ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಮರು ಮದುವೆ?
ಹೆಂಡತಿ : ರೀ
ಗಂಡ : ಏನಮ್ಮ
" ನಾನು ಅಮ್ಮನ ಮನೆಗೆ ಹೋಗ್ತಾ ನಂಗೇನಾದ್ರೂ ಆಗಿ ಸತ್ತು ಹೋದರೆ?"
" ಛೆ , ಹಾಗೆ ಮಾತಾಡಬಾರದು ಸುಮ್ಮನೆ ಮಲಕ್ಕೋ"
"ಇಲ್ಲ ನೀವು ಹೇಳಲೆಬೇಕು , ನೀವು ಇನ್ನೊಂದು ಮದುವೆ ಮಾಡ್ಕೋತೀರಾ?"
" ಇಲ್ಲ ಚಿನ್ನ ಆ ಮಾತೆಲ್ಲಾ ಯಾಕೆ ಈಗ ಸುಮ್ಮನಿರು"
" ನಂಗೆ ಉತ್ತರ ಬೇಕು"
" ನಾನು ಯಾರನ್ನು ಮದುವೆಯಾಗಲ್ಲ"
" ಇಲ್ಲ ನೀವು ಮದುವೆಯಾಗ್ಬೇಕು"
" ಆಗಲ್ಲ"
" ಇಲ್ಲ ಅಂದ್ರೆ ನಾನು ಅತ್ತುಬಿಡ್ತೀನಿ"
" ಸರಿ ಆಗ್ತೀನಿ"
"ಆವಾಗ ಈ ಮನೆ ಎಲ್ಲ ಅವಳ ಹೆಸರಿಗೆ ಬರೀತೀರಾ?"
" ಹೌದು"
" ನನ್ನ ಒಡವೆಯೆಲ್ಲಾ ಅವಳಿಗೆ ಕೊಡ್ತೀರಾ?"
"ಹೌದು"
"ಕಾರಲ್ಲಿ ನಿಮ್ಮ ಪಕ್ಕದಲ್ಲಿ ಕೂರಿಸ್ಕೊಂಡು ಹೋಗ್ತೀರಾ"
" ಹೌದೂ"
"ನನ್ನ ಸೀರೆ ಎಲ್ಲ ಅವಳಿಗೆ ಕೊಡ್ತೀರ ?"
"ಹೌದು"
"ನಾನು ಮೊನ್ನೆ ಹೊಲಿಸ್ಕೊಂಡನಲ್ಲಾ ಚೂಡಿದಾರ್. ಅದನ್ನೂ ಅವಳಿಗೆ ಕೊಡ್ತೀರಾ?"
"ಇಲ್ಲ ಅದು ಹ್ಯಾಗೆ ಆಗುತ್ತೆ. ಅವಳು ನಿನಗಿಂತ ಸಣ್ಣ ಇದಾಳೆ"
ಹೆಂಡತಿ " ಮೌನ"
ಗಂಡ " ಛೆ"

- roopablrao ರವರ ಬ್ಲಾಗ್
- Login or register to post comments
- 611 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಮರು ಮದುವೆ?
ನಕ್ಕೂ ನಕ್ಕು ಸುಸ್ತಾಯ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮರು ಮದುವೆ?
ಹರಿ! ತುಂಬಾ ಸುಸ್ತಾಗಿದ್ರೆ ಗ್ಲುಕೊನ್ ಡಿ ತಗೊಬೋದು
:P
/ಮಿ ಎಸ್ಕೇಪು!
--_ರಾಘವ_
http://raghavan.vinay.googlepages.com
ಉ: ಮರು ಮದುವೆ?
adsoftheworld ಬಗ್ಗೆ ಗೊತ್ತಿತ್ತು. ಅದು ಪ್ರಾರಂಭವಾದಾಗಲಿಂದ ನೋಡುತ್ತ ಬಂದಿರುವೆ. ಆ ಸೈಟಿನ ಸುತ್ತ ನನ್ನ ಆಸಕ್ತಿಯ ಕೆಲವು ವಿಷಯಗಳಿವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮರು ಮದುವೆ?
ಹೆಂಡತಿ - ಯಾರ್ರೀ ಅವಳು ನನ್ನ ಸವ್ತಿ.
ಗಂಡ - ಸವ್ತಿ ಅಲ್ಲ ಕಣೇ.
ಹೆಂಡತಿ - ಮತ್ತಿನ್ನೇನು, ಸವಿತಾನಾ ?
ಗಂಡ - ಲೇಯ್, ಹಾಗಲ್ವೇ.
ಹೆಂಡತಿ - ಮತ್ತಿನ್ಹ್ಯಾಗ್ರಿ, ನಂಗೆಲ್ಲ ಗೊತ್ತು ಬಿಡ್ರಿ. ನಾನ್ ಯಾವಾಗ ಗೊಟಕ್ಕಂತೀನಿ ಅನ್ನೋದೇ ಕಾಯ್ತಾ ಇರ್ತೀರ ನೀವು. <ಅಳು ಇನ್ನೂ ಬಂದಿಲ್ಲ. ನೀರಿನ ಮಣಿ ಜಿನುಗ್ತಾ ಇದೆ>
ಗಂಡ - ಲೇಯ್, ಏನೇ ಇದು. ಸುಮ್ನೆ ಮಾತಿನ್ ವರಸೇಗ್ ಹಾಗಂದೆ ಕಣೇ. ಛೀ ಚಿ, ಇದಕ್ಕೆಲ್ಲ ಅಳ್ತಾರಾ. ಸುಮ್ನಿರು.
ಅದು ನೋಡು, ಮದುವೆ ಆದ ಹೊಸತರಲ್ಲಿ, ನಿನಗೆ ಇಷ್ಟ ಅಂತ ಕೇಳ್ಕೇಳ್ದಾಗ್ಲೆಲ್ಲ ಚಿಪ್ಸು, ಬೋಂಡ, ಬೆಣ್ಣೆ ದೋಸೆ ಎಲ್ಲ ಕೊಡುಸ್ತಾ ಇದ್ನಲ್ಲ. ಅದನ್ನ ಲಂಗುಲಾಗಮಿಲ್ಲದೆ ನೀನು ತಿಂದೂ ತಿಂದೂ ಸ್ವಲ್ಪ ಆಪಲ್ ತರ ಡುಮ್ಮುಗಾಗಿದ್ಯಾ. ಅಷ್ಟೇ.
ಹೆಂಡತಿ - ಆಹಾ! ನೀವೇನ್ ಕಡ್ಮೆನಾ. ನೀವಿರೋದ್ ನೋಡ್ಕೊಳಿ. <ಖುಷಿಯಿಂದ> ರೀ ಹೌದು ಎರಡನೆ ಮದ್ವೆ ಆಗೋ ಹುಡ್ಗಿ ನಂಗಿಂತೂ ಡುಮ್ಮಿಯಾಗಿದ್ರೆ.
ಗಂಡ - ಏಹ್. ಹೋಗೆ ಆ ತರಹ ಏನು ಇಲ್ಲ. ಅವಳು ಸಿಕ್ಕಾಪಟ್ಟೆ ಡಯೆಟ್ಟೆಲ್ಲ ಮಾಡ್ತಾಳೆ. ಬರ್ರೀ ಫ್ರೂಟ್ಸ್ ತಿಂತಾಳೆ ಅಂತೀನಿ.
ಹೆಂಡತಿ - ಆಂ!!!!!
ಉ: ಮರು ಮದುವೆ?
ಇದೇನಪ್ಪ ಉಂಡು ಮಲಗಿದ ಮೇಲೆ ಜಗಳ!!!!!
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!