ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಅಂತೂ ಇಂತೂ ಥ್ರೆಡ್ ಮಿಲ್ ಬಂತು
ಹೋದ ತಿಂಗಳು ನೆಂಟರೊಬ್ಬರು ಬಂದಿದ್ದರು
"ರೂಪ ಬರ್ತಾ ಬರ್ತಾ ತುಂಬಾ ಗುಂಡು ಗುಂಡುಗೆ ಆಗ್ತಾ ಇರೋ ಹಾಗಿದೆ, ಸ್ವಲ್ಪ ಕೆಲಸ ಮಾಡ್ಬೇಕು" ಎಂದಿದ್ದರು ಅವರಿಗೆ ಅದು ಹೇಗೆ ನಾನು ಕೆಲಸ ಮಾಡುವುದಿಲ್ಲ ಎಂಬ ಅರಿವು ಉಂಟಾಯ್ತೋ ನಾ ಕಾಣೆ
ಅಮ್ಮ "ರೂಪ ಸ್ವಲ್ಪ ವಾಕ್ ಮಾಡು ದಪ್ಪ ಆಗ್ತಾ ಇದ್ದೀಯಾ " ಅಂತ ಆದೇಶಿಸಿದರು
ನಂಗೆ ಶುರುವಾಯಿತು ಪುಕು ಪುಕು. " ರೀ ನಾನು ದಪ್ಪಾನಾ" ಅಂತ ಇವರನ್ನ ಕೇಳಿದೆ
" ದಪ್ಪ ಅಂತೇನು ಇಲ್ಲ . ಮದುವೇಲಿ ಕರಿಬೇವಿನ ಕಡ್ಡಿ ಹಾಗ್ ಇದ್ದೆ . ಈಗ ಬೋಡಾ ಆಗ್ತೀದೀಯಾ ಅಷ್ಟೆ "ಎಂದರು
"ಜ್ಯೋತಿ (ನನ್ನ ಅಕ್ಕ) ನಾನು ದಪ್ಪಾ ಆಗಿದೀನಾ " ಅಂತ ಕೇಳಿದೆ
"ಮತ್ತೆ ಮನೇಲಿ ಏನು ಕೆಲಸ ಮಾಡದೆ ಇದ್ರೆ ದಪ್ಪ ಆಗ್ತೀಯಾ "ಅಂತ ಹೇಳಿದಳು
ಇವರಿಗೆಲ್ಲಾ ನಾನು ಸೋಮಾರಿ ಎಂಬ ಭಾವನೆ
ಇನ್ನೂ ಯಾರನ್ನೂ ಕೇಳೋದು ಬೇಡ ಅಂತ ಸೀದಾ ಬಾಡಿ ಕೇರ್ (ಕೋರಮಂಗಲ)ಗೆ ಹೋದೆ
"ನೀವು ನಿಮ್ಮ ಹೈಟಿಗೆ ಏಜಿಗೆ ಸರಿಯಾಗೆ ಇದೀರಾ ಸ್ವಲ್ಪ ಫಿಗರ್ ಕರೆಕ್ಷನ್ ಮಾಡಬೇಕು "ಅಂದಳು ಅಲ್ಲಿಯ ಕೌನ್ಸೆಲರ್
ಅದಕ್ಕೆ ಏನು ಮಾಡ್ತೀರಾ ಅಂತ ಕೇಳಿದೆ
ಅದೇನೋ ವೈಬ್ರೆಷನ್ ಮಶಿನ್ ಹೆಸರು ಹೇಳಿದಳು. ಬೆಲೆ ಕೇಳಿ ತಲೆ ಸುತ್ತಿತು. ವಾರಕ್ಕೆ ಮೂರು ಸಲ ಬರಬೇಕು ಎಂದಳು. ಅದು ಆಗುವ ಕೆಲಸವೇ ಅಲ್ಲ
ಬೇಡಪ್ಪಾ ಇದರ ಕತೆ ಎಂದುಕೊಂಡು ಮನ್ದೆಗೆ ಬಂದು ಒಂದೆರೆಡು ದಿನ ವಾಕಿಂಗ್ ಶುರು ಮಾಡಿದೆ.ಅದೂ ಮೂರು ದಿನ ನಡೆಯಿತು . ನಾನು ಬೆಳಾಗ್ಗೆ ನಾಕಕ್ಕೆ ಎದ್ದರೆ ನನ್ನ ಮಗಳೂ ಎದ್ದು ನಾನು ಬರ್ತೀನ್ ಅಂತ ಶುರು ಮಾಡುತಿದ್ದಳು ಅದೂ ನಿಂತು ಹೋಯಿತು
ಸರಿ ಮನೆಯಲ್ಲಿ ಅಳಲು ಶುರು ಮಾಡಿದೆ ಈಗೇನೊ ಡಯಾಬಿಟೀಸ್ ೨೬-೨೮ ವರ್ಷಕ್ಕೆಲ್ಲಾ ಶುರು ಆಗುತ್ತೆ ಅಂತಾ ಇನ್ನೊಂದಷ್ಟು ಬಣ್ಣ ಸೇರಿಸಿ ಹೇಳಿದೆ. ನಾನು ವಾಕ್ ಮಾಡದಿರಲು ನೀವು ನಿಮ್ಮ ಮಗಳೇ ಕಾರಣ . ಅಂತ ದೂರಿದೆ
ಪರಿಣಾಮ
ನನಗೆ ಥ್ರೆಡ್ ಮಿಲ್ ಕೊಡಿಸುವುದಾಗಿ ಅಶ್ವಾಸನೆ ಸಿಕ್ಕಿತು.
ಮೊನ್ನೆ ಶನಿವಾರ ರಾತ್ರಿ ೧೧ ಘಂಟೆಗೆ ಮನೆಗೆ ಬಂತು. ಅದರ ಫೋಟೊ ಇನ್ನೊಮೆ ಹಾಕುತ್ತೇನೆ
ಈಗ ವಾಕಿಂಗ್ ಶುರು ಮಾಡಿದ್ದ್ದೇನೆ. ದಿನಕ್ಕೆ ಅರ್ಧ ಘಂಟೆ
ಅಮ್ಮ ನೋಡಿ "ನೀನು ಇಷ್ಟೊಂದು ಕಷ್ತ ಪಡೋ ಅಷ್ಟು ದಪ್ಪ ಇಲ್ಲ . ಸುಮ್ಮನೆ ಯಾಕೆ ತಂದೆ " ಅಂತ ಬಲೂನ ಒಡೆದಳು.
"ಹೋಗಲಿ ಬಿಡು ಹೇಗೊ ತೆಗೆಸಿಕೊಂಡಿದ್ದೀನಲ್ಲ ಮುಂದೆ ಉಪಯೋಗಕ್ಕೆ ಬೇಕಾದೀತು "ಅಂತ ಹೇಳಿದೆ
ಏನೆ ಆದರೂ ಜಿಮ್‌ಗೆ ಹೋಗಿ ಬರುವ ಬದಲು ಮನೆಯಲ್ಲೇ ಇರೋದು ಬಹಳ ಉಪಯೋಗ ಆಗ್ತಿದೆ

- roopablrao ರವರ ಬ್ಲಾಗ್
- Login or register to post comments
- 297 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
ಡುಮ್ ಡುಮ್ ಡುಮ್, ರಾಕ್ ಎಂಡ್ ರೋಲ್. ಬೆಲೆ ಎಷ್ಟಾಯಿತು.
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
27 ಸಾವಿರ ಆಯ್ತು ಓಲಂಪಿಕ್ಸನಲ್ಲಿ
http://thereda-mana.blogspot.com/
ರೂಪ
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
27 ಸಾವಿರ ?
ಕಬ್ಬನ್ ಪಾರ್ಕ್ ನಲ್ಲಿ 2 ರೊಪಾಯಿ ಕೊಟ್ಟು ಹುರಿದ ಕಡಲೆಕಾಯಿ ತಗೊಂಡು ತಿಂತ ಹಾಗೆ ವಾಕಿಂಗ್ ಮಾಡಿದ್ರೆ ನಡೆಯುವ ಜೊತೆಗೆ ಒಳ್ಳೆ ಗಾಳಿಯನ್ನು ಸೇವಿಸಬಹುದಿತ್ತು....!!
ಈ ತ್ರೆಡ್ ಮಿಲ್ ಎಲ್ಲ 45 ಮೇಲಿನ ವಯಸಾದವರಿಗೆ ಮಾತ್ರ ಸರಿ.
-ಯುವಪ್ರೇಮಿ
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
ಏಳೆಂಟು ಸಾವಿರ ರೂಪಾಯಿಗೆ ಒಳ್ಳೆಯ ಟ್ರೆಡ್ ಮಿಲ್ (ಥ್ರೆಡ್ ಮಿಲ್ ಅಲ್ಲ ..) ಸಿಗುತ್ತದೆ.
ಹಲವು ರೀತಿಯ parameter ಗಳು ಸಾಮಾನ್ಯವಾಗಿ fitness ಗಾಗಿ ವ್ಯಾಯಾಮ ಮಾಡುವವರಿಗೆ ಬೇಕಾಗುವುದಿಲ್ಲ.
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
ಕಬ್ಬನ್ ಪಾರ್ಕ್ ನಮ್ಮನೆಯಿಂದ ೨೦ ಕಿಮಿ ದೂರ
ದಿನಾ ೪೦ ಕಿ ಮಿ ಪ್ರಯಾಣ ಅದಕ್ಕೆ ೫೫ ರುಪಾಯಿ ಪೆಟ್ರೋಲ್ ಹಾಗೆ ಒಂದು ತಿಂಗಳಿಗೆ ೨೦೦೦ ಒಂದು ವರ್ಷಕ್ಕೆ ೨೪೦೦೦ ಎರೆಡು ವರ್ಷಕ್ಕೆ ೪೮೦೦೦
ಹೀಗೆ ಹೋಗ್ತಾ ಇರುತ್ತೆ ಸಾಲದಕ್ಕೆ ಪೊಲ್ಲುಷನ್, ಟ್ರಾಫಿಕ್
ನಮ್ಮನೆ ಹತ್ರ ಮೂರು ಹೊತ್ತು ಈ ಟಾಟ ಸುಮೋ, ಲಾರಿಯವರ ಕಾಟ
ಮೈನ್ ರೋಡಿನಲ್ಲಿ ವಾಕ್ ಇರಲಿ ಸುಮ್ಮನೆ ನಿಂತರೆ ರೊಯ್ ಅಂತ ಹೊಡ್ಕೊಂಡು ಹೋಗ್ತ್ರಾರೆ
ಈ ಟ್ರೆಡ್ ಮಿಲ್ ನಿಮ್ಮಂತ ನವಯುವಕರೇ ಜಿಮ್‍ನಲ್ಲಿ ಉಪಯೋಗಿಸೋದು.
೪೫ರ ಮೇಲಿನವರಿಗೆ ಆಗಲೆ ಮಾರ್ನಿಂಗ್ ವಾಕರ್ ಬಂದಿದೆ ಹೋದ ಶುಕ್ರವಾರ ನಮ್ಮ ತಾಯಿಗೆ ಕೊಡಿಸಾಗಿದೆ.
ಏನಂತೀರಾ ಯುವ ಪ್ರೇಮಿಗಳೇ
http://thereda-mana.blogspot.com/
ರೂಪ
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
ನಮ್ಮ ಮುತ್ತಜ್ಜಿ 95 ವರ್ಷ ಆರೋಗ್ಯವಾಗಿ ಕುಂಟೆ ಬಿಲ್ಲೆ ಆಟ ಆಡ್ಕೊಂಡು ಆರಾಮಾಗಿ ಇದ್ರು. ಅವ್ರು ಮಾರ್ನಿಂಗ್ ವಾಕರ್ ಉಪಯೋಗಿಸ್ಲಿವಲ್ಲ.....!!
ಕುಂಟೊಕೆ ಬರ್ದೆ ಇರೊರು ಕಬ್ಬನ್ ಪಾರ್ಕ್ ೨೦ ಕಿಮಿ ದೊರ ಅಂದ್ರಂತೆ..! (ತಮಾಶೆಗೆ..!)
ನಿಮ್ಮ ಮನೆ ಹತ್ರ ಇಲ್ಲವೆ ಅಕ್ಕಪಕ್ಕದ ೨ ಕಿಮಿ ನಲ್ಲಿ ಒಂದು ಪಾರ್ಕ್ ಇರಲೇಬೇಕು ಅಲ್ಲವೆ. ಅಲ್ಲೆ ಹೋಗಿ ಬೆಳ್ಳಂಬೆಳಗೆ ನಿರಾಳವಾಗಿ ಉಸಿರಾಡ್ತ ಪಾರ್ಕ್ ಸುತ್ತ ೨ ಸುತ್ತು ಹಾಕಿದ್ರೆ ಸಾಕು, ಮೈ ಕೈ ಎಲ್ಲ ಕಿಲ ಕಿಲ ಅಂತ ನಗ್ತ ನಗ್ತ ಇರುತ್ತೆ.
ನಿಮ್ಮ ಥ್ರೆಡ್ ಮಿಲ್ಲ ಏನು ಸುಮ್ಮನೆ ಓಡುತ್ತ. ಗಂಟೆಗೆ ಕಿಲೊಗಟ್ಟಲೆ ಕರೆಂಟ್ ಕುಡಿದು ನಮ್ಮ ವೈಟ್ ಫ಼ೀಲ್ಡ್ ನಲ್ಲಿ ಇರೊ ಡೀಸೆಲ್ ಎಲ್ಲ ಕಾಲಿ ಮಾಡ್ತಾ ಇದೆ.
-ಯುವಪ್ರೇಮಿ
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
ಒಳ್ಳೆ investment ಇದು ರೂಪಕ್ಕ.
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
ರೂಪ,
೨೭ ಸಾವಿರ ಒಳ್ಳೆ ಬೆಲೆ ಅನ್ಸತ್ತೆ. ನಾನೂ ತೊಗೊಬೇಕು ಅಂತಿದ್ದೀನಿ. ಇಲ್ಲಿ ಸುಮಾರು ಸಾವಿರ ಡಾಲರಿಗೆ ಒಳ್ಳೆಯದು ಸಿಗುತ್ತೆ. ಆದ್ರೆ ಅದೇನೋ ಥ್ರೆಡ್ ಮಿಲ್ ಮೇಲೆ ಜಾಸ್ತಿ ಓಡಿದ್ರೆ ಮಂಡಿ ನೋವು ಬರುತ್ತೆ ಅಂತಾರೆ. ಬದಲಿಗೆ Elliptical machines (http://www.treadmill-world.com/reebok-rl-1500-elliptical.html) ಒಳ್ಳೆಯದು ಎಂದು ಕೇಳಿದೆ. ಇರಲಿ, ನೀವು, ಶೂಸ್ ಹಾಕಿಕೊಂಡು ನಡೆಯಿರಿ/ಓಡಿ, ಮಂಡಿಗೆ direct impact ಆಗದೆ, cushion ಇರುತ್ತೆ.
ಉ: ಅಂತೂ ಇಂತೂ ಥ್ರೆಡ್ ಮಿಲ್ ಬಂತು
ಟ್ರೆಡ್ ಮಿಲ್ ಅಥವಾ ನಟರಾಜ ಸರ್ವೀಸೋ
ದಿನಕ್ಕೊಮ್ಮೆ ೨೦ ನಿಮಿಷ ಬಿರುಸಾಗಿ ನಡೆಯಬೇಕು ಅಂತ ನಮ್ಮ ಡಾಕ್ಟರು ಸಾಮಾನ್ಯವಾಗಿ ಹೇಳುತ್ತಾರೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ