂಧವ್ಯವೂ ತುಂಡಾಗುವಷ್ಟು ಸಡಿಲಾದಾಗ ದೂರವಾಗಿರುವುದೇ ಸರಿಯಾದ ದಾರಿ ಎಂದು ಆ ಕುಟುಂಬ ಮೂರು ಮನೆಗಳಾದವು.
ಇದು ನಡೆದದ್ದ್ದು ನಾನು ಆ ಮನೆ ಸೇಉವ ಮುಂಚೆಯೇ.
ನಾನು ಆ ಮನೆ ಸೇರಿದಾಗ ಇದ್ದದ್ದು ಮೂರೇ ಜನ ಅವರ ಅಮ್ಮ ಹಾಗು ಇಬ್ಬರು ಗಂಡು ಮಕ್ಕಳು. ಕೊನೆಯವರು ನನ್ನವರಾದರು . ಕನಿಷ್ಟ ಇರುವ ಜನರೇ ಕೊನೆಯ್ಅವರೆಗೂ ಮುಂದುವರೆಯಲಿ ಎಂದುಕೊಂಡು ನಾನು ಅನುಸರಣೆ ಕಲಿತಿದ್ದರೂ , ಹಳೇಕಾಲದ ಮನ್ಸಿನ ಅತ್ತೆಗೆ ಅದು ಸಹ್ಯವಾಗಲಿಲ್ಲ (ಅದೂ ಅವರ ಮಗನೇ ಆರಿಸಿಕೊಂಡವಳಲ್ಲವೇ ನಾನು?) ಅವರೇ ಹಠ ಮಾಡಿ ನಮ್ಮನ್ನು ದೂರ ಮಾಡಿಕೊಂಡರು ಹೀಗಾಗಿ ಆ ಕುಟುಂಬ ನಾಲ್ಕಾಗಿ ಒಡೆದಿದೆ.
ಈಗಲೂ ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಸೇರುತ್ತೇವೆ. ಪ್ರತಿಯೊಬ್ಬ್ಸರ ಮನೆಗಳಲ್ಲ್ಲಿ ಯಾವುದೇ ವಿಶೇಷವಿದ್ದರೂ ಎಲ್ಲರೂ ಅಲ್ಲಿ ಹಾಜಾರು . ಯಾವುದೇ ಪ್ರಮುಖ ನಿರ್ಧಾರಕ್ಕೂ ಎಲ್ಲರ ಅಭಿಪ್ರಾಯ ಮುಖ್ಯ . ಆದರೂ ಅವಿಭಕ್ತ ಕುಟುಂಬಗಳಲ್ಲಿ ಇರುವಂತಹ ಆತ್ಮೀಯತೆ ನಮ್ಮಲ್ಲಿಲ್ಲ ಎನ್ನಿಸುತ್ತದೆ
ಏಕೆ ಈಗಿನವರಲ್ಲಿ ಆ ಹೊಂದಿಕೆ ಕಷ್ಟವಾಗಿದೆಯೇ?
ನಾನು ಈ ಹಿಂದೆ ಹೇಳಿದಂತೆ ಅವಿಭಕ್ತ ಕುಟುಂಬಗಳಲ್ಲಿ ಹೆಂಗಸರಿಗೆ ಸ್ವಾತಂತ್ರವೂ ಕಡಿಮೆ. ಮನೆಯ ಯಜಮಾನನಿಗೆ ಎಲ್ಲ ನಿರ್ಧರಿಸುವ ಹಕ್ಕು ಇರುತ್ತದೆ
ಇದು ನನ್ನ ಅನಿಸಿಕೆ. ಯಾರೂಇದರ ವಿರೋಧಿ ಎಂದು ತಿಳಿಯಬೇಡಿ.
ನಿಮ್ಮ ಅನಿಸಿಕೆಗಳೇನು ?

- roopablrao ರವರ ಬ್ಲಾಗ್
- Login or register to post comments
- 325 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
ಹಾಗಾಗದಿದ್ದರೆ ಚೆನ್ನಾಗಿತ್ತು.
*ಅಶೋಕ್
ಉ: ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
ಜಿಜ್ಞಾಸೆ - jij~jnaase
ಉ: ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
ಇದು ನಿಮ್ಮದೊಂದೇ ಅನುಭವ ಅಲ್ಲ. ನಮ್ಮಲ್ಲಿ ಇಂದಿನ ಅನೇಕರ ಮನದಾಳದ ಮಾತು-ನೋವು. ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುವವರಿಗೆ ಸ್ವಾತಂತ್ರ್ಯ ಬೇಕೆಂಬ ಹಂಬಲ. ಆದರೆ ಹೊರಗಡೆ ನಿಂತು ನೋಡಿದರೆ ಅದೇ ಚೆನ್ನ.
ಅವಿಭಕ್ತ ಕುಟುಂಬಗಳು ಯವುದೇ ಕಾರಣಕ್ಕಾದರೂ ಒಡೆದು ಹೋಳಾಗಲಿ,, ಸ್ವತಂತ್ರವಾಗಿ ಬದುಕುವುದು ಮುಖ್ಯ. ಪರಸ್ಪರ ವ್ಯಕ್ತಿಯ ಅಭಿಪ್ರಾಯ ಸ್ವಾತಂತ್ರ್ಯ, ಹೊಂದಾಣಿಕೆ ಗಳಿಲ್ಲದ ಅವಿಭಕ್ತ ಸಂಸಾರಗಳನ್ನು ಎಷ್ಟೋ ನೋಡಿದ್ದೇನೆ.
ಉ: ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
ಹೀಗೆ ಐದು ವರ್ಷಗಳ ಹಿನ್ದೆ ಇವತ್ತ್ತಿನ ದಿನವೇ ನನ್ನ ತ೦ದೆ ದೈವಾಧೀನರಾದ ದಿನ, ಶವ ಸ೦ಸ್ಕಾರ ಆಗೋ ಮು೦ಚಿನಗಳಿಗೆಯಲ್ಲಿ ನಮ್ಮ ಹಿತೈಶಿಗಳೊಬ್ರು ಹೇಳ್ತಾ ಇದ್ರು, ನೀವಿಬ್ರು ಅಣ್ಣತ್ಮ್ಮ೦ದಿರು ಆಸ್ತಿ ಹಣದ ವಿಚಾರವಾಗಿ ಅನ್ಯೋನ್ಯತೆಯಿನ್ದ ಬಾಳ್ರಿ, ದೂರಾಗೋ ಯೋಚನೆ ಮಾಡಬೇಡಿ ಅ೦ತ. ಇನ್ನೂ ಅವರ ಮಾತು ಕಣ್ಮು೦ದೆನೇ ಇದೆ ಈಗ್ಲೂ.
ನನ್ನ ತ೦ಗಿಗಾಗಲೆ ಮದುವೆ ನಿಶ್ಯಚಯವಾಗಿತ್ತು. ತ೦ದೆಯವರು ತೀರಿಹೋಗಿ ೧ ೧/೨ ತಿನ್ಗಳಿಗೆಲ್ಲ ಮದುವೆ ಮಾಡ್ಬೆಕಾಗ್ ಬ೦ತು ಮತ್ತೂ ೭ ತಿನ್ಗಳಿಗೆಲ್ಲ ಮನೆಯವರೆಲ್ಲರೂ ಸಕತ್ ಕಶ್ಟಪಟ್ಟು ದುಡಿದಿದ್ದ ಇರೊಬರೋ ತೋಟದ ಮನೆ, ಜಮೀನ್ಗಳನ್ನೆಲ್ಲ ಮಾರಿದ್ವಿ. ೬ ಹಸುಗಳು, ೨ ಎತ್ತುಗಳು, ೬ ನಾಯಿಗಳು, ೧ ಬೆಕ್ಕು ಎಲ್ಲವನ್ನು ಮೈಸೂರಿನ ಪಿ೦ಜರಪೋಲು ಮತ್ತು ಬೆನ್ಗಳೂರಿನ ಹೆಬ್ಬಾಳದಲ್ಲಿರುವ ಡಾಗ್ ಪೌ೦ಡ್ಗಳಿಗೆ ಕೊಟ್ಟೆವು. ಇಶ್ಟು ವರ್ಶ ಇವುಗಳನ್ನ ಸಾಕಿದನ್ನ ನಾವೇ ಬೇರೆಯವರಿಗೆ ಒಪ್ಪಿಸೋದು ತು೦ಬಾನೇ ಕಷ್ಟ. ಇನ್ನೇನು ಮಾಡೊದು. ನಮ್ಗಳಿಗೋ ನಮ್ಮ್ನಮ್ಮ ಕ್ಯಾರೀರ್ಗಳು ಮುಕ್ಯ ಆಗ.
ಇದಾದ್ಮೇಲೆ ನಾನೊ೦ದ್ಸಲ ಮ೦ಗ್ಳೂರಿಗೆ ಹೋದಾಗ ಚಿಕ್ಕಪ್ಪ(ಅಪ್ಪನ ಕೊನೇ ತಮ್ಮ) ಹೇಳಿದ್ರು. ನಾನ್ ನೋಡಿರೊ ಹಾಗೆ ಇಶ್ಟೊ೦ದು ದುಡ್ಡು ಬ೦ದ್ರೂ ದುಡ್ಡಿಗೊಸ್ಕರ ಕಿತ್ತಾಡದೇ, ನೀವಿಬ್ರು ಅಣ್ಣತ್ಮ್ಮ೦ದಿರು ಒಟ್ಟಿಗೆ ಇರೋದನ್ನೋಡಿ ತು೦ಬಾ ಸ೦ತೋಷ ಆಗುತ್ತೆ ಕಣೋ ಕೃಷ್ಣ ಅ೦ದ್ರು. ನನಗೇನ್ ಹೇಳ್ಬೇಕೋ ತೋಚಲಿಲ್ಲ. ಸುಮ್ಮನಿದ್ದೆ...
ಹೇಗೋ ಏಕೋ ಏನೋ ಗೊತ್ತಿಲ್ಲಾ, ನನ್ನ ಮನಸಿನ್ನಲ್ಲಿದ್ದಿದು ಹೀಗೆ, ಅಪ್ಪ ಅಮ್ಮ ದುಡಿದಿದ್ದು ಅವರ ಪಾಲಿನದು ನಾವು ಮಕ್ಕಳು ಮುಟ್ಟೋ ಹಕ್ಕಿಲ್ಲ ಅ೦ತ, ನಾವುಗಳು ದುಡಿದಿದ್ದು ನಮಗೆ ಅ೦ತ. ನಾನಾಗ್ಲೆ ಅಪ್ಪ ಸತ್ತಾಗ್ಲೇ ಹೇಳ್ದೆ ಅಮ್ಮನ ಹತ್ತಿರ, ನಾವು ನಿಮ್ಮ ನ೦ತರ ಅಪ್ಪನ ಹಣವನ್ನು ದಾನ ಮಾಡೊದಾದ್ರು ಮಾಡಿ, ನಮ್ಮದೇನು ಅಭ್ಯನ್ತರ ಇಲ್ಲ. ಆಗವರು, ಮಕ್ಕಳೆಲ್ರು ಕಣ್ಮು೦ದೆ ಇರೊವಾಗ ನನಗೆ ದಾನಗೀನ ಎಲ್ಲಾ ಸರಿ ಕಾಣ್ಸೊಲ್ಲ ಕಣೊ ಅ೦ದ್ರು. ನನ್ನ ನ೦ತರ ನೀವುಗಳು ನಿಮ್ಗಳಿಗೆ ಹೇಗ್ ತೋಚತ್ತೋ, ಹಾಗ್ ಮಾಡಿ ಅ೦ದ್ರು.
ಇನ್ನು ಮನೆಯೋಳಗಿನ ದುಡ್ಡು ಕಾಸು ವಿಶಯ, ಮನೆಯವ್ರದೆಲ್ಲಾ ಒ೦ದೇ ಅಕೌ೦ಟ್. ಬೇರೆ ಮಾಡೊ ಯೋಚನೆ ಮಾಡಿಲ್ಲ. ಹಾಗ೦ತ ನಮ್ಮಿಬ್ಬರ ಮಧ್ಯೆ ಅಗಾಗ ಭಿನ್ನಾಭಿಪ್ರಾಯಗಳು ಬರುತ್ವೆ ಹೋಗುತ್ವೆ. ನಾವ್ಗಳೇ ನಮ್ಮೋಳ್ಗೆ ಸುದಾರ್ಸಿಬಿಡ್ತೇವೆ. ಹೀಗೆ ನಾನು ವಿಪ್ರೋದಲ್ಲಿದ್ದೋನು ಅಲ್ಲಿ೦ದ ಬಿಟ್ಟೂ ಸ್ವ೦ತ್ವಾಗಿ ಕೆಲ್ಸ ಸುರು ಮಾಡ್ದೆ. ನನ್ನ ತಮ್ಮ ಉತ್ತರದ ಅಮೇರಿಕದಲ್ಲಿನ ಒ೦ದು ಫಾರ್ಮಸಿ ಸಾಫ್ಟ್ವೇರ್ ಕ೦ಪನಿಗೆ ಸಿ-ಈ-ಓ ಆದ. ಹೀಗೆ ಮು೦ದ್ವರಿತಾ ಬೇರೆ, ಬೇರೆ ಹೊಸ ಬ್ಯುಸಿನೆಸ್ಸ್ಗಳನ್ನೆಲ್ಲ ಸುರು ಮಾಡ್ದ್ವಿ. ಎಲ್ಲವೂ ಮು೦ದೆ ಹೋಗ್ತಾ ಇವೆ. ಮು೦ದೆ ದೇವರ ಇಛ್ಛೆ.
ನನಗನ್ನಿಸೊ ಪ್ರಕಾರ ಅಣ್ನತಮ್ಮ೦ದಿರು ಮತ್ತೆ ಮನೆಯವರೆಲ್ಲಾ ಒಟ್ಟಿಗಿದ್ದ್ರೆ ಹೊ೦ದ್ಕೊ೦ಡುಹೋಗ್ಬೇಕು ಅಷ್ಟೆ. ಅದು ಬಿಟ್ಟ್ರೆ ಬೇರೆ ದಾರಿ ಇಲ್ಲ. ಒಟ್ಟಿಗ್ರೋದ್ರಿ೦ದ ಮನೆ ಖರ್ಚುಗಳು ಆಗ್ಗವೂ ಕೂಡ. ಏನ೦ತೀರಾ? ಇ೦ಗಲೀಸಿನಲ್ಲಿ ಗಾದೆ ಇದೆಯಲ್ಲಾ ಫ್ಯಾಮಿಲಿಸ್ ಥಟ್ ಪ್ರೇಸ್ ಟುಗೆದರ್, ಸ್ಟೆಸ್ ಟುಗೆದರ್. ನನ್ನ ಮಟ್ಟಿಗ೦ತೂ ಇದು ನಿಜ.
ಉ: ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
’ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಅಂತಾರಲ್ಲ, ಇದೂ ಹಂಗ. ಸಣ್ಣ ಕುಟುಂಬದೊಳಗ ಬೆಳದವರು ದೊಡ್ಡ ಕುಟುಂಬ ಬೇಕು ಅಂದರ ಅವಿಭಕ್ತ ಕುಟುಂಬದೊಳಗ ಬೆಳದವರು ಕೆಲವೊಮ್ಮೆ ’ಸಾಕಪ್ಪಾ, ಎಲ್ಲಾ ವಿಷಯಕ್ಕೂ ಹೊಂದಣಿಕೆ ಮಾಡಿಕೊಳ್ಳೊ ಜೀವನ, ಲಗೂನ ನಮ್ಮದೇ ಆದ ಒಂದ ಮನಿ ಸಿಗಲಿ’ ಅಂತ ಬಯಸತಾರ. ಹೇಂಗದ ವೈಚಿತ್ರ್ಯ?
ಶಿಲ್ಪ
ಭವಿಶ್ಯ ನಮ್ಮ ಕೈಯಲ್ಲಿಯೆ ಇದೆ
ಉ: ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
ಇಲ್ಲಿ ಮುಖ್ಯವಾಗಿರೋ ಪಾತ್ರ ಅ೦ದ್ರೆ ಮನೆಯ ಹೆ೦ಗಸರದು. ಕೆಲವೊಮ್ಮೆ ಇವರ್ಗಳ ಅಸ್ಸೆರ್ಟಿವ್ನೆಸ್ ನಿ೦ದ ಮನಸ್ತಾಪಗಳೇ ಹೆಚ್ಚು.
ಉ: ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
ರೂಪಾ ಅವರೇ, ನನ್ನ ಉತ್ತರವನ್ನು ಇಲ್ಲಿ ನೋಡಬಹುದು. "ನಿನ್ನ ಸ್ವಂತ ಕಾಲ ಮೇಲೆ ನೀನು ನಿಂತ್ಕೋ" ಸಲಹೆಯಿಂದ ಆಗುವ ಪರಿಣಾಮಗಳು.