ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › pallavi.dharwad ರವರ ಬ್ಲಾಗ್

ಜೀವ ಗಂಧ

ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

August 28, 2008 - 2:07am — pallavi.dharwad
Photo Frame.jpg

ಇದೊಂದು ಹಳೆಯ ಫೋಟೊ. ಪಿಯುಸಿಯಲ್ಲಿ ತೆಗೆಸಿಕೊಂಡಿದ್ದು.

ಆಗಿನ ಜೀವೋತ್ಕರ್ಷವೇ ಬೇರೆ. ಎಲ್ಲರದೂ ಉಕ್ಕುವ ವಯಸ್ಸು, ತುಡಿಯುವ ಮನಸ್ಸು. ತರಗತಿಗಳು ಮುಗಿದು, ಎಲ್ಲರೂ ಪರೀಕ್ಷೆಗೆ ಸಿದ್ಧರಾಗುವಾಗ ಬರುವ ಬೀಳ್ಕೊಡುಗೆ ಸಮಾರಂಭದ ದಿನಗಳವು. ಎಷ್ಟೊಂದು ಸಾರಿ ಈ ಬಗ್ಗೆ ಬರೆಯಲು ಕೂತಿದ್ದೇನೆ. ಬರೆಯಲು ಆಗದೇ ಸುಮ್ಮನಾಗಿದ್ದೇನೆ. ಆ ನೆನಪುಗಳನ್ನು ಅಷ್ಟು ಸುಲಭವಾಗಿ, ಸರಳವಾಗಿ ದಾಖಲಿಸುವುದು ಕಷ್ಟ.

ನಾವೊಂದಿಷ್ಟು ಗೆಳತಿಯರಿದ್ದೆವು. ಎಲ್ಲರೂ ಅಷ್ಟೇ ಹುಚ್ಚಿಯರು. ಅಷ್ಟೇ ವ್ಯಾಮೋಹಿಗಳು. ಈ ಕಾಲೇಜು ದಿನಗಳು ಮುಗಿಯುವುದೇ ಇಲ್ಲವೆಂದುಕೊಂಡಿದ್ದೆವು. ಯಾವತ್ತೂ ಹೀಗೇ ಇರುತ್ತೇವೆ ಅಂದುಕೊಂಡಿದ್ದೆವು. ಆಗ ಅಪ್ಪ ನನಗಿನ್ನೂ ಮೊಬೈಲ್‌ ಕೊಡಿಸಿರಲಿಲ್ಲ. ಆದರೆ, ಮೊದಲ ಬಾರಿ ಸ್ಕೂಟಿ ಕೊಡಿಸಿದ್ದ. ಹರಯದ ವೇಗಕ್ಕೆ ಸ್ಕೂಟಿಯ ಕಿಕ್‌ ಬೇರೆ ಸೇರಿಕೊಂಡು, ರೂಪಾ ಹೇಳ್ತಾರಲ್ಲ, ಅಂಥ ಕೇರ್‌ಫ್ರೀ ಜೀವನ ನಡೆಸಿಕೊಂಡು ಆರಾಮವಾಗಿದ್ದೆ.

ಆದರೆ, ಎಷ್ಟು ದಿನ ಹಾಗಿರಲು ಸಾಧ್ಯ? ಆಗಲೇ ಜನವರಿ ಮುಗಿದು ಫೆಬ್ರುವರಿ ಬಂದಾಗಿತ್ತು. ವ್ಯಾಲಂಟೈನ್ಸ್‌ ಡೇ ಸಂಭ್ರಮವೂ ಮುಗಿದಿತ್ತು. ಇನ್ನೆರಡು ದಿನಗಳಲ್ಲಿ ಬೀಳ್ಕೊಡುವ ಸಮಾರಂಭ. ಅದು ಮುಗಿದರೆ ಕಾಲೇಜು ಜೀವನ ಮುಗಿದಂತೆ. ಮುಂದೇನಿದ್ದರೂ ಪರೀಕ್ಷೆಗೆ ಓದಿಕೊಳ್ಳುವ ಒತ್ತಡ. ಯಾವ ಗೆಳತಿಯೂ ಸಿಗುವುದಿಲ್ಲ. ಮನಸ್ಸಿನ ಮಾತುಗಳನ್ನು ಹೇಳಲಾಗದೇ ಒಳಗೇ ಹುದುಗಿಸಿಕೊಂಡಿರುವ ಗೆಳೆಯರೂ ಸಿಗುವುದಿಲ್ಲ. ಹೋದರೆ ಲೈಬ್ರರಿಗೆ ಹೋಗಬೇಕು. ಹರಟೆ ಹೊಡೆಯಬೇಕೆಂದರೂ ಪರೀಕ್ಷೆಯ ಅಳುಕು.

ಹೀಗಾಗಿ, ಕಾಲೇಜ್‌ ದಿನದಂದು ಫೋಟೊ ತೆಗೆಸಿಕೊಳ್ಳಲು ನಾವು ನಾಲ್ವರು ಗೆಳತಿಯರು ನಿಶ್ಚಯಿಸಿದೆವು. ಎಲ್ಲರೂ ನಮ್ಮಲ್ಲಿದ್ದ ಅತ್ಯುತ್ತಮ ಡ್ರೆಸ್‌ ಹಾಕಿಕೊಂಡೆವು. ಸೊಗಸಾಗಿ ಶೃಂಗರಿಸಿಕೊಂಡೆವು. ಎರಡು ಸ್ಕೂಟಿಗಳಲ್ಲಿ ಹಳೆ ಬಸ್‌ಸ್ಟ್ಯಾಂಡ್‌ ಕಡೆ ಹೋದೆವು. ಒಬ್ಬರ ಮೇಕಪ್ಪನ್ನು ಇನ್ನೊಬ್ಬರು ಸರಿಪಡಿಸಿ ಫೋಟೊಗೆ ಸಿದ್ಧರಾದೆವು.

ಎರಡು ಫೊಟೊಗಳನ್ನು ತೆಗೆಸಿಕೊಳ್ಳುವ ನಿರ್ಧಾರವಾಯಿತು. ಒಂದರಲ್ಲಿ ಸುಮ್ಮನೇ ನಿಂತಿರುವುದು. ಇನ್ನೊಂದರಲ್ಲಿ ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ನಗುತ್ತ ನಿಲ್ಲುವುದು ಎಂದು ಮಾತಾಯಿತು. ಆ ದಿನ ನನಗಿನ್ನೂ ನೆನಪಿದೆ. ಮೊದಲನೇ ಫೋಟೊದಲ್ಲಿ, ವಿದೇಶಿ ಅತಿಥಿಯನ್ನು ಸ್ವಾಗತಿಸಲು ನಿಂತ ಸೋನಿಯಾ ಗಾಂಧಿಯಂತೆ ನಿಂತಿದ್ದೆವು. ಮುಖದಲ್ಲಿ ಕಂಡೂ ಕಾಣದಂಥ ಮುಗುಳ್ನಗೆ. ಹಸನ್ಮುಖ. ಅದು ಹೆಚ್ಚಿನ ಗೊಂದಲವಿಲ್ಲದೇ ಒಕೆ ಆಯಿತು.

ಸಮಸ್ಯೆ ಬಂದಿದ್ದೇ ಎರಡನೇ ಫೋಟೊಕ್ಕೆ. ನಗುವುದು ಎಂದರೆ ಹೇಗೆ? ಸುಮ್ಮನೇ ಮುಗುಳ್ನಗುವುದಾ? ಅಥವಾ ಗಹಗಹಿಸಿ ನಗುವುದಾ ಎಂಬ ಗೊಂದಲ ಶುರುವಾಯಿತು. ಮುಗುಳ್ನಗುತ್ತ ನಿಲ್ಲೋಣ ಎಂಬುದು ನನ್ನ ವಾದ. ಅದು ಸರಿಯಾಗಿರಲ್ಲ, ರಿಸೆಪ್ಷನಿಸ್ಟ್‌ ನಗು ಥರ ಕೃತಕವಾಗಿರುತ್ತದೆ ಎಂಬುದು ಉಳಿದ ಮೂವರ ವಾದ. ಹೆಗಲ ಮೇಲೆ ಕೈಹಾಕಿಕೊಂಡಿರುತ್ತೇವಲ್ಲ, ಆದ್ದರಿಂದ ಜೋಕೊಂದಕ್ಕೆ ನಗುವಂತೆ ನಗುತ್ತ ನಿಲ್ಲೋಣ ಎಂದು ಗೆಳತಿಯರು ವಾದಿಸಿದರು. ಒಪ್ಪದೇ ಬೇರೆ ಮಾರ್ಗ ಇರಲಿಲ್ಲ.

ಹೆಗಲ ಮೇಲೆ ಕೈಹಾಕಿ ನಿಂತೆವು. ನಗ್ರೇ ನಗ್ರೇ ಎಂದು ಪರಸ್ಪರ ಹುರಿದುಂಬಿಸಿಕೊಂಡೆವು. ನಮ್ಮನ್ನು, ನಮ್ಮ ಸಡಗರವನ್ನು ನೋಡಿ ಫೋಟೊಗ್ರಾಫರ್‌ ಮುಗುಳ್ಗಗುತ್ತ ಸಿದ್ಧನಾಗಿ ನಿಂತಿದ್ದ. ಆದರೂ ಬೇಕಾದ ಪೋಸ್‌ ದಕ್ಕಲಿಲ್ಲ. ಜೋರಾಗಿ ನಗಿ ಎಂದು ಆತ ಸಲಹೆ ಕೊಟ್ಟ. ಸುಮ್‌ಸುಮ್ನೇ ಜೋರಾಗಿ ನಗೋದು ಹೇಗೆ?

ಜೋಕ್‌ ಹೇಳ್ಕೊಳ್ರಿ ಅಂದ. ಕ್ಯಾಮರಾ ಮುಂದೆ ನಿಂತು ಎಂಥಾ ಜೋಕ್‌ ಹೇಳಿದ್ರೂ ಅದು ಕೃತಕ ನಗುವನ್ನೇ ಹೊಮ್ಮಿಸುತ್ತದೆ. ಅದರಲ್ಲೂ ಫೊಟೊ ಎಂದರೆ ನನಗೆ ಎಂಥದೋ ಸಂಕೋಚ. ಅಷ್ಟು ಜೋರಾಗಿ ನಗುವುದಂತೂ ನನ್ನಿಂದ ಸಾಧ್ಯವಿರಲಿಲ್ಲ.

ಏನು ಮಾಡುವುದು?

ಕೊನೆಗೆ ನನ್ನ ತರಲೆ ಗೆಳತಿಯೊಬ್ಬಳು ಐಡಿಯಾ ಮಾಡಿದಳು. ಒಬ್ಬಳೇ ಹೋಗಿ ಫೋಟೊಗ್ರಾಫರ್‌ಗೆ ಗುಟ್ಟಾಗಿ ಏನೋ ಹೇಳಿ ಬಂದಳು. ಸಹಜತೆ ನಟಿಸುತ್ತ, ’ಒನ್‌ ಟೂ ಥ್ರೀ ಅಂತೀನಿ ಎಲ್ಲ ಜೋರಾಗಿ ನಗಬೇಕು’ ಎಂದು ಅಪ್ಪಣೆ ಕೊಟ್ಟು ಮತ್ತೆ ಹೆಗಲಿಗೆ ಕೈ ಏರಿಸಿದಳು.

ಇನ್ನೂ ’ಒನ್‌’ ಪ್ರಾರಂಭವಾಗಿರಲಿಲ್ಲ. ಇದ್ದಕ್ಕಿದ್ದಂತೆ ಆ ತರಲೆ, ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ತೋರಿಸಿ, ’ಪಲ್ಲಿ, ನಿನ್ನ ಗಂಡ ಹಾಗಿರ್ತಾನೆ ನೋಡೇ’ ಅಂದುಬಿಟ್ಟಳು. ಥಟ್‌ ಅಂತ ಉಳಿದ ಮೂವರು ಅತ್ತ ಕಡೆ ನೋಡಿದೆವು. ಅಲ್ಲೇನಿದೆ? ಅರೆಬರೆಯಾಗಿ ಎಳೆದಿದ್ದ ಪರದೆಯಾಚೆ, ದೊಡ್ಡ ಮೀಸೆಯ, ರುಮಾಲುಧಾರಿ ರೈತನೊಬ್ಬ ಬೀಡಿ ಸೇದುತ್ತ ನಿಂತಿದ್ದ. ಇನ್ನೊಂದು ಕೈಯಲ್ಲಿ ಮಾರಲು ತಂದ ಈಯಲು ಸಿದ್ಧವಾದಂತಿದ್ದ ಗಬ್ಬಾದ ಎಮ್ಮೆ.

ಅದನ್ನು ನೋಡುತ್ತಲೇ ಎಲ್ಲರೂ ಜೋರಾಗಿ ನಕ್ಕುಬಿಟ್ಟೆವು.

ಅಷ್ಟೊತ್ತಿಗೆ ಫ್ಲ್ಯಾಶ್‌ ಚಳ್‌ ಅಂದಿತು. ಅರೆರೆ ಅನ್ನುವಷ್ಟರಲ್ಲಿ ಫೊಟೊ ತೆಗೆದಾಗಿತ್ತು.

ರೀರೀರೀ... ನಮ್ಮ ಮುಖ ಆ ಕಡೆ ಇತ್ರೀ ಎಂದು ನಾನು ಜಗಳ ತೆಗೆದೆ. ಆದರೆ, ಫೋಟೊಗ್ರಾಫರ್‌ ಮುಗುಳ್ಗಗುತ್ತಿದ್ದ. ಸಕತ್ತಾಗಿ ಬಂದಿದೆ ಮೇಡಂ. ನಾಳೆ ಬಂದು ಪ್ರಿಂಟ್‌ ತಗೊಂಡ್ಹೋಗಿ ಎಂದ.

ಬ್ಯಾಡ ಇನ್ನೊಂದು ತೆಗೀರಿ. ಅದು ಸರಿ ಬರದಿದ್ರೆ? ಎಂದು ತರಲೆಯನ್ನು ಬಿಟ್ಟು ಇತರ ಮೂವರು ಗಂಟುಬಿದ್ದೆವು.

ಫೋಟೊಗ್ರಾಫರ್‌ ಸಮಾಧಾನದಿಂದಲೇ ಹೇಳಿದ: ಇಲ್ರೀ ಚೆನ್ನಾಗಿ ಬಂದದೆ. ಒಂದು ವೇಳೆ ಚೆನ್ನಾಗಿಲ್ಲ ಅನ್ನಿಸಿದರೆ ನಾಳೆ ಪುಕ್ಕಟೆಯಾಗಿ ಇನ್ನೊಂದು ಫೋಟೊ ತೆಕ್ಕೊಡ್ತೀನಿ.

ಅನುಮಾನದಿಂದಲೇ ವಾಪಸ್ಸಾದೆವು. ದಾರಿಯುದ್ದಕ್ಕೂ ದೊಡ್ಡ ಮೀಸೆಯ, ಬೀಡಿ ಸೇದುತ್ತಿದ್ದ, ಎಮ್ಮೆ ಮಾರಲು ಬಂದ ರೈತನ ಕುರಿತೇ ಜೋಕ್‌. ಸ್ಕೂಟಿ ಓಡಿಸುತ್ತಿದ್ದ ನನ್ನನ್ನು ಇತರ ಮೂವರೂ ಸಕತ್ತಾಗಿ ರೇಗಿಸಿದರು. ಇಲ್ಲೇ ರಸ್ತೆಯಲ್ಲಿ ಕೆಡವಿಬಿಡುತ್ತೇನೆ ನೋಡು ಎಂದು ಎಚ್ಚರಿಸಿದ ಮೇಲೆಯೇ ಅವರು ಸುಮ್ಮನಾಗಿದ್ದು. ಆದರೂ ಮುಸಿಮುಸಿ ನಗು ಮುಂದುವರಿದೇ ಇತ್ತು.

ಮರುದಿನ ಮತ್ತೆ ಸ್ಟುಡಿಯೋಕ್ಕೆ ಹೋದೆವು. ಫೋಟೊಗ್ರಾಫರ್‌ನ ಮುಗುಳ್ನಗು ಸ್ವಾಗತಿಸಿತು. ಮೊದಲು ಕೈಗಿಟ್ಟ ಪ್ರಿಂಟ್‌ ಮುಗುಳ್ನಗುವಿನ ಸೋನಿಯಾ ಗಾಂಧಿ ಫೋಸ್‌ನದು. ಪರವಾಗಿಲ್ಲ, ಎಲ್ಲಾ ಚೆನ್ನಾಗೇ ಬಂದಿದ್ದೇವೆ ಎಂದು ಮಾತಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದೆವು. ಆಗ ಕೈಗಿತ್ತ ಎರಡನೇ ಫೋಟೊ.

ತರಲೆಯೊಬ್ಬಳನ್ನು ಬಿಟ್ಟು ಉಳಿದ ಮೂವರು ಕೂತೂಹಲದಿಂದ ದಿಟ್ಟಿಸಿದೆವು. ವಾಹ್‌. ಏನಂತ ಹೇಳಲಿ! ಎಲ್ಲರೂ ಎಡಕ್ಕೆ ಕತ್ತು ತಿರುಗಿಸಿ ಜೋರಾಗಿ ನಗುತ್ತಿದ್ದೇವೆ. ಫ್ಲ್ಯಾಶ್‌ನ ಬೆಳಕು ನಮ್ಮ ಕಣ್ಣುಗಳನ್ನು ನಕ್ಷತ್ರಗಳಂತೆ ಮಿಂಚಿಸಿದೆ. ಓಲೆ ಮಿಂಚಾಗಿ ನಲಿಯುತ್ತಿವೆ. ಹಲ್ಲುಗಳು ಪಳಪಳ ಹೊಳೆಯುತ್ತಿವೆ. ಜಗದ ಚಿಂತೆ ಮರೆತ ಸ್ವಚ್ಛಂದ ನಗು ಅದು.

ನಮ್ಮ ಮುಖಭಾವ ಕಂಡು ಫೋಟೊಗ್ರಾಫರ್‌ ಕೂಡಾ ಮುಗುಳ್ಗುತ್ತಿದ್ದ. ’ಚೆನ್ನಾಗಿ ತೆಗೆದಿರೀ’ ಎಂದು ಶಾಭಾಷ್‌ಗಿರಿ ಕೊಟ್ಟೆವು. ನಿಮ್ಮ ಗೆಳತಿಯೇ ಐಡಿಯಾ ಹೇಳಿದ್ದು ಎಂದು ಆತ ತರಲೆಯತ್ತ ಕೈ ಮಾಡಿ ತೋರಿಸಿದ. ಭಾರಿ ಐಡಿಯಾ ಕಣೆ ಎಂದು ಆಕೆಗೆ ಅಭಿನಂದನೆ ಹೇಳಿದೆವು. ನನಗೆ ಆ ಫೊಟೊ ಎಷ್ಟು ಇಷ್ಟವಾಯ್ತೆಂದರೆ, ಇದರ ಇನ್ನೊಂದು ಪ್ರತಿ ಮಾಡಿ, ಒಳ್ಳೇ ಕಟ್ಟು ಹಾಕಿ ಕೊಡಿ ಎಂದು ಹೇಳಿ ಬಂದೆ.

ಈಗ ನನ್ನ ಕೈಲಿರುವುದು ಆ ಫೋಟೊ. ಎಡಕ್ಕೆ ಕತ್ತು ವಾಲಿಸಿ ಸ್ವಚ್ಛಂದವಾಗಿ ಮುಗುಳ್ನಗುತ್ತಿರುವ ಫೋಟೊ. ಆ ಪಲ್ಲವಿ ಎಷ್ಟು ಖುಷಿಯಾಗಿದ್ದಳು. ಎಷ್ಟೊಂದು ಸಂತಸವಿತ್ತು. ಲಕ್ಷ್ಮೀನಾರಾಯಣಭಟ್ಟರು ಹೇಳುವಂತೆ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೆ?

ಮಂಕು ಕವಿದಾಗೆಲ್ಲ ಈ ಫೋಟೊ ನೋಡುತ್ತೇನೆ. ಮತ್ತೆ ಮತ್ತೆ ನೋಡುತ್ತ ನೆನಪಿಸಿಕೊಳ್ಳುತ್ತೇನೆ. ಮೌನವಾಗಿ ಪ್ರಶ್ನಿಸಿಕೊಳ್ಳುತ್ತೇನೆ: ’ಹೀಗೆ ಮುಕ್ತವಾಗಿ ನಗುವುದು ಮತ್ತೆ ನನಗೆ ಸಾಧ್ಯವಾದೀತೆ?’

ಉತ್ತರ ಸಿಗುವುದಿಲ್ಲ. ಒಂದು ವಿಷಾದದ ಮುಗುಳ್ನಗು ನಕ್ಕು, ಫೊಟೊವನ್ನು ಮತ್ತೆ ಗೂಡಿಗೆ ಸೇರಿಸುತ್ತೇನೆ.

- ಪಲ್ಲವಿ ಎಸ್‌.

  • ಕಾಲೇಜು
  • ನಗು
  • ಫೋಟೊ
~.~
  • pallavi.dharwad ರವರ ಬ್ಲಾಗ್
  • Login or register to post comments
  • 508 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2008 - 3:07am — kalpana

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

kalpana's picture

ಅಯ್ಯೋ ಒಳ್ಳೆ ಅಜ್ಜಿ ವಯಸ್ಸು ನಿಮಗೆ ಆಗಿದೆ ಅನ್ನೊ ಹಂಗೆ ಬರೆದಿದ್ದೀರಲ್ರಿ? Smiling ಮುಕ್ತ ನಗು ಮತ್ತೆ ನಗುತ್ತೀರಿ, ಖಂಡಿತ. ಇದು ನನ್ನ ಪ್ರಾಮಿಸ್. ಮದುವೆಯಾಗಿ, ನಿಮ್ಮ ಪುಟ್ಟ ಮಗು ಮಡಿಲಲ್ಲಿ ಮೊತ್ತ ಮೊದಲ ಬೊಚ್ಚು ಬಾಯಿಯ ನಗೆ ನಗುತ್ತಲ್ಲ, ಅದನ್ನು ನೋಡಿ, ಮತ್ತೆ ಮತ್ತೆ ಅದನ್ನು ನಗಿಸಲು ನೀವು ಹೀಗೆ ಮುಕ್ತವಾಗಿ ನಗುತ್ತೀರಿ. ಆಗ ನನ್ನ ಮಾತು ನೆನೆಸಿಕೊಳ್ಳುತ್ತೀರ ಸಹ. ಯಾಕೆಂದ್ರೆ, ನನ್ನ ಅನುಭವದಲ್ಲಿ, ಕಾಲೇಜಿನ ಕೇರ್ಫ್ರೀ ನಗು ನನಗೆ ಮತ್ತೆ ಸಿಕ್ಕಿದ್ದು ಆಗಲೆ.

~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 3:19am — hamsanandi

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

hamsanandi's picture

ಬರಹ ಚೆನ್ನಾಗಿದೆ!

ನಾನು ಬರೆಯೋದನ್ನ ಓದಿದ ಒಬ್ಬರು ನನ್ನ ಮಕ್ಕಳು ಮದುವೆ ವಯಸ್ಸಿಗೆ ಬಂದಿದಾರಾ ಅಂತ ವಿಚಾರಿಸಿದರು.

(ಇದಕ್ಕೆ Smiling ಅನ್ಬೇಕೋ, Sad ಅನ್ಬೇಕೋ ಗೊತ್ತಾಗ್ತಿಲ್ಲ!)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 6:24am — kalpana

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

kalpana's picture

ಹೌದೆ? ಹಾಗಾದ್ರೆ ಅವರಿಗೆ ಮದುವೆಯಾಗಿದೆಯೆ? Smiling

(ಸಾರಿ, ಹೀಗೆ ಹೇಳ್ದೆ ಇರೋದಿಕ್ಕೆ ಆಗ್ಲೆ ಇಲ್ಲ ನನಗೆ. ತಮಾಷೆಯಾಗಿ ತೊಗೊಳ್ಳಿ ಹಂಸಾನಂದಿಗಳೆ Smiling)

~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 10:03am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಥ್ಯಾಂಕ್ಸ್‌ ಹಂಸಾನಂದಿಯವರೇ. ನಿಮ್ಮ ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರಾ ಎಂದು ಕೇಳಿದ ಮಹಾನುಭಾವರಿಗೆ ಸಂಪದ ತೆರೆದು ನಿಮ್ಮ ಫೊಟೊ ನೋಡಲು ಹೇಳಿ. ತಮ್ಮ ಅಭಿಪ್ರಾಯ ಬದಲಿಸುವುದಷ್ಟೇ ಅಲ್ಲ, ವಯಸ್ಸಿಗೆ ಬಂದ ಮಗಳಿದ್ದರೆ ಮದುವೆ ಮಾಡಿಕೊಳ್ಳುವಂತೆ ದುಂಬಾಲೂ ಬೀಳಬಹುದು.

ಏನಂತೀರಿ? ಹೂಂ ಅಂತೀರಾ, ಊಹೂಂ ಅಂತೀರಾ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 8:35am — ranjith

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

ranjith's picture

ಪಲ್ಲವಿಯವರೆ,

ನಿಮ್ಮ ಬರಹ, ಶೈಲಿ ಅದ್ಭುತವಾಗಿದೆ.
ಹೀಗೆ ಬಡಿಸುತ್ತಿರಿ ಬರಹದೂಟ. ಮನದ ಹಸಿವು ತೊಲಗಲಿ.

ಧನ್ಯವಾದಗಳು...Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2008 - 10:47am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಥ್ಯಾಂಕ್ಸ್‌ ರಂಜಿತ್‌. ನೀವೂ ಬರೆಯುತ್ತಿರಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 10:01am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಹಾಗೆ ಮತ್ತೆ ನಗುವಂತಾಗಲಿ ಕಲ್ಪನಾ. ವಯಸ್ಸಿಗೂ ನಗುವಿಗೂ ಸಂಬಂಧವೇ ಇಲ್ಲ. ಆದರೆ, ತುಂಬ ಯೋಚಿಸತೊಡಗಿದಾಗ ಇಂತಹ ಸಣ್ಣಪುಟ್ಟ ಸಂತೋಷಗಳು ಮಾಯವಾಗಿಬಿಡುತ್ತವೆ. ಎಲ್ಲವನ್ನೂ ಲೆಕ್ಕ ಹಾಕುವ ಮನಸ್ಸು ಭಾವನೆಗಳನ್ನು ಅಳಿಸಿ ಕೇವಲ ಅಂಕಿಅಂಶಗಳನ್ನು ಉಳಿಸಬಿಡುತ್ತದೆ. ಲಾಭ-ನಷ್ಟದ ಲೆಕ್ಕಾಚಾರ ಶುರುವಾಗುತ್ತದೆ.

ಮದುವೆಯಾಗಿ, ಮಗುವಾದಾಗ ಖಂಡಿತ ನಿಮ್ಮ ಪ್ರತಿಕ್ರಿಯೆ ಕುರಿತು ಉತ್ತರಿಸುತ್ತೇನೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 7:48am — ಮನಹ್ಪಠಲ

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

ಮನಹ್ಪಠಲ's picture

Quote:
ನನಗೆ ಆ ಫೊಟೊ ಎಷ್ಟು ಇಷ್ಟವಾಯ್ತೆಂದರೆ, ಇದರ ಇನ್ನೊಂದು ಪ್ರತಿ ಮಾಡಿ, ಒಳ್ಳೇ ಕಟ್ಟು ಹಾಕಿ ಕೊಡಿ ಎಂದು ಹೇಳಿ ಬಂದೆ.

ಇನ್ನೊಂದು ಪ್ರತಿ ಮಾಡಿ, ಒಳ್ಳೇ ಕಟ್ಟು ಹಾಕ್ಸೊ ಜೊತೆಗೆ ಒನ್ದು ಡಿಜಿಟಲ್ ಸಾಫ್ಟ್ ಕಾಪಿ ಮಾಡಿಟ್ಕೊಳ್ಳೀ, ಮು೦ದೆ ಪ್ರಿನ್ಟ್ ಹಾಕ್ಸಿರೋದು ಮಾಸಿ ಹೋದ್ರೆ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:59am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ನಿಜ. ಆಗಲೇ ಸ್ಕ್ಯಾನ್‌ ಮಾಡಿಟ್ಟುಕೊಂಡಿದ್ದೇನೆ. ಪ್ರಿಂಟ್‌ ಮಾಸಬಹುದು, ಆದರೆ ನೆನಪಿನ ಪ್ರಿಂಟ್‌ ಹಚ್ಚಹಸುರಾಗಿದೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 7:50am — savithasr

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

savithasr's picture

ನಿಮ್ಮ ಲೇಖನ ಕೂಡ ಹದವಾಗಿ...ಮುದವಾಗಿದೆ ಪಲ್ಲವಿ.

-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:13am — ASHOKKUMAR

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

ASHOKKUMAR's picture

ನಿಮ್ಮ (ವಿ)ಚಿತ್ರ ಅದ್ಭುತವಾಗಿದೆ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:58am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಅದೊಂದು ಅಪೂರ್ವ ಖಾಸಾ ಕ್ಷಣ. ಅದಕ್ಕೆ ಹೀಗೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:57am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಥ್ಯಾಂಕ್ಸ್‌ ಸವಿತಾ. ಇದು ಬಹುತೇಕರ ಅನುಭವ. ಹರೆಯದ ಫೊಟೊಗಳು ಮರೆಯದಂಥವು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:59am — anil.ramesh

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

anil.ramesh's picture

ಪಲ್ಲವಿ,
ನಿಮ್ಮ ಚಿತ್ರ - (ವಿ)ಚಿತ್ರ ಸಕ್ಕತಾಗಿದೆ... Laughing out loud

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 10:04am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಬರೆದಿದ್ದು ಎಷ್ಟು ಅನಿವಾರ್ಯವೋ, ಚೌಕಟ್ಟು ಮಾತ್ರ ಇರುವ ಚಿತ್ರ ಹಾಕಿದ್ದೂ ಅದೇ ಅನಿವಾರ್ಯತೆಗೆ. ವಾಸ್ತವಕ್ಕಿಂತ ಕಲ್ಪನೆಯೇ ಹೆಚ್ಚು ಸುಂದರವಾಗಿರುತ್ತದೆ, ಅಲ್ವೆ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 10:11am — anil.ramesh

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

anil.ramesh's picture

ಹೌದು,
ಅದಕ್ಕೆ ಕಲ್ಪನೆ ಅಷ್ಟು ಮಹತ್ವ ಇರೋದು...
ವಾಸ್ತವ ನಿಜದಂತೆ ಯಾವಾಗಲೂ ಕಹಿ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 10:13am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಹಾಡುಗಳನ್ನು ನೋಡುವುದಕ್ಕಿಂತ ಕೇಳುವುದೇ ಹೆಚ್ಚು ಕ್ರಿಯಾಶಾಲಿ. ಏಕೆಂದರೆ, ಹಾಡು ಕೇಳುವಾಗ ನಮ್ಮ ಕಲ್ಪನೆ ಕೆಲಸ ಮಾಡುತ್ತಿರುತ್ತದೆ. ಅದೇ ರೀತಿ ಫೋಟೊಗಿಂತ ಚಿತ್ರಕಲೆ ಹೆಚ್ಚು ಪರಿಣಾಮಕಾರಿಯಾಗುವುದು ಈ ಕಾರಣಕ್ಕೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 10:32am — muralihr

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

muralihr's picture

’ಹೀಗೆ ಮುಕ್ತವಾಗಿ ನಗುವುದು ಮತ್ತೆ ನನಗೆ ಸಾಧ್ಯವಾದೀತೆ?’
ನೀವು ಅಜ್ಜಿಯಾಗಿ ನಿಮ್ಮ್ ಮೊಮ್ಮಕಳು ಮುದ್ದ್ ಮುದ್ದ್ ಮಾತ್ ಕೇಳಿದ್ರೇ - ಮುಕ್ತವಾಗಿ ನಗು ಬರುತ್ತೆ !
ಆದ್ರೇ ನಿಮ್ಮ ಹಲ್ಲುಗಳು ಬಿದ್ದು ಹೋಗಿ ನಗುವಿನ ಸೌ೦ದರ್ಯ ಹೆಚ್ಚಿರುತ್ತೆ !
ನಗುವಿಗೂ ವಯಸ್ಸಾಗಿರುತ್ತೆ ನೋಡಿ !
(ವಯಸ್ಸಾಗ್ತಾ ಆಗ್ತಾ ದೇಹದ ಸೌ೦ದರ್ಯ ಎಲ್ಲರಿಗೂ ಕಡಿಮೇಯಾಗುತ್ತೆ.
ಜಾಣರಿಗೆ ಮಾತ್ರ ನಗುವಿನ ಸೌ೦ದರ್ಯ ಹೆಚ್ಚಾಗುತ್ತೆ .)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 7:12am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಹಾಗಾದ್ರೆ ಅಜ್ಜಿಯಾಗುವವರೆಗೆ ಕಾಯ್ಬೇಕು ಅಂತೀರಾ ಮುರಳಿ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 11:55am — dhanu.vijai

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

dhanu.vijai's picture

ಹರೆಯದಲ್ಲಿ ತಗಿಸಿದ "ಛಾಯ" ಚಿತ್ರದ
"ಛಾಯೆ" ಖಂಡಿತ ಮನಸ್ಸಿನಿಂದ ಅಳಿಸಿ ಹೊಗುವುದಿಲ್ಲ..
ಹಾಗೆ "life"ನಲ್ಲಿ ನಗೊದನು ಮರೆತರೊ ಸಹ
ನಾವ್ ತೆಗಿಸಿದ ಪೋಟೊ ಮಾತ್ರ ಸದಾ ನಮ್ಮಗೆ "ನಗು"ವಂತೆ
ಪಾಠ ಹೇಳಿಕೊಡುತ್ತದೆ...............
ಹೀಗೆ ನಿಮ್ಮ ಬರಹಗಳು ಬರಲಿ..................

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 7:11am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಥ್ಯಾಂಕ್ಸ್‌ ಧನು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 12:25pm — ಸಂಗನಗೌಡ

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

ಸಂಗನಗೌಡ's picture

ಚೆಲು ಅದ ಬರಹ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 7:11am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಥ್ಯಾಂಕ್ಸ್‌ ಗೌಡ್ರೇ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 4:38pm — girish.rajanal

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

girish.rajanal's picture

ಎಲ್ರೀ ಬರೀ ಫೋಟೋ ಕಟ್ಟು ಇದೆ ಆದ್ರೆ ಫೋಟೊ ಎಲ್ಲಿ ಪಲ್ಲವಿ??????
ಪೋಟೊ ತೋರಿಸಿ ನಾವು ಒಂಚೂರು ನೋಡಿ ಸಂತೋಶ ಪಡೂಣಂತ....
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 6:19am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಫೋಟೊ ತೋರಿಸಲಿಕ್ಕೇನು, ಖಂಡಿತ ತೋರಿಸ್ತೀನಿ. ಆದರೆ ಕೊಂಚ ಕಾಯಬೇಕು, ಅಷ್ಟೇ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:43pm — uniquesupri

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

uniquesupri's picture

ನಿಜಕ್ಕೂ ಅಂಥಾ ಮುದವಿದೆಯೇ ಹರೆಯಕ್ಕೆ?
ಹಾಗೆನ್ನುವುದಾದಲ್ಲಿ ಆ ಮುದ ಬದುಕಿನಲ್ಲಿ ಬೇರಾವ ಹಂತದಲ್ಲೂ ಇಲ್ಲವೇ? ನನಗ್ಯಾಕೋ ಬಾಲ್ಯದ ಮುದವನ್ನು ನೆನೆಯುವುದೇ ಕೆಲಸ. ಕಳೆಯಲಿ ಈ ಹರೆಯದ ದಿನಗಳು ಆಗ ಏನು ವೈನಾಗಿತ್ತು ಹರೆಯ ಅಂತ ಕನವರಿಸುವೆ...

ಒಳ್ಳೆಯ ಲಹರಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 6:14am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ಖಂಡಿತ ಇದೆ ಸು‌ಪ್ರೀತ್‌. ಕೆಲವರಿಗೆ ಬಾಲ್ಯ ಸೊಗಸು, ಕೆಲವರಿಗೆ ಕಾಲೇಜ್‌ ದಿನಗಳು. ನನಗೆ ಅವೆರಡೂ ಇಷ್ಟ. ಬಾಲ್ಯದ ಬಗ್ಗೆಯೂ ಬರೆಯುವೆ.

ಅಂದ್ಹಾಗೆ ಬರೆದಿದ್ದು ಲಹರಿಯಲ್ಲ. ನೆನಪಿನ ಝರಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 4:41am — anantshayan

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

anantshayan's picture

ಈ ಲೇಖನ ಓದಿದ ಮೇಲೆ ನನಗೆ ಗೊತ್ತಿಲ್ಲದ ಹಾಗೆ ಚೂರು ಕಣ್ಣೀರು ಬ೦ತು.

ಬಹುಶ: ನನ್ನ ಕಾಲೇಜಿನ್ ನೆನಪು ಬ೦ದಿರಬೇಕು. ಪಲ್ಲವಿ ಖರೆ ಹೆಳ್ತೀನಿ ಹೀ೦ಗ ಒಳ್ಳೇ ಬರಹಾ ಸಿಕ್ಕ್ರ ನಾನು ಬರೆಯುದನ್ನ ಬಿಟ್ಟ ಬರಿ ಓದಕೋತ

ಕೂತಬಿಡ್ಬೆಕು ಅನ್ನಸ್ತದ.ಬಹಳ ಚೋಲೊ ಬರ್ದಿರಿ.

ಆದ್ರು ಆ ಬೀಡಿ ಸೇದು ಮುದುಕಾ ಲಕ್ಕಿ ಬಿಡ್ರಿ. ಎನ೦ತಿರಿ.

ಅನ೦ತಶಯನ. ಸ೦ಜೀವ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 6:13am — pallavi.dharwad

ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...

pallavi.dharwad's picture

ನಾನೂ ಆಗಾಗ ಅಳುತ್ತಿರುತ್ತೇನೆ ಅನಂತ್‌. ಕಳೆದುಹೋದ ದಿನಗಳಿಗಲ್ಲ, ಆ ಉತ್ಸಾಹ ಕಳೆದುಕೊಂಡಿದ್ದಕ್ಕೆ. ಅದನ್ನು ಮತ್ತೆ ಪಡೆಯುವ ಸಲುವಾಗಿಯೇ ಬರೆಯಲು ಶುರು ಮಾಡಿದ್ದು.

ಎಲ್ಲರಿಗೂ ಜೀವನದ ಒಂದು ಹಂತದಲ್ಲಿ ಹೀಗೆ ಅನ್ನಿಸಬಹುದು. ಕೆಲವರು ನಿಜಕ್ಕೂ ಗಟ್ಟಿಯಾಗಿರುತ್ತಾರೆ. ನಮ್ಮಂಥವರು ನಿಧಾನವಾಗಿ ಅದನ್ನು ಅರ್ಥ ಮಾಡಿಕೊಳ್ಳುತ್ತೇವೆ.

ಆದರೆ, ಜೀವನೋತ್ಸಾಹ ಕಳೆದುಕೊಂಡಿಲ್ಲ ನಾನು. ಕಳೆದುಕೊಳ್ಳಲಾರೆ. ಮನಸ್ಸು ಕಡಲಂತೆ ಅಲ್ಲವೆ? ಎಂಥ ಬಿರುಗಾಳಿ ಎದ್ದರೂ ಕಡಲು ಮತ್ತೆ ಶಾಂತವಾಗುತ್ತದೆ. ಮತ್ತೆ ಜೀವಂತಿಕೆ ಪಡೆದುಕೊಳ್ಳುತ್ತದೆ. ಬಿರುಗಾಳಿ ಏಳುವುದು, ಕಡಲು ಅಬ್ಬರಿಸುವುದು, ಮತ್ತೆ ಶಾಂತವಾಗುವುದು- ಬಹುಶಃ ಇದೇ ಬದುಕು. ಇದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ.

ಕಣ್ಣೀರಿಟ್ಟೆ ಎಂದಿರಲ್ಲ, ನಾನು ಬರೆದಿದ್ದು ಸಾರ್ಥಕವಾಯಿತು ಬಿಡು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊದಲ ದಿನ ಮೌನ...
  • ಮೊದಲ ದಿನ ಮೌನ...
  • ಕಣ್ಣೇ ಮುಚ್ಚೇ, ಕಾಡಬೇಡ್ವೇ...
  • ಆಗುಂಬೆ/ಶ್ರಂಗೇರಿ/ಹನುಮನ ಗುಂಡಿ ಪ್ರವಾಸ
  • ಇದು ಬರಿ ಬೆಳಗಲ್ಲೋ...
Syndicate content

ಲೇಖಕರು

pallavi.dharwad's picture

ಪೂರ್ಣ ಹೆಸರು
ಪಲ್ಲವಿ ಎಸ್‌.

ಪರಿಚಯ

ಡಿಗ್ರಿ ಮುಗಿದಿದೆ. ಕೆಲಸದ ಗಾಣಕ್ಕೆ ಬೀಳಲು ಇಷ್ಟ ಇಲ್ಲ. ಆದ್ರೆ ಹಕ್ಕಿ ಹಾಡು, ಬೆಳ್ಳಂಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕಣಿವೆಯಲ್ಲಿ ಸುತ್ತು ಹಾಕೋದು ಇಷ್ಟ. ಲೈನ್‌ ಬಜಾರ್‌ನಲ್ಲಿ ಅಡ್ಡಾಡುತ್ತ ಜನರನ್ನು ನೋಡ್ತಾ ಇರೋದು ಇಷ್ಟ. ಒಂಟಿ ಅನ್ನಿಸಿದಾಗ ಇಂಟರ್‌ನೆಟ್‌, ಕಂಪನಿ ಇದ್ದಾಗ ಸೋಮೇಶ್ವರ ದೇವಸ್ಥಾನ, ಕೆಲಗೇರಿ ಕೆರೆ. ಓದೋಕೆ ಇಷ್ಟ. ಇತ್ತೀಚಿಗೆ, ಬರೆಯೋದೂ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 188 ಅತಿಥಿಗಳು ಆನ್ಲೈನ್ ಇರುವರು.


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator