ಒಲವೇ...
ಕವಿ ಮಾಡಿದ ಹುಡುಗಿ...
ನಿಲ್ಲದು ವಾಯಲಿನ್...
ವಾಯಲಿನ್ ನುಡಿಸುತ್ತಿದೆ ನಿನ್ನ ನೋವ ನನ್ನ ಹೃದಯದಲ್ಲಿ...
ಆದರೂ ಕಣ್ಣ ಹನಿ ನಿಲ್ಲದು...
ವಾಯಲಿನ್ ಅಳುತ್ತಿದೆ ನಿನ್ನ ನೆನೆ,ನೆನೆದು...ದು:ಖದಲ್ಲಿ.
ಆದರೂ ಬತ್ತದು ನಿನ್ನ ನೋವು.
ವಾಯಲಿನ್ ರೋಧಿಸುತ್ತಿದೆ ನಿನ್ನ ಪ್ರೀತಿಯಲ್ಲಿ.
ಆದರೂ ಮರೆಯಲಾಗದು ನಿನ್ನ ಮೋಸ...
ವಾಯಲಿನ್ ಕೊರೆಯುತ್ತಿದೆ ನನ್ನ ಹೃದಯ.
ಆದರೂ ಬಿಡದು ನಿನ್ನ ಒಲವು..
ವಾಯಲಿನ್ ಸೋಲುತ್ತಿದೆ ನಿನ್ನ ಮಿಡಿಯಲು.
ಆದರೂ ಮಾಯವಾಗದು ನಿನ್ನ ಚೆಲುವು.
ನೀ ಮರೆಯಾದರೂ, ನೀ ಮಾಯವಾದರೂ ನಿಲ್ಲದು
ಈ ವಾಯಲಿನ್....
-ರೇವನ್...

- rjewoor ರವರ ಬ್ಲಾಗ್
- Login or register to post comments
- 336 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನಿಲ್ಲದು ವಾಯಲಿನ್...
ಚೆನ್ನಾಗಿದೇರಿ ರೇವನ್ ನಿಮ್ಮ ವಾಯಲಿನ್!
-ಸುಶೀಲ್.
ಕನ್ನಡಕಡಲಲಿ ಪುಟ್ಟ ಮೀನು ನಾ..!!
ಉ: ನಿಲ್ಲದು ವಾಯಲಿನ್...
ನಾನು ವಾಯಲಿನ್ ಓದಿ, ಅದೊಂದು ಆಯಿಂಟ್ಮೆಂಟ್ ಅಂದ್ಕೊಂಡೆ. ಆಮೇಲೆ ಗೊತ್ತಾಯ್ತು. ಇದು ನಮ್ಮ ಪಿಟೀಲು ಅಂತ. ಈ ನಮ್ಮ ಪಿಟೀಲನ್ನು ಯಾಕೆ ಹೆಚ್ಚು ಶೋಕಕ್ಕೆ ಅಂಟಿಸುತ್ತಾರೆ
ಆರ್. ಜೇವೂರ್ ಅವರೆ, ಸದ್ಯಕ್ಕೆ ವೆನಿಸ್ಸಾ ಮೇ ನುಡಿಸಿದ ಹ್ಯಾಪಿ ವಾಲಿ ಕೇಳಿ ಆನಂದಿಸಿ.
ಉ: ನಿಲ್ಲದು ವಾಯಲಿನ್...
ರೇವನ್,
ನಿಮ್ಮ ಪಿಟೀಲು ತು೦ಬಾ ಚೆನ್ನಾಗಿದೆರೀ.
ಧನ್ಯವಾದಗಳು.............
ಸುನಿಲ್,
ಪಿಟೀಲನ್ನು ಎದೆಗೆ ಅಪ್ಪಿಕೊ೦ಡು ನುಡಿಸುವುದರಿ೦ದಲೇ ಇರಬೇಕು ಎದೆಯಲ್ಲಿರುವ ನೋವು ಪಿಟೀಲಿನ ಶಬ್ದದಿ೦ದ ಹೊರಹೊಮ್ಮುವುದು...
ಅನಿಲ್ ರಮೇಶ್.