ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › omshivaprakash ರವರ ಬ್ಲಾಗ್

ಲಿನಕ್ಸಾಯಣ

ಲಿನಕ್ಸನ್ನು ಕನ್ನಡಿಗರಿಗೆ ವಿವರಿಸುವ ಸಣ್ಣ ಪ್ರಯತ್ನ

ಲಿನಕ್ಸಾಯಣ - ೮ - ಲಿನಕ್ಸ್ ನೆಟ್ವರ್ಕಿಂಗ್ ಕಷ್ಟ ಅಲ್ಲ

May 25, 2008 - 8:03pm — omshivaprakash

 ಕಂಪ್ಯೂಟರ್ ಇಂಟರ್ನೆಟ್ ಗೆ ಕನೆಕ್ಟ್ ಆಗಿರ್ರ್ಲಿಲ್ಲ ಅಂದ್ರೆ ದಿನ ದೂಡುವುದು ತುಂಬಾ ಕಷ್ಟ ಅಲ್ವೇ?

  ನಿಮ್ಮ ಲಿನಕ್ಸ್ ಕಂಪ್ಯೂಟರ್ ಅನ್ನು ನಿಮ್ಮ ಆಫೀಸ್ ನಲ್ಲಿನ ನೆಟ್ವರ್ಕ್ ಅಥವಾ, ಬಿ.ಎಸ್.ಎನ್.ಎಲ್ ನಂತಹ ಇಂಟರ್ನೆಟ್ ಕಂಪನಿಯ ನೆಟ್ವರ್ಕ್ ಗೆ ಸೇರಿಸೋದು ತುಂಬಾ ಸುಲಭ. ಉಬುಂಟುವಿನ ಡೆಸ್ಕ್ಟಾಪ್ ನ ಮೇಲ್ಭಾಗದಲ್ಲಿ ಕಾಣಿಸುವ ಬಾರ್ ನಲ್ಲಿ ಕಾಣಿಸುವ ಕಂಪ್ಯೂಟರ್ ನ ಮೇಲೆ ಕ್ಲಿಕ್ಕಿಸಿ "Manual Configuration" ಸೆಲೆಕ್ಟ್ ಮಾಡಿ ಅಥವಾ "System" ಮೆನು ನಲ್ಲಿ, Administration -> Network ನಿಂದ ಕೂಡ ನೆಟ್ವರ್ಕ್ ಕಾನ್ಫಿಗರೇಶನ್ ವಿಂಡೋ ಪಡೆಯಬಹುದು. ಅದು ಕೆಳಕಂಡ ಚಿತ್ರದಲ್ಲಿರುವಂತೆ ಕಾಣಿಸುತ್ತದೆ.

 

ಇಲ್ಲಿ ಮೊದಲು ನೆಟ್ವರ್ಕ್ ಸೆಟ್ಟಿಂಗ್ಸ್ unlock ಮಾಡಿ (ಇದು ಉಬುಂಟು ೮.೦೪ ನಲ್ಲಿ ಮಾತ್ರ ಬೇಕಿದೆ ಹಳೆಯ ಉಬುಂಟುವಿನಲ್ಲಿ unlock ಆಫ್ಚನ್ ಇರುವುದಿಲ್ಲ) .

ನಂತರ ನಿಮ್ಮ ISP (Internet Service Provider ಉದಾ: BSNL) ನಿಮಗೆ ನೀಡುವ ಮಾರ್ಗದರ್ಶನದಂತೆ, "Static ip address" ಅಥವಾ "Automatic Configuration" ಅನ್ನ ಉಪಯೋಗಿಸ ಬೇಕಾಗುತ್ತದೆ. "Wired Connection" ಅನ್ನು ಸೆಲೆಕ್ಟ್ ಮಾಡಿ, Properties ಮೇಲೆ ಕ್ಲಿಕ್ ಮಾಡಿ. ನಂತರ  "Static ip address" ಉಪಯೋಗಿಸ ಬೇಕಿದ್ದರೆ, ISP ನವರು ನೀಡುವ I.P, Gateway ಮತ್ತು DNS ವಿಳಾಸ(Adress)ಗಳನ್ನ ಬಳಿಯಲ್ಲಿ ಕೊಳ್ಳಿ. ಮುಂದೆ ತೋರಿಸಿರುವ ಚಿತ್ರ ನಿಮ್ಮ ಕಂಪ್ಯೂಟರ್ನ ಮೇಲಾಗಲೇ ಬಂದಿದ. 

ಇಲ್ಲಿ "Configuration" ಬಳಿ ಗಮನಿಸಿ. "Static IP Address" ಅನ್ನು ಆಯ್ಕೆ ಮಾಡಲಾಗಿದೆ. ನಿಮ್ಮ ISP ಕೊಟ್ಟಿರುವ ವಿಳಾಸಗಳನ್ನ ಇಲ್ಲಿ ಟೈಪ್ ಮಾಡಿ. 

DNS ವಿಳಾಸಗಳನ್ನು ಮುಂದೆ ಉಪಯೋಗಿಸುತ್ತೇವೆ. ಕೆಲವು ಐ.ಎಸ್.ಪಿ ಗಳು "Static IP Address" ಬದಲಾಗಿ "DHCP" ವಿಳಾಸ ಬಳಸುತ್ತವೆ. DHCP ಆಡ್ರೆಸ್ ಅನ್ನು ಐ.ಎಸ್.ಪಿ  ನಿಮ್ಮ ಮನೆಗೆ ನೀಡುವ ADSL ಮೋಡೆಮ್ ನಿಮ್ಮ ಕಂಪ್ಯೂಟರ್ ಗೆ ತಲುಪಿಸುತ್ತದೆ ಆದ್ದರಿಂದ ನಿಮಗೆ ನೆಟ್ವರ್ಕ್ ಕಾನ್ಫಿಗರ್ ಮಾಡೋದು ತುಂಬಾ ಸುಲಭವಾಗುತ್ತದೆ.

 

 ಇಲ್ಲಿ "Configuration"ನಲ್ಲಿ "Automatic Configuration"ಆಯ್ಕೆ ಮಾಡಿದರಾಯಿತು. ನಿಮ್ಮ ನೆಟ್ವರ್ಕ್ ಕಾನ್ಫಿಗರೇಶನ್ ಮುಗೀತು ಅಂತ.

 ನಿಮಗೆ ಯಾವುದನ್ನ ಉಪಯೋಗಿಸಿ ಅಂತ ಹೇಳಿದಾರೋ ಅದನ್ನ ಬಳಸಿ, Ok ಕ್ಲಿಕ್ಕಿಸಿ. 

ಮೊದಲ ಚಿತ್ರದಲ್ಲಿ "Wired Connection" ಹಿಂಬದಿಯಿರುವ ಚೌಕಾಕಾರದ ಬಾಕ್ನ್ ಸೆಲೆಕ್ಟ್ ಆಗಿದೆಯೇ ಗಮನಿಸಿ. ನಿಮ್ಮ ISP , DNS ವಿಳಾಸಗಳನ್ನ ಕೊಟ್ಟಿದ್ದರೆ, ಮೊದಲ ಚಿತ್ರದಲ್ಲಿ ವನ್ನ ಮತ್ತೊಮ್ಮೆ ಗಮನಿಸಿ ಅದರಲ್ಲಿ DNS ಅನ್ನುವ ಟ್ಯಾಬ್ ಕ್ಲಿಕ್ ಮಾಡಿ. ಅದು ಕೆಳಕಂಡಂತೆ ಕಾಣಿಸುತ್ತದೆ.

 

ನೀವು DHCP ಬಳಸ ಬೇಕಾದರೆ ಇದರ ಅಗತ್ಯವಿಲ್ಲ. 

 ನಿಮ್ಮ ಕೆಲಸ ಮುಗೀತು "Close" ಕ್ಲಿಕ್ ಮಾಡಿ ಮತ್ತೆ :) 

ಇಷ್ಟಾದರೆ ನಿಮ್ಮ ಕಂಪ್ಯೂಟರ್ ನೆಟ್ವರ್ಕ್ ಕಾನ್ಫಿಗರೇಶನ್ ಮುಗೀತು, ಆದರೆ ನಿಮ್ಮ ಕಂಪ್ಯೂಟರ್ ನ ನೆಟ್ವರ್ಕ್ ಕಾರ್ಡನ್ನು ADSL ಮೊಡೆಮ್ ಗೆ ನೆಟ್ವರ್ಕ್ ಕೇಬಲ್ ನ ಸಹಾಯದಿಂದ ಸೇರಿಸುವುದನ್ನ ಮರೆಯಬೇಡಿ. 

ADSL modem ಕೆಳಕಂಡಂತೆ ಕಾಣಿಸುತ್ತದೆ.

ಇಲ್ಲಿ ನೆಟ್ವರ್ಕ್ ಕೇಬಲ್ ಮತ್ತು ಪವರ್ ಕೇಬಲ್ ಗಳನ್ನೂ ನೀವು ಗಮನಿಸ ಬಹುದು. 

 ಈ ಲೇಖನದಲ್ಲಿ ನಿಮಗೆ ಏನರ್ಥವಾಗ್ಲಿಲ್ಲ ಅಂತ ಹೇಳಿದರೆ ಅದನ್ನ ಇನ್ನೂ ಸುಲಭವಾಗಿ ವಿವರಿಸುವ ಪ್ರಯತ್ನ ಪಡ್ತೇನೆ. IP, DNS, Gateway  ಅವುಗಳ ಬಗ್ಗೆ ಮತ್ತೊಮ್ಮೆ ವಿವರಿಸಿ ಹೇಳ್ತೇನೆ.   Wireless ನೆಟ್ವರ್ಕ್ ಮತ್ತು Dialup ಕನೆಕ್ಶನ್ ಕಾನ್ಫಿಗರ್ ಮಾಡೋದು ಕೂಡ ಕಷ್ಟ ಅಲ್ಲ. ಅದನ್ನೂ ನೋಡುವ.

  • ಲಿನಕ್ಸ್
~.~
  • omshivaprakash ರವರ ಬ್ಲಾಗ್
  • Login or register to post comments
  • 297 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 25, 2008 - 11:48pm — hpn

ಉ: ಲಿನಕ್ಸಾಯಣ - ೮ - ಲಿನಕ್ಸ್ ನೆಟ್ವರ್ಕಿಂಗ್ ಕಷ್ಟ ಅಲ್ಲ

hpn's picture

ಫೋಟೋಗಳು ಸ್ವಲ್ಪ ಹೆಚ್ಚು ಕಡಿಮೆಯಾಗಿವೆ.

ಶಿವು, ನೀನು ಬರೀತಿರೋ ಈ ಲೇಖನಗಳಿವೆಯಲ್ಲ, ಅಮೂಲ್ಯವಾದುವು. ನನ್ನ ಸ್ನೇಹಿತರಲ್ಲಿ ಹಲವರು "ಗ್ನು/ಲಿನಕ್ಸ್ ಕನ್ನಡದಲ್ಲಿ ಡಾಕ್ಯುಮೆಂಟ್ ಮಾಡಬೇಕು" ಎಂದು ಹೇಳುತ್ತಲೇ ಇರುತ್ತಾರೆ. ನಾನೂ ಅವರಿಗೆಲ್ಲ, "ಹೂಂ, ಪ್ರಾರಂಭಿಸಿ. ನನ್ನ ಕಡೆಯಿಂದ ಸಾಧ್ಯವಾದುದನ್ನೆಲ್ಲ ಮಾಡಬಲ್ಲೆ" ಎನ್ನುತ್ತಿರುತ್ತೇನೆ. ಅವರಲ್ಲಿ ನೀನೊಬ್ಬನೇ ನೋಡೋ ಸೀರಿಯಸ್ ಆಗಿ ತಗೊಂಡು ಇಷ್ಟೊಂದು ಬರೆದಿರೋದು!

ಬರೆಯೋಣ ಅಂದುಕೊಳ್ಳುವುದರ ಹಾಗು ಅದನ್ನು ಬರವಣಿಗೆಗೆ ಇಳಿಸುವುದರ ನಡುವೆ ಇದೆಯಲ್ಲ ಅಂತರ - ಅದನ್ನ ಹಲವರು ಕ್ರಾಸ್ ಮಾಡುವುದೇ ಇಲ್ಲ.

ಲಿನಕ್ಸಾಯಣವನ್ನ ಒಂದು ಪುಸ್ತಕ ರೂಪದಲ್ಲಿ ಟ್ಯಾಗ್ ಮಾಡಿಡೋಣ. ಬಹಳ ಜನರಿಗೆ ಇದು ತುಂಬಾ ಉಪಯೋಗದ ಮಾಲಿಕೆ ಆಗುವುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 26, 2008 - 6:55am — omshivaprakash

ಉ: ಲಿನಕ್ಸಾಯಣ - ೮ - ಲಿನಕ್ಸ್ ನೆಟ್ವರ್ಕಿಂಗ್ ಕಷ್ಟ ಅಲ್ಲ

omshivaprakash's picture

ಲೇಖನ ಸರಳ ಮಾಡುವಾಗ ಫುಲ್ ಸ್ಕ್ರೀನ್ ಚಿತ್ರಗಳನ್ನೂ ಟ್ರಿಮ್ ಮಾಡಿದ್ದರಿಂದ ಅವು ಆ ರೀತಿ ಕಾಣ್ತಿವೆ Smiling. ಹೊಸ ಚಿತ್ರಗಳನ್ನ ಹಾಕ್ತೇನೆ.

ಕನ್ನಡದಲ್ಲಿ ಟೆಕ್ನಾಲಜಿಯ ಬಗೆಗಿನ ಲೇಖನಗಳು ಬರಲೇಬೇಕು. ಅದಕ್ಕೆ ಟೆಕ್ನಾಲಜಿ ತಿಳಿದಿರೋ ನಾವು ಮೊದಲು ಕೆಲ ವಿಷಯಗಳನ್ನ ಬರಹಗಳಲ್ಲಿ ಬಟ್ಟಿ ಇಳಿಸಬೇಕು. gnu.org ಮುಂತಾದ ಕಡೆಗಳಲ್ಲಿ ನಮಗೆ ಅರ್ಥವಾಗುವ ಹಾಗೆ ಲೇಖನಗಳನ್ನ ಟೆಕ್ನಾಲಜಿಯ ಬಗ್ಗೆ ಬರೀಬೇಕು ಅಂತ ಶುರು ಮಾಡಿದ ಕೆಲಸ ಇದು, ನಿಮ್ಮೆಲ್ಲರ ಬೆಂಬಲ, ನನ್ನ ಲೇಖನ ಓದುವ ಆಸ್ತೆ ನನ್ನ ಉತ್ಸಾಹ ಹೆಚ್ಚಿಸ್ತಲೇ ಬಂದಿದೆ. ಟ್ಯಾಗ್ ಮಾಡೋಣ ಹರಿ. ಇನ್ನೂ ಎಷ್ಟೋ ಜನರಿಗೆ ಇಂತಹ ಲೇಖನಗಳು ಇರುವ ವಿಷಯ ತಿಳಿದಿಲ್ಲ ಅನ್ಸತ್ತೆ. ಸುಲಭವಾಗಿ ಸಂಪದದಲ್ಲಿರುವ ಟೆಕ್ನಾಲಜಿಯ ಲೇಖನಗಳು ಒಂದೆಡೆ ಬರುವಂತಾಗಲಿ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 2, 2008 - 8:24pm — smurthygr

ಉ: ಲಿನಕ್ಸಾಯಣ - ೮ - ಲಿನಕ್ಸ್ ನೆಟ್ವರ್ಕಿಂಗ್ ಕಷ್ಟ ಅಲ್ಲ

smurthygr's picture

Technology ಗೆ ಸಂಬಂಧ ಪಟ್ಟ ವಿಷಯಗಳನ್ನು ಒಂದೆಡೆ ತರುವ ವಿಚಾರ ಏನಾಯಿತು? ಆಸಕ್ತಿ ಇರುವ (ಸಮಯ ಕಡಿಮೆ ಇರುವ) ನಮ್ಮಂತವರು ಹುಡುಕುವುದು ತಪ್ಪುತ್ತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • ಲಿನಕ್ಸಾಯಣ - ೧೪ - ಜಿಪಾರ್ಟೆಡ್ - ಪಾರ್ಟೀಷನ್ ಮಾಡಿ ನೋಡು
  • ಗೂಗಲ್ ಕಡತಗಳು (Docs) ಕನ್ನಡದಲ್ಲಿ
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 132 ಅತಿಥಿಗಳು ಆನ್ಲೈನ್ ಇರುವರು.


ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator