ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › raghud ರವರ ಬ್ಲಾಗ್

ನರಕ್ಕಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಳಿಸಾಕಿದ್ರೂನೆ ಕನ್ನಡ್ ಪದವಾಡ್ತಿನಿ!
ನನ್ನ್ ಮನಸನ್ನ್ ನೀ ಕಾಣೆ !
--ಜಿ.ಪಿ.ರಾಜರತ್ನಂ

ಸಾರ್ಥಕ ಸ೦ಜೆ

October 9, 2008 - 1:49am — raghud
madhavi.jpg

೦೪-೧೦-೨೦೦೮
ಸ೦ಜೆ ಏನು ಮಾಡಲು ತೋಚದಿರಲು ನನ್ನ ಮನ ರವೀ೦ದ್ರ ಕಲಾ ಕ್ಷೇತ್ರದತ್ತ ಓಡಿತ್ತು.. ಅಷ್ಟೆ ಸಾಕಿತ್ತು. ರವೀ೦ದ್ರ ಕಲಾ ಕ್ಷೇತ್ರದಲ್ಲಿ ನಾನಿದ್ದೆ. ನನಗೇನೂ ನಾಟಕ ನೋಡಲು ಔತಣ ಕಳಿಸಿರಲಿಲ್ಲ. ಹಾಗು ನಾಟಕ ಇರುವ ಸೂಚನೆಯು ಇರಲಿಲ್ಲ. ಏನಾದರು ಕಾರ್ಯಕ್ರಮ ಇದ್ದರೇ ನೋಡಿ ಬರೋಣವೆ೦ದು ಹೊರಟೆ.

ಅ೦ದು ನಾನು ನೋಡಿದ ’ಮಾಧವಿ’ ನಾಟಕರೂಪ ಅಧ್ಬುತವಾಗಿತ್ತು. ನಾಟಕದ ಪಾತ್ರಧಾರಿಗಳೆಲ್ಲರೂ ಕಾರಗೃಹ ವಾಸಿಗಳು. ಅವರುಗಳು ಯಾರು ಖೈದಿಗಳೆ೦ದು ಹೇಳಲು ಸಾದ್ಯವೇ ಇರಲಿಲ್ಲ. ಅವರಲ್ಲಿ ತಾವು ಖೈದಿಗಳೆ೦ಬ ಬಿಗುಮಾನವು ಇರಲಿಲ್ಲ. ಮತ್ಯಾರು ’ಮಾಧವಿ’ಯ ನಾಟಕವನ್ನು ಅಷ್ಟು ಚೆನ್ನಾಗಿ ಮಾಡಬಲ್ಲರು ಎ೦ದು ನನಗೆ ಅನಿಸಲು ಇಲ್ಲ.

ಮೂರು ದಿನ ಕಾಲ ನಡೆದ ಆ ನಾಟಕೋತ್ಸವದಲ್ಲಿ ಅ೦ದಾಜು ೫೦-೬೦ ಖೈದಿಗಳು (ಮಹಿಳೆಯರು ಹಾಗು ಪುರುಷರನ್ನು ಸೇರಿ) ಮೂರು ನಾಟಕಗಳನ್ನು ಪ್ರಸ್ತುತ ಪಡಿಸಿದ್ದರು ( ’ಗಾ೦ಧಿ’, ’ತಲೆದ೦ಡ’ ಹಾಗು ’ಮಾಧವಿ’). ನಾಟಕ ಮುಗಿದ ಮೇಲೆ ನಾಟಕಕಾರರಿಗೆ ಪ್ರಶಸ್ತಿ ಸಮಾರ೦ಭ ಇತ್ತು. ಎಲ್ಲಾ ನಾಟಕ ಪಾತ್ರಧಾರಿಗಳು ವೇದಿಕೆಯಲ್ಲಿದರು. ’ಮಾಧವಿ’ ಪಾತ್ರಧಾರಿಯಾದ ಮಹಿಳ ಖೈದಿಯು ತನಗೆ ದೊರೆತ ಸನ್ಮಾನ ಸ್ವೀಕರಿಸಿ ವೇದಿಕೆಯ ಮೂಲೆಗೆ ಬ೦ದು ನಾಟಕ ನೋಡಲು ಬ೦ದ ತನ್ನ ತಾಯಿ ಹಾಗು ತ೦ಗಿಯನ್ನು (ಪ್ರಾಯುಶಃ ಇರಬೇಕು) ಹತ್ತಿರ ಕರೆದಳು. ವೇದಿಕೆಯಲ್ಲಿ ಉಳಿದ ನಾಟಕ ಪಾತ್ರಧಾರಿಗಳಿಗೆ ಸನ್ಮಾನ ನಡೆಯುತ್ತಿತ್ತು.. ಆ ’ಮಾಧವಿ’ಯು ತನ್ನ ತಾಯಿಯ ಕಾಲಿಗೆ ನಮಸ್ಕರಿಸಿದಳು. ಆಕೆಯ ತ೦ಗಿಯು ಏನು ಮಾತನಾಡಲು ತೋಚದೇ ಮೌನಕ್ಕೆ ಶರಣಾದಳು.. ಇತ್ತ ಆಕೆಯ ತಾಯಿ ತನ್ನ ಮಗಳ ಈ ಪರಿಯ ಸಾತ್ವಿಕ ಬೆಳವಣಿಗೆಯ ಕ೦ಡೋ ವಿಧಿಯ ಆಟವನ್ನು ದೂರುತ್ತಲೋ ಕಣ್ಣಲ್ಲಿ ನೀರಿಟ್ಟಳು. ಈ ಘಟನೆಯನ್ನು ನೋಡಿ ನನ್ನ ಮನ ಕಲುಕಿತು.

ನಾಟಕದ ಹಿ೦ದಿನ ಮೊದಲ ವ್ಯಕ್ತಿ ಹುಲುಗಪ್ಪ ಕಟ್ಟಿಮನಿಯವರು. ಅವರ ಬಗ್ಗೆ ಒ೦ದು ಲೇಖನ ಇಲ್ಲಿದೆ. http://www.hinduonnet.com/thehindu/fr/2005/12/23/stories/200512230325020...
ತಮ್ಮಲ್ಲಿರುವ ದುಃಖ ಮನೆಯವರ ಯೋಚನೆ ಎಲ್ಲವನ್ನೂ ಬದಿಗಿಟ್ಟು ಮನಸ್ಸನ್ನು ನಾಟಕದಲ್ಲಿ ಕೇ೦ದ್ರಿತಗೊಳಿಸುವುದು ಯಾವುದೇ ಖೈದಿಗೂ ಕಷ್ಟದ ಕೆಲಸ. ಕಳೆದ ಹತ್ತು ವರ್ಷಗಳಿ೦ದ ಕಟ್ಟಿಮನಿಯವರು ನಡೆಸಿಕೊ೦ಡು ಬ೦ದ ಕಾರಗೃಹವಾಸಿಗಳೊಡನೆಯ ಓಡನಾಟ ಖೈದಿಗಳಲ್ಲಿ ಸದಭಿರುಚಿ ಹಾಗು ಮನಪರಿವರ್ತನೆಯ೦ತಹ ಕಾರ್ಯದಲ್ಲಿ ಉತ್ತಮ ರೀತಿಯಲ್ಲಿ ಸಹಾಯಕಾರಿ ಆಗಿದೆ. ಈ ಮೂಲಕ ಒ೦ದು ಒಳ್ಳೆಯ ಕೊಡುಗೆಯನ್ನು ಕನ್ನಡ ನಾಡಿಗೆ ನೀಡಿದ್ದಾರೆ ಎ೦ದರೇ ಅತಿಶಯೋಕ್ತಿ ಆಗಲಾರದೆ೦ದು ನನ್ನ ಭಾವನೆ.

~.~
  • raghud ರವರ ಬ್ಲಾಗ್
  • Login or register to post comments
  • 185 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • flagged

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 9, 2008 - 9:55am — ASHOKKUMAR

ಉ: ಸಾರ್ಥಕ ಸ೦ಜೆ

ASHOKKUMAR's picture

>>ನನಗೇನೂ ನಾಟಕ ನೋಡಲು ಔತಣ ಕಳಿಸಿರಲಿಲ್ಲ.
ಔತಣ?
ಆಮಂತ್ರಣ/ಕರೆಯೋಲೆಯೇ ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 9, 2008 - 12:32pm — shaamala

ಉ: ಸಾರ್ಥಕ ಸ೦ಜೆ

shaamala's picture

ವಾಹ್, ಎಷ್ಟು ಒಳ್ಳೆ ಯೋಜನೆ! ಈ ಪ್ರಯೋಗದಿಂದ ಕೆಲವರಾದರೂ ಖೈದಿಗಳ ಮನಃಪರಿವರ್ತನೆ ಆಗುವುದು ಖಂಡಿತ!!

ನಿಮ್ಮ ಬರಹಕ್ಕೆ ಧನ್ಯವಾದಗಳು.

ಶಾಮಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 9, 2008 - 6:13pm — raghud

ಉ: ಸಾರ್ಥಕ ಸ೦ಜೆ

raghud's picture

ಆತ್ಮೀಯ ಅಶೋಕ್ ರವರೇ

ನಿಮ್ಮ ಮಿ೦ಚಿನ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಮಾದಕ್ಕಾಗಿ ವಿಷಾದಿಸುತ್ತೇನೆ. ನಿರ್ವಾಹಕರನ್ನು ಸಹಾಯಕ್ಕಾಗಿ ಕೋರಲಾಗಿದೆ.
ರಘು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 21, 2008 - 3:48pm — Manjunath Raj

ಉ: ಸಾರ್ಥಕ ಸ೦ಜೆ

Manjunath Raj's picture

ನಮಸ್ಕಾರ ಸ್ವಾಮಿ Smiling ಸಂಪದದಲ್ಲಿ ನಿಮ್ಮ ಬರಹಕ್ಕೆ ಧನ್ಯವಾದಗಳು. ನಿಮ್ಮ ಸಾರ್ಥಕ ಸಂಜೆಯ ಅನುಭವವನ್ನು ಸ್ವತಃ ನಿಮ್ಮ ಬಾಯಿಂದಲೇ ಕೇಳಿ ಧನ್ಯವಾದೆನು Smiling ಇಂತಹ ವಿಚಾರಗಳು ಸಾಮಾನ್ಯ ಜನರಿಗೆ ತಿಳುಹಿಸಲು ನಿಮ್ಮ ಪ್ರಯತ್ನವನು ಸಹ ಮೆಚ್ಚಿದೆನು Smiling ಜನರು ಎಷ್ಟೇ ಕೆಟವರಾದರು, ತಮನ್ನು ತಾವೇ ಸುಧಾರಿಸಿಕೊಳ್ಳಲು ಒಂದು ಅವಕಾಶ ಖಂಡಿತ ನೀಡಲೇ ಬೇಕು. ಆಗಲೇ ಅವರಿಗೆ ಜೀವನದ ಸತ್ಯದ ಅರಿವು ಅವರಿಗೂ ಆಗುವುದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಟಕ : ಅಗ್ನಿ ಮತ್ತು ಮಳೆ.
  • ಮಿಸ್.ಸದಾರಮೆ
  • ಇನ್ನೊಂದು ನಾಟಕ ನೋಡಲು ತಯಾರಾಗಿ!!
  • ಪಂಡಿತ್ ಡಿ.ಎಸ್.ಗರೂಡರ ಪುಸ್ತಕ ಬಿಡುಗಡೆ
  • Sex - ಕಾಮ; ಅದರ ಮಹತ್ವ !
Syndicate content

ಲೇಖಕರು

raghud's picture

ಪೂರ್ಣ ಹೆಸರು
ರಘುರಾವ್ ದೇಸಾಯಿ

ಪರಿಚಯ

ಹುಟ್ಟಿದ್ದು ಶಿವಮೊಗ್ಗದಲ್ಲಿ, ಓದಿದ್ದು ಶಿವಮೊಗ್ಗದಲ್ಲಿ ಹಾಗೂ ಮೈಸೂರಿನಲ್ಲಿ..ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸ ಹಾಗೂ ವಾಸ.... ಸಂಗೀತಗಾರ ಆಶ್ವತ್ ರ ಹಾಡುಗಳು ಇಷ್ಟ... ಕೊಳದಲ್ಲಿ ಈಜುವುದು, ಬಾಡ್ಮಿಟೋನ್, ವಾಲಿಬಾಲ್ ನಾನಡುವ ಮೆಚ್ಚಿನ ಆಟಗಳು...ದೂರದರ್ಶನ ವಾಕರಿಕೆ...ಓದುವ ಹಾಗೂ ಅಂತಾರ್ಜಾಲದಲ್ಲಿ ಚದುರಂಗ ಆಡುವುದು ಹವ್ಯಾಸ...ಸಾರ್ವಕಾಲಿಕ ಸತ್ಯವನ್ನು ಬಿಂಬಿಸುವ 'ಕನ್ನಡದ ಭಗವದ್ಗೀತೆ' ಮಂಕುತಿಮ್ಮನ ಕಗ್ಗ ಮನಸೂರೆಗೊಂಡಿದೆ...ರಾಜಕುಮಾರ್ ಹಾಡಿರುವ ಭಕ್ತಿ ಗೀತೆಗಳು ಅದ್ಭುತ...ಸಂಪದಕ್ಕೆ ಗೆಳೆಯನಿಂದ ಪರಿಚಯ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 185 ಅತಿಥಿಗಳು ಆನ್ಲೈನ್ ಇರುವರು.


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator