ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಖಾಲಿ ಇರುವ ಜಾಗಗಳನ್ನು ಪದಗಳಿಂದ ತುಂಬಿ ಗಾದೆಗಳನ್ನು ಪೂರ್ತಿ ಮಾಡಿ!

೧. ಆರು ದೊಸೆ ಕೊಟ್ಟರೆ ಅತ್ತೇ ಕಡೆ,----------------------------------------.
೨. ಧರ್ಮಕ್ಕೆ ದಟ್ಟಿ ಕೊಟ್ಟರೆ,----------------------------------------------.
೩. ಅಂಬಲಿ ಕುಡಿಯುವರಿಗೆ,-----------------------------------------------.
೪. ನೆಲಕ್ಕೆ ಬಿದ್ದರೂ,-----------------------------------------------------.
೫. ಪಾಪಿ ಸಮುದ್ರಕ್ಕೆ ಬಿದ್ದರೂ,--------------------------------------------.
೬. ಮಾಡಿದವರ ಪಾಪ,--------------------------------------------------.

೭. ಹಿರಿಯಕ್ಕನ ಚಾಳಿ,---------------------------------------------------.
೮. ಬೀಸೋ ದೊಣ್ಣೆ ತಪ್ಪಿಸಿಕೊಂಡರೆ,----------------------------------------.
೯. ಅವಸರದಲ್ಲಿ ಅಜ್ಜಿ,----------------------------------------------------.
೧೦. ಅಜ್ಜಿಗೆ ಅರಿವೆ ಚಿಂತೆ,--------------------------------------------------.

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಗಾದೆಗಳು!!!

savithasr's picture

೧. ಆರು ದೊಸೆ ಕೊಟ್ಟರೆ ಅತ್ತೇ ಕಡೆ,ಮೂರು ದೋಸೆ ಕೊಟ್ರೆ ಮಾವನ ಕಡೆ
೨. ಧರ್ಮಕ್ಕೆ ದಟ್ಟಿ ಕೊಟ್ಟರೆ,ಹಿತ್ತಲಿಗೆ ಹೋಗಿ ಮೊಳ ಹಾಕಿದರಂತೆ
೩. ಅಂಬಲಿ ಕುಡಿಯುವರಿಗೆ,ಮೀಸೆ ಹಿಡಿಯುವವನೊಬ್ಬ.
೪. ನೆಲಕ್ಕೆ ಬಿದ್ದರೂ,ಜಟ್ಟಿ ಮೀಸೆ ಮಣ್ಣಾಗಲಿಲ್ಲ
೫. ಪಾಪಿ ಸಮುದ್ರಕ್ಕೆ ಬಿದ್ದರೂ, ಮೊಳಕಾಲುದ್ದ ನೀರು
೬. ಮಾಡಿದವರ ಪಾಪ,ಆಡಿದವರ ಬಾಯಿಗೆ
೭. ಹಿರಿಯಕ್ಕನ ಚಾಳಿ, ಮನೆ ಮಂದಿಗೆಲ್ಲ
೮. ಬೀಸೋ ದೊಣ್ಣೆ ತಪ್ಪಿಸಿಕೊಂಡರೆ,ನೂರು ವರ್ಷ ಆಯಸ್ಸು

ಮೀನಾ ಮೇಡಂ,
ನಿಮ್ಮ ಗಾದೆಗಳನ್ನ ಪೂರ್ತಿ ಮಾಡಿದ ಮೇಲೆ, ಸಂಪದದಲ್ಲಿ 'ಗಾದೆದಳು' ಅಂತ ಸರ್ಚ್ ಮಾಡಿ ನೋಡಿದೆ....45ಕ್ಕೂ ಹೆಚ್ಚಿನ ಗಾದೆದಳ ಸಂಗ್ರಹ ಲೇಖನಗಳು ಸಿಕ್ಕಿದ್ವು...ಮುಂದಿನ ಲೇಖನದಲ್ಲಿ ನೀವು ಹೊಸ ಗಾದೆಗಳನ್ನ ಹಾಕ್ತೀರಾ ಅಂತ ನಿರೀಕ್ಷೆಯಲ್ಲಿ...
-ಸವಿತ

ಹಾಗೇ ವಿಕಿಪೀಡಿಯಾದಿಂದ: http://kn.wikiquote.org/wiki/ಗಾದೆಗಳು

ಉ: ಗಾದೆಗಳು!!!

rasikathe's picture

-ರಸಿಕತೆ
ಸವಿತಾ ಅವರೆ,
ಧನ್ಯವಾದಗಳು!

ನಿಮಗೆ ೧೦ ಅಂಕಗಳಿಗೆ ೮ ಅಂಕಗಳು ಬಂದಿವೆ.
ಕಡೆಯ ಎರಡು ಗಾದೆ ಈ ರೀತಿ ಇವೆ...................

ಅವಸರದಲ್ಲಿ ಅಜ್ಜಿ ಮೈನರಿದಳು
ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಮಿಂಡನ ಚಿಂತೆ.

ಸಿಗೋಣ ಗಾದೆಯ ಗಮ್ಮತ್ತಿನಲ್ಲಿ,
ರಸಿಕತೆ.

ಉ: ಗಾದೆಗಳು!!!

bvenkatraya's picture

ಅವಸರದಲ್ಲಿ ಅಜ್ಜಿ ಮೈನರಾದಳು (ಅವಸರದಲ್ಲಿ ಅರ್ಜಿಯಲ್ಲಿ ಅಜ್ಜಿ ತನ್ನ ಪ್ರಾಯ ಬರೆಯುವಾಗ ತಿರುಗಿಸಿಬರೆದಿರಬಹುದು. ಉದಾ ೭೧ ಕ್ಕೆ ೧೭)

ಅವಸರದಲ್ಲಿ ಅಜ್ಜಿ ಮೈನರಿದಳು ಆಗಲಿಕ್ಕೆ ಅಜ್ಜಿ ಮೊದಲಬಾರಿ ಮೈನರಿವುದು ಅಲ್ಲವಲ್ಲಾ? (ತಮಾಷೆಗೆ)

ಉ: ಗಾದೆಗಳು!!!

rasikathe's picture

-ರಸಿಕತೆ
ಗಾದೆಗಳು ಅರಿವಿಗೆ ಮೂಲ..............

ಅವಸರದಲ್ಲಿ ಅಜ್ಜಿ ಮೈನರಿದಳು
-ಅರ್ಥಾತ್ ಯಾರು ಅವಸರದಲ್ಲಿ ಗಮನವಿಲ್ಲದೇ ಯಾವ ಕೆಲಸಮಾಡಿದರೂ ಅದು ತಪ್ಪಾಗುವುದು ಸಹಜ

ಇನ್ನೊಂದು ಗಾದೆ ಇದರ ಅರ್ಥ ಕೊಡುವುದು.......... "ಆತುರಗಾರರಿಗೆ ಬುದ್ಧಿ ಮಟ್ಟು"
ಧನ್ಯವಾದಗಳು!
ರಸಿಕತೆ.

ಉ: ಗಾದೆಗಳು!!!

bvenkatraya's picture

ಬುದ್ಧಿವಂತನಿಗೆ ಮೂರು ಕಡೆ

Syndicate content