ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಗುಂಡಿನ ಮತ್ತ್ತೇ ಗಮ್ಮತ್ತು
"
ನೆನ್ನೆ ಪಾರ್ಟಿಯೊಂದಕ್ಕೆ ಹೋಗಿದ್ದೆ.
ನಾನು ಯಾವಾಗಲೂ ಮಾಝ ಕುಡಿಯೋದು
ಸ್ನೇಹಿತೆಯೊಬ್ಬಳು ನನಗೆ ಏನೋ ಒಂದು ಪಾನೀಯ ಕೊಟ್ಟಳು
ನನಗೇನು ಗೊತ್ತು ಅದು ಸಿಗ್ನೇಚರ್ ಬ್ರಾಂಡ್ ಅಂತ.
ಸರಿ ಒಂದು ಮೂರು ಪೆಗ್ ಏರಿಸಿಯೇ ಬಿಟ್ಟೇ. ರುಚಿಯಲ್ಲಿ ಇರಿಸು ಮುರಿಸಾದರೂ ....................
ಚೆನ್ನಾಗಿತ್ತು.
ಅಷ್ಟೇ
ನದೀಂ ದಿಂತನ ನದೀಂ ದೀಂ ತನ
ತಲೆ ಗಿರ್ ಅನ್ನಿಸಿತು. ಆಹಾ ಏಲ್ಲೋ ತೇಲ್ತಾ ಇದೀನಿ ಅನ್ನಿಸಿತು.
ಎಲ್ಲಾರೂ ಮೂರು ಮೂರು ಜನ ಕಾಣ್ತಿದಾರೆ
ಒಬ್ಬರಂತೂ ಉಲ್ಟಾ ನಿಂತಿದಾನೆ.
ಒಬ್ಬನ ಮುಖ ಕುದುರೆ ಮುಖದಂತೆ ಕಾಣಿಸಿತು
ಅರೇ ನನ್ನ ಎದುರುಗಡೆ ಇದ್ದ ಸ್ನೇಹಿತೆ ಇಷ್ಟೊಂದು ದಪ್ಪ ಆಗಿದಾಳೆ.
ಏನೋ ನಗ್ತಾ ಇದಾಳೆ ಬೇರೆ
ನನಗೇನೋ ಆಗಿದೆಯಲ್ಲಾ ?
ಅಯ್ಯೋ ಇದೇನು ಯಾವ ಲೋಕಕ್ಕೆ ಬಂದೆ ನಾನು ಅಂತ ಯೋಚನೆ ಮಾಡಿಕೊಂಡು ಕಾರ ಹತ್ತಿ ಸೀದಾ ಮನೆಗೆ ಹೋದೆ
ಅಲ್ಲಿ ನೋಡಿದ್ರೆ ನಮ್ಮನೇನೆ ಗೊತ್ತಾಗಿಲ್ಲ ಸರಿ ಯಾವ್ದೋ ಹುಡುಗನ್ನ ಕರೆದು ನಮ್ಮನೆ ಕೇಳ್ಕೊಂಡು ಮನೆಗೆ ಹೋದ್ರೆ
ಅಲ್ಲಿ ಯಾರೋ ಮನೆ ಹತ್ತಿರ ನಿಂತಿದಾರೆ ..............ಯಾರು ಅಂತ ನೋಡಿದ್ರೆ ಅವರು ನಂಗೆ ಗೊತ್ತಿರೋರೆ. ಓ ಹೌದು ಅವರು ನಮ್ಮ ಯಜಮಾನರಲ್ಲವಾ? ಅಂತ ಅನ್ಕೊಂಡು ಕೀ ಕೊಟ್ಟೇ.
ಅವರು ನನ್ನ ಬಯ್ಯೋದಕ್ಕೆ ಶುರು ಮಾಡಿದ್ರು
ಹಾಗೂ ಹೀಗೂ ರಾತ್ರಿ ನಾನು ಅವರ ಹತ್ತಿರ ಏನೇನೋ ಮಾತಾಡಿದೆ
ಮದುವೆಗೆ ಮುಂಚೆ ನಡೆದಿದ್ದನ್ನೆಲ್ಲಾ ಅವರ ಹತ್ತಿರ ಬಾಯಿ ಬಿಟ್ಟಿದ್ದೆ. ಹಾಗೆ ಅವರನ್ನ ಬಾಯಿಗ್ಗೆ ಬಂದ ಹಾಗೆ ಬೈದು ಬಿಟ್ಟೆ
ಇನ್ನು ಕೇಳ್ಬೇಕಾ ಅವರು ಜೋರು ಜಗಳ ಮಾಡಿ ನನ್ನ ಮೇಲೆ ಕೋಪ ಮಾಡ್ಕೊಂಡಿದಾರೆ . ನನ್ನ ಜೊತೆ ಇರಲ್ಲ ಅಂತ ಹೇಳ್ತಾ ಇದಾರೆ
ಕಣೆ ರೂಪ ಹ್ಯಾಗಾದ್ರೂ ಮಾಡಿ ಅವರನ್ನ ಸಮಾಧಾನ ಮಾಡೇ ರೂಪ . ನಂದೇನು ತಪ್ಪಿಲ್ಲ ಅಂತ ಹೇಳೆ
"
ಎಂದು ನನ್ನ ಆಪ್ತ ಸ್ನೇಹಿತೆ ಕೇಳ್ಕೊಂಡಾಗ
ಗುಂಡು ಅಪ್ಪಿ ತಪ್ಪಿ ಹೊಟ್ಟೆ ಸೇರಿದರೆ ಇಷ್ಟು ಕಷ್ಟ.
ಇನ್ನು ಯಾವಾಗಲೂ ಕುಡಿಯೋರ ಪಾಡು ಗೋವಿಂದ ಗೋವಿಂದ.............
ಕುಡಿತದಿಂದ ಸಂಸಾರ ನಷ್ಟ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ .
ಇದನ್ನ ಹಾಗೆ ಬರೆದ್ರೆ ಹ್ಯಾಗಿರುತ್ತೆ ಅನ್ನೋ ಕಲ್ಪನೇಲಿ ಬರೆದೆ
ಬೇಸ್ತು ಬಿದ್ದಿರಾ ?
(note: ಮಡಿವಂತರೇ ಕ್ಷಮೆ ಇರಲಿ)

- roopablrao ರವರ ಬ್ಲಾಗ್
- Login or register to post comments
- 778 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಗುಂಡಿನ ಮತ್ತ್ತೇ ಗಮ್ಮತ್ತು
ನನ್ನ ಪ್ರಕಾರ ಯಾವ್ದು ಒಳ್ಳೆದು ಕೆಟ್ಟದ್ದು ಅಂತ ಎಲ್ಲ ಇಲ್ಲ. ಸುಮ್ನೆ ಸ್ವಲ್ಪ ಕುಡ್ಕೊಂಡು ಯಾರಿಗು ಏನೂ ತೊಂದರೆ ಕೊಡದೆ ಮಲ್ಕೊಂಡ್ರೆ ಎಲ್ಲಾ ಸರಿನೆ. ಹಾಗೆ ನಮಗು ತೊಂದ್ರೆ ಕೊಟ್ಕೊಬಾರ್ದು, ಅಂದ್ರೆ ಆರೋಗ್ಯ (ದೈಹಿಕ ಮತ್ತೆ ಮಾನಸಿಕ) ಹಾಳಾಗೊ ತರ ಕುಡಿಬಾರ್ದು.
. ಅವ್ರು ಹೆಳೊ ಸುಳ್ಳನ್ನೆಲ್ಲ ಕೇಳ್ಕೊಂಡು ನೀವು ಕುಡಿಯೋರ ಪಾಡು ಗೋವಿಂದಾ ಅಂದ್ಬಿಟ್ರೆ ಹೇಗೆ!!
ಇನ್ನು, ನಿಮ್ಮ ಸ್ನೇಹಿತೆ, ಸುಮ್ನೆ ಸುಳ್ಳು ಹೇಳ್ತಾ ಇದಾರ್ರೀ, ಗೊತ್ತಿಲ್ದೆ ಸ್ವಲ್ಪ ಹೆಂಡ ಒಳಗೆ ಹೋದ್ರೆ ಕುದುರೆ ಮುಖ ಎಲ್ಲಾ ಕಾಣಲ್ಲಾ
ಉ: ಗುಂಡಿನ ಮತ್ತ್ತೇ ಗಮ್ಮತ್ತು
ಯಪ್ಪಾ, ನಮ್ಮ ರೂಪಾ ಇಷ್ಟು ಧೈರ್ಯವಂತೆನಾ ಅಂತ ಯೋಚಿಸುವಷ್ಟರಲ್ಲೀಈಈಈ ಈ ರೀತಿ ಮಾಡಿಬಿಡೋದಾ
>> ಸುಮ್ನೆ ಸ್ವಲ್ಪ ಕುಡ್ಕೊಂಡು ಯಾರಿಗು ಏನೂ ತೊಂದರೆ ಕೊಡದೆ ಮಲ್ಕೊಂಡ್ರೆ ಎಲ್ಲಾ ಸರಿನೆ.
ಏನಂತೀರಾ ಕ್ರಿಯೇಟೀಮ್.
ನನಗೇನೋ ಈ ರೀತಿಯ ಮಾತುಗಳು, ತಮಗೆ ತಾವೇ ಸುಮ್ನೆ ಸಮಾಧಾನಪಟ್ಟುಕೊಳ್ಳುವವರು ನೀಡಿಕೊಳ್ಳುವ ಸಮಜಾಯಿಷಿ ಅನ್ಸತ್ತೆ
ಉ: ಗುಂಡಿನ ಮತ್ತ್ತೇ ಗಮ್ಮತ್ತು
ಗುಱುಱಾಜ
www.kannadaguru.blogspot.com
ನಿಜ ಕಣ್ರೀ ರೂಪಾ, ಹಾಗೆಲ್ಲಾ ಏನೂ ಆಗುವುದಿಲ್ಲ.೧೫ ದಿನಕ್ಕೊಮ್ಮೆ,ತಿ೦ಗಳಿಗೊಮ್ಮೆ ನಾನೂ "ಗು೦ಡುರಾಜ"ನೇ.ಆದರೆ ನನಗೇನೂ ಆ ತರಹ ಗೊ೦ದಲ ಉ೦ಟಾಗಿಲ್ಲ.ಅಲ್ಲದೇ ಮಾತಿನ ಮೇಲೂ ಹಿಡಿತ ಸರಿಯಾಗಿಯೇ ಇರುತ್ತದೆ.ನನಗನಿಸುವ ಪ್ರಕಾರ ಕೆಲವರು ಸರಿಯಾಗಿದ್ದಾಗ ಹೇಳಿಕೊಳ್ಳಲಾಗದ್ದನ್ನು ಕುಡಿದಾಗ ಹೇಳಿಬಿಡುತ್ತಾರೆನಿಸುತ್ತದೆ( ಕುಡಿದ ಕಾರಣಕ್ಕೆ ಕೇಳಿದವರು ಮನ್ನಿಸಿಬಿಡುತ್ತಾರೆ೦ಬ ಕಾರಣಕ್ಕೆ)
ಉ: ಗುಂಡಿನ ಮತ್ತ್ತೇ ಗಮ್ಮತ್ತು
ಇದಕ್ಕೆ Mel Gibson Defense ಅನ್ನುತ್ತಾರೆ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಗುಂಡಿನ ಮತ್ತ್ತೇ ಗಮ್ಮತ್ತು
ಕುಡಿದಾಗ ಹೊರಬರುವಂತದ್ದನ್ನ ಮದುವೆಗೆ ಮುಂಚೆ ಏನೂ ಮಾಡ್ಕೋಬೇಡಿ ಅಂತ ಈ ಲೇಖನದ ಸಂದೇಶ.. ಅಲ್ವಾ ರೂಪಕ್ಕ?
**************************
http://vikasavada.blogspot.com/
**************************
ಉ: ಗುಂಡಿನ ಮತ್ತ್ತೇ ಗಮ್ಮತ್ತು
ಗೆಳೆಯರೇ, ಒಂದು ಕೋರಿಕೆ. ಸಂಪದದಲ್ಲಿ, ಈ ಬೇರೆ ಬೇರೆ ರೀತಿಯ "ಗುಂಡು"ಗಳ ಬಗ್ಗೆ ತಿಳಿದುಕೊಂಡವರು ಒಂದು ಲೇಖನ ಬರೆದು ನೀಡಿ. ನಾನು ಪಾರ್ಟಿಗಳಿಗೆ ಹೋದಾಗ, ನನ್ನ ಕೊಲೀಗ್ಸು, ಫ್ರೆಂಡ್ಸು ಒಬ್ಬೊಬ್ಬರು ಒಂದೊಂದು ರೀತಿಯದ್ದು ಆರ್ಡರ್ ಮಾಡಿಸಿಕೊಂಡು ಕುಡೀತಾ ಇರ್ತಾರೆ. ಕುಡಿಯದೇ ಇರುವವರು ಮಿಕ ಮಿಕ ನೋಡ್ತಾ ಇರಬೇಕಾಗತ್ತೆ, ಅತ್ವಾ ಶುಚಿರುಚಿಯಾದ "ಒಣ" ಲೆಮನ್ ಸೋಡಾ ಕುಡಿಯಬೇಕಾಗತ್ತೆ. ಹಾಗಾಗಿ, ಕುಡಿಯುವುದಕ್ಕಲ್ಲದಿದ್ದರೂ, ತಿಳಿದುಕೊಂಡಿರುವಕ್ಕೋಸ್ಕರ, ಯಾವ ಯಾವ ರೀತಿಯ ಗುಂಡುಗಳಿವೆ. ಅವುಗಳ ಬ್ರಾಂಡ್ ಏನು ಇವುಗಳನ್ನು ತಿಳಿಸಿಕೊಡಿ.
ಉ: ಗುಂಡಿನ ಮತ್ತ್ತೇ ಗಮ್ಮತ್ತು
ನನ್ನಿ ಸುನಿಲ್,
ಕುಡುಕರ ಲೋಕಕ್ಕೆ ಸ್ವಾಗತ. ಹಿಕ್..
Martini(cocktail)-
Gin ಮತ್ತು dry white vermouth (or sweet red vermouth) ನ cocktail ಏ
martini.
Gin ಬದಲು Vodka ಉಪಯೋಗಿಸಬಹುದು.
ಸದ್ಯಕ್ಕೆ ಇಷ್ಟು ಸಾಕಲ್ಲ. ಬಾಕಿ ಮುಂದಿನವಾರ-ಇಂಗ್ಲೀಷ್ ಕ್ಲಾಸ್ ಮುಗಿದ ಮೇಲೆ
-ಗಣೇಶ.
ಉ: ಗುಂಡಿನ ಮತ್ತ್ತೇ ಗಮ್ಮತ್ತು
ನೋಡಿ,
ಎಲ್ಲಾ ಸರಿ.
>>>ಇನ್ನು ಯಾವಾಗಲೂ ಕುಡಿಯೋರ ಪಾಡು ಗೋವಿಂದ ಗೋವಿಂದ...
ಯಾವಾಗಲೂ ಕುಡಿಯುವವರಿಗೆ ಅವಮಾನ ಮಾಡಿದಿರಿ.
>>>(ನೋಟ್: ಮಡಿವಂತರೇ ಕ್ಷಮೆ ಇರಲಿ) !!
ಕ್ಷಮೆ ಕೇಳಬೇಕಾಗಿದ್ದುದು ಕುಡಿಯುವವರಿಂದ.
ಉ: ಗುಂಡಿನ ಮತ್ತ್ತೇ ಗಮ್ಮತ್ತು
ರೊಪ ಮೇಡಮ್,
ಅರ್ದಂಬರ್ದ ಕುಡಿದ್ರೆ ಬಾಯಿ ಸುಮ್ನೆ ವಟ ವಟ ಅಂತ ಮಾತಾಡ್ತಾ ಇರುತ್ತಂತೆ..!

ಮುಂದಿನ ಬಾರಿ ನೀವು ಕಂಠ ಪೊರ್ತಿ ಕುಡಿದು ಮನೆಗೆ ಹೋಗಿ, ಆಗ ನಿಮ್ಮ ಎಜಮಾನ್ರು ಎಲ್ಲೊ ಕೆಲಸ ಜಾಸ್ತಿ ಅಂತ ಕಾಣುತ್ತೆ, ಅದಕ್ಕೆ ದಣಿದು ಮಲಗಿಬಿಟ್ಟಿದ್ದಾರೆ ಅಂತ ಅಂದ್ಕೊತಾರೆ..!
ಎಂಗೆ ಐಡಿಯಾ...! ಟಿನ್ ಟಿನ್ ಟ ಟಿನ್...!
-ಯುವಪ್ರೇಮಿ