ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

May 13, 2008 - 3:14pm — roopablrao

ನನಗೆ ಈ ಅಚ್ಚ ಕನ್ನಡ , ಸಂಸ್ಕೃತ ಕನ್ನಡ ಮುಂತಾದವುಗಳ ಬಗ್ಗೆ ಸಂಪದದಲ್ಲಿ ಓದಿಯಾದ ಮೇಲೆ ತಿಳಿದಿದ್ದು . ಅಲ್ಲಿಯವರೆಗೆ ನಾವಡುವ ನುಡಿಯೆ ಶುದ್ದ ಕನ್ನಡ ನುಡಿ ಅಂತ ತಿಳಿದ್ದಿದೆ

ಆಗ ನನಗೆ ಮೂಡಿದ ಪ್ರಶ್ನೆ ಏನೆಂದರೆ ಬರೀ ಅಂತರ್ಜಾಲದಲ್ಲಿ ಜಾಲಿಸುವವರಿಗೆ ಮಾತ್ರವೆ ಇವುಗಳು?

ಈ ವಿಚಾರಗಳನ್ನು ಎಲ್ಲಾ ಕನ್ನಡಿಗರೂ ತಿಳಿದಿದ್ದರೆ, ಅಚ್ಚ ಶುದ್ದ ಕನ್ನಡದ ಕಲ್ಪನೆ ಕೆಲವು ಮಟ್ಟಿಗಾದರೂ ಸಾಮಾನ್ಯ ಜನರನ್ನು ತಲುಪುತ್ತದೆ. ಹಾಗೆ ನಮ್ಮಾಸೆಯಾದ ಸಕ್ಕದರಹಿತ ಕನ್ನಡ ಎಲ್ಲೆಡೆ ಹರಡುತ್ತದೆ.

ಈ ವಿಚಾರಗಳನ್ನು ಕರ್ನಾಟಕದ ಜನರ ಮುಂದಿಡಲು ಒಂದು ಆಂದೋಲನವೇ ಬೇಕಾಗಬಹುದು.

ಇದಕ್ಕೆ ಒಂದು ವೇದಿಕೆಯನ್ನು ಕಲ್ಪಿಸಿ ಜನರ ಶುದ್ದ ಕನ್ನಡವನ್ನೇ ಆಡುಭಾಷೆಯಾಗಿ ಉಪಯೋಗಿಸುವಂತೆ ಮಾಡುವ ಕೆಲಸ ನಮ್ಮಿಂದ (ಎಲ್ಲಾ ಕನ್ನಡಪ್ರಿಯ ಜಾಲಿಗರಿಂದ) ಆಗಬಹುದೇ?

ಬಲ್ಲವರು ಹೇಳಬೇಕು

ಗಮನಿಸಿ. ಇಲ್ಲಿ ನಾನೂ ಕನ್ನಡ ಸಂಸ್ಕೃತ ಮಿಶ್ರಣವನ್ನೆ ಉಪಯೋಗಿಸಿದ್ದೇನೆ. ಆ ಅರಿವು ನನಗೆ ಇದೆ

  • ಕನ್ನ್ದಡ
~.~
  • roopablrao ರವರ ಬ್ಲಾಗ್
  • Login or register to post comments
  • 952 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 13, 2008 - 6:43pm — ವೈಭವ

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

ವೈಭವ's picture

ರೂಪಕ್ಕನವರೆ,
ಇಂದಿಗೂ ನಮ್ಮ ಹಳ್ಳಿಗಳಲ್ಲಿ (ಮತ್ತು ಹಲವು ಕಡೆ)ಆಡುಬಾಶೆ ಅಚ್ಚಗನ್ನಡವೆ. ನಾವು ಮಾತಿನಲ್ಲಿರುವ ಅಚ್ಚಗನ್ನಡವನ್ನೆ ಸಂಪದದಲಿ ಬರೆಯುತ್ತಿರುವುದು.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 11:32pm — Sunil Jayaprakash

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

Sunil Jayaprakash's picture

ಅಯ್ಯೋ, ಈ ಸಂಸ್ಕೃತ-ಕನ್ನಡ ವಿಷಯಗಳ ಬಗ್ಗೆ ಯಾರಾದ್ರು ಏನಾದ್ರು ಹೇಳಕ್ಕೆ ಹೋದರೆ, ಪಂಡಿತೋತ್ತಮರಿಂದ (ಗಮನಿಸಿ ಇದು ಉಡಾಫೆಯಲ್ಲ. ಅವರವರ ವಿಷಯಗಳಲ್ಲಿ ಅವರುಗಳು ನಿಜವಾಗಿಯೂ ವಿದ್ಯಾಂಸರೇ) ಉಗಿಸಿಕೊಳ್ಳಬೇಕಾಗುತ್ತದೆ. ನಾನು ವೈಯಕ್ತಿಕವಾಗಿ ಅತ್ಯಂತ ಗೌರವ ನೀಡುವ ವ್ಯಕ್ತಿಗಳೇ ಅವರ ಲೆಕ್ಚರುಗಳಲ್ಲಿ ಡಿ.ಎನ್.ಶಂಕರ ಭಟ್ಟರ ಪುಸ್ತಕಗಳ ಬಗ್ಗೆ ಕೆಟ್ಟ ವ್ಯಂಗ್ಯದ ಮಾತುಗಳನ್ನಾಡಿ, ಕೇಳುಗರ ದಿಕ್ಕುತಪ್ಪಿಸಿರುವುದನ್ನು ಸಿಕ್ಕಾಪಟ್ಟೆ ಬಾರಿ ಕಣ್ಣಾರೆ ನೋಡಿದ್ದೀನಿ, ಕಿವಿಯಾರೆ ಕೇಳಿದ್ದೀನಿ. ಕೆಲವು ಉಪನ್ಯಾಸಗಳಲ್ಲಿಯಂತೂ, ಶಂಕರ ಭಟ್ಟರು ಹೇಳಹೊರಟ ವಿಷಯಗಳನ್ನು ಬಿಟ್ಟು ಅವರನ್ನು ವೈಯಕ್ತಿಕ ನೆಲೆಯಲ್ಲಿ ಕೂಚುಭಟ್ಟ, ಚಂಕರ ಪಟ್ಟ, ಕನ್ನಡಕ್ಕೆ ಚಟ್ಟ, ಭಯಂಕರ ಬಟ್ಟ ಅಂತೆಲ್ಲ ತುಂಬಿದ ಸಭೆಯಲ್ಲಿ ಆಡಿಕೊಂಡಿರುವುದನ್ನು ಕೇಳಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 10:51am — madhava_hs

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

madhava_hs's picture

ಅವ್....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 8:01am — mahesha

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

mahesha's picture

ರೂಪ ಅವರೇ...

ಇದಕ್ಕೆ ಹೆಚ್ಚೇನು ದುಡಿಮೆ ಬೇಕಿಲ್ಲ...

ನಾವು ಮಾತಲ್ಲಿ ಬೞಸುವ ಒರೆಗಳನ್ನು ಬೞಸೇ ಬರೆಯಬೋದಲ್ಲ... ಮೇಲ್ಮಟ್ಟದ ಬರವಣಿಗೆ ಎಂದು ನಮಗೆ ತಿಳಿಯದೇ ಹೇರಳ ಸಕ್ಕದ ತುಂಬಿ ಬಿಡುವೆವು..

ಈಗ
ಮಾದರಿ : "ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?" ನಾವು ಮಾತಲ್ಲಿ( ಬಾಶಣ ಬಿಗಿಯದೇ, ಮಾಮಾಲಿ ಮಾತಲ್ಲಿ) ಎಂದೂ ಹೀಗೆ ಸಾಲು ಮಾಡುವುದಿಲ್ಲ..

"ಸಮ್ಸ್‌ಕ್ರುತವಿಲ್ಲದ/ಸಕ್ಕದವಿಲ್ಲದ ಕನ್ನಡದ ಬಱೀ ಕನ್ನಡದ ಇಂಟರ್‍ನೆಟ್ಟು ಬೞಸೋರಿಗೇನು?" ಇದು ಹೆಚ್ಚು ಮಾತಿಗೆ ಹತ್ತಿರವಾದ ಸಾಲು..

ಗಮನಿಸಿ..
ಇಂಟರ್‍ನೆಟ್ಟು ಕನ್ನಡದಲ್ಲಿ ಇಂಟರ್‍ನೆಟ್ಟಾಗೇ ಉೞದಿದೆ.
Users ಸಲೀಸಾಗಿ Use=ಬೞಕೆ, User=ಬಳಸೋರು ಆಗಿದೆ.

ನಾವು ಬೇರೆಯವರನ್ನು ಮಾರ್ಪಡಿಸುವುದಕ್ಕಿಂತ ನಮ್ಮನ್ನು ಮಾರ್ಪಡಿಸಿಕೊಳ್ಳೋದು ಸಲೀಸು...

ನೀವು ಮಾರ್ಪಡಲು ಬಯಸುವಿರಾದರೇ, ನಾನು ನಿಮಗೆ ನೆಱವು ನೀಡ್ತೀನಿ.. ಬೆನ್ನಿಲ್ತೀನಿ..!! ಆದ್ರೆ ನೀವು ಅದಕ್ಕೆ ಗಮನ ಹರಿಸಬೇಕು.

೧) ಆದಶ್ಟು ಆಡುಮಾತಿಗೆ ಹತ್ತಿರ ಸಾಲುಗಳನ್ನು ಮಾಡಿ
೨) ನಾಮಪದ/ನವುನುಗಳನ್ನು ತರ್ಜುಮೆ ಮಾಡುವ ಗೋಜಿಗೆ ಹೋಗದೇ, ಅದು ಹೇಗೆ ಯಾವ ನುಡಿಯಿಂದ ಬಂದಿದೆಯೋ ಅದನ್ನು ಕನ್ನಡಯಿಸಿರಿ.
ಮಾದರಿ..
ಇಂಟರ್‍ನೆಟ್ => ಇಂಟರನೆಟ್ಟು
ವೆಬ್ ಪಾಜ್ => ವೆಬ್ಬು ಪೇಜು

ಅಶ್ಟೆ...

ತಪ್ಪದೇ ಶಂಕರ ಬಟ್ಟರ ಹೊತ್ತಗೆ/ಬುಕ್ಕುಗಳನ್ನು ಓದಿ.

ಈ ಬರಹದಲ್ಲಿರುವ ಸಕ್ಕದದ ಒರೆಗಳು
ರಹಿತ = ಇಲ್ಲದ
ಜಾಲಿಗ = ಬಲೆಗಾರ
ಶುದ್ಧ = ಅಪ್ಪಟ, ಅಣ್ಣೆ
ಪ್ರಶ್ನೆ = ಕೇಳ್ಮೆ/ಕೇಳ್ವೆ/ಕೇಳುಮೆ/ಕೇಳುವೆ
ಮಾತ್ರ = ಬರೀ
ಅಂತರಜಾಲ = ಇಂಟರನೆಟ್ಟು/ಮಿಂಬಲೆ
ವಿಚಾರ = ಸಂಗತಿ
ಕಲ್ಪನೆ = ?
ಆಂದೋಲನ ಅಂದ್ರೆ ಸಕ್ಕದದಲ್ಲಿ ಬೀಸುವಿಕೆ.. ಕನ್ನಡದಲ್ಲಿ ಚಳುವಳಿ/ಹೋರಾಟ
ಮಿಶ್ರಣ = ಬೆರೆತ/ಬೆಱೆತ
ಉಪಯೋಗ = ಬಳಕೆ/ಬೞಕೆ

ನೋಡಿ ನಿಮಗೆ ಎಶ್ಟೋ ಅಪ್ಪಟಕನ್ನಡದ ಒರೆಗಳು ಗೊತ್ತಿದ್ದವು ಆದರೂ ನೀವು ಬೞಸಲು ಆಗಲಿಲ್ಲ... ಓಸುಗರ/ಕಾರಣ ಮೇಲ್ಮಟದ/ಉತ್ತಮ ಸಾಲುಗಳು ಎಂಬ ಮರಳು/ಭ್ರಮೆ.( ಇದು ನನಗೂ ಇತ್ತು, ಹಲವರಿಗೂ ಇದೆ.. ಅದು ಮೆಲ್ಲಗೆ ಮಱೆಯಾಗುವುದು, ಶಂಕರ ಬಟ್ಟರ ಹೊತ್ತಗೆ ಓದಿ )
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 3:45pm — vikashegde

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

vikashegde's picture

ಅವ್ Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 4:42pm — Sunil Jayaprakash

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

Sunil Jayaprakash's picture

ಮಾಧವ ಮತ್ತು ವಿಕಾಸ, "ಅವ್" ಎಂದರೇನು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 4:52pm — vikashegde

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

vikashegde's picture

ಯಾರಾದರು ಏನಾದರೂ ಹೇಳಿದಾಗ, ಕೇಳುತ್ತಿರುವ ನಾವು ಅಚ್ಚ ಕನ್ನಡದಲ್ಲಿ ಹೊರಡಿಸುವ ಶಬ್ದ ಅದು.
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 1:29pm — madhava_hs

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

madhava_hs's picture

ಸುನಿಲ,

ಅವ್..ಅನ್ನೋದನ್ನ ಕನ್ನಡಿಗರಿಗೆ ಪರಿಚಯಿಸಿದ್ದು ಜಗ್ಗೇಶ್ Smiling

ನನ್ನ ಅಚ್ಚು ಮೆಚ್ಚಿನ ನಟ ದಿಗ್ಗಜ ಜಗ್ಗೇಶ್ ಡಯಲಾಗ್ ಗಳನ್ನು ನೀವು ಕೇಳಿಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 2:00pm — vikashegde

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

vikashegde's picture

ಮಾಧವ, ದಿಗ್ಗಜ ಅಲ್ಲ, ದೊಡ್ಡಾನೆ ಅನ್ಬೇಕು Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 2:29pm — madhava_hs

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

madhava_hs's picture

ಸರಿ.... ನಟ ದೊಡ್ಡಾನೆ ಜಗ್ಗೇಶ್ ಅಂದ್ರೆ ಸರೀನೇ? Smiling

’ದಿಗ್ಗಜರು’ ಅಂತ ಒಂದು ಚಿತ್ರ ಬಂದಿತ್ತು..

ಅದಕ್ಕೆ ’ದೊಡ್ಡಾನೆಗಳು’/’ಹಿರಿಯ ಸಲಗಗಳು’ ಅಂತ ಹೆಸರಿಡ್ಬಹುದಿತ್ತಲ್ವೇ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 2:37pm — vikashegde

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

vikashegde's picture

ಹಿರಿಯ, ಸಲಗ.... ಅವೆಲ್ಲಾ ಆಗೋಲ್ಲ. ದೊಡ್ಡ, ಆನೆ ಅಷ್ಟೆ Smiling

ಹೆಸ್ರು ಏನ್ ಬೇಕಾರು ಇಡ್ಬೋದು, ಗಜ, ದಿಗ್ಗಜ, ದುನಿಯಾ.. ಆದ್ರೆ ಹಾಡುಗಳು ಮಾತ್ರ ಅಚ್ಚ ಕನ್ನಡದಾಗೇ ಇರ್ಬೆಕು ಅಷ್ಟೆಯ.. ಕುಚ್ಚಿಕು ಕುಚ್ಚಿಕು ಕುಚ್ಚಿಕು.. ನಾನು ನಿನ್ನ ಚಡ್ಡಿ ದೋಸ್ತಿ ಕಣೋ ಕುಚ್ಚಿಕು.....

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 3:32pm — vinayudupa

ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

vinayudupa's picture

ಅವ್....

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ನುಡಿಗೆ ಮುಂದಿನ ದಿಕ್ಕು
  • ಮಂಗಳೂರು ಕನ್ನಡ
  • ಕೊಂಕಣಿ ಮತ್ತು ಕನ್ನಡ
  • ಅಚ್ಚ ಕನ್ನಡದ ಹೆಸರುಗಳು
  • ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!
  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator