ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ
ಮುಂದಿನ ಮಾತುಗಳನ್ನು ಅಚ್ಚ ಕನ್ನಡದಲ್ಲಿ ಬರೆದಿರುವೆ. ಇಲ್ಲಿ ಕೇಳಿರುವ ಮಾತುಗಳು ಕನ್ನಡದ ಮಾತುಗಳಲ್ಲ. ಇವಕ್ಕೆ ನಮ್ಮ ನುಡಿಯಲ್ಲಿ ಏನನ್ನುತ್ತಾರೆ ಎಂದು ಅಚ್ಚಕನ್ನಡ ಒಲವಿಗರು ಹೇಳಿದರೆ ಚೆನ್ನಾಗಿರುತ್ತದೆ.
ಕನ್ನಡದವಲ್ಲದ ಹತ್ತು ಮಾತುಗಳು: ಕೋಪ; ಮುಖ; ಸ್ನೇಹ; ಸಂಪದ; ದಿನ; ಗೃಹಪ್ರವೇಶ; ಸ್ವಾಗತ; ಲೇಖನ; ಪುಸ್ತಕ; ಶಬ್ದ.
ನಾವು ಬಳಸುವ ಮಾತುಗಳು ಬೇರೆ ಬೇರೆ ನುಡಿಗಳಿಗೆ ಸೇರಿರಬಹುದು, ಆದರೆ ಅವನ್ನು ನಮ್ಮದೇ ಮಾಡಿಕೊಂಡಿರುತ್ತೇವೆ. ಬಳಕೆಯ ಬಗೆ ಕನ್ನಡದ್ದೇ ಆಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳೋಣ.

- olnswamy ರವರ ಬ್ಲಾಗ್
- Login or register to post comments
- 1283 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಸಾರ್
ಸಾರ್ ಇವುಗಳು ಕನ್ನಡ ಪದಗಳಲ್ವೇ? ನನಗೆ ಗೊತ್ತೇ ಇರ್ಲಿಲ್ಲ
ಮುಖವೇನೋ ಸಂಸ್ಕೃತದ ಮೂಲ. ಕನ್ನಡದಲ್ಲಿ ಮೊಗ ಅನ್ನುತ್ತಾರಲ್ವಾ?
ಕೋಪಕ್ಕೆ ಕನ್ನಡದಲ್ಲಿ ಸಿಡುಕು ಅನ್ನಬಹುದಾ?
ಸ್ನೇಹ - ಗೆಳೆತನ
ಸಂಪದ?
ದಿನ?
ಗೃಹಪ್ರವೇಶ - ಮನೆ ಒಳಗೆ ಹೋಗು (ಸರಿ ಹೊಂದುವುದಿಲ್ಲ)
ಸ್ವಾಗತ - ಬರಮಾಡಿಕೋ
ಲೇಖನ - ಬರವಣಿಗೆ
ಪುಸ್ತಕ - ಹೊತ್ತಿಗೆ
ಶಬ್ದ - ನುಡಿ
ಕನ್ನಡದ ಮರೆತಿರುವ ಪದಗಳನ್ನು ನೆನಪಿಸಿಕೊಳ್ಳಲು ಒಳ್ಳೆಯ ಪರೀಕ್ಷೆ.
ತವಿಶ್ರೀನಿವಾಸ
ಕನ್ನಡ ಅಲ್ಲ ಆದರೂ ಕನ್ನಡ!
ಕೋಪಕ್ಕೆ ಹತ್ತಿರದ್ದು ಸಿಟ್ಟು. ಸಿಟ್ಟಿನಷ್ಟು ಚೂಪಾಗಿಲ್ಲದ್ದು ಸಿಡುಕು!
ಸಂಪದಕ್ಕೆ ಹತ್ತಿರದ್ದು ತದ್ಭವ, ಐಸಿರಿ
ದಿನ ಕ್ಕೆ ಕನ್ನಡ ಪದ ನನಗೂ ಗೊತ್ತಿಲ್ಲ
ಗೃಹಪ್ರವೇಶ ಕ್ಕೆ ಕನ್ನಡ ಕಷ್ಟ. ಒಕ್ಕಲಾಗು ಅನ್ನುವ ಹಳೆಯ ಬಳಕೆ ಇತ್ತು
ಇರಲಿ.
ಮಂಗಳವಾರಕ್ಕೆ ಹಳಗನ್ನಡ ಪದ ಇತ್ತು. ಯಾರಾದರೂ ನೆನಪಿಸಿಕೊಂಡರೆ ಚೆನ್ನಾಗಿರುತ್ತೆ.
ಇನ್ನೂ ಕೆಲವು ಕನ್ನಡದ್ದಲ್ಲದ ಮಾತುಗಳನ್ನು ನೋಡಿ:
ಕಷ್ಟ
ಸ್ವಲ್ಪ
ಅಲ್ಪ
ವಾರ
ಪೂಜೆ
ಚಂದ್ರ
ಸೂರ್ಯ
ನದಿ
ಇವಕ್ಕೂ ಕನ್ನಡ ಹುಡುಕೋಣವೇ!
ನಾಗಭೂಷಣ
ಕನ್ನಡವಲ್ಲದ ಕನ್ನಡ ಪದಗಳು
ಮಂಗಳವಾರಕ್ಕೆ ಹಳ್ಳಿಗಳಲ್ಲಿ ಬೇಸ್ತವಾರ ಅಂತಾರಲ್ವೇ
ಕಷ್ಟ - ಕಟು
ಸ್ವಲ್ಪ - ಚೂರು
ಅಲ್ಫ - ತುಣುಕು
ವಾರ -
ಪೂಜೆ -
ಚಂದ್ರ -
ಸೂರ್ಯ - ನೇಸರ
ನದಿ - ತೊರೆ, ಹರಿವು
ತವಿಶ್ರೀನಿವಾಸ
ಉ: ಕನ್ನಡವಲ್ಲದ ಕನ್ನಡ ಪದಗಳು
ಬೇಸ್ತವಾರ ಅಂದ್ರೆ ಗುರುವಾರ ಅಂತ ನಾನು ಕೇಳಿದೀನಿ
ಉ: ಕನ್ನಡವಲ್ಲದ ಕನ್ನಡ ಪದಗಳು
Vensus
beḷḷi silver, planet Venus;
ಬೆಳ್ಳಿವಾರ = friday
ಈ 'ವಾರ'( ಏಳು ನಾಳುಗಳ ಗುಂಪು ) ಇದು ನಮ್ಮ ನೆಲದಲ್ಲಿ ಹುಟ್ಟಿದುದಲ್ಲ. ಇದು ಆರ್ಯರ ಉಂಕು. ಅದಕ್ಕೆ ನಮ್ಮ ನುಡಿಯಲ್ಲಿ ಅದಕ್ಕೆ ಒರೆಯಿಲ್ಲ. ವಾರದಲ್ಲಿ ಏಳೇ ನಾಳುಗಳು ಏಕಿವೆ? ಒಂಬತ್ತು ಇರಬೇಕಲ್ವಾ? ಇದಕ್ಕೆ ಉತ್ತರವಿಲ್ಲ!!
ಗವನ:
ಕನ್ನಡದಲ್ಲಿ 'ಸಿಂಹ'ಕ್ಕೆ ಒರೆಯಿಲ್ಲ, ಓಸುಗರವೆಂದರೆ ಕನ್ನಡ ನೆಲದಲ್ಲಿ ಸಿಂಗವಿಲ್ಲ. ಹಾಗೆ ಜಿರಾಪೆ, ಪೆಂಗುವಿನ್ನು ಮು...
'ಕೋರೆಹುಲಿ' ಬೇರೆ.
======================================
ಉ: ಕನ್ನಡವಲ್ಲದ ಕನ್ನಡ ಪದಗಳು
ಸ್ವಾಮೀ,
ಇಲ್ಲಿಯವರೆಗೆ ಯಾರಾದರೂ ಕನ್ನಡದವರು ಮಾತಾಡುವಾಗ ಬೆಳ್ಳಿವಾರ ಎಂಬ ಪ್ರಯೋಗ ಮಾಡಿದ್ದಿದೆಯೇ ? ಶುಕ್ರನಿಗೆ ಬೆಳ್ಳಿ, ಬೆಳ್ಳಿ ಚುಕ್ಕೆ ಎಂಬ ಹೆಸರಿದೆ ನಿಜ. ಆದರೆ, ವಾರಗಳ ಹೆಸರಿಗೆ ಬರುವಾಗ ಅದು ಎಲ್ಲೂ ಉಪಯೋಗವಾದಂತಿಲ್ಲ.
ಇನ್ನೂ ಆಯ್ತವಾರ ( ಆದಿತ್ಯ ವಾರದ ತದ್ಭವ), ಬೇಸ್ತವಾರ (ಬೃಹಸ್ಪತಿವಾರದ ತದ್ಭವ) ಬಹಳ ಮಟ್ಟಿಗೆ ಉಪಯೋಗದಲ್ಲಿದೆ. ಹೌದು ಸ್ವಾಮೀ, ಹಾಸನದ ಬಳಿಯ ಹಳ್ಳಿಗರೂ ಇದನ್ನು ಉಪಯೋಗಿಸುತ್ತಾರೆ - ಇನ್ನೂ ಸುಲಭವಾದ ಒತ್ತಕ್ಷರವಿಲ್ಲದ ಗುರುವಾರ, ಭಾನುವಾರ ಅಥವಾ ರವಿವಾರ ಎಂಬ ಪದಗಳನ್ನು ಬಿಟ್ಟು!
ನಾನಂತೂ ನೇಸರವಾರ , ಬೆಳ್ಳಿವಾರ ಈ ಪ್ರಯೋಗಗಳನ್ನು ಕೇಳೇ ಇಲ್ಲ. ತಮಿಳಲ್ಲಿ, ಇದರ ದಾಯಾದಿ ಪದಗಳಾದ ಞಾಯಿಟ್ಟೃಕ್ಕಿಳಮೈ, ವೆಳ್ಳಿಕ್ಕಿಳಮೈ ಪದಗಳು ಉಪಯೋಗದಲ್ಲಿವೆ. ( ಇಲ್ಲಿ ಎರಡನೆಯ ಳ ಎಂಬುದು ರಳ ಅಕ್ಷರ - ನನಗೆ ಯುನಿಕೋಡ್ ನಲ್ಲಿ ಅದನ್ನು ಹೇಗೆ ಬರೆಯಬೇಕೆಂದು ತಿಳಿದಿಲ್ಲ)
ಈ 'ವಾರ'( ಏಳು ನಾಳುಗಳ ಗುಂಪು ) ಇದು ನಮ್ಮ ನೆಲದಲ್ಲಿ ಹುಟ್ಟಿದುದಲ್ಲ. ಇದು ಆರ್ಯರ ಉಂಕು. ಅದಕ್ಕೆ ನಮ್ಮ ನುಡಿಯಲ್ಲಿ ಅದಕ್ಕೆ ಒರೆಯಿಲ್ಲ.
ಎಲ್ಲದರಲ್ಲೂ ಆರ್ಯ-ದ್ರಾವಿಡ ವಿಂಗಡಣೆ ಯಾಕೆ ತರ್ತೀರಪ್ಪಾ? ವಾರಗಳ ಏರ್ಪಾಟು ನಮಗೆ ಬಂದದ್ದೇ ಹೊರದೇಶದಿಂದ - ಗ್ರೀಸ್- ರೋಮನ್ ರಾಜ್ಯಗಳಿಂದ. ಸುಮಾರಾಗಿ ಕ್ರಿ.ಪೂ.೨೦೦ಕ್ಕೆ ಮೊದಲು ಭಾರತದಲ್ಲಿ ಎಲ್ಲೂ ವಾರಗಳ ಗಣನೆ ಇದ್ದಿಲ್ಲ.
ಪ್ರಪಂಚದಲ್ಲಿ ಎರಡೇ ಬಗೆಯ ವಾರಗಳ ಗಣನೆ ಇರೋದು - ಒಂದು - ಒಂದನೇ ದಿನ, ಎರಡನೇ ದಿನ ,,,, ಏಳನೇದಿನ ಎನ್ನೋ ಹೀಬ್ರೂ ಮೂಲದ ಗಣನೆ, ಇನ್ನೊಂದು ಆಕಾಶಕಾಯಗಳ ಮೇಲೆ ಇಟ್ಟಿರುವ ಹೆಸರುಗಳು. ಅದಕ್ಕೇ ಇಂಗ್ಲಿಷ್ ನಲ್ಲಿ Sun day ಆದದ್ದು ನಮಗೆ ರವಿ ವಾರ ಆಗತ್ತೆ ನೋಡಿ.
ಯಾಕೇ ಏಳೇ ದಿನಗಳಿವೆ, ಭಾನುವಾರ ಆದಮೇಲೆ ಸೋಮವಾರವೇ ಯಾಕೆ ಬರಬೇಕು? ಇದೆಲ್ಲಕ್ಕೂ ಉತ್ತರಗಳಿವೆ. ಈಗ ಬರೆಯಲು ನಡುರಾತ್ರಿ ಆಗಿದೆ. ಹಾಗಾಗಿ ಇದು ಮತ್ತೊಮ್ಮೆ ಬರೆಯಲು ಇಟ್ಟುಕೊಳ್ಳುತ್ತೇನೆ.
-ಹಂಸಾನಂದಿ
ಉ: ಕನ್ನಡವಲ್ಲದ ಕನ್ನಡ ಪದಗಳು
ಹಂಸಾನಂದಿ
೧) ಬಳ್ಳಿವಾರ ಇದು ಬಳಕೆಯಲ್ಲಿದೆ ಎಂದು ಹೇಳಿಲ್ಲ
೨) ವಾರದಲ್ಲಿ ಏಳು ನಾಳುಗಳು ಇರಲು ಓಸುಗರ ಗೊತ್ತು. ಆದರೆ ಜಗದ ಎಲ್ಲೆಡೆ 'ವಾರ'ದ ಪದ್ದತಿ ಇಲ್ಲ, ಇರಲಿಲ್ಲ. ನಾನು ಇದನ್ನು ಓದಿದೆನು.
ದಿಟ.. ಅದಕ್ಕೇ ಈ 'ವಾರ' ಅನ್ನೋದು ಕನ್ನಡ ನೆಲದಲ್ಲಿ ಹುಟ್ಟಿಲ್ಲ. ಇದು ಹುಟ್ಟಿದ್ದು ಗ್ರೀಕ್, ರೋಮ್, ಪಾರಿಸಿಯದಲ್ಲಿ ಇರಬೇಕು.
೩) 'ಆರ್ಯ' ಒರೆಯಿಂದ ನಿಮಗೆ ಇರುಸು-ಮುರುಸಾಗಿದ್ದರೆ ಮನ್ನಿಸಿ. ನಾನು ಹೇಳ ಬಯಸಿದ್ದು Indo-European/Indo-Aryan ( ಗ್ರೀಕ್, ಸಂಸ್ಕ್ರುತ, ಪಾರಸೀ, ಹೀಬ್ರು ) ನುಡಿಕೂಟದ ಮಂದಿ 'ವಾರ' ಅನ್ನೋ ಸಂಗತಿಯನ್ನು ಮೊದಲು ಹುಟ್ಟಿಸಿಕೊಂಡರು ಎಂದು.
ಆದರೆ
೧. "Cultures may define other units of time, such as the week, for the purpose of scheduling regular activities that do not easily coincide with months or years."
ಅಂದರೆ ಅದು ಅವರ cultureಗಾಗಿ ಮಾಡಿಕೊಂಡದ್ದು.
೨ Although seven day weeks are common to all modern societies now, anthropologists note that weeks of other durations (varying from three to eight days) are found in many pre-modern societies. They also observe that the name for "week" is often the same as that for "market day", suggesting the concept of a week is likely to arise in any agrarian or pre-agrarian society where people have marketplaces or market days.
======================================
ಉ: ಕನ್ನಡವಲ್ಲದ ಕನ್ನಡ ಪದಗಳು
ಭಾನುವಾರಕ್ಕೆ.. ನಮ್ಮಲ್ಲಿ "ಐತವಾರ" ಅಂತನೂ ಕರೀತಾರೆ.
ಉ: ಕನ್ನಡವಲ್ಲದ ಕನ್ನಡ ಪದಗಳು
veena.
ನೀವು ಹೇಳಿದ್ದು ಸರಿ. ನನಗೆ ಇನ್ನೊಂದು ಗೊಂದಲ ಇದೆ. ಮಂಗಳವಾರ (ಮಂಗಳ =ಶುಭ), ಹೆಸರಿನಲ್ಲೆ ಮಂಗಳವನ್ನಿಟ್ಟುಕೊಂಡು, ಆ ದಿನ ಯಾವ ಒಳ್ಳೆಯ ಕೆಲಸವನ್ನೂ ಮಾಡುವುದಿಲ್ಲ ಏಕೆ ?
ಕೂದಲನ್ನು, ಉಗುರನ್ನು ಕತ್ತರಿಸುವ ಹಾಗಿಲ್ಲ, (ಇದೆನೂ ಅಂತಹ ಒಳ್ಳೆಯ ಕೆಲಸವಲ್ಲ ಬಿಡಿ) ಹೊಸ ಬಟ್ಟೆ ತೊಡುವ ಹಾಗಿಲ್ಲ, ಇನ್ನೂ ಹೀಗೇ ಏನೇನೋ, ಆದರೆ ಮಂಗಳ ಗೌರಿ ಹಬ್ಬವನ್ನಂತೂ ಮಾಡುತ್ತರೆ.
ಈ ವಿಷಯ ಯಾವಾಗಲೂ ನನ್ನನ್ನು ಕಾಡುತ್ತಿರುತ್ತದೆ.
ಉ: ಕನ್ನಡವಲ್ಲದ ಕನ್ನಡ ಪದಗಳು
ಈ ಮಂಗಳವಾರದ ವಿಚಾರದಲ್ಲಿ ನಮ್ಮ ಬಳಗದಲ್ಲಿ ಸಖತ್ ಚರ್ಚೆಗಳಾಗಿ (ಜಗಳಕ್ಕೆ ಹೊರಳುವುದೊಂದು ಬಾಕಿ) ಹೋಗಿವೆ. ಏನಪ್ಪಾ ಎಂದರೆ, ನಮ್ಮ ಮನೆಯಲ್ಲಿ ಎಷ್ಟೊಂದು ಒಳ್ಳೆಯ ಕೆಲಸಗಳು ಮಂಗಳವಾರದಂದೇ ಆಗಿವೆ. ಇದೆಲ್ಲ ಗೊತ್ತಿದ್ದೂ, ನಮ್ಮ ಬಳಗದವರು "ಅಯ್ಯೋ ನಿಮ್ಮ ಮನೆಯಲ್ಲಿ ಮಂಗಳವಾರ ಒಳ್ಳೆಯ ಕೆಲಸ ಆಗಿರಬಹುದು, ನಮ್ಮ ಮನೆಯಲ್ಲಿ ಆಗಲ್ಲ" ಎಂದು ಮಂಗಳವಾರದಂದು ಯಾವ ಸಮಾರಂಭವನ್ನೂ ಅಥವಾ ಮಹತ್ತರವಾದ ಕೆಲಸವನ್ನು ಒಡರ್ಚುವುದೇ ಇಲ್ಲ. ಇನ್ನು ಆ "ಸಾಕ್ಷಾತ್ಕಾರ" ಸಿನಿಮಾದಲ್ಲಂತೂ ಒಲವೇ ಜೀವನ ಸಾಕ್ಷಾತ್ಕಾರ ಎಂಬುದನ್ನು ಮರೆತು ಪಾಪ ಅವಳನ್ನು "ಅಂಗಾರಕ ದೋಷದ ಹೆಣ್ಣು" ಎಂದು ನೆಗಳ್ಚಿ ಮದುವೆಯನ್ನೇ ನಿಲ್ಲಿಸುತ್ತಾರೆ.
ಉ: ಕನ್ನಡವಲ್ಲದ ಕನ್ನಡ ಪದಗಳು
ಮಂಗಳವಾರ ನಮ್ಮಲ್ಲಿ ಕೌರದ ಅಂಗಡಿಗೆ ವಾರದ ರಜೆ.
ಉ: ಕನ್ನಡ ಅಲ್ಲ ಆದರೂ ಕನ್ನಡ!
ಸಮಾರಂಭ = ಒಸುಗೆ ( ಬಸಿರೊಸುಗೆ )
ಒಕ್ಕಲಾಗು ಇನ್ನು ಬಳಕೆಯಲ್ಲಿದೆ. "(ಹೊಸಮನೆಯ) ಹಾಲುಕ್ಕಿಸು" ಎಂದೂ ಹೇಳುವುದುಂಟು.
ಕಷ್ಟ = ಅಗಚಾಟು, ಅಲಪು, ಅಲ್ಲರಿ, ಅಳಲು, ಅರು, ಅಡೆ, ಹಾವಳಿ, ಇಕ್ಕಟ್ಟು, ಇರುಕು,
ಸ್ವಲ್ಪ, ಅಲ್ಪ = ಒಸಿ, ತುಸು, ಕೊಂಚ, ಕಡಮೆ,
ಪೂಜೆ( ಇದು ದ್ರಾವಿಡ ಒರೆ ಎಂಬ ಮಾತಿದೆ. ಪೂ ಚೈ => ಪೂಜೆ ) = ಕುಂಬು, ಎರಗು,
ಚಂದ್ರ ( ಇದು ದ್ರಾವಿಡ ಒರೆ ಅಂತೆ. ಚನ್( ಹೊಳೆ), ಚಂದ, ಚಂದಿರ ) = ತಿಂಗಳು
ಸೂರ್ಯ = ನೇಸರ, ಪೊತ್ತು
ನದಿ = ಹೊಳೆ, ತೊರೆ, ಮುರಿ
======================================
ಉ: ಕನ್ನಡ ಅಲ್ಲ ಆದರೂ ಕನ್ನಡ!
ಒಸುಗೆ ಅಲ್ಲ......ಒಸಗೆ....ಏಳ್ಬೇಕಾದ್ರೂ ಬಸ್ರೊಸ್ಗೆ....ಅಂತ ಏಳಾದು
ಉ: ಕನ್ನಡ ಅಲ್ಲ ಆದರೂ ಕನ್ನಡ!
ಅಯ್ಯೋ ತಪ್ಪು ಬರೆವಾಯ್ತು!! ಮನ್ನಿಸು
ಒಸಗೆ ಸರಿ...
ಆದರೆ 'ಬಸಿರೊಸುಗೆ' ಇದೆ.. ಅಂದರೆ "ಮಡದಿ ಬಸಿರಾದ ಸುದ್ದಿ"
======================================
ತದ್ಭವ ಪದಗಳೂ, ದೇಸಿ ಪದಗಳೂ
ಮೊಗ, ಹೊತ್ತಿಗೆ, ಐಸಿರಿ ಇವೆಲ್ಲವು ಸಂಸ್ಕೃತಜನ್ಯ ತದ್ಭವಗಳು. ನಾವು ಇಂದು ಧಾರಾಳವಾಗಿ ಬಳಸುವ ತತ್ಸಮ ತದ್ಭವಗಳೆಲ್ಲವಕ್ಕೂ ಅಚ್ಚಗನ್ನಡ ಪದಗಳು ಇರಲೇ ಬೇಕಾಗಿಲ್ಲ. ಸಂಸ್ಕೃತಾಗಮನದ ಪೂರ್ವದಲ್ಲಿದ್ದ ಕನ್ನಡಿಗ/ದ್ರಾವಿಡರಿಗೆ ಯಾವುದರ ಪರಿಕಲ್ಪನೆಯೇ ಇರಲಿಲ್ಲವೊ ಅವುಗಳಿಗೆ ಕನ್ನಡ/ದ್ರಾವಿಡ ಪದಗಳು ಹುಟ್ಟಿರುವುದೆ ಇಲ್ಲ. ದ್ರಾವಿಡರಲ್ಲಿ ವಾರದ ಕಲ್ಪನೆ ಪ್ರಾಯಶಃ ಇರಲಿಲ್ಲ; ಸಾವಿರಕ್ಕೆ ಮೇಲ್ಪಟ್ಟ ಸಂಖ್ಯೆಗಳಿಗೆ ಹೆಸರುಗಳಿರಲಿಲ್ಲ, ಹೀಗೆ.
"ಪುಸ್ತಕ"ಕ್ಕೆ ನೇರ ಸಂವಾದಿಯಾದ ಯಾವುದೆ ಕನ್ನಡಪದ ಕಾಣಸಿಗದಿದ್ದರೂ, ನಮ್ಮ ಪುಸ್ತಕಗಳು ಮೂಲತಃ ಓಲೆ ಕಟ್ಟುಗಳೇ ಆದ್ದರಿಂದ "ಓಲೆ ಕಟ್ಟು" ಎನ್ನುವುದನ್ನೆ ಪುಸ್ತಕದ ಕನ್ನಡ ರೂಪ ಎನ್ನಬಹುದೇನೊ.
ವೆಂ.
ಉ: ತದ್ಭವ ಪದಗಳೂ, ದೇಸಿ ಪದಗಳೂ
< ಸಂಸ್ಕೃತಾಗಮನದ ಪೂರ್ವದಲ್ಲಿದ್ದ ಕನ್ನಡಿಗ/ದ್ರಾವಿಡರಿಗೆ ಯಾವುದರ ಪರಿಕಲ್ಪನೆಯೇ ಇರಲಿಲ್ಲವೊ ಅವುಗಳಿಗೆ ಕನ್ನಡ/ದ್ರಾವಿಡ ಪದಗಳು ಹುಟ್ಟಿರುವುದೆ ಇಲ್ಲ. >
ಹೌದು. ಈಗಿನ ಕಂಪ್ಯುಟರ್ ನ ಕಲ್ಪನೆ ಇಲ್ಲಿ ಬೆಳೆದುದಲ್ಲ, ಹಾಗಾಗಿ ಅದಕ್ಕೆ ಕನ್ನಡ ಒರೆ ಇಲ್ಲ. ಆದರೆ ಅದು ಮಾಡುವ ಕೆಲಸದ ನೆಲೆಯ ಮೇಲೆ, ಕನ್ನಡದ್ದೇ ಒರೆಯನ್ನು ಕಂಡುಕೊಳ್ಳಲಾದೀತು. ಆದರೆ ಎಲ್ಲ ಕನ್ನಡಿಗರೂ ಒಟ್ಟಾಗಿ ಅದನ್ನೇ ಬಳಸುವ ಮನಸ್ಸು ಮಾಡಬೇಕಾಗುತ್ತೆ.
ಕಂಪ್ಯುಟರ್ ಗೆ ನಾವು ಕೆಲವರು ಕಲೆತು ಕಂಡುಕೊಂಡ ಅಚ್ಚಕನ್ನಡ ಒರೆ, "ಎಣಿಸಿಗೆ", ಆದರೆ ಎಲ್ಲರಲ್ಲೂ ಒಮ್ಮತ ಮೂಡಬೇಕು, ಆದರೆ ಹೊರಗಿನ ಒರೆಯನ್ನು ಇದ್ದಕ್ಕಿದ್ದಂತೆ ಬಳಸಬೇಕೆನ್ನುವವರೇ ಹೆಚ್ಚು.
ಹೀಗಾದರೆ ನುಡಿ ಬೆಳೆದೀತು ಹೇಗೆ?
ಈ ಮಾತುಗಳಿಗೆ ...
ಕೋಪ - ಮುಳಿಸು, ಮುನಿಸು; ಕ್ರಿಯಾಪದವಾಗಿ ಮುನಿ, ಮುಳಿ
ಮುಖ - ಮೋರೆ
ಸ್ನೇಹ - ಕೆಳೆತನ
ಲೇಖನ - ಬರಹ
ಚಂದ್ರ - ತಿಂಗಳು
ಸ್ವಲ್ಪ - ಕೊಂಚ
ಸ್ವಾಗತ - ಎದುರುಗೊಳ್ಳುವುದು (-ತಿಸು, -ಗೊಳ್ಳು)
ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ
ಕೋಪ = ಸಿಟ್ಟು, ಸಿಡುಕು, ಮುಳಿಸು, ಮುನಿಸು, ಉರುಗು, ಕತಿ, ಕಾತಿ,
ಮುಖ = ಮುಕ, ಮೊಗ, ಮೋರೆ,
ಮುಖ = ಬಾಯಿ
ಸ್ನೇಹ = ಗೆಳೆತನ, ಅಳಿಪು, ಅಣ್ಪು, ನೇಹ
ಸಂಪದ = ಒಡಮೆ, ಐಸಿರಿ, ಮೇಯ್ಸಿರಿ
ದಿನ = ಹಗಲು, ಬೆಳಗು
ದಿನ(೨೪ ತಾಸುಗಳು) = ನಾಳು
ಗೃಹಪ್ರವೇಶ = ಮನೆ ಹೊಗು; ಮನೆ ಹೊಕ್ಕು;
ಸ್ವಾಗತ = ಹದುಳ ಬರು, ನಲ್ವರು, ಚಂಬರು,
ಲೇಖನ = ಬರೆಪು, ಬರೆಹು, ಬರೆಹ, ಬರೆವಣಿಗೆ;
ಪುಸ್ತಕ = ಹೊತ್ತಗೆ, ಓತ;
ಶಬ್ದ = ಸದ್ದು, ಉಲಿ, ಕೊರಲು, ಮಾಟ, ಮಾತು, ಅಲರು, ಒರೆ, ಒಸುಗೆ, ನುಡಿ, ಕೂಗು, ಆಲು,
======================================
ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ
ನಿಮ್ಮ ಹುರುಪು ಮೆಚ್ಚತಕ್ಕದ್ದು.
ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ
ಗೃಹ ಪ್ರವೇಶ=ಮನೆ ಒಕ್ಕಲು
ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ
ಮನೆ ಅಂದರೆ family ಅಂತ ತಿಳಿವು. ಆದರೆ home ಅಂತವೂ ತಿಳಿವು ಬಂದಿದೆ.
1) ಮನೆಯವರು = family member
2) ಮನೆತನ = famil tradition, clan
3) ಮನೆತನಸ್ತ = man born in a good family
House = ಇಲು, ಹಟ್ಟಿ,
ಹಿಂದೆ + ಇಲು => ಹಿಂದಿಲು => ಹಿತ್ತಿಲು
ಮುಂದೆ + ಇಲು => ಮುಂದಿಲು
ಬಾಯಿ + ಇಲು => ಬಾಯಿಲು / ಬಾಗಿಲು
"ಹೊಸ್ತಿಲು" ಇದರಲ್ಲಿ ಇಲು ಇದೆ.!! ಹೊಸ್ತು = freshness, opening
======================================