ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಕನಸು ಭವಿಷ್ಯ ಸೂಚಕವೇ?
ನನಗೆ ಸುಮಾರು ಐದು ವರ್ಷದ ಹಿಂದೆ ಸತತವಾಗಿ ಒಂದು ಹದಿನೈದು ದಿನ ಕನಸೊಂದು ಬೀಳುತ್ತಲೇ ಇತ್ತು.
ಆ ಕನಸು ಹೀಗಿತ್ತು
ಮಡಿವಾಳ ಪೋಲಿಸ್ ಸ್ಟೇಷನ್ ಎದುರುಗಡೆ ಮಸೀದಿಯೊಂದಿದೆ
ನಾನು ಯಾವುದೋ ಕಾರಣಕ್ಕೆ ಆ ಮಸೀದಿಯ ಒಳಗಡೆ ಹೋಗುತ್ತೇನೆ
ಆದರೆ ಮಸೀದಿಯ ಒಳಗಡೆ ಚರ್ಚಿನ ವಾತಾವರಣವಿದೆ . ಅಲ್ಲಿ ಶ್ವೇತ ನಿಲುವಂಗಿ ಧರಿಸಿದ ಜನ ಓಡಾಡುತ್ತಿದ್ದಾರೆ. ಯಾರೊ ನನಗೆ ಪವಿತ್ರ ಸ್ನಾನ ಮಾಡಲು ಹೇಳುತ್ತಾರೆ.
ಅಲ್ಲೊಂದೆಡೆ ನನಗೆ ತಲೆಯ ಮೇಲೆ ನೀರನ್ನು ಎರೆಚಿ ನಂತರ ಒಳಗೆ ಬಿಡುತ್ತಾರೆ. ಅದೊಂದು ರೀತಿಯ ಹಜಾರ . ಹಜಾರದ ಮೂಲಕ ಕಾರಿಡಾರ್ ಪ್ರವೇಶಿಸುತ್ತಿದ್ದಂತೆ ಯಾರೋ ನನಗೆ ತೀರ್ಥ ಕೊಡುತ್ತಾರೆ.
ಸ್ವಲ್ಪ ಮುಂದೆ ನಡೆದಂತೆ ಸುಮಾರು ಕೊಠಡಿಗಳು ಕಾಣುತ್ತವೆ . ಸುತ್ತಲೂ ಗಾಡಾಂಧಕಾರ . ಅಷ್ಟರಲ್ಲಿ ಯಾರೊ ನನ್ನ ಕೈಗೆ ಕ್ಯಾಂಡೆಲ್ ಕೊಡುತ್ತಾರೆ.
ಕ್ಯಾಂಡೆಲ್‌ನ ಸಹಾಯದಿಂದ ನಾನು ಮುನ್ನಡೆಯುತ್ತೇನೆ.
ಸುತ್ತಲೂ ಕ್ಯಾಂಡೆಲ್‍ನ ಪ್ರಕಾಶ. ನಾನು ಪ್ರತಿಯೊಂದು ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆ ಕತ್ತಲಾಗಿದ್ದ ಕೋಣೆಯಲಿ ಒಂದು ಕ್ಯಾಂಡೆಲ್ ಇಟ್ಟು ಬರುತ್ತಿರುತ್ತೇನೆ. ಅದು ಒಂದೇ ಸಮನೆ
ಹೀಗೆ ಆ ಕನಸು ಬೀಳುತ್ತಲೇ ಇತ್ತು .
ನಾನು ನನಗೆ ತಿಳಿದವರ ಬಳಿ ಹೀಗೇಕೆ ಕನಸು ಮೂಡುತ್ತಿದೆ ಎಂದು ಕೇಳಿದಾಗ ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದರು .
ಕೆಲವರು ನಾನು ಹಿಂದಿನ ಜನ್ಮದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ್ದರಿಂದ ಹೀಗೆ ಕನಸು ಬರುತ್ತಿದೆ ಹಾಗಾಗಿ ಒಮ್ಮೆ ಚರ್ಚ್‌ಗೆ ಹೋಗಿ ಬರಲು ಸಲಹೆ ನೀಡಿದರು
ಇನ್ನೂ ಕೆಲವರು ನಾನು ಹಿಂದಿನ ಜನ್ಮದಲ್ಲಿ ಏನೋ ಪಾಪ ಮಾಡಿದ್ದೇನೆ ಅದನ್ನು ತೊಳೆದುಕೊಳ್ಳ್ಲಲು ಸೂಚಿಸುತ್ತಿದೆ ಎಂದರು
ಯಾವುದೂ ಸಮಾಧಾನಕರವಾಗಿರಲಿಲ್ಲ
ಒಮ್ಮೆ ನನ್ನ ಆಪ್ತರಾದ ಸಿಸಿಲಿ ಮೇಡಂ ಜೊತೆ ವಿಚಾರಿಸಿದೆ.
ಅವರು ಆ ಕನಸನ್ನು ವಿಶ್ಳೇಷಿಸಿದ ರೀತಿ ಅದ್ಭುತವಾಗಿತ್ತು. ಆ ಕನಸು ನನ್ನ ಮುಂದಿನ ಜೀವನದ ಹೆಜ್ಜೆಗಳನ್ನು ಸೂಚಿಸುತ್ತಿತ್ತು .
ಈಗ
ಅವರು ಹೇಳಿದಂತೆ ಕನಸು ನನ್ನ ಜೀವನವನ್ನು , ಗುರಿಯನ್ನು ಸೂಚಿಸಿತು ಎನಿಸುತಿದೆ, ಹೌದು ಅವರು ಹೇಳಿದ ಹಾಗೆ ನಾನು ನನ್ನ ಹೆಜ್ಜೆಯನ್ನು ಇಟ್ಟಿದ್ದೇನೆ
ಅವರೇನು ಹೇಳಿದರು ಎಂಬುದನ್ನ ತಿಳಿಸುವುದಕ್ಕೆ ಮುಂಚೆ ನಿಮಗೆಲ್ಲಾ ಈ ಕನಸು ಏನು ಹೇಳುತ್ತದೆ ಆನುವುದನ್ನು ಹೇಳಲಾಗುತ್ತದಾ?. ನಿಮ್ಮದೇ ಬಗೆಯಲ್ಲಿ ವಿಶ್ಲೇಷಿಸಲಾದೀತಾ?
ಹಾಗೆ ನಿಮಗೂ ಹೀಗೆ ಯಾವುದಾದರೂ ಕನಸು ಕಾಡಿ, ಅದು ವಾಸ್ತವವಾಗಿ ಬದಲಾದ ಉದಾಹರಣೆಗಳಿದ್ದರೆ ತಿಳಿಸಿ.

- roopablrao ರವರ ಬ್ಲಾಗ್
- Login or register to post comments
- 900 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕನಸು ಭವಿಷ್ಯ ಸೂಚಕವೇ?
<ಜೋಕ್>
ನನಗೇನೋ ಅನೇಕ ಹುಚ್ಚು ಹುಚ್ಚಾದ ಕನಸುಗಳು ಬಿದ್ದಿವೆ. ಅನೇಕವುಗಳಲ್ಲಿ ನಾನು ಪರೀಕ್ಷೆ ಇದ್ದಾಗ ಹೋಗಲು ಪಾಡು ಪಟ್ಟಿದ್ದು, ಹೇಗೋ ಏನೋ ಒಂದೇ ದಿನ, ೨ ಪರೀಕ್ಷೆ ಇದ್ದದ್ದು, ನಾನು ಯಾವುದಕ್ಕೆ ಹೋಗಲಿ ಎಂದೇ ಯೋಚಿಸುತ್ತಾ ಕೊನೆಗೆ ಹೋಗದೇ ಇದ್ದದ್ದು., ಹೀಗೆಲ್ಲಾ ಕನಸುಗಳು ಬರುತ್ತವೆ. ಇದಕ್ಕೂ, ನಾನು ಸಾಫ್ಟ್ವೇರ್ ಇಂಜಿನಿಯರ್ ಆಗಿರುವುದಕ್ಕೂ ಏನೋ ಸಂಬಂಧ ಇರಬಹುದು
ನಿಮ್ಮ ಕನಸಿಗೆ ಬಂದರೆ, ನೀವು ಯಾವುದೋ ಪುಸ್ತಕ ಓದಿದ್ದೋ, ಅಥವಾ ಸಂಪದದಲ್ಲಿ ಓದಿದ ಚರ್ಚೆಯೋ ಈ ರೀತಿ ಕನಸಿಗೆ ಕಾರಣ ಇರಬಹುದು. ನನಗಂತೂ ಕನಸುಗಳನ್ನು ನಂಬಿ ನಮ್ಮ ಜೀವನದ ಗುರಿ ಕಾಣುವುದು ಸ್ವಲ್ಪ ಅತಿರೇಕ ಅನ್ನಿಸುತ್ತದೆ.
ನಿಮ್ಮ ಕಥೆ ಓದಿ ಭೈರಪ್ಪನವರ ಧರ್ಮಶ್ರೀ ನೆನಪಿಗೆ ಬರುತ್ತಿದೆ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಕನಸು ಭವಿಷ್ಯ ಸೂಚಕವೇ?
ನನಗೆ ಈ ಕನಸು ಬೀಳುತ್ತಿದ್ದುದು ಐದು ವರ್ಷದ ಹಿಂದೆ
ನಾನು ಆಗೆಲ್ಲಾ ಸಂಪದದ ಹತ್ತಿರಕ್ಕೂ ಸುಳಿದಿರಲಿಲ್ಲ .
" ಕನಸುಗಳನ್ನು ನಂಬಿ ನಮ್ಮ ಜೀವನದ ಗುರಿ ಕಾಣುವುದು " ನನ್ನ ಉದ್ದೇಶ ಅದಲ್ಲ
ಬೀಳುವ ಎಷ್ಟೊ ಕನಸುಗಳಲ್ಲಿ ಕೆಲವು ಕನಸುಗಳು ಭವಿಶ್ಯವನ್ನು ತಿಳಿಸುವ ಸಾಮರ್ಥ್ಯ ಹೊಂದಿದೆಯೇ ಎಂಬುದನ್ನು ನಾನು ಕೇಳುತ್ತಿದ್ದೇನೆ. ಹಾಗೆ ಆದವರ ಉದ್ದಾಹರಣೆಗಳೂ ಬಹಳವಿದೆ
ಈ ಬಗ್ಗೆ ನಮ್ಮ ಸಂಪದದ ಸದಸ್ಯರ ಅಭಿಪ್ರಾಯವೇನು ಎಂದು ತಿಳಿದುಕೊಳ್ಲುವ ಕುತೂಹಲವಷ್ಟೆ ಇದು
http://thereda-mana.blogspot.com/
ರೂಪ
ಉ: ಕನಸು ಭವಿಷ್ಯ ಸೂಚಕವೇ?
ನನಗೆ ಹತ್ತನೇ ತರಗತಿಯ ಮೇನ್ ಪರೀಕ್ಸೆಗಳು ನಡೆದಿದ್ದಾಗ, .. ಒಂದು ಕನಸು ಬಿದ್ದಿತ್ತು,.. ಮರುದಿವಸ ಇದ್ದ ಪೇಪರ್‍ಗೆ ನಾನು ಹೋಗುವ ಹೊತ್ತಿಗಾಗಲೇ ಪೇಪರ್ ಮುಗಿದು ಹೋಗಿತ್ತು,,.. ನನಗೆ ಏನು ಮಾಡೊಕೂ ತೋಚದೇ ಅವಾಕ್ಕಾಗಿ ನಿಂತೆ,.. ಕಣ್ಣು ಬಿಟ್ಟು ನೋಡಿದಾಗ ಕನಸು... "ಅಬ್ಬಾ ಕನಸು!!".. ಬದುಕಿದೆಯ ಬಡಜೀವವೇ ಅಂದುಕೊಂಡೆ...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕನಸು ಭವಿಷ್ಯ ಸೂಚಕವೇ?
ನೀವು ಹೆಚ್ಚು ಇಂಗ್ಲೀಷ್ ಕತೆ ಓದುತ್ತೀರ, ಸಿನೆಮಾ ನೊಡುತ್ತೀರಾ...ಸ್ಟಾರ್ ಮೂವೀಸ್ ನಿಮ್ಮ ಮೆಚ್ಚಿನ ಚೆನಲ್ ಆಗಿದ್ದರೆ ಇಂತವೆಲ್ಲಾ ನಡೆಯುತ್ತೆ.
ಉ: ಕನಸು ಭವಿಷ್ಯ ಸೂಚಕವೇ?
ಇಂತಹುದೇ ಒಂದು ಅನುಭವ 'ಸಂಪದ' ಆರ್ಕೈವಿನಿಂದ...
ಉ: ಕನಸು ಭವಿಷ್ಯ ಸೂಚಕವೇ?
ಕನಸುಗಳ ನಮ್ಮ ಮನಸಿನಲ್ಲಿರೋ ಯಾವ್ದಾದ್ರು ವಿಷಯಕ್ಕೆ ಕನ್ನಡಿ ಆಗಬಹುದು ಅಷ್ಟೆ. ಕನಸಲ್ಲಿ ಭವಿಷ್ಯ ಇದ್ದರೆ, ಭವಿಷ್ಯ ಭೂತದಲ್ಲಿದೆ
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕನಸು ಭವಿಷ್ಯ ಸೂಚಕವೇ?
ಗೊಂದಲಕ್ಕೆ ಮತ್ತೊಂದಿಷ್ಟು ಗೊಂದಲ
ಭವಿಷ್ಯವಂತೆ ಭೂತವಂತೆ
ಭೂತದಲ್ಲಿ ಭವಿಷ್ಯ ಅಂದರೆ ಏನಪ್ಪ?
http://thereda-mana.blogspot.com/
ರೂಪ
ಉ: ಕನಸು ಭವಿಷ್ಯ ಸೂಚಕವೇ?
ವಿನಯ್ ಉಡುಪ ಮತ್ತು ರೂಪ, "ಭೂತದಲ್ಲಿ ಭವಿಷ್ಯವಿದೆ" ಎಂಬ ಮಾತು ಹಾಸ್ಯ ಅನಿಸಬಹುದು. ಆದರೆ, ಆ ಮಾತನ್ನು ಅಷ್ಟು ಸರಳವಾಗಿ ತೆಗೆದುಹಾಕಕ್ಕೆ ಆಗಲ್ಲ.
ಎಷ್ಟೋ ಜನರು, "ತಾವು ಹಿಂದೆ ಪಡೆದ ಅನುಭವಗಳಿಂದ ಭವಿಷ್ಯವನ್ನು ಕುರಿತು ಚಿಂತಿಸುತ್ತಿರುತ್ತಾರೆ".
ಒಂದು ಪ್ರಾಕ್ಟಿಕಲ್ಲಾದ ಉದಾಹರಣೆ ಕೊಡ್ತೀನಿ ನೋಡಿ :- "ಹೋದ ಬಾರಿ ನಾನು ಬಸ್ಸಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದಾಗ ವಾಂತಿ ಮಾಡಿಕೊಂಡಿದ್ದೆ (ಭೂತ). ಮುಂದಿನ ಬಾರಿ, ಬಸ್ಸಲ್ಲಿ ದೂರಪ್ರಯಾಣ ಮಾಡಬೇಕಾಗಿ ಬಂದಾಗ, ಅವಾಮಿನ್ ಮಾತ್ರೆ ತೊಗೊಂಡು ಹೋಗ್ತೀನಿ (ಭವಿಷ್ಯ). ವಾಂತಿ ಕಂಟ್ರೋಲಿಗೆ ಬರತ್ತೆ." - ಇಲ್ಲಿ ವರ್ತಮಾನದ ಪ್ರಸ್ತುತ ಸನ್ನಿವೇಶಗಳು ಅವಾಮಿನ್ ಮಾತ್ರೆ ಕೊಳ್ಳಲು ಪ್ರೇರೇಪಿಸುತ್ತಿಲ್ಲ. ಬದಲಾಗಿ ಹಿಂದೆ ಆದ ವಾಂತಿ, ವಾಂತಿಮಾತ್ರೆ ಕೊಂಡು, ಮುಂದೆ ವಾಂತಿ ಮಾಡಿಕೊಳ್ಳದೇ ಇರಲು ಪ್ರೇರೇಪಿಸುತ್ತಿದೆ. - ಇದುವೇ ಭೂತದಲ್ಲಿ ಭವಿಷ್ಯ.
ರೂಪ ಅವರೆ, ಈಗ ಹೇಳಿ ನಿಮ್ಮ ಪ್ರಶ್ನೆಗೆ ಉತ್ರ ಸಿಕ್ತಾ ? :ಸೀರಿಯಸ್:
ಈ ರೀತಿ, ನಮ್ಮ ಸುತ್ತ ನಡೆಯುತ್ತಿರುವ ವಾಸ್ತವವನ್ನು ಕುರಿತು ನಾವು ಚಿಂತನೆಗೈದಾಗ, "ಭೂತದಲ್ಲಿ ಭವಿಷ್ಯವಿದೆ ಎಂಬುದು ನಮಗೆ ಅಂಟಿಕೊಂಡಿರುವ, ಆದರೆ ಮೆಟ್ಟಿನಿಲ್ಲದ ಬೇಕಾದ ಮುಸುಕು" ಎಂಬುದು ಅಱಿವಿಗೆ ಬರುತ್ತದೆ.
ಉ: ಕನಸು ಭವಿಷ್ಯ ಸೂಚಕವೇ?
ಇಲ್ಲ ಮಾರಾಯ. ಹೀಗೆ ನೋಡು
ನೆನ್ನೆ ಬಸ್ಸಿನಲ್ಲಿ ಹೋದಾಗ ವಾಂತಿ ಆಯ್ತು. ನಾಳೆ ಹಾಗೇ ಆಗುತ್ತೆ ಅನ್ನೋದು ಗ್ಯಾರಂಟಿ ಅಲ್ಲ!! ನೀನು ಹೀಗಾಗದಿರಲಿ ಅಂತ ಮಾತ್ರೆ ತಗೊಂಡರೆ ಅದು ನಿನ್ನ ಈ ಕ್ಷಣದ ಉಪಾಯ. ನಾಳೆ ಏನೋ ಆಗಿ ನೀನು ಬಸ್ಸು ಹತ್ತಬೇಕಾಗದೇ ಇರಬಹುದು. ನಿನಗ್ಯಾರೋ ಕಾರು ಕೊಟ್ಟು ಹೋಗಿ ಬಾ ಅನ್ನಬಹುದು.
ಇನ್ನೂ ಭವಿಷ್ಯವನ್ನು ನಿನ್ನ ಇಂದಿನ ಕೆಲಸಗಳಿಂದ ನಿರ್ಧಾರ ಮಾಡಲಾಗುವುದಿಲ್ಲ. ನಿನ್ನ ಒಂದೊಂದು ಕೆಲಸವೂ ಇನ್ನೂ ಸಾವಿರ ಬೇರೆ ಭವಿಷ್ಯದ ಹಾದಿಗಳಿಗೆ ಕಾರಣ ಆಗಬುದು. (Butterfly effect)
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಕನಸು ಭವಿಷ್ಯ ಸೂಚಕವೇ?
>> ನಿನಗ್ಯಾರೋ ಕಾರು ಕೊಟ್ಟು ಹೋಗಿ ಬಾ ಅನ್ನಬಹುದು.
ಹ್ಹ ಹ್ಹ. ಹಾಗೆಯೇ ಆಗಲಿ
ಶ್ರೀನಿಧಿ, ಇಲ್ಲಿ "ನಾನು" ಮಂಗಳೂರಿಗೆ ಹೋಗೋದು ಮುಂದಿನ ವರ್ಷ ಅಂತಿಟ್ಕೋ. ಆಗ ನಾನು ಮಾತ್ರೆ ಕೊಂಡ್ಕೊಳ್ಳೋದು ಮುಂದಿನ ವರ್ಷಾನೇ. ಆದರೆ ಯೋಚಿಸುತ್ತಿರುವುದು(ಭವಿಷ್ಯವನ್ನು ಕುರಿತು ಚಿಂತಿಸುತ್ತಿರುವುದು) ಈಗ. ವಾಂತಿ ಈಗಾಗಲೇ ಆಗಿ ಹೋಗಿದೆ (ಭೂತ).
ಉ: ಕನಸು ಭವಿಷ್ಯ ಸೂಚಕವೇ?
ಭವಿಷ್ಯದ ಬಗ್ಗೆ ಮಾಡೋ ಯೋಚನೆ ಭವಿಷ್ಯ ಆಗೋದಿಲ್ಲ!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಕನಸು ಭವಿಷ್ಯ ಸೂಚಕವೇ?
ನಿಜ. ಆದರೆ, "ಭವಿಷ್ಯದ ಬಗ್ಗೆ ಮಾಡೋ ಆಲೋಚನೆಗಳು ಭವಿಷ್ಯವನ್ನು ರೂಪಿಸಬಹುದು". ಎಲ್.ಐ.ಸಿ. ರಿಟೈರ್ಮೆಂಟ್ ಪಾಲಿಸಿ. ಪೆನ್ಶನ್ ಪಾಲಿಸಿ. ಇವೆಲ್ಲವೂ ಮುಂದೆ ಆಗುವಂತಹವು. ಈ ರೀತಿಯ ಭವಿಷ್ಯ, "ಭವಿಷ್ಯದಲ್ಲಿರುವ ಭವಿಷ್ಯ". ಆದರೆ, ಆಂಟಿಸಿಪೇಶನ್ ಬೇಸಡ್ ಆನ್ ಪಾಸ್ಟ್ ಎಕ್ಸಪೀರಿಯೆನ್ಸ್ - "ಭೂತದಲ್ಲಿ ಭವಿಷ್ಯ". ನಾವು ಹೆಚ್ಚಾಗಿ "ಭವಿಷ್ಯವನ್ನು ಈಗಾಗಲೇ ಆಗಿಹೋದ ಘಟನೆಗಳಿಂದ ಪಡೆದ ಅನುಭವಗಳಿಂದ ರೂಪಿಸಿಕೊಳ್ಳಲು ಹವಣಿಸುತ್ತೇವೆ". ಈ "ಭೂತದಲ್ಲಿನ ಭವಿಷ್ಯದ ಹುಡುಕಾಟವನ್ನು ಮೀರನಿಲ್ಲಬೇಕು" ಅಂತ ನನ್ನ ಅನಿಸಿಕೆ.
ಉ: ಕನಸು ಭವಿಷ್ಯ ಸೂಚಕವೇ?
ರೀ,.. ಭೂತದಲ್ಲಿ ಭವಿಶ್ಯ ಇದೆ ಅಂದರೆ ಇಸ್ಟೇ.. "ಭೂತ" ಅಂದರೆ.. ದೆವ್ವ, ಪಿಶಾಚಿ,.. ಇನ್ನೊಂದು ಅರಿತದಲ್ಲಿ,.. ಆತ್ಮ,.. "ಅಹಂ ಬ್ರಹ್ಮಾಸ್ಮಿ" ತತುವದಂತೆ,.. ಆತುಮವೇ ದೇವರು.. ಅಂದರೆ.. ನಮ್ಮ ಬವಿಸ್ಯ ದೇವರ ಕೈಲಿದೆ..
"ಭೂತನಾಥನಲ್ಲಿ ಭವಿಸ್ಯ"ವಿದೆ...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕನಸು ಭವಿಷ್ಯ ಸೂಚಕವೇ?
ರೂಪಕ್ಕ,
ಮತ್ತೆ ವಿಷಯಾಂತರ ಮಾಡಿದೆ ಅನ್ಸುತ್ತೆ. ಮನ್ನಿಸಿ.
ಸುನಿಲ,
ನನ್ನ ಮಾತಿನ ಅರ್ಥ ಅದೇ ಆಗಿತ್ತು. ಆದ್ರೆ ನಿಮ್ಮಷ್ಟು ಚೆನ್ನಾಗಿ ಬಿಡಿಸಿ ಹೇಳೋಕೆ ಬರೋಲ್ಲ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕನಸು ಭವಿಷ್ಯ ಸೂಚಕವೇ?
ಕನಸು ವರ್ತಮಾನದ ಕನ್ನಡಿ,
ಕಣಸು ಭವಿಷ್ಯದ ಮುನ್ನುಡಿ !!!! ನನ್ನಿ ಸುನಿಲ
ಉ: ಕನಸು ಭವಿಷ್ಯ ಸೂಚಕವೇ?
ರೂಪ ಅವರೆ,
ನಮ್ಮ ಅಂತರಂಗದ ಯೋಚನೆ, ದುಗುಡಗಳು, ಮನದಾಳದ ಆಸೆ, ಆಕಾಂಕ್ಷೆಗಳು ಕನಸಿನ ರೂಪದಲ್ಲಿ ಹೊರಕ್ಕೆ ಬರುತ್ತವೆಯೆಂದು ನನ್ನ ನಂಬಿಕೆ. ನೀವು ನಿಜಜೀವನದಲ್ಲಿ ಹಿಂದುವಾಗಿದ್ದರೂ(ಹಾಗೆಂದು ನಂಬಿದ್ದೇನೆ), ಕನಸಿನಲ್ಲಿ, ಮಸೀದಿ-ಚರ್ಚುಗಳನ್ನು ಪ್ರವೇಶಿಸಿ, ಅಲ್ಲಿ ಕ್ಯಾಂಡಲ್ ಹತ್ತಿಸಿ ಬರುತ್ತೀರಿ. ಇದು ನೋಡಿದರೆ, ನಿಮಗೆ ಸರ್ವಧರ್ಮ ಸಮತಾಭಾವವಿರಬಹುದು. ಬೇರೆ ಧರ್ಮಗಳ ಬಗ್ಗೆ ತಿಳಿಯುವ, ಆ ಜನರನ್ನು ಅರಿಯುವ ಕುತೂಹಲವಿರಬಹುದು. ಎಲ್ಲರೂ ಒಂದೆ ಎನ್ನುವ ರೀತಿ ಬದುಕಿನಲ್ಲಿ ನಡೆಯಬೇಕೆಂಬ ಆಸೆಯಿರಬಹುದು.
ಉ: ಕನಸು ಭವಿಷ್ಯ ಸೂಚಕವೇ?
ಇದು ಮನಸ್ಸಿನ ತೊೞಲಾಟ. ನೀವು ಹೆಚ್ಚು ಹೆಚ್ಚು ಮನಸ್ಸನ್ನು ವ್ಯವಸ್ಥಿತಗೊಳಿಸಿದಂತೆ ಕನಸುಗಳು ಕಡಿಮೆಯಾಗುತ್ತವೆ. ನಿಮ್ಮ ಆಂತರಿಕ ಶಕ್ತಿ ಸರಿಯಾಗಿ ಪ್ರಕಟಗೊಳ್ಳಲು ಮನಸ್ಸಿನಲ್ಲಿ ತೊೞಲಾಟವಿರಬಹುದು. ನಿಮ್ಮ ಮನಸ್ಸನ್ನು ನೀವೇ ಗಮನಿಸುತ್ತಾ ಹೋದಂತೆ ಈ ತೊಡಕುಗಳೆಲ್ಲಾ ಬಗೆಹಱಿಯುವುವು.
ಉ: ಕನಸು ಭವಿಷ್ಯ ಸೂಚಕವೇ?
ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವದಗಳಿ
ಕನಸು ಭವಿಷ್ಯ ಸೂಚಕವೇ? ಎಂಬ ಪ್ರಶ್ನೆಗೆ
ಕನಸು ಭವಿಷ್ಯ ಸೂಚಕವೇ ಹೌದು ಖಂಡಿತಾ ಎಂಬ ಬ್ಲಾಗ ಶೀಘ್ಹ್ರದಲ್ಲೇ ಹಾಕಿ
ನನ್ನ ಕನಸು ಏನನ್ನು ಸೂಚಿಸಿತು ಹಾಗು ಅದು ಹೇಗ ನಿಜವಾಯಿತು ಎಂಬುದನ್ನು ಬರೆಯುತ್ತೇನೆ
http://thereda-mana.blogspot.com/
ರೂಪ
ಉ: ಕನಸು ಭವಿಷ್ಯ ಸೂಚಕವೇ?
ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವದಗಳಿ
ಕನಸು ಭವಿಷ್ಯ ಸೂಚಕವೇ? ಎಂಬ ಪ್ರಶ್ನೆಗೆ
ಕನಸು ಭವಿಷ್ಯ ಸೂಚಕವೇ ಹೌದು ಖಂಡಿತಾ ಎಂಬ ಪೋಸ್ಟ್ ಶೀಘ್ರದಲ್ಲೇ ಹಾಕಿ
ನನ್ನ ಕನಸು ಏನನ್ನು ಸೂಚಿಸಿತು ಹಾಗು ಅದು ಹೇಗ ನಿಜವಾಯಿತು ಎಂಬುದನ್ನು ಬರೆಯುತ್ತೇನೆ
http://thereda-mana.blogspot.com/
ರೂಪ
ಉ: ಕನಸು ಭವಿಷ್ಯ ಸೂಚಕವೇ?
ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
ಕನಸು ಭವಿಷ್ಯ ಸೂಚಕವೇ? ಎಂಬ ಪ್ರಶ್ನೆಗೆ
ಕನಸು ಭವಿಷ್ಯ ಸೂಚಕವೇ ಹೌದು ಖಂಡಿತಾ ಎಂಬ ಪೋಸ್ಟ್ ಶೀಘ್ರದಲ್ಲೇ ಹಾಕಿ
ನನ್ನ ಕನಸು ಏನನ್ನು ಸೂಚಿಸಿತು ಹಾಗು ಅದು ಹೇಗ ನಿಜವಾಯಿತು ಎಂಬುದನ್ನು ಬರೆಯುತ್ತೇನೆ
http://thereda-mana.blogspot.com/
ರೂಪ
ಉ: ಕನಸು ಭವಿಷ್ಯ ಸೂಚಕವೇ?
ಕನಸು ನಮ್ಮದೇ ಮನಸ್ಸಿನ ಆಳದಲ್ಲಿ ಜರುಗುವ ಸಂಗತಿಯಾದ್ದರಿಂದ ಅವು ತೀರಾ ಬೇಸ್ ಲೆಸ್ಆಗಿರುವುದಿಲ್ಲ. ಆಳವಾದ ನಿದ್ರೆಯಲ್ಲಿನ ಕನಸುಗಳಿಗಿಂತ ಲುಸಿಡ್ ಡ್ರೀಮಿಂಗ್ ಎಂಬ ರೀತಿಯ ಕನಸುಗಾರಿಕೆಯಲ್ಲಿ ನಮಗೇ ಗೊತ್ತಿಲ್ಲದ ನಮ್ಮ ಮನಸ್ಸಿನ ಪದರಗಳನ್ನು ಕಾಣಬಹುದು. ಆದರೆ ಅವನ್ನು ಹೇಗೆ ಅನಲೈಸ್ ಮಾಡಿ ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎಂಬುದು ನಮ್ಮ ಉದ್ದೇಶದ ಮೇಲೆ ಅವಲಂಬಿಸಿರುತ್ತದೆ. ಹೀಗಾಗಿ ಕನಸು ಭವಿಷ್ಯ ಸೂಚಕವೇ ಎಂಬ ಪ್ರಶ್ನೆಯನ್ನು objective ಆಗಿ ಉತ್ತರಿಸಲು ಸಾಧ್ಯವಾಗದು ಎಂಬುದು ನನ್ನ ಅಭಿಪ್ರಾಯ.
ನಿಮ್ಮ ಮುಂದಿನ ಲೇಖನದಲ್ಲಿ ಹೆಚ್ಚಿನ ಚರ್ಚೆ ಸಾಧ್ಯವಾಗಬಹುದು ಎಂದು ಭಾವಿಸುವೆ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಕನಸು ಭವಿಷ್ಯ ಸೂಚಕವೇ?
ಈ ನಿಮ್ಮ ಕನಸ್ಸು ಸಹಜವಾದುದ್ದೇ ಆದರೆ ನಮಗೆ ಬೀಳುವ ಕನಸ್ಸುಗಳ್ಳು ನಮ್ಮ ಮನದ ಚಡಪಡಿಕೆಗೆ ಉತ್ತರ / ಪರಿಹಾರ / ಸಮಾಧಾನ ಪಡಿಸುವುದಕ್ಕಾಗಿಯೇ ಈ ಕನಸ್ಸುಗಳು ಬೀಳುತ್ತವೆಯಷ್ಟೇ, ನಮ್ಮ ಮನವು ಬಯಸುವಂತೆ ಅವು ರೂಪುಗೊಳ್ಳುತ್ತವೆ ಅಷ್ಟೇ. ನಾನು ನನ್ನ ಸಹೋದರನನ್ನು ಕಳೆದುಕೊಂಡು ಆರು ವರ್ಷವಾದರೂ ಆತ ನನ್ನ ಜೋತೆಯಲ್ಲಿಯೇ, ನನ್ನ ಬದುಕಿನಲ್ಲೇ ಜೀವಿಸಿದ್ದಾನೆ ಎಂಬ ಕನಸ್ಸುಗಳು ಪ್ರತಿ ನಿತ್ಯ ಬೀಳುತ್ತವೆ ಆದರೆ ಎಚ್ಚರವಾದ ಬರೀ ನೋವು ಅಷ್ಟೇ. ಕನಸ್ಸಿಗೂ ವಾಸ್ತವಕ್ಕೂ ಸಂಬಂಧವಿರುವುದಿಲ್ಲ ಅದಕ್ಕೆ ಅವು ಎಂದಿಗೂ ಕನಸ್ಸು ಅಷ್ಟೇ.
ಮಾ.ಕೃ.ಮಂಜು