ಮುಂಗಾರುಮಳೆ ಹೇಳಿದ್ದೇನು? - ಮುಂಗಾರುಮಳೆಯ ಕೊನೆಯದೊಂದು ವಿಮರ್ಶೆ (ಲೇಖಕರು: ಶೇಖರ್‌ಪೂರ್ಣ).
ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರುವುದಾದರೂ ಚಿತ್ರ
ಪ್ರತಿಪಾದಿಸುತ್ತಿರುವ ಮುಕ್ತ-ಸಮಾಜ ಕಲ್ಪನೆಯೆಡೆಗೆ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ವಿಮರ್ಶೆ
ಕುರಿತಂತೆ ಬರುವ ಎಲ್ಲಾ ಸಂದೇಹಗಳಿಗೆ ಲೇಖಕರಾದ ಶೇಖರ್‌ಪೂರ್ಣ ರವರೇ ಉತ್ತರ ನೀಡುತ್ತಾರೆ.
ಮುಂಗಾರುಮಳೆಯನ್ನು ಇಷ್ಟಪಟ್ಟವರು, ಟೀಕಿಸಿದವರು ಎಲ್ಲರೂ ಒಂದೇ ವೇದಿಕೆಯಲ್ಲಿ ಚರ್ಚೆ
ನಡೆಸಬೇಕೆಂಬುದು ನನ್ನ ಆಶಯ. ಏಕೆಂದರೆ ಚಿತ್ರವೊಂದು ವರ್ಷಾನುಗಟ್ಟಲೆ ಪ್ರದರ್ಶನಗೊಳ್ಳುತ್ತಾ
ಕನ್ನಡ ಚಿತ್ರರಂಗ ಹಿಂದೆಂದೂ ಕಂಡಿರದ ಹಣವನ್ನು ಗಳಿಸಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ. ಚಿತ್ರ
ಯುವಜನತೆಯ ಮೇಲೆ ಮೂಡಿಸಿದ ಪರಿಣಾಮದ ತೀವ್ರತೆ ಏನೇ ಇರಲಿ. ಅದು ಹೇಳುತ್ತಿರುವ, ಜಾಗತೀಕರಣಕ್ಕೆ
ಉದಾಹರಿಸಬಹುದಾದ ಸಂಗತಿಗಳನ್ನು ಮರೆಮಾಚಲು ಸಾಧ್ಯವಿಲ್ಲ. ಬಹಳ ದಿನಗಳ ನಂತರ ನನ್ನ ಬ್ಲಾಗ್
ಅಪ್‌ಡೇಟ್ ಆಗಿದೆ. ಒಪ್ಪಿಸಿಕೊಳ್ಳಿ. ಮುಂದೆ...
--ಅರೇಹಳ್ಳಿ ರವಿ

- ravee... ರವರ ಬ್ಲಾಗ್
- Login or register to post comments
- 427 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಮುಂಗಾರುಮಳೆ ಹೇಳಿದ್ದೇನು? - ಮುಂಗಾರುಮಳೆಯ ಕೊನೆಯದೊಂದು ವಿಮರ್ಶೆ (ಲೇಖಕರು: ಶೇಖರ್‌ಪೂರ್ಣ).
ನಿಮ್ಮ ಆ ಬರಹ ಓದಿ... ಈ ಸಿನಿಮಾನ ಹಿಂಗೂ ತಿಳ್ಕೊಳ್ಳೋರ್ ಇದಾರ ಅನಿಸ್ತು. .. ಮದುವೆ ಆಗೋಳ್ ಆದರೆ ಏನಾಯ್ತು ಅಂತ ಪ್ರೇಮ್ ಅಂದುಕೊಳ್ತಾನೆ ಸರಿ.. ಅಸ್ಟಕ್ಕೆ ನೀವು ಅವಳೊಂದಿಗೆ ’ಅನೈತಿಕ ಸಮ್ಮಂದ’ ಇಟ್ಕೊಳ್ಳೋಕೆ ಮನಸ್ ಮಾಡಿದಾನೆ ಅಂತ ಹೇಗ್ ಅಂದುಕೊಂಡ್ರಿ.. ಆಕೆ ಮದುವೆ ಆಗೋಳಿರ್ತಾಳೆ ಇನ್ನೂ ಆಗಿರಲ್ಲ... ಅಲ್ಲದೇ.. ಆಕೆ ’ಬೇಡ ಗೆಳೆಯ ನಂಟಿಗೆ ಹೆಸರು’ ಅಂತಾಳೆ ಅಂತ ಅವಳದೂ ಅದಕ್ಕೆ ಸಮ್ಮತಿ ಇದೆ ಅಂತ ಹೇಗ್ ಅಂದುಕೊಂಡ್ರೋ!!?? ಒಟ್ಟಿನಲ್ಲಿ ನೀವು ಸಿನಿಮಾನ ತಿಳ್ಕೊಂಡಿರೋ ಬಗೆನೇ ತಪ್ಪಾಗಿದೆ.. ಅಲ್ಲಿನ ನಿಮ್ಮ ಇಡೀ ಬರಹವನ್ನು ಇಲ್ಲೂ ಹಾಕಿದರೆ ಸಂಪದಿಗರಿಗೆ ಇಲ್ಲೇ ಮಾತುಕತೆ ಮಾಡಲು ನೆರವಾಗುತ್ತೆ... ಹಾಕ್ತಿರಾ??