ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › Nagaraj.G ರವರ ಬ್ಲಾಗ್

ನಮ್ಮಧ್ವನಿ

August 29, 2008 - 5:48pm — Nagaraj.G
_MG_5806.JPG

ನಮ್ಮಧ್ವನಿ ಸಮುದಾಯ ರೇಡಿಯೋ ಕೆಂದ್ರ ಬೆಂಗಳೂರುನಿಂದ ಸುಮಾರು 80 ಕಿ.ಮೀ ದೂರದಲ್ಲಿ ಬೂದಿಕೋಟೆಯಲ್ಲಿ ಇದೆ. ಬೂದಿಕೋಟೆ ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಮ್ಮಧ್ವನಿಯನ್ನು ಬೂದಿಕೋಟೆಯಲ್ಲಿ 2002 ರಲ್ಲಿ ಪ್ರಾರಂಭಿಸಿದರು. ಇಲ್ಲಿ ಪ್ರಾರಂಭಿಸಲು ಕಾರಣ ಇದು ಕರ್ನಾಟಕ, ಅಂದ್ರಪ್ರದೆಶ್ ಮತ್ತು ತಮಿಳುನಾಡಿನ ಗಡಿಭಾಗದಲ್ಲಿದ್ದು, ಇಲ್ಲಿ ಅವಿಧ್ಯಾವಂತರು ಜಾಸ್ತಿ ಮತ್ತು ಕೂಲಿಕಾರ್ಮಿಕರು ಜಾಸ್ತಿ ಇದ್ದು ಇವರಿಗೆ ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ ಆದ್ದರಿಂದ ಇಲ್ಲಿ ನಮ್ಮಧ್ವನಿಯನ್ನು ಯುನೆಸ್ಕೋ ಸಹಕಾರದಿಂದ ಪ್ರಾರಂಭಿಸಿದರು. ನಮ್ಮ ಧ್ವನಿಗೆ ಸಹಕಾರವನ್ನು ಬೆಂಗಳೂರುನಲ್ಲಿರುವ ವಾಯ್ಸಸ್ ಸಂಸ್ಥೆಯು ತಾಂತ್ರಿಕ ಸಹಾಯವನ್ನು ಮಾಡುತ್ತಿದ್ದು, ಮೈರಾಡ ಸಂಸ್ಥೆಯು ಸ್ಥಳೀಯ ಮಟ್ಟದಲ್ಲಿ ಜವಾಬ್ದಾರಿಯನ್ನು ವಹಿಸುಕೊಂಡಿದೆ. ಯುನೆಸ್ಕೋ ಸಂಸ್ಥೆಯು ನಮ್ಮಧ್ವನಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ನೀಡಿದೆ.
ನಮ್ಮಧ್ವನಿ ಮುಖಾಂತರ ಹಲವಾರು ವಿಧಾನಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಯಿತು. ನಮ್ಮಧ್ವನಿಯ ತಂಡಕ್ಕೆ ಮೊದಲು ಕಾರ್ಯಕ್ರಮವನ್ನು ಮಾಡಲು ಮತ್ತು ಎಲ್ಲಾ ವಿಧದ ತರಬೇತಿಯನ್ನು ನೀಡಿತು ನಂತರ ಕಾರ್ಯಕ್ರಮಗಳನ್ನು ಸ್ಥಳೀಯ ಜನರಿಂದ ಧ್ವನಿಮುದ್ರಿಸಿ ಸಂಘಗಳಲ್ಲಿ ಹಾಕಿ ಕೇಳಿಸುತ್ತಿದ್ದರು. ತುಂಬಾ ಪ್ರಸಿದ್ದಿಯನ್ನು ಪಡೆಯಿತು ನಂತರದ ದಿನಗಳಲ್ಲಿ ಬೂದಿಕೋಟೆಯಲ್ಲಿ ಪ್ರತಿ ಮಂಗಳವಾರ ಸಂತೆಯು ನಡೆಯುತ್ತಿದ್ದು ಈ ಸಂತೆಗೆ ಹಲವಾರು ಗ್ರಾಮದ ಜನರು ಬರುತ್ತಿದ್ದು, ಇಲ್ಲಿಯು ಸಹ ಲೌಡ್ ಸ್ವಿಕರ್ ಹಾಕಿ ಕಾರ್ಯಕ್ರಮಗಳನ್ನು ಹಾಕಿ ಜನರಿಗೆ ಕೇಳಿಸುತ್ತಿದ್ದರು. ಇಲ್ಲಿ ಜನ ಕಾರ್ಯಕ್ರಮವನ್ನು ಕೇಳಿ ಊರಿನಲ್ಲಿಯೇ ಕಾರ್ಯಕ್ರಮವನ್ನು ಕೇಳಲು ಬಯಸಿದರು ಕಾರಣ ಜಾಸ್ತಿ ಸಮಯ ಸಂತೆಯಲ್ಲಿ ಕಾರ್ಯಕ್ರಮವನ್ನು ಕೇಳೋದಕ್ಕೆ ಕಷ್ಟ. ಇದನ್ನು ಅರಿತ ನಮ್ಮ ಧ್ವನಿಯ ತಂಡ ಕಾರ್ಯಕ್ರಮಗಳನ್ನು ಆಕಾಶವಾಣಿ ಮುಖಾಂತರ ಪ್ರಸಾರ ಮಾಡಿದರು. ಇದರಿಂದ ನೂರಾರು ಗ್ರಾಮದ ಜನರು ತಾವೇ ಮಾಡಿದಂತಹ ಕಾರ್ಯಕ್ರಮಗಳನ್ನು ಕೇಳಿ ಅನಂದಿಸಿದರು.
ಈ ರೀತಿಯಾಗಿ ಸ್ವಲ್ಪ ದಿನಗಳು ನಡೆದ ನಂತರ ಬೂದಿಕೋಟೆಯಲ್ಲಿ ಪ್ರತಿಯೊಬ್ಬರೂ ನಿಗದಿತ ಸಮಯದಲ್ಲಿ ಕಾರ್ಯಕ್ರಮವನ್ನು ಕೇಳುವ ಆಸೆಯ ಮೇರೆಗೆ ಕೇಬಲ್ ಅಪರೇಟರ್ ಸಹಾಯದಿಂದ ನಮ್ಮಧ್ವನಿಯ ಸ್ಟುಡಿಯೋದಿಂದ ಕೇಬಲ್ ಅಪರೇಟರ್ ಮನೆತನಕ ಕೇಬಲ್ ಎಳೆದು ಕೇಬಲ್ ಮುಖಾಂತರ ನಮ್ಮಧ್ವನಿಯ ಒಂದು ಚಾನಲನ್ನು ತಮ್ಮ ಕೇಬಲ್ ಚಾನಲ್ ಗಳ ಮುಖಾಂತರ ಪ್ರಸಾರ ಮಾಡಲಾಯಿತು. ಇದರಿಂದ ತಮ್ಮ ಮನೆಯಲ್ಲಿಯೇ ಟಿ.ವಿಯ ಮುಖಾಂತರ ಕಾರ್ಯಕ್ರಮವನ್ನು ಕೇಳಲು ಪ್ರಾರಂಬಿಸಿದರು ಟಿ.ವಿ ಇಲ್ಲದ ಮನೆಯವರಿಗೆ ಕಡಿಮೆ ದರದಲ್ಲಿ ಅಂದರೆ ೧೨೫ ರೂಗಳಿಗೆ ಒಂದು ರೇಡಿಯೋ ನೀಡಿ ರೇಡಿಯೋಗೆ ಕೇಬಲ್ ಸಂಪರ್ಕ ಕಲ್ಪಿಸಿ ಅದರಿಂದ ನಮ್ಮಧ್ವನಿಯ ಕಾರ್ಯಕ್ರಮವನ್ನು ಕೇಳುವಂತೆ ಮಾಡಿದರು. ನಂತರದ ದಿನಗಳಲ್ಲಿ ಪಕ್ಕದ ಗ್ರಾಮಗಳಾದ ದೊಡ್ಡ ಅಂಬೇಡ್ಕರ್ ಕಾಲೋನಿ, ಚಿಕ್ಕ ಅಂಬೇಡ್ಕರ್ ಕಾಲೋನಿ ಮತ್ತು ಕೊಡಗುರ್ಕಿ ಗ್ರಾಮಗಳಿಗೆ ಲೌಡ್ ಸ್ವಿಕರ್ ಸೆಟ್ ಮಾಡಿ ಕೇಬಲ್ ಸಂಪರ್ಕವನ್ನು ಕಲ್ಪಿಸಿ, ಲೌಡ್ ಸ್ವಿಕರ್ ನಿಂದ ಕಾರ್ಯಕ್ರಮವನ್ನು ಕೇಳುವ ಹಾಗೆ ಮಾಡಿದರು. ಈ ರೀತಿಯ ವಿಧಾನಗಳಿಂದ ಆರೋಗ್ಯ, ವ್ಯವಸಾಯ, ಕಾನೂನು, ಮನರಂಜನೆ, ಮನೆಮದ್ದು, ಸಾಂಸಾರಿಕ ಮೌಲ್ಯಗಳು ಇತ್ಯಾದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಸಂಜೆ 7:00 ರಿಂದ 8:30 ರ ತನಕ ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮಗಳು ನೇರ ವಿಧದಲ್ಲೂ ಮತ್ತು ಧ್ವನಿ ಮುದ್ರನದಲ್ಲೂ ಸಹ ಇರುತ್ತದೆ. ನಮ್ಮಧ್ವನಿ ರೇಡಿಯೋ ಕೇಂದ್ರಕ್ಕೆ ನಿರ್ವಹಣಾ ಸಂಸ್ಥೆಯು ಇದ್ದು ಪ್ರತಿ 15 ದಿನಕ್ಕೊಮ್ಮೆ ಮೀಟಿಂಗ್ ಮಾಡುತ್ತಿದ್ದು, ಇದರಲ್ಲಿ ಕಾರ್ಯಕ್ರಮಗಳ ಬಗ್ಗೆ , ಕಾರ್ಯಕ್ರಮಗಳ ಬಗ್ಗೆ ಅನಿಸಿಗೆ, ಆದಾಯ ಮತ್ತು ವ್ಯಯ ಇತ್ಯಾದಿಗಳನ್ನು ಚರ್ಚೆ ಮಾಡುತ್ತಾರೆ. ಈ ನಿರ್ವಹಣಾ ಸಮಿತಿಯು ಸಮುದಾಯದಿಂದಲೇ ಆಯ್ಕೆಯನ್ನು ಮಾಡಲಾಗಿದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಕಳೆದ 2-3 ವರ್ಷಗಳಿಂದ ಯಾರಿಂದಲೂ ಸಹ ಹಣದ ಸಹಾಯವಿಲ್ಲದೆ ತಾವೇ ನಡೆಸಿಕೊಂಡು ಹೋಗುತ್ತಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ತಮ್ಮದೇ ತರಂಗಗಳಲ್ಲಿ ಕ್ರಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದಾರೆ.

~.~
  • Nagaraj.G ರವರ ಬ್ಲಾಗ್
  • Login or register to post comments
  • 117 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಮುದಾಯ ರೇಡಿಯೋ
  • ಕಳೆದ ನೆನೆಪುಗಳು
  • ಓಕಳಿಪುರಂ
  • ಹಂಪಿ
  • ತರಂಗಗಳಲ್ಲಿ ಸಮುದಾಯ ರೇಡಿಯೋ
Syndicate content

ಲೇಖಕರು

Nagaraj.G's picture

ಪೂರ್ಣ ಹೆಸರು
Nagaraj

ಪರಿಚಯ

ಹಾಯ್
ನನ್ನ ಹೆಸರು ನಾಗರಾಜ್ ನನ್ನ ಸ್ವಂತ ಊರು ಬೂದಿಕೋಟೆ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ ಇದು ಚಾರಿತ್ರಿಕವಾಗಿ ಪ್ರಸಿದ್ದಿಯಾದ ಸ್ಥಳ. ಇದು ಮೈಸೂರು ಹುಲಿ ಟಿಪ್ಪುವಿನ ತಂದೆ ನವಾಬ್ ಹೈದರಾಲಿ ಖಾನ್ ಜನಿಸಿದ ಸ್ಥಳ. ಇತ್ತೇಚೆಗೆ ನಾನು ಮತ್ತು ನನ್ನ ಸ್ನೇಹಿತರು ಸೇರಿ ಬೆಂಗಳೂರಿನಲ್ಲಿ ಮರ ಅನ್ನುವ ಒಂದು ಮಾಧ್ಯಮ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದೇವೆ. ಮರ ಸಂಸ್ಥೆಯು ಸಮುದಾಯ ಮಾದ್ಯಮದೊಟ್ಟಿಗೆ ಕೆಲಸ ಮಾಡುತ್ತಿದೆ. ಅವುಗಳಲ್ಲಿ ಸಮುದಾಯ ರೇಡಿಯೋ, ರಂಗಭೂಮಿ, ಇಂಟರ್ನೆಟ್, ಡ್ಯಾಕ್ಯುಮೆಂಟರಿ ಪಿಲ್ಮ್ ಇತ್ಯಾದಿಗಳು. ಸಂಸ್ಥೆಯು ಭಾರತದ 6 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ www.maraa.in

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 272 ಅತಿಥಿಗಳು ಆನ್ಲೈನ್ ಇರುವರು.


ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator