ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › nityapralaya ರವರ ಬ್ಲಾಗ್

ಸಿನೆಮಾ ಸಿನೆಮಾ

October 1, 2008 - 7:33am — nityapralaya

ನಾನು ಕ್ಯಾಮೆರಾದ ಬಗ್ಗೆ ಅಷ್ಟೇನು ಮಾಹಿತಿ ಪಡೆದಿಲ್ಲ ಆದರೂ ಸಿನೆಮ ಮಾಡಬೇಕು ಎನ್ನುವ ಆದಮ್ಯ ಆಸೆ, ಆಸೆಗಳಿಗೇನು ರೆಕ್ಕೆ ಪುಕ್ಕ ಹಚ್ಚಿಕೊಂಡು ರಂಗು ರಂಗಾಗಿ ಹಾರುತ್ತವೆ, ನನ್ನ ಸಿನೆಮಾ ಗುಂಗು ಶುರುವಾಗಿದ್ದು ಬಾಲಿವುಡ್ ನ ಪ್ಯಾರಲೆಲ್ ಸಿನೆಮಾಗಳನ್ನು ನೋಡುವ ಹುಚ್ಚು ಹಚ್ಚಿಸಿ ಕೊಂಡಾಗಿನಿಂದ ನಿಂದ ಇರಬಹುದು, ಸಣ್ಣವಳಿದ್ದಾಗಲಿಂದಲೂ ನನ್ನ ಅಭಿರುಚಿ ಮರ ಸುತ್ತುವ ಸಿನೆಮಾಗಳಲ್ಲಿರಲಿಲ್ಲ , ಗೋವಿಂದ ನಿಹಲಾನಿ, ಸತ್ಯಜಿತ್ ರೆ, ಮಹೇಶ್ ಭಟ್ಟ್, ಅಮೋಲ್ ಪಾಲೇಕರ್ ಇಂತಹವರ ಸಿನೆಮಾಗಳೇ
ನನ್ನನ್ನು ಜಿಜ್ಞಾಸೆಗೆ ಹಚ್ಚಿದ್ದು, ಬರಬರುತ್ತಾ, ನಾನೂ ಸಿನೆಮಾ ಮಾಡಿಯೇ ತೀರಬೇಕೆಂಬ ದುರಾಸೆಯೊಂದು ಮೊಳೆತು ನನ್ನ ಹುಡುಕಾಟ ಶುರುವಾಯ್ತು, ಈ ಊರಿನಲ್ಲಿ ಸಿನೆಮಾ ಮಾಡುತ್ತಿರುವವರ ಪಟ್ಟಿ ಹಿಡಿದು ಅರ್ಜಿ ಗುಜರಾಯಿಸಿದೆ, ಇಂಟರ್ನ್ಶಿಪ್ ಸಿಗುತ್ತ್ತಾ, ಎಲ್ಲಾದರೂ ಏನಾದರೂ ಸ್ವಲ್ಪ ಕೆಲಸ ಕಲಿಯ ಬಹುದಾ ಅಂಥ
ಯೋಚಿಸಿದೆ. ಕಲಿಕೆ ಕಾಲೇಜ್ ನಲ್ಲಿ ಮಾಡಲು ತುಂಬ ಸಮಯ ಹಾಗು ಹಣದ ವ್ಯತ್ಯಯ ವಾಗುತ್ತದಾದ್ದರಿಂದ ಅಡ್ಡ ದಾರಿ ಹಿಡಿಯ ಬೇಕಾಯ್ತು, ಇನ್ನು ಸಿನೆಮಾ ಕಲಿಯಲು ಹೋದರೆ ಜನ ನಕ್ಕಾರು, ಜನವೇಕೆ ನನ್ನ ಜೋತೆಗಿರುವವರೇ ಸಾಕು ಕೀಚಾಯಿಸಲಿಕ್ಕೆ, ನಿನಗೇನು ಅರಳು ಮರಳು ಈ ವಯಸ್ಸಿಗೆ ಎಂದು ಅನ್ನಿಸಿಕೊಂಡಿದ್ದೂ ಆಗಿದೆ, ಆದರೂ ನನ್ನ ಸಿನೆಮಾ ಪ್ರೀತಿ ದೂರವಾಗಲಿಲ್ಲ ...ಕೊನೆಗೆ ಏನೋ ಹೇಳ್ತಾರಲ್ಲ ನೀವು ಮನಸ್ಸು ಮಾಡಿದರೆ ಪ್ರಪಂಚದ ಸಕಲ ಗ್ರಹಗಳು ನೀವು ಅನ್ನಿಸಿಕೊಂಡಿದ್ದನ್ನ ನಿಜ ಮಾಡಲು ಒಂದಾಗುತ್ತವಂತೆ.
ಹಾಗೆ ನನ್ನ ಸ್ನೇಹಿತೆ ಯೊಬ್ಬಳು ಇಲ್ಲೇ ಇರುವ ಲೋಕಲ್ ಟೆಲಿವಿಷನ್ ಸ್ಟೇಷನ್ ನಲ್ಲಿ ಕೊಡುವ ಟ್ರೈನಿಂಗ್ ಬಗ್ಗೆ ತಿಳಿಸಿದಳು,ಸರಿ ಅಪ್ಲೈ ಮಾಡಿ ಕಾದೆ, ಟ್ರೈನಿಂಗೂ ಸಿಕ್ಕಿತು, ಅದು ಮಹಾ ಟ್ರೈನಿಂಗ್ ಆಗಿರಲಿಲ್ಲ, ಇರುವುದರಲ್ಲಿ ಸ್ವಲ್ಪ ಕ್ಯಾಮೆರಾಗಳ ಬಗ್ಗೆ ಮಾಹಿತಿ ಕೊಡುವ ಪೂರ್ತಿ ತಾಂತ್ರಿಕ ಜ್ಞ್ಯಾನ ವಲ್ಲದಿದ್ದರೂ, ಕ್ಯಾಮೆರಾ ಹಿಡಿಯುವಷ್ಟು ಮಾಹಿತಿ ಸಿಕ್ಕಿತ್ತು, ಮುಂದೆ ಒಂದೊಂದಾಗಿ ಕಲಿಯುತ್ತ ಕಲಿಯುತ್ತ ಈಗ ಸ್ವಲ್ಪ
ಕ್ಯಾಮೆರಾದ ಬಗ್ಗೆ ಧೈರ್ಯ ಬಂದಿದೆ ಮುಂದೆ ಕ್ಯಾಮೆರಾದ ಬಗ್ಗೆ ಮತ್ತಷ್ಟು ತಿಳಿಯುವ ಉತ್ಸಾಹ ಹುಮ್ಮಸ್ಸಿದೆ,
ಮೊನ್ನೆ ನಮ್ಮಲ್ಲಿಗೆ ಸಿನೆಮಾ ಮಾಡುವವರು ಬಂದಿದ್ದರು, ನನಗೋ ಇರಿಸುಮುರಿಸು ಮೊದಲೇ ಕ್ಯಾಮೆರಾಗಳ ಜೊತೆ ಕೆಲಸಮಾಡಲು ಅಷ್ಟು ಚೆನ್ನಾಗಿ ಬರುವುದಿಲ್ಲ ಮತ್ತೆ ಇಂಟರ್ವ್ಯೂ ಮಾಡುವಾಗ ಅನೇಕ ಅಡಚಣೆಗಳು, ಶೂಟ್ ಮಾಡಿದರೆ ವಾಯ್ಸ್ ಇಲ್ಲ , ವಾಯ್ಸ್ ಇದ್ದರೆ ವಿಸುಅಲ್ ಇಲ್ಲ ರಾಮ...ಹುಡುಗಿಯರಿಗಾಗುವ ಕೆಲಸವಲ್ಲ ಅಂದುಕೊಂಡೆ , ಎಷ್ಟೋ ಬಾರಿ ಹೀಗಂದುಕೊಳ್ಳುತ್ತಿದ್ದಾಗಲೇ ಕಲಿಕೆಯ ಹುಡುಕಾಟವೂ ಶುರುವಾಗುವುದು, ಯರುಏನಂದುಕೊಂಡರೆ ಏನು ಎಮ್ಮೆ ನಿನಗೆ ಭಂಗವಿಲ್ಲ ಎಂದು ಕಲಿಕೆ ಮುಂದುವರಿಸಬೇಕು, ಇದನ್ನಲ್ಲವೇ ಸ್ತ್ರೀ ಸ್ವಾತಂತ್ರ್ಯ ಎನ್ನುವುದು ?
ನಮ್ಮಲ್ಲಿ ಬಹಳ ಮಂದಿ ಸ್ತ್ರೀಯರು ಸಿನೆಮಾ ಮಾದುವುದಕ್ಕಿಳಿದಿಲ್ಲ ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು , ಅಪರ್ಣ ಸೇನ್ , ಕನ್ನಡದ ಕವಿತಾ ಲಂಕೇಶ್ , ಅರುಣರಾಜೆ ಅರಸ್ ಅಂಥವರು ಒಬ್ಬಿಬ್ಬರನ್ನು ಬಿಟ್ಟರೆ ಮರ್ಯಾದಸ್ಥ ಹೆಣ್ಣು ಮಕ್ಕಳು ಸಿನೆಮಾ ಮಾಡೋಲ್ಲ ಅನ್ನುವ ಸಮಾಜದ ಅನ್ನಿಸಿಕೆ ಇನ್ನೂ ದೂರವಾಗಿಲ್ಲ..ನಾನು ಕ್ಯಾಮೆರಾ ಹಿಡಿದಂದಿನಿಂದ ನಮ್ಮ ಅಮೇರಿಕಾದ ಕನ್ನಡಿಗರೇ ಮೂಗುತಿರುವಿದ್ದದ್ದಿದೆ , ಆದರೂ ನಾನು ಸಿನೆಮಾ ಮಾಡಿಯೇ ತೀರುತ್ತೇನೆ ಎನ್ನುವ ಗುಂಗಿದೆ, ಒಂದು ಒಳ್ಳೆ ಸಿನೆಮಾ ಮಾಡಿಯೇ ತೀರಬೇಕು ಎನ್ನುವ ಆದಮ್ಯ ಆಸೆಯಿದೆ, ಇನ್ನು ಕಲಿಯುವುದು ಬೆಟ್ಟದಷ್ಟಿದೆ, ಸಣ್ಣಸಣ್ಣ ಹೆಜ್ಜೆಗಳು ಇದೇ ಸ್ತ್ರೀ ಇತಿಹಾಸದ ದೊಡ್ಡ ಸಾಧನೆಗಳಲ್ಲವೇ ?
ಏನಂತೀರಿ?

  • ಲೇಖನ
~.~
  • nityapralaya ರವರ ಬ್ಲಾಗ್
  • Login or register to post comments
  • 223 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 1, 2008 - 11:57am — ಸಂಗನಗೌಡ

ಉ: ಸಿನೆಮಾ ಸಿನೆಮಾ

ಸಂಗನಗೌಡ's picture

ಸಿನಿಮಾ ಮೇಕಿಂಗ್ ವರ್ಕ್ ಶಾಪ್ ಇದೆ ಅಂತೆ, ವಿವರಗಳು ಇಂತಿದೆ, ಕಾಪಿ ಪೇಸ್ಟ್ ಮಾಡಿದ್ದೇನೆ, ಮನ್ನಿಸಿ...

Dates: 4th, 5th, 11th and 12th October 2008
Time: 10:00 am to 3: 30 pm
Venue: St. Joseph Boys School, Musuem rd, Near Residency Rd, Bangalore.
Fee: Rs 4500/-
( No prerequisites required. Camera, Camerman and Editing studio will be provided by us)

To register and for more details contact Rabi Kisku
Email: rabi.kisku@gmail.com Mobile: 98865 39405

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 1, 2008 - 5:22pm — nityapralaya

ಉ: ಸಿನೆಮಾ ಸಿನೆಮಾ

nityapralaya's picture

gowdre naanu iruvudu americaadalli, aadaroo bengaloorige bandaaga, idanna check out maaduttene..tumba dhanyavadagalu.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 1, 2008 - 12:24pm — savithasr

ಉ: ಸಿನೆಮಾ ಸಿನೆಮಾ

savithasr's picture

ನಿತ್ಯಪ್ರಳಯರೇ,

ಸಿನೆಮಾ ಮಾಡುವ ನಿಮ್ಮ ಆಸೆ ಬೇಗ ಈಡೇರಲಿ ಅಂತ ಹಾರೈಸುವೆ.

-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 1, 2008 - 5:21pm — nityapralaya

ಉ: ಸಿನೆಮಾ ಸಿನೆಮಾ

nityapralaya's picture

tumba thanks..Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 2, 2008 - 3:41pm — vasant.shetty

ಉ: ಸಿನೆಮಾ ಸಿನೆಮಾ

vasant.shetty's picture

ನನ್ನ ಪರವಾಗಿ ನಿಮಗೆ ಶುಭ ಹಾರೈಕೆಗಳು..

ನಿಮ್ಮ ಸಿನೆಮಾ ಕನಸು ನಿಜವಾಗಲಿ,, ಕನ್ನಡ ಸಿನೆಮಾ ಲೋಕಕೊಂದು ಅದ್ಭುತ ಕೊಡುಗೆ ನಿಮ್ಮಿಂದ ಸಿಗಲಿ
-
ವಸಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 9, 2008 - 9:00pm — shivakumar b s

ಉ: ಸಿನೆಮಾ ಸಿನೆಮಾ

shivakumar b s's picture

ಮಾನ್ಯರೆ.,
ಸಿನಿಮಾ ಮಾಡಬೇಕೆಂಬ ನಿಮ್ಮ ಬಯಕೆ ಸ್ವಾಗತಾರ್ಹ. ಸಿನಿಮಾದಲ್ಲಿ ನಿದೇರ್ಶಕನೆ ಮೊದಲ ಪ್ರೇಕ್ಷಕ, ನಿಮ್ಮ ಕಲ್ಪನೆಯ ಕಥೆಗೆ ಮೊದಲು ದ್ರುಶ್ಯ ರೊಪ ನೀಡಿ, ಹತ್ತರು ಭಾರಿ ಯೋಚಿಸಿ ಅದನ್ನು ತಿದ್ದಿ ತೀಡಿ ಅದಕ್ಕೋಂದು ಸ್ಪಷ್ಟ ರೂಪ ನೀಡಿ, ಇದಿಷ್ಟು ಕೆಲಸ ನಿಮ್ಮ ಮನದಲ್ಲಾಗಲಿ, ಈಗ ಆ ಕಥೆಗೆ ಸಂಭಾಷಣೆ ಬರೆಯಿರಿ. ನಿಮಗೆ ಚಿತ್ರ ಕಲೆ ಬರುವ ಹಾಗಿದ್ದರೆ ಪೆನ್ಸಿಲ್ ಪೆಪರ್ ಹಿಡಿದು ಅದಕ್ಕೊಂದು ಚಿತ್ರದ ರೊಪ ನೀಡಿ, ಈಗ ನಿಮ್ಮ ಕಥೆಯ ದ್ರುಷ್ಯ ರೊಪ ಸಿದ್ದ, ಚಿತ್ರ ಬಿಡಿಸುವ ಕ್ರಮಕ್ಕೆ ಸ್ಟೋರಿ ಬೋರ್ಡ್ ಎನ್ನುವುದು. ಈ ಸಂಧರ್ಭದಲ್ಲಿ ಪಾತ್ರಗಳಿಗೆ ಸ್ಥಳಗನ್ನು ಅಂದರೆ ಪಾತ್ರಗಳು ಕುಳಿತಿರಬೇಕಾ? ನಿಂತಿರಬೇಕಾ? ಅಥವ ಎಲ್ಲಿಂದೆಲ್ಲಿಗೆ ಒಡಾಡ ಬೇಕು? ಎಂಬ ವಿಷಯಗಳನ್ನು ನಿರ್ಧರಿಸಿ. ಇಲ್ಲಿಗೆ ಒಂದು ಹಂತ ತಲುಪಿದಂತೆ, ಪ್ರಾರಂಭದಲ್ಲಿ ಹ್ಯಾಂಡಿ ಕ್ಯಾಮ್ ಹಿಡಿದು ಗೆಳೆಯರನ್ನೆ ಕೊಡಿಸಿ ಚಿತ್ರೀಕರಣ ಮಾಡಿ, ಹಾಡ್ತಾ ಹಾಡ್ತಾ ರಾಗ ಅನ್ನೋ ಹಾಗೆ ಕ್ರಮೇಣ ಚಿತ್ರ ನಿರ್ಮಾಣ ರೀತಿ ನೀತಿಗಳು ನಿಮಗೆ ತಿಳಿಯುತ್ತೆ. ಗೊಂದಲವಾದರೆ ನಮ್ಮನ್ನು ಸಂಪರ್ಕಿಸಿ., shivrinsan@gmail.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "#73, ಶಾಂತಿನಿವಾಸ" ಸಿನೆಮಾ ಹೇಗಿದೆ?
  • ಡೈಸಿ ರಿಡ್ಜ್ ಡೈರಿ
  • ಇಲ್ಲಿ.......
  • ಸೂಪರ್ ಹಿಟ್ ಹಾಡು,ಸೂಊಊಊಊಪರ್ ಸಿನೆಮಾ..??
  • ಹೊಸ ಸಿನೆಮಾ ವಿಮರ್ಶೆಗಳು
Syndicate content

ಲೇಖಕರು

nityapralaya's picture

ಪೂರ್ಣ ಹೆಸರು
NityaPralaya

ಪರಿಚಯ

Hi, I would like to interact with Kannadigas on this space.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 21, 2008 - 3:57am
  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 345 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator