ಒಲವೇ...
ಕವಿ ಮಾಡಿದ ಹುಡುಗಿ...
ನಿನ್ನ ಸಾಲು...
ನಿನ್ನ ಪ್ರತಿ ಮಾತಿನಲ್ಲೂ ಮುಗ್ಧತೆಯ ಸಿಂಚನ.
ಮನದ ಆಸೆಗೆ ಕಲ್ಪನೆ ನಿಲುಕಿದರೂ ಈಗಲೂ ನಾಚಿಕೆಯ ಲೇಪನ.
ಹೃದಯದಲ್ಲಿ ನನ್ನ ಬಿಂಬವಿದ್ದರೂ ಪ್ರತ್ಯಕ್ಷ ಕಾಣಬೇಕೆಂಬುದು ನಿನ್ನ ಹಂಬಲ.
ನಲಿದು, ಒಲಿದು...ನಿನ್ನಡೆಗೆ ಬಂದರೂ ನಿನ್ನ ಹೃದಯ ಇನ್ನೂ ಬೇಕು
ಅನ್ನುತ್ತಿದೆ ಪ್ರೀತಿಯನ್ನ. ಉಸಿರು ಬಿಗಿಹಿಡಿದು ಎಲ್ಲ ಪ್ರೀತಿಯನ್ನ ನಿನಗೆ
ಬಸಿದಾಗಿದೆ... ಹೇ !!! ನನ್ನ ಒಲವೇ... ಕೊಂಚ ತಡೆ... ಮುನಿಸಿಕೊಳ್ಳಬೇಡ.
ನನ್ನ ಉಸಿರ ಮಧ್ಯ ಆಗ ಒಂದು ಹನಿ ಪ್ರೀತಿ ಉಳಿದಿತ್ತು.
ಆ ಪ್ರೀತಿ ಈಗ ಅನಾವರಣಗೊಳ್ಳುತ್ತಿದೆ.
- ರೇವನ್...

- rjewoor ರವರ ಬ್ಲಾಗ್
- Login or register to post comments
- 165 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: