ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಅತ್ಯಾಚಾರ ಮತ್ತು ಕಾರಣಗಳು

May 9, 2008 - 2:53pm — roopablrao

ಅತ್ಯಾಚಾರ ಮತ್ತು ಕಾರಣಗಳು

ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋಚಿಸಬೇಕಾದ ಗಂಭೀರ ವಿಚಾರಗಳೇ ಸರಿ.

ಹೆಣ್ಣಿನ ಮೇಲೆ ಅತ್ಯಾಚಾರ ಯಾಕೆ ನಡೆಯುತ್ತದೆ ಎಂಬುದನ್ನು ಮೊದಲು ವಿಶ್ಲೇಷಿಸಿದಾಗ ಈ ಕಾರಣಗಳು ನನಗೆ ಹೊಳೆದವು. ನನ್ನ ಜೀವನ ಯಾತ್ರೆಯಲ್ಲಿ ಕೆಲವು ಇಂತಹ ಸಂಗತಿಗಳೂ ನಡೆದಿವೆ. ಅದನ್ನೂ ಇಲ್ಲಿ ಬರೆದ್ದಿದ್ದೇನೆ
ಸಂಧರ್ಭ:
ಗಂಡಸರು ಅನುಕೂಲಸಿಂಧುಗಳು.
ಇಂದು ಕ್ಲೋಸ್ ಫ್ರೆಂಡ್ ಆಗಿರುವುವನೇ ನಾಳೆ ರೇಪಿಸ್ಟ್ ಆಗಬಹುದು.
ನಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ ಲೈಬ್ರರಿಯಲ್ಲಿ ಶನಿವಾರ (ಅಂದು ರಜಾ) ಭೇಟಿ ಕೊಟ್ಟಿದ್ದೆ.
ಯಾರು ಇರಲಿಲ್ಲ ವಾದ್ದರಿಂದ ಆತನ ಬುದ್ದಿಗೇನಾಯಿತೊ ಮೇಲೆ ಬೀಳಲು ಹವಣಿಸಿದ. ಇಷ್ಟು ದಿನ ಕ್ಲೋಸ್ ಆಗಿ ಮಾತಾಡುತ್ತಿದ್ದೆಯಲ್ಲ . ಇಂದು ಇದಕ್ಕೂ ಒಪ್ಪಿಕೋ ಎಂದ./ ಹ್ಯಾಗೊ ಅವನಿಂದ ತಪ್ಪಿಸಿಕೊಂಡು ಬಂದಾಗಲಷ್ಟೆ ನೆಮ್ಮದಿಯ ಉಸಿರು ಬಿಟ್ಟೆ. ಯಾರಿಗೂ ಹೇಳಲಿಲ್ಲ . ಹೇಳಿದರೆ ನೀನ್ಯಾಕೆ ರಜಾದಿನದಲ್ಲಿ ಹೋದೆ . ನಿನ್ನದೇ ತಪ್ಪು ಅಂತಾರೆ.ಆ ಪರಿಸ್ಥಿತಿ ಅವನಿಗೆ ಧೈರ್ಯ ತಂದುಕೊಟ್ತಿತ್ತು

ಹೆಣ್ಣಿನ ಸ್ಥಿತಿ
ಅಕಸ್ಮಾತ್ ಹೆಣ್ಣು ಗಂಡಿಗಿಂತ ಆರ್ಥಿಕವಾಗಿಯೋ ಅಥವ ದೈಹಿಕವಾಗಿಯೊ ದುರ್ಬಲಳಾಗಿದ್ದರೆ ಅವಳು ಗಂಡಿಗೆ ಬಡಿಸಿಟ್ಟ ಎಲೆ ಎಂದುಕೊಳ್ಳುತ್ತಾನೆ . ಸಾಮಾನ್ಯವಾಗಿ ಹುಡುಗಿಯರು ತಮ್ಮ ಕೆಲಸದಲ್ಲಿ ಅಥವ ಕಾಲೇಜಿನಲ್ಲಿ ಇಂತಹ ಸಂಧರ್ಭ ಎದುರಿಸಬೇಕಾಗುತ್ತದೆ.
ಗಂಡಿನ ಸ್ಥಿತಿ
ಗಂಡು ಕೆಲವೊಮ್ಮೆ ಇಲ್ಲೀವರೆಗೆ ಹೆಣ್ಣನ್ನೂ ಕಾಣದಿದ್ದಾಗ(ಬ್ರಹ್ಮಚಾರಿಗಳಾಗಿದ್ದವರು) ಮತ್ತು ತಮ್ಮ ಕಾಮ ತೀವ್ರತೆಯನ್ನು ಹತೋಟಿಯಲ್ಲಿಟ್ಟುಕೊಳ್ಳದೇ ಇದ್ದಾಗ(ದುರ್ಬಲ ಮನಸಿನವರು ,ಎಲ್ಲರೂ ಅಲ್ಲ ) ಅತ್ಯಾಚಾರಕ್ಕೆ ದಾರಿ ಯಾಗಬಹುದು.
ಹೆಣ್ಣಿನ ನಡತೆ
ಯಾರೇನೆ ಅಂದರೂ ಹೆಣ್ಣು ಯಾರೊಡನೆಯಾದರೂ ನಗುತ್ತಾ ಮಾತನಾಡಿದರೆ , ಮುಟ್ಟಿ  ಮಾತನಾಡಿಸಿದರೆ ಅವಳು ’ಅದಕ್ಕೆ ಕೊಡುವ ಇಂಡೈರೆಕ್ಟ್ ಇನ್ವಿಟೇಶನ್ ಅಂತ ಅಂದುಕೊಳ್ಳುವ ಸಮಾಜ ಇನ್ನೂ ಬದಲಾಗುವುದಿಲ್ಲ. ಆಗುವುದೂ ಇಲ್ಲ.

ಒಮ್ಮೆ ಒಂದು ಸಂಸ್ಥೆಯ ಅಧಿಕಾರಿಯಾಗಿ ನಾನು ಒಬ್ಬ ವಿದ್ಯಾರ್ಥಿಯೊಡನೆ ರಸ್ತೆಯಲ್ಲಿ ಸಿಕ್ಕನೆಂದು ಮಾತನಾಡಿ ಸ್ವಲ್ಪ ದೂರ ಬಂದೊಡನೆ ಯಾರೋ " ಅವನ ಜೊತೇಲಿ ಮಾತ್ರ ಬರ್ತೀರ ನಮ್ಮ ಜೊತೆ ಬರಲ್ಲ್ವಾ " ಅಂತ ಕೆಟ್ಟಾದಾಗಿ ಕೇಳಿದಾಗ ಇನ್ನೊಮ್ಮೆ ಯಾರೊಡನೆಯೂ ರಸ್ತೆಯಲ್ಲಿ ಮಾತನಾಡುತ್ತಾ ನಿಲ್ಲಬಾರದು ಎನಿಸಿತು.
 

ಹೆಣ್ಣಿನ ಉಡುಪು
ಖಂಡಿತಾ ಇದು ಸತ್ಯ.
ಈಗಿನ ಫ್ಯಾಶನ್ ಕಡಿಮೆ ಬಟ್ಟೆ ಹಾಕುವುದು. ಅದು ನಿಜ . ನಾನೂ ಒಪ್ಪುತ್ತೇನೆ. ಅದು ಎಲ್ಲಿವರೆಗೆ?
ನಾವು ಸಮಾಜದಲ್ಲಿ ಬದುಕುತ್ತಿದ್ದಾಗ ಸಮಾಜದ ಕಟ್ಟುಪಾಡುಗಳು ಅತಿ ಮುಖ್ಯ. ಅದನ್ನು ಮೀರಿದವಳು, ’ಅಂತಹವಳು’ ಎಂದು ಬ್ರಾಂಡ್ ಆಗುವುದು ನಿಜ. ಅಂತಹವರು ಗಂಡನ್ನು ಪ್ರಚೋದಿಸುವುದೂ ನಿಜ
ನಾನು ಚಿಕ್ಕವಳಿದ್ದಾಗ (೧೫ ವರ್ಷದವಳು)ಒಂದು ನಗರವಾಗುತ್ತಿರುವ ಹಳ್ಳಿಯಲ್ಲಿ ಕೆಲ ಕಾಲ ಇದ್ದೆವು .  ಪ್ಯಾಂಟ್ ಶರ್ಟ್ ಧರಿಸಿ ನಾನು ಆ ಹಳ್ಳಿಯಲ್ಲಿ ಬರುತ್ತಿದ್ದಾಗ ಸಭ್ಯತೆಯ ಎಲ್ಲೆ ಮೀರಿ ಅಲ್ಲಿನ ಗಂಡಸರು ಮಾತನಾಡಿದ್ದು ನೆನಪಿದೆ.. ಅಂದಿನಿಂದ ಆ ಹಳ್ಳಿಯಲ್ಲಿ ಇರುವಷ್ಟು ದಿನ ನಾನು ಚೂಡಿದಾರ ಹಾಕಿಯೇ ಒಡಾಡುತ್ತಿದೆ. ಅಂತಹ ಪ್ರಸಂಗ ನನಗೆ ಮತ್ತೆ ಎದುರಾಗಲೇ ಇಲ್ಲ.
ಪಾಶ್ಚಾತ್ಯ ರಾಷ್ತ್ರಗಳಲ್ಲಿ ಹೇಗೊ ಗೊತ್ತಿಲ್ಲ .
ಆದರೆ ನಮ್ಮ ಸಮಾಜದ ಲಕ್ಶ್ಮಣ ರೇಖೆ ಯನ್ನೂ ದಾಟದೇ ಇರುವ ವರೆಗೂ ಹೆಣ್ಣು ಎಂದಿಗೂ ಈ ಅತ್ಯಾಚಾರಕ್ಕೆ ಬಲಿಯಾಗುವುದು ಕಡಿಮೆ

ಹೆಣ್ಣು ಇದಕ್ಕೆ ಏನು ಮಾಡಬಹುದು
ನನ್ನ ಅನಿಸಿಕೆಗಳು
ಆದಷ್ಟು ರಾತ್ರಿ ಒಬ್ಬಳೆ ಒಡಾಡುವುದನ್ನು ಕಡಿಮೆ ಮಾಡಬೇಕು ಇಲ್ಲವಾದರೆ ಜನರಿರುವ ರಸ್ತೆಯಲ್ಲಿ ಓಡಾಡಬೇಕು ಇಲ್ಲವಾದರೆ ಯಾರಾದರೂ ಗೊತ್ತಿರುವವರು ಜೊತೆ ಇರಬೇಕು. ಗೊತ್ತಿಲ್ಲ್ಲದ ಸ್ಥಳಕ್ಕೆ ಹೋಗುವಾಗ  ಯಾರಾದರೂ ಜೊತೆ ಇದ್ದರೆ ಉತ್ತಮ . ಅಥವ ತಾವು ಹೋಗುವ ಸ್ಥಳದ ಬಗ್ಗೆ ಪೂರ್ಣಾ ಮಾಹಿತಿ ಪಡೆಯಬೇಕು
ಟೀನಾರವರು ಹೇಳಿದಂತೆ ಆತ್ಮರಕ್ಶಣೆಯ ಕಲೆಯನ್ನು ರೂಡಿಸಿಕೊಳ್ಳಬೇಕು, ಜೊತೆಯಲ್ಲಿ ಪೆಪ್ಪರ್ ಸ್ಪ್ರೇ ಆಥವ ಆ ಥರಹದ ಇನ್ನೇನಾದರೂ ಇಟ್ಟುಕೊಳ್ಳಾಬೇಕು
ನಾನು ಯಾವುದೇ ಸಮಯ್ದಲ್ಲೂ ಆಟೊನಲ್ಲಿ ಅಥವ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗಲೆಲ್ಲಾ . ಆ ಡ್ರೈವರ್‌ನ ಪೋಲಿಸ್ ನಂಬರನ್ನು ನನಗೆ ತಿಳಿದವರಿಗೆ ಎಸ್. ಎಮ್ .ಎಸ್ ಮಾಡುತ್ತೇನೆ. ದಾರಿಯಲ್ಲಿ ಫೋನನ್ನಲ್ಲಿ ಮಾತಾಡುತ್ತಾ ನನಗೆ ತಿಳಿದವರು ಈ ರಸ್ತೆಯಲ್ಲಿ ಸಿಕ್ಕಿ ಹತ್ತುತ್ತಾರೆ ಎಂಬುದನ್ನು ಅವನಿಗೆ ಸೂಚ್ಯವಾಗಿ ಹೇಳುತ್ತೇನೆ. ನಂತರ ಅವನ ಜೊತೆ ಮಾತನಾಡಲಾರಂಭಿಸುತ್ತೇನೆ. ಅವನ ಜೊತೆ ಮಾತಾನಾಡುತ್ತಾ ಒಂದು ರೀತಿಯ ಅತ್ಮೀಯ ವಾತವರಣ ನಿರ್ಮಿಸುತ್ತೇನೆ ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಜಾರಿಕೆಯ ಮಾತಾಗಲಿ , ವೈಯುಕ್ತಿಕ ವಿಷಯ ವಾಗಲಿ ನುಸುಳದಂತೆ ಎಚ್ಚರ ವಹಿಸುತ್ತೇನೆ.
ತನ್ನ ಬಟ್ಟೆ ಹಾಗೂ ತನ್ನ ನಡುವಳಿಕೆಯ ಮೇಲೆ ಗಮನ(ಎಚ್ಚರ ) ವಿರಬೇಕು. ಯಾವುದೇ ಕಾರಣಕೂ ತನ್ನ ಉಡುಪಿನಿಂದ ಅಂಗಾಂಗ ಪ್ರದರ್ಶನವಾಗಬಾರದು (ಯಾವುದೇ ಉಡುಪು ಧರಿಸಿದರೂ). ಹಾಗೂ ಎಷ್ಟೆ ಮಾತನಾಡಿದರೂ ದೈಹಿಕ ಸ್ಪರ್ಶವನ್ನು ಕಡಿಮೆ ಮಾಡಬೇಕು. (ಹೆಂಗಸರು ತಮ್ಮ ಗೆಳತಿಯರಂತೆ ತಮ್ಮ ಗೆಳೆಯರ ಮೇಲೂ ಕೈ ಹಾಕಿ ನಡೆಯುವುದನ್ನು ನಾನು ನೋಡಿದ್ದೇನೆ).
ಸಣ್ಣ ಪುಟ್ಟ ಸಹಾಯ ಡ್ರಾಪ್ ಮಾಡು ಕಾಫಿ ಕೊಡಿಸು. ತೆಗೆದುಕೊಂಡು ಬಾ ಎಂಬ ತಾವೆ ಮಾಡಬಹುದಾದಂತಹ ಕೆಲಸಗಳಿಗೆ ಗಂಡಸರ ಸಹಾಯ ಪಡೆಯುವುದು ತಪ್ಪು

ಇದನ್ನೆಲ್ಲಾ ಮಾಡಿದರೆ ಅತ್ಯಾಚಾರ ಎನ್ನುವುದೇ ಇಲ್ಲವಾಗುತ್ತವೆ ಎಂಬುದು ಸುಳ್ಳು
ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ
ಗಮನಿಸಿ . ಇಲ್ಲಿ ಯಾವುದನ್ನು ಜೆನರಲೈಸ್ಡ್ ಆಗಿ ಹೇಳಿಲ್ಲ .

~.~
  • roopablrao ರವರ ಬ್ಲಾಗ್
  • Login or register to post comments
  • 916 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 9, 2008 - 4:47pm — gururajkodkani

ಉ: ಅತ್ಯಾಚಾರ ಮತ್ತು ಕಾರಣಗಳು

gururajkodkani's picture

ಗುಱುಱಾಜ
www.kannadaguru.blogspot.com

ರೂಪಾ ,ಚೆನ್ನಾಗಿ ಹೇಳಿದ್ದಿರಾ....ಅದರಲ್ಲೂ ಬಟ್ಟೆಯ ಬಗೆಗಿನ ವಿಷಯವ೦ತೂ ತು೦ಬಾ ನಿಜ.ನನಗನಿಸಿದ ಪ್ರಕಾರ ಬಹುಶ: ೫೦% ರಷ್ಟು ಅತ್ಯಾಚಾರ ಪ್ರಕರಣಗಳಿಗೆ ಇದು ಮುಖ್ಯ ಕಾರಣವೆನಿಸುತ್ತದೆ.ಮುಖ್ಯವಾಗಿ ದುರ್ಬಲ ಮನಸ್ಸಿನ,ಅತೀ ಭಾವುಕ ಮನಸ್ಸಿನ ಹುಡುಗ/ಗ೦ಡಸರಿ೦ದ ದೂರವಿರುವುದು ಉತ್ತಮ.ಹಿ೦ದೆ ಎಲ್ಲೋ ಓದಿದ ನೆನಪು ಪುರುಷನೊಬ್ಬನ ಸ್ಪರ್ಷ ಮಾತ್ರದಿ೦ದಲೇ ,ಅವನ ಉದ್ದೇಶ ತಿಳಿದುಕೊಳ್ಳುವ ಶಕ್ತಿ ಹುಡುಗಿಯರಿಗಿದೆಯ೦ತೆ.ಎಷ್ಟು ನಿಜವೋ ಗೊತ್ತಿಲ್ಲ.ಆದರೆ ಅವರು ಮಾಡುವ behaiourನಿ೦ದ ತಿಳಿದುಕೊ೦ಡು ಬಿಡಬಹುದಲ್ಲ್ಲವೇ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 9, 2008 - 7:30pm — Vinod Pattanshetti

ಉ: ಅತ್ಯಾಚಾರ ಮತ್ತು ಕಾರಣಗಳು

Vinod Pattanshetti's picture

"ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು" ೧೦೦% ಕರೆಕ್ಟ್ ಆಗಿ ಇದೆ,
ತುಂಬಾ ಪ್ರ್ಯಾಕ್ಟಿಕಲ್ ಗೆ ಟಚ್ ಕೊಟ್ಟಾಗೆ ಇದೆ ಇಮ್ಮ ಬ್ಲೋಗ್.

ನಮ್ಮ ಕಾಲೇಜ್ ಅಲ್ಲಿ, ಸುಮಾರು ಹುಡಾಗಿರು, ಚೆನ್ನಾಗೂ ಇದ್ರು ನೋಡೋಕೆ,
ಅದ್ರಲ್ಲಿ, ಕೆಲವೊಂದು ಹುಡಾಗಿರು , ನಕ್ರ, ನಾಟಕ, ಅವರ ದ್ರೇಸ್ಸು ತುಂಬ ಆಕರ್ಷಣೆ ಮಾಡ್ತಾ ಇತ್ತು.
ಕಾಲೇಜ್ ಅಲ್ಲಿ ನಮ್ಮ ಜೂನಿಔೂರ್ಸ್ ಕೂಡ ಅವ್ರ ಬಗ್ಗೆ ಮಾತಾಡ್ತಾ ಇದ್ರು, ಬೇರೆ ಕಾಲೇಜ್ ಇಂದ ಬಂದು ಜನ ಲೈನ್ ಹೊಡ್ದು ಹೋಗ್ತಾ ಇದ್ರು, ಅದ್ಕೆ ಇವ್ರು ನಗ್ತಾ ಇದ್ರು.ಹುದ್ಗಿರ ಈ ತರ, ವರ್ತನೆ, ಆಕಾಶಣೆ ಜಾಸ್ತಿ ಮಾಡುತ್ತೆ.

ಅದೇ ಇನ್ನೂ ಕೆಲವು ಜನ ಹುಡಾಗಿರು, ಅವರು ಇವರಿಗಿಂತ ಚೆನ್ನಾಗಿ ಇದ್ರು ನೋಡೋಕೆ, ಆದ್ರೆ ಅವರಲ್ಲಿ, ಗಂಭೀರತೆ ಅನ್ನೋದು ಇತ್ತು, ಆವ್ರುಎಲ್ಲ ತರ, ದ್ರೇಸ್ಸು, ಮಾತಾಡೋದು ಮಾಡ್ತಾ ಇದ್ರು.ಇವ್ರಿಗೆ ನೋಡಿದ್ರೆ ಆ ತರ, ಯಾರು ವಿಚಾರ ಮಾಡ್ತಾ ನೇ ಇರ್ಲಿಲ್ಲ, ಎಲ್ರೂ ಹೇಳ್ತಾ ಇದ್ರು, ತುಂಬ ಒಳ್ಳೇ ಹುಡುಗಿ.

ಹೂದ್ಗಿರು, ಹುದ್ಗಿರ ತರನೇ ಇರಬೇಕು, ಇಲ್ಲ ಅಂದ್ರೆ ಅಕ್ರಮ ಅತ್ಯಾಚಾರ ಗಳು ಜಾಸ್ತಿ ಆಗೇ ಆಗುತ್ತೆ.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 9, 2008 - 8:41pm — vikashegde

ಉ: ಅತ್ಯಾಚಾರ ಮತ್ತು ಕಾರಣಗಳು

vikashegde's picture

-----------ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು. ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ-------

ಹೌದು ರೂಪ, ಇದು ನಿಜ.
ಒಳ್ಳೆಯ ವಿಚಾರವುಳ್ಳ ನಿಮ್ಮ ಬರಹ ನೋಡಿ ಖುಷಿಯಾಯಿತು.
ಚುಡಾಯಿಸುವಿಕೆ, ಅತ್ಯಾಚಾರ, ದೌರ್ಜನ್ಯ ಇವೆಲ್ಲ ನಿಲ್ಲಿಸುವುದರಲ್ಲಿ ಹೆಣ್ಣಿನ ಪಾತ್ರವೂ ಬಹಳ ಮುಖ್ಯ. ಪರಸ್ಪರ ಗೌರವ ಭಾವನೆ ಮೂಡಿದಾಗ ಇಂಥವೆಲ್ಲ ಇಲ್ಲವಾಗಿಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 9, 2008 - 9:30pm — hamsanandi

ಉ: ಅತ್ಯಾಚಾರ ಮತ್ತು ಕಾರಣಗಳು

hamsanandi's picture

-----------ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು. ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ--------

ಹೌದು ರೂಪಾ ಅವರೆ - ಒಬ್ಬ ಒಳ್ಳೇ ತಾಯಿ, ಒಬ್ಬ ಒಳ್ಳೇ ಅಕ್ಕ್ಕತಂಗಿಯಿರುವ ವ್ಯಕ್ತಿ ಯಾವತ್ತೂ ಅಂತಹ ತಪ್ಪು ಕೆಲಸ ಮಾಡಲಾರ.

ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2008 - 11:57am — uniquesupri

ಉ: ಅತ್ಯಾಚಾರ ಮತ್ತು ಕಾರಣಗಳು

uniquesupri's picture

------ಒಬ್ಬ ಒಳ್ಳೇ ತಾಯಿ, ಒಬ್ಬ ಒಳ್ಳೇ ಅಕ್ಕ್ಕತಂಗಿಯಿರುವ ವ್ಯಕ್ತಿ ಯಾವತ್ತೂ ಅಂತಹ ತಪ್ಪು ಕೆಲಸ ಮಾಡಲಾರ. -----
ಇದು ಮತ್ತೊಂದು ಜನರಲೈಸೇಶನ್ ಎಂದು ಭಾವಿಸುತ್ತೇನೆ. ಇದರಿಂದ ಗಂಡಸಿನ ಅಪರಾಧಕ್ಕೆ ಮತ್ತೆ ಆತನ ತಾಯಿಯನ್ನು, ಅಕ್ಕಂದಿರನ್ನು ಹೊಣೆ ಮಾಡುವ ಭಾವ ಕಾಣುತ್ತದೆ ಇದರಲ್ಲಿ. ಮನೆಯ ಪರಿಸರ, ಸಂಸ್ಕಾರ ಎಂಥದ್ದೇ ಇದ್ದರೂ ಪ್ರತಿಯೊಬ್ಬನಿಗೂ ವೈಯಕ್ತಿಕವಾದ ಆಯ್ಕೆಯ, ವಿವೇಚನೆಯ ಜವಾಬ್ದಾರಿ ಇರುತ್ತದೆ.
ಮನೆಯಿಂದ ಹೊರಗೆ ಹೆಣ್ಣಿಗಾಗಿ ಹಪಹಪಿಸುವವನ ಹೆಂಡತಿ ಸರಿಯಿಲ್ಲವೇನೋ, ಆತನ ತಾಯಿ ಸರಿಯಾದ ಸಂಸ್ಕಾರ ಕಲಿಸಿಲ್ಲವೇನೋ ಎಂದೆಲ್ಲಾ ಮಾತನಾಡುವುದು ಸಮಸ್ಯೆಯ ಮೂಲದಿಂದ ಪಲಾಯನ ಮಾಡಿದ ಹಾಗೆ... ಎನ್ನುವುದು ನನ್ನ ಭಾವನೆ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 7:16am — kalpana

ಉ: ಅತ್ಯಾಚಾರ ಮತ್ತು ಕಾರಣಗಳು

kalpana's picture

ಸುಪ್ರಿಯವರೆ,
ನನಗೆ ನಿಮ್ಮ ಮಾತು ಸರಿ ಅನ್ನಿಸಿತು. ನಾನು ನೋಡಿ ಮತ್ತು ಅನುಭವಿಸಿದ ಹಾಗೆ, ಭಾರತದಲ್ಲಿ, ಯಾವುದೇ ರೀತಿಯ ಪ್ರಚೋದನೆ ಇಲ್ಲದೇನೆ ಗಂಡು ಹೆಣ್ಣಿನ ಮೈ ಮೇಲೆ ಬೀಳುವುದು ನಡೆದಿದೆ. ನಾನು ತರುಣಿಯಾಗಿದ್ದಾಗ ಈ ಬೀದಿ ಕಾಮಣ್ಣರ ವರ್ತನೆಯಿಂದ ಎಷ್ಟು ಬೇಸತ್ತಿದ್ದೆನೆಂದರೆ, ಒಂದು ಸ್ನೋ,ಪೌಡರ್ ಹಚ್ಚುವುದನ್ನು ಸಹ ತೊರೆದುಬಿಟ್ಟಿದ್ದೆ. ಇನ್ನು ಶರ್ಟು, ಪ್ಯಾಂಟು ದೂರದ ಮಾತು, ಕೈಕಾಲು ಸಹ ಕಾಣದಿರುವಂತಹ ಗೋಣಿಚೀಲದಂತಹ ಬಟ್ಟೆ ಹಾಕಿಕೊಂಡು ಕಾಲೇಜಿಗೆ ಹೋಗುತ್ತಿದ್ದೆ ಎಂದರೆ ಉತ್ರೇಕ್ಷೆಯಲ್ಲ. ನಾನು ಕುರೂಪಿಯಾಗಿದ್ದರೆ ಚೆನ್ನಾಗಿತ್ತು ಎಂದು ಬಹಳ ಸರ್ತಿ ಅನ್ನಿಸಿತ್ತು. ಇದು ಜಂಭದ ಮಾತು ಖಂಡಿತ ಅಲ್ಲ! ನಾನು ಅಮೇರಿಕೆಗೆ ಬಂದ ನಂತರವೇ ನಿರಾಳವಾಗಿ ಓಡಾಡಿಕೊಂಡಿರಲು ಸಾಧ್ಯವಾಗಿದ್ದು. ಆಮೇರಿಕದಲ್ಲಿ ಗಂಡು-ಹೆಣ್ಣು ಪರಸ್ಪರ ಮುತ್ತಿಕ್ಕುವುದು etc. ಕಂಡುಬಂದರೂ, ಒಬ್ಬನೇ ಒಬ್ಬ ಬಿಳಿ ಗಂಡಸು ಸಹ ನನ್ನ ಬಳಿ ಅನುಚಿತವಾಗಿ ನಡೆದುಕೊಂಡಿಲ್ಲ. ಇಲ್ಲಿರುವ ನನ್ನ ಸ್ನೇಹಿತೆಯರು ಸಹ ಇದನ್ನೆ ಹೇಳುತ್ತಾರೆ. ಆದರೆ, ಇಲ್ಲಿರುವ ಭಾರತೀಯ ಗಂಡಸರ ವರ್ತನೆ ಮಾತ್ರ ಕೆಲವೊಮ್ಮೆ ಅಲ್ಲಿನ ಹಾಗೆ ಇರುತ್ತೆ, ಹುಟ್ಟು ಗುಣ ಸುಟ್ಟರೂ ಹೋಗದು ಅನ್ನುವ ಹಾಗೆ.

ಆದ್ದರಿಂದ, ನನಗನ್ನಿಸುವುದು, ನಾವು ಹೆಂಗಸರು ಹೇಗಿದ್ದರೂ, ಗಂಡಸರು ಸಹಮಾನವನಿಗೆ ಕೊಡುವ ಗೌರವವನ್ನು ನಮಗೆ ಕೊಡಲು ಕಲಿಯಬೇಕು. personal space, personal boundary ಮೀರಿ ಅತಿಕ್ರಮಿಸಬಾರದು. ಗಂಡಸರನ್ನು ಹದ್ದುಬಸ್ತಿನಲ್ಲಿರಿಸುವುದು ಹೆಂಗಸರ ಜವಾಬ್ದಾರಿಯಲ್ಲ! ಒಬ್ಬ ಗಂಡಸು ತನ್ನ ಕಾಮಭಾವನೆಯನ್ನು ನಿಗ್ರಹಿಸಲಿಲ್ಲ ಎಂಬುದೊಂದೇ ಅತ್ಯಾಚಾರಕ್ಕೆ ಕಾರಣ, ಬೇರೇನೂ ಅಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 2:12pm — roopablrao

ಉ: ಅತ್ಯಾಚಾರ ಮತ್ತು ಕಾರಣಗಳು

roopablrao's picture

ಕಲ್ಪನಾರವರೇ
ನಿಮ್ಮ ಪ್ರಕಾರ ಈ(ಅತ್ಯಾಚಾರದ ಪ್ರಚೋದನೆ ) ಗುಣ ಭಾರತೀಯರಲ್ಲೇ ಹೆಚ್ಚು ಎನ್ನುವಂತಿದೆ!

ನನಗನಿಸಿದ ಮಟ್ಟಿಗೆ ಇದು ಗಡಿ ದೇಶ ಕಾಲ ವನ್ನು ಮೀರಿದ್ದು. ಭಾರತವಾಗಲಿ ಅಮೇರಿಕವಾಗಲಿ ಅಲ್ಲಿರುವುದೂ ಗಂಡಸರು ಇಲ್ಲಿರುವುದು ಗಂಡಸರು.

ಹೆಣ್ಣನ್ನು ರೇಗಿಸುವವರೆಲ್ಲಾ ಅತ್ಯಾಚಾರಿಗಳಾಗಿರುವುದಿಲ್ಲ. ಹೆಣ್ಣನ್ನು ರೇಗಿಸುವುದು ಕೇವಲ ಇಂದಿನ ಮಾತಲ್ಲ ಅನಾದಿ ಕಾಲದಿಂದಲೂ ನಡೆದಿದೆ. ಅದನ್ನು ಹೆಣ್ಣು accept saha , ಮಾಡಿಕೊಂಡಿದ್ದಾಳೆ.
ಒಂದು ಉದಾಹರಣೆ. ಅಕಸ್ಮಾತ್ ಒಬ್ಬ ಹೆಣ್ಣು ಒಂಟಿಯಾಗಿ ಬಾಯ್ಸ್ ಕಾಲೇಜಿನ ಮುಂದೆ ಬಂದರೆ ರೇಗಿಸುವವರು ಹುಡುಗರು.
ಅದೇ ಒಬ್ಬ ಹುಡುಗ ಗುಂಪಾಗಿ ಹುಡುಗಿಯರಿರುವ ಸ್ಥಳಕ್ಕೆ ಬಂದರೆ ರೇಗಿಸುವ (ಚುಡಾಯಿಸುವ ) ಕೆಲಸ ಹುಡುಗಿಯರದ್ದಾಗುತ್ತೆ. ಆದರೆ ಅದು ಒಂದು ಮಿತಿಯಲ್ಲಿದ್ದಾಗ ಈ personala spaceನ ಉಲ್ಲಂಘಿಸಿದಂತಾಗುವುದಿಲ್ಲ.

"ಒಬ್ಬ ಗಂಡಸು ತನ್ನ ಕಾಮಭಾವನೆಯನ್ನು ನಿಗ್ರಹಿಸಲಿಲ್ಲ ಎಂಬುದೊಂದೇ ಅತ್ಯಾಚಾರಕ್ಕೆ ಕಾರಣ"

ಎಷ್ಟೋ ಬಾರಿ ಕೇವಲ ಸೇಡಿಗಾಗಿ ಯಾವದೋ ಮನೆತನದ ಹೆಸರು ಹಾಳು ಮಾಡುವುದ್ದ್ದಾಕ್ಕಾಗಿಯೂ ಅತ್ಯಾಚಾರ ನಡೆಯುತ್ತವೆ. ಅವಕ್ಕೆ ಅತ್ಯಾಚಾರಿಯ ತಾಯಿಯೋ ಹೆಂಡತಿಯೋ ಕುಮ್ಮಕ್ಕುನೀಡುತ್ತಾಳೆ. ಅಂತಹ ಎಷ್ಟೊ ಘಟನೆಗಳು ಬೆಂಗಳೂರಿನಲ್ಲೇ ನಡೆದಿವೆ.

ಕಾರಣ ಏನೇ ಆಗಲಿ ಹೆಣ್ಣು ತನ್ನ ರಕ್ಷಣೆಯನ್ನು ಉಪಾಯವಾಗಿಯೋ ಅಥವ ಹೋರಾಟಾದಿಂದಲೋ ಮಾಡಿಕೊಂಡಾಗ ಮಾತ್ರ ಇಂತಹ ಹೇಯ ಕೃತ್ಯಗಳಿಗೆ ಬಲಿಯಾಗುವುದರಿಂದ ತಪ್ಪಿಸಿಕೊಳ್ಳಬಲ್ಲಳು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 10:25pm — kalpana

ಉ: ಅತ್ಯಾಚಾರ ಮತ್ತು ಕಾರಣಗಳು

kalpana's picture

"ಕಾರಣ ಏನೇ ಆಗಲಿ ಹೆಣ್ಣು ತನ್ನ ರಕ್ಷಣೆಯನ್ನು ಉಪಾಯವಾಗಿಯೋ ಅಥವ ಹೋರಾಟಾದಿಂದಲೋ ಮಾಡಿಕೊಂಡಾಗ ಮಾತ್ರ ಇಂತಹ ಹೇಯ ಕೃತ್ಯಗಳಿಗೆ ಬಲಿಯಾಗುವುದರಿಂದ ತಪ್ಪಿಸಿಕೊಳ್ಳಬಲ್ಲಳು" - ಇದು ಒಪ್ಪುತ್ತೇನೆ. ಈಗಿನ ಯುಗದಲ್ಲಿ ಹೆಣ್ಣಿಗೆ ಬೇರೆ ದಾರಿ ಇಲ್ಲ.

ಮಿಕ್ಕ ಮಾತುಗಳಿಗೆ ಉತ್ತರ ಬರೆದಿದ್ದೆ. ಆದರೆ, ಅಕಸ್ಮಾತ್ ಅಳಿಸಿ ಹೋಯಿತು. ಈಗ ಮತ್ತೆ ಬರೆಯಲು ಸಮಯವಿಲ್ಲ. ಒಂದಂತೂ ನಿಜ, "There is no justification in this world for sexual exploitation or rape". ಯಾರೇ ಹೇಳಿ ಮಾಡಿಸಲಿ, ಅದರ ಹಿಂದೆ ಯಾವುದೇ ಕತೆಯಿರಲಿ, ಅದು ತಪ್ಪೆ, ಆ ಗಂಡು ತಪ್ಪಿತಸ್ಥನೇ. "ಬೇಡ" ಎನ್ನುವ ಹೆಣ್ಣು ಕಡಿಮೆ ಬಟ್ಟೆ ತೊಟ್ಟಿದ್ದರೆ, ಅಥವಾ ಸೂಳೆಯಾಗಿದ್ದರೆ ಅದನ್ನು "ಬೇಕು" ಎಂದು ಅರ್ಥೈಸಬಾರದು. ಇದು ಪ್ರತಿ ಮಾನವನಿಗೂ ಒಂದು ಸಮಾಜ ಕೊಡಬೇಕಾದ ಹಕ್ಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 1:04pm — Vinod Pattanshetti

ಉ: ಅತ್ಯಾಚಾರ ಮತ್ತು ಕಾರಣಗಳು

Vinod Pattanshetti's picture

ರೂಪ/ಕಲ್ಪನಾ/ಯೂನೀಕ್ ಸುಪ್ರಿ, ನೋಡಿ ಇಲ್ಲಿ, ಬಾರ್ದಿರೋದು,
ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು, ನೋಡಿ, ಹೆಣ್ಣಾಗಿಡ್ರೆ ಗೌರವ ಇದ್ದೇ ಇರುತ್ತೆ, ಯಾವಾಗ್ಲೂ ಹುಡುಗರುಂ ಹೇಗೆ ಅಂದ್ರೆ,
"ನೀವು ಚೆನ್ನಾಗಿಡ್ರೆ, ನಾವು ತುಂಬ ಚೆನ್ನಾಗಿರ್ತಿವಿ, ನೀವು ಕೆಟ್ಟವರಾದ್ರೆ, ನಾವು ತುಂಬ ಕೆಟ್ತರಾಗ್ಟಿವಿ." ಅದೇ ತ್ತೇರಿ, ಇದೆ ಹುಡುಗರಲ್ಲಿ.
ನೀವು ಬರ್ದಿದ್ದು ಸರಿ ಇದ್ರೆ, ನಮ್ಮ ಪ್ರತಿಕ್ರಿಯೆ, ಬಾರ್ದಿರೋ ನಾನು ಮತ್ತೆ ನಮ್ಮ ಹುಡುಗರು ಆಗ್ಲೇ ಒಪ್ಕೋಟಾ ಇದ್ರು.
ನೀವೇ ನೋಡಿ, ಇಲ್ಲಿ ಸುಮರ್ ಜನ ಪ್ರತಿಕ್ರಿಯೆ ಮಾಡಿದಾಅರೆ, ಅದ್ರಲ್ಲಿ, ಸರಿ ಇದ್ದಿದ್ದನ್ನ ಹುಡುಗರು ಒಪ್ಕೋತಾರೆ, ಆದ್ರೆ ಹಾಗೆ ಆಗಿಲ್ಲ.
ಯಾಕೆ ಅಂತ ನಿಮ್ಗೆ ಗೊತ್ತಾಗುತ್ತೆ.

ಎಲ್ಲ ಹುಡಾಗರು/ಹುಡಾಗಿರು ಒಂದೇ ತರ, ಇರಲ್ಲ.

-ವಿನೋದ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 1:21pm — ಶ್ರೀನಿಧಿ

ಉ: ಅತ್ಯಾಚಾರ ಮತ್ತು ಕಾರಣಗಳು

ಶ್ರೀನಿಧಿ's picture

ಬರೆಯುವಾಗ ಸ್ವಲ್ಪ ಗಮನ ಇಟ್ಟು ಬರೀರಿ! ೧-೨ ತಪ್ಪುಗಳಾದ್ರೆ ಚಿಂತೆ ಇಲ್ಲ. ನೀವು "ಬಾರ್ದಿರೋದು" ನೋಡಿದ್ರೆ ಓದೋದು ಕಷ್ಟ ಆಗುತ್ತೆ. ನಿಜಕ್ಕೂ ನೀವೇನು ಬರ್ದಿದೀರೋ ಅರ್ಥ ಆಗ್ತಿಲ್ಲ.

ಕೊಸರು : ಹುಡಾಗರು - ಹುಡಾಗಿರು ನೋಡಿ ನಗಲೇ ಬೇಕಾಗಿದೆ Smiling

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 1:38pm — vikashegde

ಉ: ಅತ್ಯಾಚಾರ ಮತ್ತು ಕಾರಣಗಳು

vikashegde's picture

ಸುಪ್ರೀತ್, ಎಲ್ಲಾ ಜೆನೆರಲೈಸೇಶನ್ ಮೇಲೆನೆ ನೆಡೆಯೋದು. ಮತ್ತಿನ್ನೇನು ಅತ್ಯಾಚಾರನ್ನ ಎಲ್ಲಾ ಗಂಡಸರೂ ಮಾಡ್ತಾರಾ? ಆದ್ರೂ ಕೂಡ ಅವರು ಲೇಖನದಲ್ಲಿ ಹೇಳ್ಬೆಕಾದ್ರೆ ’ಗಂಡಸರಿಗೆ’ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು ಅಂತ ಹೇಳಿಲ್ವ? ಹಾಗಿದ್ರೆ ನಾವು , ನೀವು ಗೌರವ ಇಲ್ದೇ ಇರೋರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2008 - 4:51pm — muralihr

ಉ: ಅತ್ಯಾಚಾರ ಮತ್ತು ಕಾರಣಗಳು

muralihr's picture

ಮದುವೆಯಾದ ಅದೆಷ್ಟೋ ಹೆಣ್ಣ್ ಮಕ್ಕಳು - ಮಾನಸಿಕ ಅತ್ಯಾಚಾರಕ್ಕೆ ಗುರಿಯಾಗ್ತಾರೆ.
ಅದೂ ಅಲ್ಲದೇ ಗ೦ಡ ಕೂಡ ಅತ್ಯಾಚಾರ ಮಾಡ ಬಹುದು - ಅದಕ್ಕೆ ಪೂರ್ತಿ ಸ್ವಾತ೦ತ್ರ್ಯವಿತ್ತು..
ಸದ್ಯಕ್ಕೆ ಭಾರತದಲ್ಲಿ "Domestic Violence Act " ಅ೦ಬೋ ಹೊಸ ಕಾನೂನ್ ಮಾಡಿ ಹೆಣ್ಣಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದರೂ , ಇದರ ಪ್ರಯೋಗವನ್ನು ಎಷ್ಟ್ ಮ೦ದಿ ತಗೋತ್ತಾರೆ ?
ನಮ್ಮ ಚಲನಚಿತ್ರಗಳಲ್ಲಿ ಒ೦ದೆರಡು ರೇಪ್ ಸಿನ್ಗಳು ಇರಲೇ ಬೇಕಿತ್ತು.
ಹುಡುಗಿ "ನಹೀ ", "ನಹೀ" ಅ೦ತಾನೋ "ಬಚಾವ್" ..ಅ೦ತಾ ಕಿರುಚಿ ಕೊ೦ಡು ರೋಧಿಸುತ್ತಿರುವ ದೃಶ್ಯಗಳು ಸಾಧಾರಣವಾಗಿತ್ತು.
ಹೀಗೆ ನೂರಾರ್ ಕಡೆಯಿ೦ದಾ ಪ್ರಚೋದನೆ ಸಿಕ್ಕಿ ಗ೦ಡ್ಸೂ ತನ್ನ ಮೃಗೀಯ ಮುಖದ ಪದರ್ಶನವನ್ನು ಮಾಡುತ್ತಾನೆ.
ನೀವು ಹೇಳಿದ ಹಾಗೆ ಒಮ್ಮೆ ಬಸ್ಸ್ ನಲ್ಲಿ ಬಡ ಸು೦ದರ ಹೆಣ್ಣು ಮಗಳು (ಕೂಲಿಯವಳು) ರಾತ್ರಿ ಪಯಣಿಸುತ್ತಿರುವಾಗ ಕೂತಿದ್ದಳು.
ಯಾರೋ ಒಬ್ಬ ಅವಳ ಪಕ್ಕಾ ಕುತ್ಕೊ೦ಡು ತಳ್ಳೀ ,, ಕೈ ಅವಳ ಮೇಲಿಟ್ಟು ಎದ್ದು ನಿ೦ತಾ .. ಹೀಗೆ ಕ೦ಡಕ್ಟರ್ ಯಿ೦ದಾ ಹಿಡಿದು ಎಲ್ಲರೂ ಪಬ್ಲಿಕ್ ಪ್ರಾಪರ್ಟಿ ಅ೦ದ್ಕೊ ಬಿಡ್ತಾರೆ..ಬಡ ಹೆಣ್ಣೂ ಮಗಳೊಬ್ಬಳನ್ನು.

ಇನ್ನು ಆಸ್ಪತ್ರೆಗಳಲ್ಲಿ ಅತ್ಯಾಚಾರಗಳು ನಡೆಯುವುದು ಜಾಸ್ತಿ. ವೈದ್ಯರು ತಮ್ಮ ಬಳಿ ಬರುವ ರೋಗಿಗಳ ದೇಹದ ಮೇಲೆ ಹಕ್ಕು ಚಲಾಯಿಸುವ
ಉದ್ವೇಗದಲ್ಲಿ ಅತ್ಯಾಚಾರ ಮಾಡದಿದ್ದರೂ .. ತಮ್ಮ ಸ್ಥಾನಗಳನ್ನು ದುರ್ಭಳಕೆ ಮಾಡೋದು ಹೆಚ್ಚು. ಅದರಿ೦ದಾ ತಿಳಿದು ಪರಿಚಯ ಇರುವ
ವೈದ್ಯರ ಬಳಿ ಹೋಗುವುದು ಲೇಸು.
ನರ್ಸ್ ಗಳು ಅಷ್ಟೆ .. ಮೌನವಾಗಿ ವೈದ್ಯರು ಮಾಡುವ ಅತ್ಯಾಚಾರಗಳನ್ನು ಮೌನದಿ೦ದಲೆ ಸಹಿಸಿ ಕೊಳ್ಳುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಕಾವ್ಯ
  • ಪ್ರೇಮದ ಓಲೆ
  • ಪುಟ್ಟಿಯ ಜೊತೆ ಸಂಭಾಷಣೆ
  • ಕನಸ್ಸು
  • ನಾನು ಯಾವ ಆತ್ಮ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!
  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator