ಬಾನಿನುಲಿ
ಬಾನಿನುಲಿ *
ಬಸವಳಿದುಳಿದಿದೆ ನಮ್ಮ ನುಡಿ
ಬಸವಳಿದುಳಿದಿದೆ ನಮ್ಮ ನುಡಿ
ಕಬ್ಬಿಗನು ಕನವರಿಸಿದ ಮುಲುಕಿನಲಿ
ಅಬ್ಬರದ ಓರಾಟದ ಅಮಲಿನಲಿ
ಪುಡಾರಿಯ ನಾಲಗೆ ಸೀಳಿನಲಿ
ಹೀರೋನ ರಂಗಿನ ನಕಲಿನಲಿ
ಹಸಿರಾಡುಂಬೋಲದ ಮೈಕಿನಲಿ
ನುಸುಳಿ ನವಿರೆಬ್ಬಿಸಿದ ಬಾನಿನುಲಿ
ಬಸವಳಿದುಳಿದಿದೆ ನಮ್ಮ ನುಡಿ | ಹೇಗೋ
ಬಸವಳಿದುಳಿವುದು ನಮ್ಮ ನುಡಿ
-ಪ್ರಭು ಮೂರ್ತಿ
೨೦೦೬೧೨೨೦
* ಹಿಂದೆ ಯಾವಗಲೋ ಹಿಂದಿ-ಇಂಗ್ಲಿಷ್ ಕಾಮೆಂಟರಿಯ ನಡುವೆ, ಫೀಲ್ಡಿಂಗ್ ಮಾಡುತ್ತಿದ್ದ ನಮ್ಮ ಹುಡುಗರು ಕನ್ನಡದಲ್ಲಿ ಮಾತನಾಡಿಕೊಳ್ಳುತ್ತಿದ್ದನ್ನು ಕೇಳಿ ಮೈನವಿರೆದ್ದಿದ್ದ ನೆನಪು. ಈಚೆಗೆ ನನ್ನ ಬಾಲ್ಯದ ಸ್ನೇಹಿತ ಮಧು ಕೃಷ್ಣಮೂರ್ತಿ ಬೇ ಏರಿಯಾದ ಸ್ಟ್ಯಾನ್ ಫರ್ಡ್ ರೇಡಿಯೋದಲ್ಲಿ ನಮ್ಮ ನಾಡನ್ನು ಕುರಿತಾಗಿ "ಸುವರ್ಣಕರ್ನಾಟಕ ವೈಭವ" ಎಂಬ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ನಡೆಸಿದರು. ಆ ದಿನಗಳಲ್ಲಿ ಶಿವಮೊಗ್ಗದ ಸಾಹಿತ್ಯ ಸಮ್ಮೇಳನ ಹಾಗೂ "ಚಂಪಾರಂಪ"ಗಳು ಸುದ್ದಿಮಾಡುತ್ತಿದ್ದವು. ಮಧು ತನ್ನ ರೇಡಿಯೋ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜರು, ಕವಿಗಳು, ನಟರು ಮತ್ತು ಹೋರಾಟಗಾರರನ್ನು ಕುರಿತು ಹೇಳುತ್ತಾ ಕ್ರಿಕೆಟ್ ಆಟಗಾರರನ್ನು ಮರೆಯಲಿಲ್ಲ. ಅದಕ್ಕೆ ಪ್ರತಿಕ್ರಿಯೆಯಾಗಿ ಈ ಕಿರುಗವನ. (ಆ ರೇಡಿಯೋ ಕಾರ್ಯಕ್ರಮವನ್ನು ಇಲ್ಲಿ ಆರ್ಖೈವ್ ಮಾಡಲಾಗಿದೆ:
http://itsdiff.com/Archives.html )

- Prabhu Murthy ರವರ ಬ್ಲಾಗ್
- Login or register to post comments
- 564 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬಾನಿನುಲಿ
ಪ್ರಭುರವರೇ,
ಚೆನ್ನಿಹುದು ನಿಮ್ಮ ಹನಿಗವನ! ನಿಮ್ಮ ಕಾಸಿಗೊಂದಿಷ್ಟು ನನ್ನ ಕೊಸರು:
ಬಸವಳಿದುಳಿದಿದೆ ನಮ್ಮ ನುಡಿ,
ನಮ್ಮದೇ ಎಫ್.ಎಂ. ವಾಹಿನಿಗಳಲಿ,
ನಮ್ಮದೇ ನಟ-ನಟಿಯರ ಕಂಗ್ಲೀಷಿನಲಿ,
ನಮ್ಮದೇ ಪರಭಾಷಾ ವ್ಯಾಮೋಹದಲಿ,
ಬಸವಳಿದುಳಿದಿದೆ ನಮ್ಮ ನುಡಿ.
- ಶ್ಯಾಮ್ ಕಿಶೋರ್
ಮಾರುಲಿ: ಬಾನಿನುಲಿ
ಮೂರ್ತಿಯವರೇ,
ನೀವು ಕೊಟ್ಟಿರುವ ಕೊಂಡಿಯಲ್ಲಿರುವ mp3ಗಳನ್ನು ಇಳಿಸಿಕೊಂಡು ಕೇಳಿದೆ. ಎಲ್ಲಾ ಕನ್ನಡಿಗರು ಕೇಳಲೇಬೇಕಾದ ಉಲಿ.
ದನಿ: Every cloud has a silver lining
ಈ ಇಡೀ ಕವನದಲ್ಲಿ, ಮತ್ತು ಅದಕ್ಕೆ ಬಂದ ಟಿಪ್ಪಣಿಗಳಲ್ಲಿ, ಬಸವಳಿದುಳಿದಿದೆ ಎಂಬ ಪ್ರಯೋಗವಿದೆಯೇ ಹೊರತು ಬಸವಳಿದಳಿದಿದೆ ಎಂದಿಲ್ಲ. ಸದ್ಯ.
ಇಷ್ಟೆಲ್ಲಾ, ಕಷ್ಟಕಾರ್ಪಣ್ಯಗಳ ನಡುವೆಯೂ ಕನ್ನಡವು ಕಮಲದಂತೆ ಅರಳುತ್ತದೆ, ಬೆಳೆಯುತ್ತದೆ ಮತ್ತು ಬೆಳೆಯುತ್ತಾ ಉಳಿಯುತ್ತದೆ. ಇದರಲ್ಲಿ ಸಂಶಯಬೇಡ.
Re: ದನಿ: Every cloud has a silver lining
ನಿಜ. ನಿರಾಶಾವಾದವನ್ನು ವ್ಯಕ್ತಪಡಿಸುವ ಅಗತ್ಯವೂ ಇಲ್ಲ ಇರಾದೆಯೂ ಇಲ್ಲ. ಅಸಹನೀಯವಾದ ದೊಂಬರಾಟದ ಹಿನ್ನೆಲೆಯಲ್ಲಿ ಕುಂಬ್ಳೆ, ಜಾವಗಲ್ ರಂತಹವರು ಸಾಮಾನ್ಯರಂತೆ ಸಹಜವಾಗಿ ಕನ್ನಡಲ್ಲಿ ಮಾತನಾಡುವುದನ್ನು ತೀರಾ ಅನಿರೀಕ್ಷಿತ ಸಂದರ್ಭದಲ್ಲಿ ಕೇಳಿದರೆ ಹೇಗೆನ್ನಿಸಬಹುದು ಎಂಬುದೆ ವಸ್ತು.
ಎಚ್. ವೈ. ಶಾರದಾಪ್ರಸಾದ್ ಅವರು “The grace and elegance of Karnataka are expressed in the brush strokes of K.K. Hebbar and the square cuts of G.R. Vishwanath.” ಅನ್ತ ಬರೆದಿದ್ದಾರಂತೆ. ರಾಜಮಹಾರಾಜರು, ಕವಿಪುಂಗವರು, ಹೀರೋಗಳು... ಇವರೇ ಅಲ್ಲದೆ ಇತರರ ಕೊಡುಗೆಯನ್ನೂ ಅಗಾಗ ನೆನೆಸಿಕೊಳ್ಳುವುದು ಉಚಿತವೆನಿಸುತ್ತದೆ.
ಧನ್ಯವಾದಗಳು,
ಪ್ರಭು